ಮೈನೆ ರಿಪೇರಿ ಕಿಯಾ : ಅಡ್ಜಸ್ಟ್‌ಮೆಂಟು, ರಿಪೇರಿ ಮತ್ತು ಜುಗಾದ್‌


Team Udayavani, Apr 3, 2019, 6:00 AM IST

Avalu–Repair

ಉತ್ತರ ಭಾರತೀಯರು ಸಣ್ಣಪುಟ್ಟ ಅಡ್ಜಸ್ಟ್‌ಮೆಂಟ್‌, ರಿ ಸೈಕಲ್‌ಗೆ ‘ಜುಗಾದ್‌’ ಅಂತಲೇ ಕರೆಯೋದು. ಈ ಎಲ್ಲ ಜುಗಾದ್‌ಗಳ ಹಿಂದೆಯೂ ಅಪಾರ ಜೀವನಪ್ರೀತಿ, ಮಿತವ್ಯಯ ಅಂತೆಯೇ ಸೃಜನಶೀಲತೆ, ಹೊಸದರಲ್ಲಿ ಹಳೆಯದನ್ನು ಮಿಳಿತಗೊಳಿಸುವ ಕಲೆಗಾರಿಕೆ ಇದೆ…

ಇತ್ತೀಚೆಗೆ ನಮ್ಮ ಮನೆಯ ಕುಕ್ಕರ್‌ ಕೈಕೊಟ್ಟಿತ್ತು. ಗ್ಯಾಸ್ಕೆಟ್‌ ಬದಲಿಸಿ, ಹಿಡಿಯ ಸ್ಕ್ರೂ ಬದಲಿಸಿ, ಏನೆಲ್ಲ ಸರ್ಕಸ್‌ ಮಾಡಿದರೂ ಅದರ ಮುನಿಸು ಇಳಿದಿರಲಿಲ್ಲ. ಅಚಾನಕ್ಕಾಗಿ ಸಿಕ್ಕ ಕುಕ್ಕರ್‌ ರಿಪೇರಿಯ ಅಜ್ಜ ಮನೆಗೆ ಬಂದು, ಅದನ್ನು ರಿಪೇರಿ ಮಾಡಿಕೊಟ್ಟಿದ್ದಲ್ಲದೇ, ಸಣ್ಣಗೆ ಉರಿಯುತ್ತಿದ್ದ ಗ್ಯಾಸ್‌ ಬರ್ನರ್‌ ರಿಪೇರಿ ಮಾಡಿದ. ಉತ್ತರ ಭಾರತೀಯರು ಇಂಥ ಅಡ್ಜಸ್ಟ್‌ಮೆಂಟ್‌ಗಳಿಗೆ ‘ಜುಗಾದ್‌’ ಅಂತ ಕರೆಯೋದು ನೆನಪಿಗೆ ಬಂತು.

‘ಜುಗಾದ್‌’ ಅನ್ನೋದು ಪಂಜಾಬಿ ಶಬ್ದ (ಹಿಂದಿ, ಬಂಗಾಳಿಯಲ್ಲೂ ಇದರ ಬಳಕೆ ಇದೆಯಂತೆ). ಇದ್ದುದರಲ್ಲೇ ಅಡ್ಜಸ್ಟ್‌ ಮಾಡಿಕೊಂಡು ಹೊಸದಾಗಿ ಒಂದು ಪರಿಹಾರ ಕಂಡುಕೊಳ್ಳುವ ವಿಧಾನ. ಮೊನ್ನೆಯಷ್ಟೇ ಟಿ.ವಿ.ಯ ರಿಮೋಟ್‌ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಆಗ ಬಂದ ಪೇಪರ್‌ ಹಾಕುವ ಹುಡುಗ, ಅದಕ್ಕೊಂದು ರಬ್ಬರ್‌ ಬ್ಯಾಂಡ್‌ ಹಾಕಿ, ಸಮಸ್ಯೆ ನಿವಾರಿಸಿಬಿಟ್ಟ. ಈ ರೀತಿಯ ‘ಕ್ವಿಕ್‌ ಫಿಕ್ಸ್’ನಿಂದ ಪುಳಕಗೊಂಡಿರುವಾಗಲೇ ಈ ‘ಜುಗಾದ್‌’ ಎನ್ನುವ ಶಬ್ದ ಕಣ್ಣಿಗೆ ಬಿದ್ದದ್ದು.

ನಮ್ಮ ಅಕ್ಕಪಕ್ಕದಲ್ಲೇ ಈ ರೀತಿಯ ಮಿತವ್ಯಯದ, ರಿ ಸೈಕಲಿಂಗ್‌ ಮಾದರಿಯ ಜುಗಾದ್‌ಗಳು ಕಾಣಸಿಗುತ್ತವೆ. ಉದಾ: ಕರ್ನಾಟಕದ ಸಮಸ್ತ ಮನೆಗಳಲ್ಲೂ ತಿಂಗಳಿಗೆ ಒಮ್ಮೆಯಾದರೂ ನಿನ್ನೆಯ ಅನ್ನದ ಚಿತ್ರಾನ್ನ ಇದ್ದೇ ಇರುತ್ತದೆ ಎನ್ನುವುದು ನನ್ನ ನಂಬಿಕೆ. ಹಾಗೆ ನೋಡುವುದಿದ್ದರೆ ‘ಜುಗ್ಗಡ್‌’, ‘ಜುಗ್ಗ’ ಪದಗಳು ಇದರಿಂದಲೇ ಬಂದಿವೆಯೇನೋ ಎನ್ನುವ ಕುತೂಹಲವೂ ನನಗಿದೆ.

ಇತ್ತೀಚೆಗೆ ಧಾರವಾಡಕ್ಕೆ ಹೋಗಿದ್ದಾಗ ರಿಕ್ಷಾದ ಹಿಂಭಾಗದ ಮೂರು ಸೀಟುಗಳಲ್ಲದೆ ಹಿಂದೆಯೂ ಕುಳಿತು­ಕೊಳ್ಳಬಹುದಾದ ವಿಶಿಷ್ಟ ಅನುಭವ­ವಾಯಿತು. ಜೀಪಿನಂತೆ ಹಿಂದೆ ಸೀಟು ಅಳವಡಿಸಿದ್ದರು. ಹಳ್ಳಿಗಾಡಿನಲ್ಲಿ ಕುರಿಮರಿ ಸಹಿತ ಮನುಷ್ಯರನ್ನು ಸಾಗಿಸುವ ಟಂ ಟಂಗಳು, ಟ್ರೈಸಿಕಲ್‌ನಂಥ ‘ಮೇಕ್‌ ಶಿಫ್ಟ್’ ಗಾಡಿಗಳು- ಹೀಗೆ ಇದೊಂದು ವಿನೂತನವಾದ ಜಗತ್ತು. ಇನ್ನು ಹಾಸ್ಟೆಲ್‌ಗ‌ಳಲ್ಲಂತೂ ಇಸ್ತ್ರಿ ಪೆಟ್ಟಿಗೆಯಲ್ಲಿ ಮ್ಯಾಗಿ ತಯಾರಿಸುವ, ಪುಟ್ಟ ಮೊಬೈಲ್‌ನಲ್ಲಿ ಥಿಯೇಟರ್‌ ಲೆವೆಲ್‌ಗೆ ಸಿನೆಮಾ ನೋಡುವ ಹೊಸ ಹೊಸ ವಿಧಾನಗಳನ್ನು ಅನ್ವೇಷಿಸುತ್ತಿರುತ್ತಾರೆ.

ಜುಗಾದ್‌ ಹಿಂದಿನ ಕಲೆಗಾರಿಕೆ
ಈ ಎಲ್ಲ ಜುಗಾದ್‌ಗಳ ಹಿಂದೆಯೂ ಅಪಾರ ಜೀವನಪ್ರೀತಿ, ಮಿತವ್ಯಯ ಅಂತೆಯೇ ಸೃಜನಶೀಲತೆ, ಹೊಸದರಲ್ಲಿ ಹಳೆಯದನ್ನು ಮಿಳಿತಗೊಳಿಸುವ ಕಲೆಗಾರಿಕೆ ಇದೆ. ಜೀನ್ಸ್‌ ಮೇಲೆ ಸಲ್ವಾರ್‌ ಟಾಪ್‌ ಹಾಕುವ, ಸೀರೆಯೊಂದಿಗೆ ಜಾಕೆಟ್‌ ಧರಿಸುವ, ಲುಂಗಿ ಉಟ್ಟುಕೊಂಡು ಸಂಗೀತ ಹೇಳುವ- ಹೀಗೆ ಇದೊಂದು ರೀತಿಯ ಫ್ಯೂಶನ್‌ ಕೂಡ. ಅದೇ ರೀತಿ ಬಳೆಯ ಚೂರುಗಳನ್ನು ಅಂದವಾಗಿ ಜೋಡಿಸಿದ ಕ್ರಾಫ್ಟ್, ಕಾಡುಬಳ್ಳಿಗಳಿಂದ ಹೆಣೆಯುವ ಬುಟ್ಟಿ, ಹೀಗೆ ನಮ್ಮ ಕಸೂತಿ, ಕಲೆಗಳಲ್ಲೂ ಸಣ್ಣ ಮಟ್ಟಿಗೆ ಜುಗಾದ್‌ ಇದೆ ಅನ್ನಬಹುದೇನೋ. ಹಾಗೆ ನೋಡುವುದಿದ್ದರೆ, ಗಾಳಿಯಂತ್ರದಿಂದ ಹಿಡಿದು ವಿಮಾನದವರೆಗೆ ಎಲ್ಲ ಸಂಶೋಧನೆಗಳೂ ಮಾನವ ಜೀವಿತವನ್ನು ಸುಗಮಗೊಳಿಸುವ ಪ್ರಯತ್ನಗಳೇ ಆಗಿದ್ದವು ಅಲ್ಲವೆ?

ಹಳ್ಳಿಗರ ಅರಿವಿನ ಲೋಕ
ತೋಟ­ದಲ್ಲಿ ತನ್ನ ಪಾಡಿಗೆ ಪಂಪು ರಿಪೇರಿ ಮಾಡುವ ಕೃಷಿಕರು, ತೆಂಗಿನ ಮರ­ವೇರಲು, ಎಳನೀರು ಕೊಚ್ಚಲು ಎಂದೆಲ್ಲ ಯಂತ್ರ ಕಂಡು ಹುಡುಕುವ ಸೃಜನ­ಶೀಲರು- ಎಲ್ಲರೂ ಒಂದು ರೀತಿಯ ಸಂಶೋ­ಧಕರು. ಹಾಗಿದ್ದರೂ ಜುಗಾದ್‌ ನ ಸ್ವರೂಪ ಕೊಂಚ ಭಿನ್ನ. ಅದು ಅನಕ್ಷರಸ್ಥರ, ಕಡಿಮೆ ಆದಾಯದವರ ಪ್ರಪಂಚ. ಅದು ಟೆಕ್ನಾಲಜಿಯನ್ನು ಬಡತನಕ್ಕೆ ಒಗ್ಗಿಸಿಕೊಂಡ ರೂಪ. ನಾಲ್ಕೈದು ವೈರ್‌, ಸ್ವಿಚ್‌, ಹಾಗೆ ಎಲ್ಲ ಬಳಸಿ ತಾನೇ ಫ್ಯಾನ್‌ ತಯಾರಿಸುವವರು, ಸೈಕಲ್‌ ಗಾಡಿಯ ಹಿಂಭಾಗದಲ್ಲಿ ದೊಡ್ಡ ಸ್ಟೀಲ್‌ ಬಾಸ್ಕೆಟ್‌ ಇಟ್ಟು ಬೆಡ್‌ಶೀಟ್‌ ಮಾರುವವರು- ಹೀಗೆ ಅದೊಂದು ಆವಶ್ಯಕತೆ ಕೂಡ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಶ್ರಮವನ್ನು ಸರಳಗೊಳಿಸುವ ವಿಧಾನಗಳನ್ನು “ಜುಗಾದ್‌’ ಎನ್ನಬಹುದು. ಕೈಯಿಂದ ಓಡಿಸುವ ಟ್ರ್ಯಾಕ್ಟರ್‌, ಪ್ಲಾಸ್ಟಿಕ್‌ ಬಾಟಲಿಯಿಂದ ಶವರ್‌… ಹೀಗೆ.

ಜಗತ್ತೇ ‘ಜುಗಾದ್‌’ಮಯ
ಇತ್ತೀಚೆಗೆ ಜಾಹೀರಾತೊಂದರಲ್ಲಿ ಒಬ್ಬ ಮಹಿಳೆ ಹಳೆಯ, ಉಪಯೋಗಕ್ಕೆ ಬಾರದ ಕಾರನ್ನು ಆಕರ್ಷಕವಾದ ಕ್ಯಾಂಟೀನ್‌ ಆಗಿ ಪರಿವರ್ತಿಸುತ್ತಾಳೆ. ಇದು ಕೂಡ ಒಂದು ರೀತಿಯ ಜುಗಾದ್‌. ಇನ್ನೊಂದು ರೀತಿಯಲ್ಲಿ ‘ಜುಗಾದ್‌’ ಎಂದರೆ ಚತುರತೆ. ಇಂಟರ್ನೆಟ್‌ನಲ್ಲಿ ಜುಗಾದ್‌ ಎಂದರೆ, ಸೈಕಲ್‌ ರಿಕ್ಷಾಗಳು, ಟ್ರಾಕ್ಟರ್‌ನ ಹಿಂದೆ ಜೋಡಿಸಿದ ಲಾರಿಯಂತಿರುವ ವಾಹನ, ಒಂದಷ್ಟು ಹಲಗೆಗಳು, ಹಳೆಯ ಜೀಪಿನ ಭಾಗಗಳು ಸೇರಿ ಅತ್ತ ಗಾಡಿಯೂ ಅಲ್ಲದ ಇತ್ತ ಸರಿಯಾದ ವೆಹಿಕಲ್‌ ಕೂಡ ಅಲ್ಲದ, ಹಳೆಯ ಬಿಡಿಭಾಗಗಳನ್ನು ಜೋಡಿಸಿದ ವಾಹನಗಳು ಕಾಣಸಿಗುತ್ತವೆ. ಇನ್ನೊಂದು ರೀತಿಯಲ್ಲಿ ಇದು ಗುಜರಿಗೆ ಹಾಕಬಹುದಾದ ವಸ್ತುಗಳನ್ನು ಮರುಬಳಕೆ ಮಾಡುವ ವಿಧಾನ. ಟೆಕ್ನಾಲಜಿ, ಡಿಸೈನ್‌ನಲ್ಲಿ ರಿಸರ್ಚ್‌ ಮಾಡುವವರೂ ಇವನ್ನೆಲ್ಲ ಗಮನಿಸುತ್ತಾರಂತೆ.

ಇನ್ನು ದೈನಂದಿನ ಜೀವನದಲ್ಲೂ ಹೀಗೆ ತಮ್ಮ ಜೀವನವನ್ನು ಖರ್ಚಿಲ್ಲದೆ ಸುಗಮಗೊಳಿಸುವ ಚತುರರಿರುತ್ತಾರೆ. ಇತ್ತೀಚೆಗೆ, ತಾನೇ ಒಬ್ಬಳು ಜಾಣೆ ಚೂಡಿದಾರದ ಪ್ಯಾಂಟ್‌ ಬಟ್ಟೆಯಿಂದ ಜೀನ್ಸ್‌ ಮೇಲೆ ಹಾಕುವ ಟಾಪ್‌ ಅನ್ನು ತಾನೇ ಡಿಸೈನ್‌ ಕೊಟ್ಟು ಹೊಲಿಸಿಕೊಂಡಿದ್ದು ನೋಡಿದೆ. ವಾಷಿಂಗ್‌ ಮೆಶಿನ್‌ನಲ್ಲಿ ಲಸ್ಸಿ ಮಾಡುವ, ನಂದಿನಿ ಹಾಲು ಪ್ಯಾಕೆಟ್‌ನಲ್ಲಿ ಮೆಹೆಂದಿ ಕೋನ್‌ ಮಾಡುವ, ಹಳೆ ಆಭರಣಗಳನ್ನೇ ಪಾಲಿಶ್‌ ಮಾಡಿ ಹೊಸ ಆಭರಣದಂತೆ ಕಂಗೊಳಿಸುವ ‘ಜುಗಾದ್‌’ ಎನ್ನುವುದು ಫ್ಯಾಷನ್‌, ಅಡುಗೆ, ತಂತ್ರಜ್ಞಾನ ಎಲ್ಲೆಡೆ ಇದೆ. ಹಳೇ ಸೀರೆಗಳಿಂದ ಕಾಲೊರೆಸು ಮಾಡುವ, ಕೌದಿ ಮಾಡುವ, ಹೀಗೆ ನಮ್ಮ ತಾಯಂದಿರು, ಅಜ್ಜಿಯರು ವಸ್ತುಗಳನ್ನು ‘ರೀ-ಸೈಕಲ್’ ಮಾಡುತ್ತಿದ್ದರು. ಒಟ್ಟಿನಲ್ಲಿ, ಕೈಗೆ ಸಿಗುವ ಸಂಪನ್ಮೂಲಗಳನ್ನು ಹೇಗಾದರೂ ಬಳಸಿ ‘ಸದ್ಯದ’ ಸಮಸ್ಯೆಯನ್ನು ಹೇಗಾದರೂ ಪರಿಹರಿಸಿಕೊಳ್ಳುವ ಅದಮ್ಯ ಕಾರ್ಯಶೀಲತೆಗೆ ಸಾಕ್ಷಿಯಂತಿದೆ ಜುಗಾದ್‌.

– ಜಯಶ್ರೀ ಕದ್ರಿ

ಟಾಪ್ ನ್ಯೂಸ್

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.