ಮರಳಿ ಹಳ್ಳಿಗೆ
Team Udayavani, Dec 4, 2019, 4:45 AM IST
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗುವವರನ್ನು ನೋಡಿದ್ದೇವೆ. ಆದರೆ, ಮಗನನ್ನು ರೈತನನ್ನಾಗಿ ಮಾಡಲು, ಇದ್ದ ಕೆಲಸ ಬಿಟ್ಟು ಹಳ್ಳಿಗೆ ಹೋದವರನ್ನು ನೋಡಿದ್ದೀರಾ? ರಾಜಸ್ಥಾನದ ತಾಯಿಯೊಬ್ಬರು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟು, ಹಳ್ಳಿಗೆ ಹೋಗಿ ಜಮೀನು ಖರೀದಿಸಿದ್ದಾರೆ. ಅವರೇ ಚಂಚಲ್ ಕೌರ್.
ಚಂಚಲ್-ರಾಜೇಂದ್ರ ದಂಪತಿಗೆ, 11 ವರ್ಷದ ಮಗನಿದ್ದಾನೆ. ರಾಜೇಂದ್ರ, ಭಾರತೀಯ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದರೆ, ಚಂಚಲ್ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ನಗರ ವಾಸದಿಂದ ಬೇಸತ್ತಿದ್ದ ಚಂಚಲ್, ಮಗನಾದರೂ ಹಳ್ಳಿಯ ಸ್ವತ್ಛ ಪರಿಸರದಲ್ಲಿ ಬೆಳೆಯಲಿ ಎಂದು, ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದಾರೆ. ಈಗ ತಮ್ಮ ಮಗ ಗುರುಭû… ಸಿಂಗ್ ಜೊತೆಗೆ ಸಾವಯವ ಕೃಷಿ ಮಾಡುತ್ತಾ, ಖುಷಿಯಾಗಿದ್ದಾರೆ. ಗಂಡ, ಉದ್ಯೋಗನಿಮಿತ್ತ ನಗರದಲ್ಲಿ ಇರಬೇಕಾದ್ದರಿಂದ ಚಂಚಲ್ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಇಂಥ ತಾಯಂದಿರ ಸಂಖ್ಯೆ ಹೆಚ್ಚಲೆಂದು ಆಶಿಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.