ಕಾಮಕ್ಕೆ ಫ‌ುಲ್‌ ಸ್ಟಾಪ್‌: ಒಂಥರಾ ನೋಡಿದ್ರೆ ಹೀಗೆ ಮಾಡಿ…


Team Udayavani, Apr 10, 2019, 9:39 AM IST

Avalu-Harrs

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used

ಸಾರ್ವಜನಿಕ ಸ್ಥಳಗಳಲ್ಲಿಯೇ ಲೈಂಗಿಕ ಕಿರುಕುಳಗಳು ನಡೆಯುವುದು ಹೆಚ್ಚು. ಯಾಕಂದ್ರೆ, ಕಿರುಕುಳ ನೀಡುವವರು ಅಪ್ರಬುದ್ಧರೂ, ಆ ತಕ್ಷಣಕ್ಕೆ “ಮಜಾ’ ತೆಗೆದುಕೊಳ್ಳುವ ಮನಃಸ್ಥಿತಿಯವರೂ ಆಗಿರುತ್ತಾರೆ. ಗುಂಪಿನಲ್ಲಿದ್ದಾಗ ಮಾತ್ರ ಅವರಿಗೆ ಧೈರ್ಯ. ಅಂದಮೇಲೆ ಕಿರುಕುಳಕ್ಕೆ ಹೆದರೋದಾದ್ರೂ ಯಾಕೆ?

ಶಾಲೆಗೆ ಹೋಗುವ ದಾರಿಯಲ್ಲಿ ಆ ಹುಡುಗಿ ಒಂದು ಸಣ್ಣ ಅಂಗಡಿ ಮುಂದೆ ಹಾದು ಹೋಗಬೇಕು. ಪ್ರತಿದಿನವೂ ಅಲ್ಲೊಂದು ಹುಡುಗರ ಗುಂಪು ನಿಂತಿರುತ್ತದೆ. ಅದರಲ್ಲಿ ಕೆಲವರು ಅವಳನ್ನು ನೋಡಿ ಶಿಳ್ಳೆ ಹೊಡೆಯುತ್ತಾರೆ. ಮತ್ತೂಬ್ಬ ಯಾವುದೋ ಸಿನಿಮಾ ಹಾಡೊಂದನ್ನು ಗುನುಗುತ್ತಾನೆ. ಉಳಿದವರು “ಹೋ’ ಎಂದು ಕೂಗುತ್ತಾರೆ.ಅವಳಿಗೆ ತಲೆ ತಗ್ಗಿಸಿಕೊಂಡು ಅಲ್ಲಿಂದ ಬರಬೇಕಾದರೆ ಸಾಕೋ ಸಾಕು ಎನಿಸುತ್ತದೆ.

ಆ ಮಹಿಳೆ ಪ್ರತಿದಿನ ಬಸ್ಸಿನಲ್ಲಿ ಆಫೀಸ್‌ಗೆ ಪಯಣಿ­ಸಬೇಕು. ಸಿಟಿ ಬಸ್ಸಿನಲ್ಲಿ ನೂಕು ನುಗ್ಗಲು ಸಹಜ. ಆದರೆ ಕೆಲವು ಬಾರಿ ಪಕ್ಕದಲ್ಲಿ ನಿಂತವರು, ಕುಳಿತವರು ಬೇಕಂತಲೇ ಎಲ್ಲೆಲ್ಲೋ ಮೈ ತಾಕಿಸುತ್ತಾರೆ. ಬ್ರೇಕ್‌ ಹಾಕಿದ್ದನ್ನೇ ನೆಪ ಮಾಡಿಕೊಂಡು ಮೈಮೇಲೆ ಬೀಳುತ್ತಾರೆ. ಆಗ ಆಕೆಗೆ ಆಗುವ ಕಿರಿಕಿರಿ ಹೇಳತೀರದ್ದು.

ಇಂಥ ಅನುಭವಗಳು ನಿಮಗೂ ಆಗಿದೆಯೇ? ಇಂಥ ಘಟನೆಗಳನ್ನೂ ಲೈಂಗಿಕ ಕಿರುಕುಳ ಎಂದೇ ಪರಿಗಣಿಸಲಾಗುತ್ತದೆ. ಲೈಂಗಿಕ ಕಿರುಕುಳ ಎಂದರೆ ಲೈಂಗಿಕ ಉದ್ದೇಶವುಳ್ಳ ಯಾವುದೇ ನಡವಳಿಕೆ­ಯಿಂದ ವ್ಯಕ್ತಿಗೆ ಉಂಟಾಗುವ ಮುಜುಗರ, ಕಿರಿಕಿರಿ. ಆ “ಕಿರಿಕಿರಿ’ಯನ್ನು ನಿಖರವಾಗಿ ವಿವರಿಸಲು ಸಾಧ್ಯವಾಗುವುದಿಲ್ಲ. ಎಷ್ಟೋ ಜನರು ತಮಗಾದ ಕಿರುಕುಳವನ್ನು ಸುಲಭವಾಗಿ ಹಂಚಿಕೊಳ್ಳದಿರುವುದು, ಯಾರೊಡನೆಯೂ ಹೇಳದಿರುವುದು ಈ ಕಾರಣದಿಂದಲೇ. ಜನ ಸಂದಣಿಯಲ್ಲಿ, ಬಸ್ಸುಗಳಲ್ಲಿ ಇಂಥ ಅನುಭವ ಗಳನ್ನು “ಸಹಜ’ ಎಂದು ತಳ್ಳಿ ಹಾಕಬಹುದು. ಆದರೆ ಯಾರಾದರೂ ಆಯ ತಪ್ಪಿ ನಮ್ಮ ಮೇಲೆ ಬೀಳುವುದಕ್ಕೂ, ಬೇಕೆಂದೇ ಮೈ ತಾಕಿಸುವುದಕ್ಕೂ ಇರುವ ವ್ಯತ್ಯಾಸ, ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಇಂಥ ನಡವಳಿಕೆಗಳು ಉದ್ದೇಶಪೂರ್ವಕವಾಗಿ, ಲೈಂಗಿಕ ಅರ್ಥವನ್ನು ಅಡಗಿಸಿಕೊಂಡ ಅಥವಾ ನೇರವಾಗಿ ಲೈಂಗಿಕವೇ ಆದ ನಡವಳಿಕೆಗಳು ಎನ್ನುವುದು ಗಮನಾರ್ಹ. ಇವುಗಳಿಗೆ ಹುಡುಗಿಯರು, ಹೆಂಗಸರು, ಗಂಡು ಮಕ್ಕಳು, ಗಂಡಸರು ಯಾರೂ ಗುರಿಯಾಗ ಬಹುದಾದರೂ, ಹುಡುಗಿಯರು, ಹೆಂಗಸರು ಇಂಥ ಸಮಸ್ಯೆಗಳಿಗೆ ತುತ್ತಾಗುವುದು ಹೆಚ್ಚು.

ಮೈ ಮುಟ್ಟಿದರೆ ಮಾತ್ರ ಕಿರಿಕಿರಿಯೇ?
ಲೈಂಗಿಕ ಕಿರುಕುಳದ ಬಗ್ಗೆ ತಪ್ಪು ಕಲ್ಪನೆಗಳು ಬಹಳ. ಅವುಗಳಲ್ಲಿ ಪ್ರಮುಖವಾದದ್ದು “ಅತ್ಯಾಚಾರ’ ಮಾತ್ರ ಲೈಂಗಿಕ ಕಿರುಕುಳ ಎಂಬುದು. ಆದರೆ, ಲೈಂಗಿಕ ಕಿರುಕುಳ ದೈಹಿಕವಾಗಿ ಮಾತ್ರ ನಡೆಯಬೇಕೆಂದಿಲ್ಲ. ಅದು ಮೌಖೀಕವಾಗಿ ಅಂದರೆ ಮಾತಿನ ಮೂಲಕವೂ ನಡೆಯಬಹುದು. ಇನ್ನೊಬ್ಬರ ಬಗ್ಗೆ ಅಶ್ಲೀಲವಾಗಿ ಮಾತಾಡುವುದು, ಮತ್ತೂಬ್ಬರ ದೇಹ-ವೇಷಭೂಷಣ­ಗಳನ್ನು ಕುರಿತು ಲೈಂಗಿಕವಾಗಿ ಮಾತನಾಡುವುದು, ಅನಾಮಿಕ ಕರೆಗಳನ್ನು, ಮೆಸೇಜ್‌ಗಳನ್ನು ಮಾಡುವುದು, ದ್ವಂದ್ವಾರ್ಥದಲ್ಲಿ ಮಾತಾಡುವುದನ್ನು ಕೂಡಾ ಲೈಂಗಿಕ ಕಿರುಕುಳ ಎನ್ನಬಹುದು. ಇವೆಲ್ಲವೂ ಸಾಮಾನ್ಯವಾಗಿ ಗುಂಪುಗಳಲ್ಲಿ ಬಳಕೆಯಾಗುತ್ತವೆ. ಮಿಕ್ಕವರ ನಗು- ಕುಹಕ- ವ್ಯಂಗ್ಯ- ಕೇಕೆಗಳು ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬಲ್ಲವು. ಹೆಚ್ಚಿನ ಬಾರಿ ಮಹಿಳೆಯರನ್ನು ವೇದಿಕೆ ಹತ್ತದಂತೆ, ಅತಿಥಿಗಳ ಕೈ ಕುಲುಕದಂತೆ, ಹಾರ ಹಾಕದಂತೆ ಮಾಡುವ ನಡವಳಿಕೆಗಳಿವು. ಇಂಥ ಸಂದರ್ಭಗಳಲ್ಲಿ ದೈಹಿಕವಾಗಿ ಅಪಾಯವಾಗದಿದ್ದರೂ ಮನಸ್ಸಿಗೆ ಅಪಾರ ಕಿರಿಕಿರಿ, ಮುಜುಗರ, ತಮ್ಮ ಬಗೆಗೇ ಕೀಳರಿಮೆ, ಭಯವುಂಟಾಗುತ್ತದೆ.

ಮೌಖೀಕವಾಗಿಯೂ, ದೈಹಿಕವಾಗಿಯೂ ಏನೂ ಮಾಡದೆ ಕಿರುಕುಳ ನೀಡುವ ವಿಧಾನವೂ ಇದೆ. ಇದನ್ನು Non-verbal harassment ಎನ್ನುತ್ತೇವೆ. ಹಿಂಬಾಲಿಸು­ವುದು, ಲೈಂಗಿಕವಾಗಿ ದ್ವಂದ್ವಾರ್ಥವುಳ್ಳ ಚಿತ್ರಗಳನ್ನು ಗೋಡೆ/ ಬೋರ್ಡು/ ಬೆಂಚುಗಳ ಮೇಲೆ ಬರೆಯು ವುದು, ಲೈಂಗಿಕ ಅರ್ಥವುಳ್ಳ ಸನ್ನೆಗಳನ್ನು ಮಾಡುವುದು (ಕಣ್ಣು ಮಿಟುಕಿಸುವುದು ದಿಟ್ಟಿಸಿ ನೋಡುವುದು, ದೇಹದ ಯಾವುದೋ ಭಾಗವನ್ನೇ ದೃಷ್ಟಿಸುವುದು, ಬಾಯಿಂದ “ಮುತ್ತು’ ಕೊಟ್ಟಂತೆ ಸನ್ನೆ- ಶಬ್ದ ಮಾಡುವುದು, ಕೈಗೆ ಮುತ್ತುಕೊಟ್ಟು ಹಾರಿಸುವುದು, “ಬಾ’ ಎಂದು ಕರೆದಂತೆ ಕೈಆಡಿಸುವುದು ಇತ್ಯಾದಿ), ವಸ್ತುವನ್ನು ದೇಹದ ಭಾಗಗಳಿಗೆ ಗುರಿಯಿಟ್ಟು ಎಸೆಯುವುದು, ಸಾರ್ವಜನಿಕವಾಗಿ “ಜನನಾಂಗ’ವನ್ನು, ಲೈಂಗಿಕ ಅರ್ಥವುಳ್ಳ ಚಿತ್ರಗಳನ್ನು ಪ್ರದರ್ಶಿಸುವುದು, ಅನಾಮಿಕ ಪತ್ರಗಳನ್ನು ಬರೆಯುವುದು ಅಮೌಖೀಕ ಲೈಂಗಿಕ ಕಿರುಕುಳ ಎನಿಸಿಕೊಳ್ಳುತ್ತವೆ. ಮತ್ತೂಂದು ವ್ಯಕ್ತಿಯ ದೇಹದ ಯಾವುದೇ ಭಾಗವನ್ನು ಅವರ ಒಪ್ಪಿಗೆಯಿಲ್ಲದೆ, ಲೈಂಗಿಕ ಉದ್ದೇಶದಿಂದ ಅಸಹಜವಾಗಿ ಮುಟ್ಟುವುದು ದೈಹಿಕ ಲೈಂಗಿಕ ಕಿರುಕುಳವಾಗುತ್ತದೆ.

ಪತ್ತೆ ಹೇಗೆ?
ಪದೇಪದೆ ಲೈಂಗಿಕ ಕಿರುಕುಳಕ್ಕೆ ಒಳಗಾದವರು ಮಾನಸಿಕವಾಗಿ ಅತೀವ ನೋವು ಅನುಭವಿಸುತ್ತಾರೆ. ಹುಡುಗಿಯರು ಶಾಲೆ/ ಕಾಲೇಜಿಗೆ ಹೋಗಲು ನಿರಾಕರಿಸಬಹುದು, ಶೈಕ್ಷಣಿಕ ಪ್ರಗತಿಯಲ್ಲಿ ಹಠಾತ್‌ ಹಿನ್ನಡೆ, ಸ್ನೇಹಿತರು- ಪೋಷಕರು- ಶಿಕ್ಷಕರೊಡನೆ ಹೇಳಲು ಹೆದರುವುದು, ಸ್ನೇಹಿತರ ತಪ್ಪು ಮಾರ್ಗದರ್ಶನಕ್ಕೆ ಒಳಗಾಗಿ ಅಪ್ರಬುದ್ಧ ಪ್ರೇಮ ಪ್ರಕರಣಗಳಿಗೆ ಗುರಿಯಾಗುವುದು, ತೀವ್ರ- ದೀರ್ಘ‌ಕಾಲಿಕ ಈ ರೀತಿಯ ಸಂದರ್ಭಗಳಲ್ಲಿ ಆತ್ಮಹತ್ಯೆಗೂ ಪ್ರಯತ್ನಿಸಬಹುದು.

— ಡಾ.ಕೆ.ಎಸ್‌. ಪವಿತ್ರ

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.