ತೊಳೆದ ಮುತ್ತನು ಕಂಡೆ…
Team Udayavani, Mar 13, 2019, 12:30 AM IST
ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ ಮೇಲೆ ಮಲಗಿಸಿಕೊಂಡು, ಎಣ್ಣೆಯನ್ನು ಬೆಚ್ಚಗೆ ಮಾಡಿ, ಮೈಗೆಲ್ಲಾ ಹಚ್ಚಿ, ಬೆನ್ನು- ತಲೆಗೆ ತಟ್ಟುತ್ತಾ ಮೃದುವಾಗಿ ಮಸಾಜ್ ಮಾಡುವುದು, ಧ್ಯಾನಕ್ಕಿಂತಲೂ ತುಸು ಹೆಚ್ಚೇ ಏಕಾಗ್ರತೆಯನ್ನು ಬೇಡುತ್ತದೆ…
“ತೊಟ್ಟಿಲ ಒಳಗೊಂದು ತೊಳೆದ ಮುತ್ತನು ಕಂಡೆ
ಹೊಟ್ಟೆ ಆಕಳಿಸಿ ನಗುವೋನ ನನ್ನಯ್ಯ
ನೆತ್ತೀಲಿ ಕಂಡೆ ಹರಳೆಲೆ
ಮರದಲ್ಲಿ ಮರ ಹುಟ್ಟಿ, ಮರಚಿಂಗದ ಕಾಯಾಗಿ, ತಿನ್ನಲಾರದ ಹಣ್ಣು ಬಲುರುಚಿ…
- ಹೀಗೆ ಜನಪದರು ಮಗುವನ್ನು ತೊಳೆದ ಮುತ್ತಿಗೆ, ತಿನ್ನಲಾರದ ಹಣ್ಣಿಗೆ ಹೋಲಿಸಿದ್ದಾರೆ. ಮಗುವನ್ನು ಆರೈಕೆ ಮಾಡುವ ಪ್ರಕ್ರಿಯೆಗಳೇ ಒಂದು ಚಾಲೆಂಜ್. ಮಗುವಿಗೆ ಎಣ್ಣೆ ಸ್ನಾನ ಮಾಡಿಸುವುದು ಅವುಗಳಲ್ಲೊಂದು. ಮಗಳು ಹೆರಿಗೆಗೆಂದು ಮನೆಗೆ ಬಂದ ಕ್ಷಣದಿಂದಲೇ, ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಎಂಬ ಚಿಂತೆ ಅಜ್ಜಿಯರನ್ನು ಕಾಡುತ್ತದೆ. ಮಗುವನ್ನು ಕಾಲಿನ ಮೇಲೆ ಅಥವಾ ತೊಡೆಯ ಮೇಲೆ ಮಲಗಿಸಿಕೊಂಡು, ಎಣ್ಣೆಯನ್ನು ಬೆಚ್ಚಗೆ ಮಾಡಿ, ಮೈಗೆಲ್ಲಾ ಹಚ್ಚಿ, ಬೆನ್ನು- ತಲೆಗೆ ತಟ್ಟುತ್ತಾ ಮೃದುವಾಗಿ ಮಸಾಜ್ ಮಾಡುವುದು, ಧ್ಯಾನಕ್ಕಿಂತಲೂ ತುಸು ಹೆಚ್ಚೇ ಏಕಾಗ್ರತೆಯನ್ನು ಬೇಡುತ್ತದೆ. ಸ್ನಾನ ಮಾಡಿಸುವಾಗ ನೀರು ಮಗುವಿನ ಕಣ್ಣು, ಮೂಗು, ಬಾಯಿಗೆ ಹೋಗದಂತೆ ತಡೆಯಲು ಹಣೆಯ ಮೇಲೆ ಕೈ ಹಿಡಿದು ಸ್ನಾನ ಮಾಡಿಸುವುದೂ ಒಂದು ಕಲೆ. ನಂತರ ಮಗುವಿಗೆ ಧೂಪ ಅಥವಾ ಲೊಬಾನ ಹಾಕಿ ಹಾಯಾಗಿ ನಿದ್ದೆ ಮಾಡಿಸುತ್ತಾರೆ. ಮಗುವಿಗೆ ಒಂದೆರಡು ವರ್ಷ ತುಂಬುವವರೆಗೂ ಎಣ್ಣೆ ಸ್ನಾನ ಮಾಡಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಎಣ್ಣೆ ಸ್ನಾನ ಒಳ್ಳೇದು…
ಎಳ್ಳೆಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ… ಇವುಗಳಲ್ಲಿ ಯಾವ ಎಣ್ಣೆಯಾದರೂ ಆದೀತು. ಅಭ್ಯಂಜನದಿಂದ ಮಗುವಿನ ಮಾಂಸಖಂಡಗಳ ಬೆಳವಣಿಗೆ ಸರಿಯಾಗಿ, ಮೂಳೆ ಗಟ್ಟಿಯಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಲು, ಚರ್ಮಕ್ಕೆ ಹೊಳಪು ಬರಲು, ಮಗುವಿಗೆ ಚೆನ್ನಾಗಿ ನಿದ್ದೆ ಬರಲು ಎಣ್ಣೆಸ್ನಾನ ಸಹಕಾರಿ. ಮಗು ದೊಡ್ಡದಾಗುವವರೆಗೆ ಪ್ರತಿದಿನ ಎಣ್ಣೆಸ್ನಾನ ಮಾಡಿಸಿ. ನೆಗಡಿ, ಕೆಮ್ಮು, ಜ್ವರ ಇದ್ದಾಗ ಸ್ನಾನಕ್ಕೆ ವಿರಾಮ ನೀಡಬಹುದು.
ಒಂದು ಪಾತ್ರೆಯಲ್ಲಿ ನೀರು ಹಾಕಿ ಕಾಯಿಸಿ, ಆ ಪಾತ್ರೆಯಲ್ಲಿ ಎಣ್ಣೆಯ ಬಟ್ಟಲನ್ನಿಟ್ಟು ಎಣ್ಣೆಯನ್ನು ಬಿಸಿ ಮಾಡಿ. ಉಗುರು ಬೆಚ್ಚಗಾದ ಎಣ್ಣೆಯನ್ನು ಮಗುವಿನ ಕೈ ಕಾಲುಗಳಿಗೆ ಮೇಲಿನಿಂದ ಕೆಳಗೆ ಹಚ್ಚಬೇಕು. ಹೊಕ್ಕಳು ಹಾಗೂ ನೆತ್ತಿಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ. ಕೀಲುಗಳ ಮತ್ತು ಹೊಟ್ಟೆಯ ಭಾಗದಲ್ಲಿ ವೃತ್ತಾಕಾರವಾಗಿ, ತಲೆಯ ಮೇಲೆ ಬೆರಳುಗಳ ತುದಿಯಿಂದ, ಬೆನ್ನಿನ ಮೇಲೆ ಮೃದುವಾಗಿ ತಟ್ಟಿ, ಪಾದಗಳಿಗೆ ಮೃದುವಾಗಿ ಸವರುತ್ತಾ ಎಣ್ಣೆ ಹಚ್ಚಬೇಕು.
ನೀರಿಗೇನು ಬೆರೆಸಬೇಕು?
ಎಣ್ಣೆ ಹಚ್ಚಿ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ. ಅತಿಯಾದ ಬಿಸಿನೀರಿನ ಸ್ನಾನ ಬೇಡ. ಸ್ನಾನ ಮಾಡಿಸುವ ನೀರಿಗೆ ಸ್ವಲ್ಪ ಲಿಂಬೆರಸ, ಗುಲಾಬಿ ಜಲ, ಏಲಕ್ಕಿ ಪುಡಿ ಬೆರೆಸಬಹುದು. ತಲೆಗೆ ಸ್ನಾನ ಮಾಡಿಸುವಾಗ ಕಣ್ಣಿಗೆ ನೀರು ಹೋಗದಂತೆ ಜೋಪಾನ ಮಾಡಿ. ಸ್ನಾನವಾದ ನಂತರ ಸ್ವತ್ಛವಾದ ಟವೆಲ್‌ನಿಂದ ಮೈ ಒರೆಸಿ, ನೆತ್ತಿಯಿಂದ ಕಾಲಿನವರೆಗೆ ಧೂಪವನ್ನು ಹಿಡಿಯಿರಿ. ಮಗುವಿಗೆ ಸಂಜೆ ವೇಳೆ ಸ್ನಾನ ಮಾಡಿಸಿದರೆ, ರಾತ್ರಿ ಚೆನ್ನಾಗಿ ನಿದ್ದೆ ಮಾಡುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಗುವನ್ನು ಬೆಚ್ಚಗಿಡುವುದು ಕೂಡ ಮುಖ್ಯ. ಸ್ವೆಟರ್ ಹಾಕಿಸಿ, ಕಂಚಿಗೆ ಹಾಗೂ ಕುಲಾವಿ ಕಟ್ಟಬೇಕು, ಬೆಚ್ಚಗಿನ ಟೋಪಿ ಹಾಕಬೇಕು. ಮಗುವನ್ನು ಕಾಟನ್ ಸೀರೆಯ ಜೋಗುಳದಲ್ಲಿ ಮಲಗಿಸುವುದು ಅದರ ಬೆಳವಣಿಗೆಗೆ ಸಹಕಾರಿ ಅನ್ನುತ್ತಾರೆ ಹಿರಿಯರು.
ಕಂದನ ಸ್ನಾನ ಹೀಗಿರಲಿ…
1. ಮಗುವಿನ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ. ಬಿಸಿ ನೀರು, ಮಗುವಿನ ಚರ್ಮಕ್ಕೆ ಘಾಸಿ ಮಾಡುತ್ತದೆ.
2. ಸೋಪ್‌ನ ಬದಲು, ಹೆಸರುಕಾಳು ಹಿಟ್ಟು, ಕಡಲೆ ಹಿಟ್ಟು ಮತ್ತು ಮೆಂತ್ಯೆ ಹಿಟ್ಟನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಸ್ನಾನ ಮಾಡಿಸಿ.
3. ಮಗುವಿನ ಮೈಗೆ ಎಣ್ಣೆ ಹಚ್ಚಿ, ಬೆಳಗಿನ ಬಿಸಿಲಿನಲ್ಲಿ ನಿಲ್ಲಿಸಿ. ಮೂಳೆಯ ಬೆಳವಣಿಗೆಗೆ ಬೇಕಾದ ವಿಟಿಮಿನ್ “ಎ’ ಮತ್ತು “ಡಿ’, ಸೂರ್ಯ ಕಿರಣಗಳಿಂದ ಸಿಗುತ್ತದೆ. ರಿಕೆಟ್ಸ್‌ನಂಥ ಕಾಯಿಲೆಗಳನ್ನೂ ತಡೆಗಟ್ಟಬಹುದು.
4. ಮಗುವಿಗೆ 5 ತಿಂಗಳಾಗುವವರೆಗೆ ಕಾಲಿನ ಮೇಲೆ ಮಲಗಿಸಿಕೊಂಡು ಎಣ್ಣೆ ಹಚ್ಚಿ ಸ್ನಾನ ಮಾಡಿಸಬೇಕು. ನಂತರ ಕಾಲಿನ ಮೇಲೆ ಕೂರಿಸಿ ಸ್ನಾನ ಮಾಡಿಸಬಹುದು. ಮಗು ನಿಲ್ಲುವ ಸ್ಥಿತಿಗೆ ಬಂದ ಮೇಲೆ ನಿಲ್ಲಿಸಿ ಸ್ನಾನ ಮಾಡಿಸಬಹುದು.
7. ರಾಸಾಯನಿಕ ಅಂಶ ಅಧಿಕವಾಗಿರುವ ಶ್ಯಾಂಪೂ, ಕ್ರೀಂ, ಬಾಡಿ ಲೋಶನ್, ಪೌಡರ್ ಬಳಕೆ ಬೇಡ.
ಜ್ಯೋತಿ ಪುರದ, ಹಾವೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.