ಬಾಲ್ಡಿ ಆಗಲ್ಲ ಆದ್ರೂ ಕಷ್ಟಾರೀ…


Team Udayavani, Oct 30, 2019, 4:54 AM IST

r-13

ಕೂದಲು ಉದುರುವುದು ಸಹಜ, ಸಾಮಾನ್ಯ ಕ್ರಿಯೆ. ಪ್ರತಿದಿನ 70-100 ಕೂದಲು ಉದುರಿದರೆ ಯಾವ ತೊಂದರೆಯೂ ಇಲ್ಲ. ಆರೋಗ್ಯ ಹದಗೆಟ್ಟಾಗ, ಟೆನ್ಸ್ ನ್‌ನ ಕಾರಣದಿಂದ, ಮಾಲಿನ್ಯದಿಂದ ಕೆಲವೊಮ್ಮೆ ಹೆಚ್ಚು ಕೂದಲು ಉದುರಬಹುದು ಅಂತ ಗೊತ್ತಿದ್ದರೂ, ಯಾರೂ ಕೂದಲನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ ಹುಡುಗಿಯರಿಗೆ, ಹೇರ್‌ಫಾಲ್‌ ಅನ್ನುವುದು ಸದಾ ಕಾಡುವ ದು:ಸ್ವಪ್ನ.

ಅವು ನಾನು ಪಿಯುಸಿ ಓದುತ್ತಿದ್ದ ದಿನಗಳು. ಇನ್ನೆರಡು ದಿನಗಳಲ್ಲಿ ನಮಗೆ ಅಕೌಂಟ್ಸ್‌ ಪರೀಕ್ಷೆ ಇತ್ತು. ಹಾಗಾಗಿ, ಇಡೀ ಹಾಸ್ಟೆಲ್‌ ಓದಿನಲ್ಲಿ ಮುಳುಗಿ ಹೋಗಿತ್ತು. ನಾವೆಲ್ಲಾ ಡೆಬಿಟ್‌, ಕ್ರೆಡಿಟ್‌ಗಳ ಲೆಕ್ಕಾಚಾರದಲ್ಲಿದ್ದಾಗ, ನನ್ನ ರೂಮ್‌ಮೇಟ್‌ ಮಾತ್ರ ಬಯಾಲಜಿ ಪುಸ್ತಕ ಹಿಡಿದು ಕುಳಿತಿದ್ದಳು. “ನಿಂಗೇನೇ ಬಂತು? ಅಕೌಂಟ್ಸ್‌ ಬಿಟ್ಟು ಬಯಾಲಜಿ ಓದ್ತಾ ಇದ್ದೀಯಾ?’ ಅಂತ ಕೇಳಿದೆ. ಆಗ ಅವಳು, “ಹುಡುಗಿಯರೂ ಹುಡುಗರಂತೆ ಬಾಂಡ್ಲಿ (ಬೊಕ್ಕತಲೆ) ಆಗುವ ಸಾಧ್ಯತೆಗಳಿದೆಯಾ ಅಂತ ಹುಡುಕುತ್ತಿದ್ದೇನೆ’ ಅಂದಳು.

ಬೊಕ್ಕತಲೆ ಅಂತ ಕೇಳಿಯೇ ನನಗೆ ತಲೆಬಿಸಿಯಾಯ್ತು. ಪರೀಕ್ಷೆಯ ಟೆನ್ಸ್ ನ್‌ನ ಕಾರಣದಿಂದಲೋ, ತರಕಾರಿಯ ಅವಶೇಷವೂ ಸಿಗದ ಹಾಸ್ಟೆಲ್‌ನ ಊಟದಿಂದಾಗಿಯೋ, ನನ್ನ ತಲೆಗೂದಲು ಜೊಂಪೆಜೊಂಪೆಯಾಗಿ ಉದುರುತ್ತಿತ್ತು. ಉದುರಿದ ಕೂದಲು ಹುಟ್ಟೇ ಹುಟ್ಟುತ್ತದೆ ಎಂದು ನಂಬಿದ್ದ ನಾನು, ಹುಡುಗಿಯರೂ ಬಾಂಡ್ಲಿಗಳಾಗಬಹುದು ಅಂತ ಊಹಿಸಿಕೊಂಡೂ ಇರಲಿಲ್ಲ. ಕೊನೆಗೂ ಅವಳು ಅರ್ಧ ಗಂಟೆ ಪುಸ್ತಕದ ಹಾಳೆಗಳನ್ನು ತಡಕಾಡಿ, “ಹುಡುಗಿಯರು ಪೂರ್ತಿ ಕೂದಲು ಕಳೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ ಕಣೇ’ ಅಂದಾಗಲೇ ನನಗೆ ಜೀವ ಬಂದಿದ್ದು.

ಅವಳು, ನಾನು ಅಷ್ಟೇ ಅಲ್ಲ, ರೂಮ್‌ನಲ್ಲಿದ್ದ ಇತರರ ಕೂದಲೂ ಉದುರುತ್ತಿತ್ತು. ಪ್ರತಿದಿನ ಗುಡಿಸುವಾಗಲೂ, “ಇದು ನನ್ನ ಕೂದಲಲ್ಲ, ಅವಳದ್ದಿರಬೇಕು’ ಅಂತ ಸುಮ್‌ಸುಮ್ನೆ ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಬಾತ್‌ರೂಮ್‌ನಲ್ಲೂ ಅಷ್ಟೇ; ಮುದ್ದೆ ಮುದ್ದೆ ಕೂದಲ ರಾಶಿ. ಕೆಲವೊಮ್ಮೆ ನೀರು ಕಟ್ಟಿಕೊಂಡು ಸಿಟ್ಟು ಬರುತ್ತಿತ್ತಾದರೂ, “ಸದ್ಯ, ನಂಗೊಬ್ಬಳಿಗೇ ಅಲ್ಲ; ಎಲ್ಲರಿಗೂ ಕೂದಲು ಉದುರುತ್ತಿದೆ’ ಅಂತ ಒಳಗೊಳಗೆ ಖುಷಿಯೂ ಆಗುತ್ತಿತ್ತು. ಗೆಳತಿಯರೆಲ್ಲ ಒಟ್ಟಿಗೆ ಹರಟುವಾಗ, ಒಬ್ಬರಲ್ಲ ಒಬ್ಬರು “ಕೂದಲು ಉದ್ರುತ್ತಿದೆ ಕಣ್ರೆ ಹೆಚ್ಚಂದ್ರೆ ಇನ್ನೊಂದ್ವರ್ಷ ಅಷ್ಟೆ. ಆಮೇಲೆ ಫ‌ುಲ್‌ ಬಾಂಡ್ಲಿ ಆಗ್ತಿàನಿ’ ಅಂತ ಜೋಕು ಮಾಡುತ್ತಿದ್ದರು. “ಹಂಗೆಲ್ಲಾ ಆಗಲ್ಲ ಕಣೇ’ ಅಂತ ನಾವು ಸಾಂತ್ವನ ಹೇಳಿದರೂ, ಒಳಗೊಳಗೇ ಎಲ್ಲರಿಗೂ ಆ ಭಯ ಇತ್ತು.

“ನಮ್ಮನೇಲಿ ಅಜ್ಜ-ಅಪ್ಪ-ಚಿಕ್ಕಪ್ಪ ಎಲ್ಲರೂ ಬೊಕ್ಕತಲೆಯವರೇ. ಅದಕ್ಕೇ ಹೆದ್ರಿಕೆ’ ಅಂತ ಒಬ್ಬಳು ಹೇಳಿದರೆ, ಇನ್ನೊಬ್ಬಳು “ಹಾಸ್ಟೆಲ್‌ನಲ್ಲಿ ನೀರು, ಊಟ ಯಾವುದೂ ಸರಿ ಇಲ್ಲ. ಅದಕ್ಕೇ ಕೂದಲು ಉದ್ರೋದು. ಮನೆಗೆ ಹೋದ್ಮೇಲೆ ಎಲ್ಲಾ ಸರಿ ಹೋಗುತ್ತೆ’ ಅಂತ ಧೈರ್ಯ ತುಂಬುತ್ತಿದ್ದಳು. “ಇಲ್ಲಿನ ನೀರಲ್ಲಿ ಕ್ಲೋರಿನ್‌ ಇರುತ್ತೆ. ಜೊತೆಗೆ, ಶ್ಯಾಂಪೂ, ಕಂಡಿಷನರ್‌ ಅಲ್ಲಿರೋ ಕೆಮಿಕಲ್ಸ್‌ ಬೇರೆ. ಮುಂದಿನ ಸಲ ಮನೆಗೆ ಹೋದಾಗ ಎಲ್ಲರೂ ಸೀಗೆಪುಡಿ ತಗೊಂಡು ಬನ್ನಿ. ಆಗ ನೋಡಿ, ಕೂದಲು ಎಷ್ಟು ಚೆನ್ನಾಗಿ ಬೆಳೆಯುತ್ತೆ’ ಅಂತೊಬ್ಬಳು ಪರಿಹಾರ ಸೂಚಿಸುತ್ತಿದ್ದಳು. ಕೂದಲಿನ ಬಗ್ಗೆ ಅಷ್ಟೇನೂ ಆಸ್ಥೆಯಿಲ್ಲದ ಗೆಳತಿಯೂ ಒಬ್ಬಳಿದ್ದಳು. ಅವಳದ್ದು ಬಾಬ್‌ ಕಟ್‌ ಬೇರೆ. ನಮ್ಮ ಟೆನ್ಸ್ ನ್‌ ಅವಳಿಗೆ ಕ್ಷುಲ್ಲಕ ಅನ್ನಿಸುತ್ತಿತ್ತು. “ಹೇರ್‌ಫಾಲ್‌ ಆಗ್ತಿದೆ ಅಂತ ಟೆನ್ಸ್ ನ್‌ ಮಾಡೋದನ್ನು ನಿಲ್ಲಿಸಿ. ಆಗ ಉದುರೋದೂ ನಿಲ್ಲುತ್ತೆ. ದಿನಾ ಹೀಗೆ ಅಳ್ತಾ ಇದ್ರೆ ಇನ್ನಷ್ಟು ಕೂದಲು ಹೋಗುತ್ತೆ’ ಅಂತ ಹೆದರಿಸುತ್ತಿದ್ದಳು. ಅವಳ ಪ್ರಕಾರ, ಮನುಷ್ಯನಿಗೆ ಕೂದಲಿನಿಂದ ಏನೂ ಪ್ರಯೋಜನವಿಲ್ಲ. ಹಾಗಾಗಿ, ಉದುರಿದರೂ ಯೋಚಿಸಬೇಕಿಲ್ಲವಂತೆ. ಒಂದುವೇಳೆ ತಲೆ ಪೂರ್ತಿ ಬೋಳಾದರೆ ತಾನು ವಿಗ್‌ ಕೂರಿಸಿಕೊಳ್ಳುತ್ತೇನೆ ಅಥವಾ ಕೂದಲು ಕಸಿ ಮಾಡಿಸಿಕೊಳ್ಳುತ್ತೇನೆ ಅಂತ ಬಿಂದಾಸ್‌ ಆಗಿ ಹೇಳುತ್ತಿದ್ದಳು. ಬಾಲ್ಡ್‌ನೆಸ್‌ ಬಗ್ಗೆ ಇಷ್ಟು ಬೋಲ್ಡ್‌ ಆಗಿ ಮಾತಾಡಿದ ಮೊದಲ ಹುಡುಗಿ ಅವಳು.

ಕೂದಲು ಉದುರುವುದು ಸಹಜ, ಸಾಮಾನ್ಯ ಕ್ರಿಯೆ. ಪ್ರತಿದಿನ 70-100 ಕೂದಲು ಉದುರಿದರೆ ಯಾವ ತೊಂದರೆಯೂ ಇಲ್ಲ. ಆರೋಗ್ಯ ಹದಗೆಟ್ಟಾಗ, ಟೆನÒನ್‌ನ ಕಾರಣದಿಂದ, ಮಾಲಿನ್ಯದಿಂದ ಕೆಲವೊಮ್ಮೆ ಹೆಚ್ಚು ಕೂದಲು ಉದುರಬಹುದು ಅಂತ ಗೊತ್ತಿದ್ದರೂ, ಯಾರೂ ಕೂದಲನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ ಹುಡುಗಿಯರಿಗೆ, ಹೇರ್‌ಫಾಲ್‌ ಅನ್ನುವುದು ಸದಾ ಕಾಡುವ ದು:ಸ್ವಪ್ನ. ಉದ್ದ ಜಡೆಯ ಹುಡುಗಿಯಷ್ಟೇ ಅಲ್ಲ, ಬಾಬ್‌ ಕೂದಲಿನವಳೂ ಕೂದಲು ಕಿತ್ತು ಕೈಗೆ ಬರುವುದನ್ನು ಸಹಿಸಲಾರಳು.

ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗ, ನನ್ನ ಕೂದಲು ಸೊಂಟದವರೆಗೆ ಬರುತ್ತಿತ್ತು. ದಪ್ಪನೆಯ ಎರಡು ಜಡೆ ಹೆಣೆದುಕೊಂಡು ಶಾಲೆಗೆ ಹೋಗುತ್ತಿದ್ದೆ. ಈಗ ಹಾಗಂತ ಹೇಳಿದರೆ ಯಾರೂ ನಂಬುವುದಿಲ್ಲ, ಕೆಲವೊಮ್ಮೆ ನನಗೂ ಅದೆಲ್ಲಾ ಸುಳ್ಳು ಅನ್ನಿಸುತ್ತದೆ. ಈಗ, ಸಂತೆಯಲ್ಲಿ ಯಾರೂ ಕೊಳ್ಳದ ಕೊತ್ತಂಬರಿ ಸೊಪ್ಪಿನಂತಾಗಿದೆ ನನ್ನ ಜುಟ್ಟು. ಅಷ್ಟೇ ದಪ್ಪ, ಅಷ್ಟೇ ಸತ್ವಹೀನ!

ಹೈಸ್ಕೂಲ್‌ವರೆಗೂ ಬೆನ್ನು ತುಂಬಾ ಆವರಿಸಿಕೊಳ್ಳುತ್ತಿದ್ದ ಕಪ್ಪು ಕೂದಲು, ವರ್ಷಗಳು ಕಳೆದಂತೆ ಕ್ಷೀಣಿಸುತ್ತಾ ಹೋಗಿದ್ದಕ್ಕೆ ಕಾರಣ ಇದೇ ಅಂತ ಹೇಳಲಾರೆ. ಬಾಲ್ಯದಲ್ಲಿ ಅಮ್ಮ, ಕೂದಲಿಗೆ ಎಣ್ಣೆ ಮೆತ್ತಿ, ವಾರಕ್ಕೊಮ್ಮೆ ಸೀಗೆಕಾಯಿ ಪುಡಿ ಹಚ್ಚಿ ಸ್ನಾನ ಮಾಡಿಸಿ, ಪ್ರತಿದಿನ ಜಡೆ ಹೆಣೆದು ಕೂದಲನ್ನು ಪೋಷಿಸುತ್ತಿದ್ದಳು. ಕಾಲೇಜು ಮೆಟ್ಟಿಲೇರುವಾಗ ಉದ್ದ ಕೂದಲು ಬೋರ್‌ ಅನ್ನಿಸಿ, ಕತ್ತರಿಸಿಕೊಂಡೆ. ಎಣ್ಣೆ ಹಚ್ಚಿಸಿಕೊಳ್ಳುವುದಕ್ಕೆ ಪುರುಸೊತ್ತಿರಲಿಲ್ಲ, ಸೀಗೆಕಾಯಿ ಬದಲು ಶ್ಯಾಂಪೂ, ಕಂಡಿಷನರ್‌ ಬಳಸತೊಡಗಿದೆ. ಓದು-ಉದ್ಯೋಗದ ಟೆನ್ಸ್ ನ್‌ ಕೂಡಾ ಜೊತೆಯಾಯ್ತು. ಇನ್ಯಾವ ಕಾರಣ ಬೇಕು ಹೇಳಿ, ಕೂದಲು ಉದುರಲು?

ಮೊನ್ನೆ ಹೈಸ್ಕೂಲು ಗೆಳೆಯನೊಬ್ಬ ಸಿಕ್ಕಿದ್ದ. ಶಾಲೆಯಲ್ಲಿದ್ದಾಗ ದಟ್ಟ ಕೂದಲಿನ ಕಾರಣದಿಂದಲೇ ಸುಮಾರು ಹುಡುಗಿಯರ ಪಾಲಿನ ಹೀರೋ ಆಗಿದ್ದ ಆತ, ಈಗ ಹತ್ತು ವರ್ಷ ಹೆಚ್ಚು ವಯಸ್ಸಾದವನಂತೆ ಕಾಣಿಸುತ್ತಿದ್ದ. ತಲೆಯ ಮುಂಭಾಗದಲ್ಲಿ ಕೂದಲು ವಿರಳವಾಗಿತ್ತು. ಇನ್ನೊಂದೆರಡು ವರ್ಷದಲ್ಲಿ ತಲೆ, ಆಟದ ಮೈದಾನವಾಗುವುದರಲ್ಲಿ ಸಂಶಯವಿರಲಿಲ್ಲ. ಉದ್ಯೋಗ, ಪ್ರಮೋಷನ್‌ ಇತ್ಯಾದಿಗಳ ನಂತರ ಮಾತು ಮದುವೆಯತ್ತ ಹೊರಳಿತು.

“ಅಯ್ಯೋ, ತಲೇಲಿ ಕೂದಲಿಲ್ಲ ಅಂತ ಎಲ್ಲ ಹುಡುಗಿಯರೂ ರಿಜೆಕ್ಟ್ ಮಾಡ್ತಾ ಇದ್ದಾರೆ. ಅಮ್ಮನಿಗಂತೂ ನನ್ನ ಮದುವೆಯದ್ದೇ ಟೆನ್ಸ್ ನ್‌ ಆಗಿದೆ. ಅಪ್ಪನದ್ದೂ ಬೊಕ್ಕತಲೆಯೇ. ಆದ್ರೆ, ಅವರಿಗೆ ಕೂದಲು ಉದುರಿದ್ದು ನಲವತ್ತರ ನಂತರ. ನಂಗೆ ಇಪ್ಪತ್ತೆಂಟಕ್ಕೇ ತಲೆ ಖಾಲಿಯಾಗ್ತಿದೆ’ ಅಂತ ಬೇಸರದಿಂದ ನಕ್ಕ. ಇದೇ ಹುಡುಗ ಹೈಸ್ಕೂಲ್‌ನಲ್ಲಿದ್ದಾಗ, ಬೊಕ್ಕತಲೆಯ ಹಿಂದಿ ಸರ್‌ ಅನ್ನು ಅಣಕಿಸಿ, ಅವರಿಂದ ಚೆನ್ನಾಗಿ ಬೈಸಿಕೊಂಡಿದ್ದ. ಅದನ್ನು ಅವನಿಗೆ ನೆನಪಿಸಿದೆ. “ಅವರೇ ಏನಾದ್ರೂ ಶಾಪ ಕೊಟ್ಟಿದ್ರೂ ಕೊಟ್ಟಿರಬಹುದು’ ಅಂತ ಇಬ್ಬರೂ ನಕ್ಕೆವು.

ಕೊನೆಗೆ ಅವನು, “ನೀವು ಹುಡ್ಗಿರೇ ಲಕ್ಕಿ ಕಣಮ್ಮಾ. ಬಾಂಡ್ಲಿ ಆಗೋ ಟೆನ್ಸ್ ನ್ನೇ ಇಲ್ಲ ನಿಮ್ಗೆ’ ಅಂದುಬಿಟ್ಟ! ಎಲಾ ಇವನಾ, ಹುಡುಗರು ಬೇಕಾದ್ರೆ ಕೂದಲು ಕಡಿಮೆಯಾಗುತ್ತಿದ್ದಂತೆ ತಲೆಯನ್ನ ಫ‌ುಲ್‌ ಶೇವ್‌ ಮಾಡಿಕೊಂಡು ಓಡಾಡಬಹುದು. ನಮ್ಗೆ ಹಾಗೆ ಮಾಡಲು ಆಗುತ್ತದೆಯಾ? “ಏನೇ ಇದು, ಕೂದಲು ಇಷ್ಟು ತೆಳ್ಳಗಾಗಿದೆ’ ಅಂತ ಎಲ್ಲರೂ ಕೇಳುವಾಗ, ಸಂಕಟವಾಗುವುದಿಲ್ಲವಾ? ಆ ಹುಡುಗಿಯ ಜಡೆ ನೋಡಿಯೇ ನಾನು ಬಿದ್ದು ಹೋದೆ ಅಂತ ಗೆಳೆಯ ಹೇಳುವಾಗ ಹೊಟ್ಟೆ ಉರಿಯೋದಿಲ್ವಾ? ದಿಂಬು, ಟವೆಲ್‌, ಬಾತ್‌ರೂಮ್‌, ಬಾಚಣಿಗೆ, ಕೊನೆಗೆ ಮಾಡಿದ ಅಡುಗೆಯಲ್ಲೂ ಬಿದ್ದು ಬಾಯಿಗೆ ಸೇರುವ ಕೂದಲೆಳೆಯನ್ನು ಸಹಿಸಿಕೊಳ್ಳಲು ಆಗುತ್ತದಾ? ಬೋಳು ತಲೆಯ ಗೋಳು ನಮ್ಮನ್ನೂ ಕಾಡುತ್ತದೆ. ಆದರೆ, ಅದನ್ನೆಲ್ಲ ಹುಡುಗರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ ಬಿಡಿ.

-ರೋಹಿಣಿ

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.