ಕಳಲೆಯ ಕಹಳೆ
Team Udayavani, Jul 24, 2019, 5:00 AM IST
ಆಷಾಡದ ಮಳೆ ಬಿದ್ದರೆ ಮಲೆನಾಡು ಮತ್ತು ಕರಾವಳಿಯ ಮನೆಗಳಲ್ಲಿ ಕಳಲೆ ಮತ್ತು ಕೆಸುವಿನ ಖಾದ್ಯಗಳ ಕಂಪು ಹರಡುತ್ತದೆ. ಧೋ ಎಂದು ಸುರಿಯುವ ಮಳೆ, ಚಳಿಗಾಳಿಯ ಶೀತವನ್ನು ಓಡಿಸಲು ಈ ಉಷ್ಣಕಾರಕ ಅಡುಗೆಗಳು ಸಹಕಾರಿ. ಇತ್ತೀಚೆಗೆ, ಸೂಪರ್ ಮಾರ್ಕೆಟ್‌ನಲ್ಲಿಯೂ ಈ ವಸ್ತುಗಳು ಸಿಗುವುದರಿಂದ, ಮಹಾನಗರದ ಜನರೂ ಮಳೆಗಾಲದಲ್ಲಿ ಕಳಲೆ-ಕೆಸು ಖಾದ್ಯಗಳನ್ನು ಸವಿಯಬಹುದು.
ಕಳಲೆ ಅಂದರೆ, ಬಿದಿರಿನ ಮೊಳಕೆ. ಈ ಮೊಳಕೆಯ ಹೊರ ಕವಚವನ್ನು ತೆಗೆದು, ಬಿಳಿಯ ತಿರುಳಿನ ಭಾಗವನ್ನು ಮಾತ್ರ ಅಹಾರವಾಗಿ ಬಳಸಬಹುದು. ಕಳಲೆಯನ್ನು ಬಳಸುವ ಮುನ್ನ, ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿ, ದಿನವೂ ನೀರನ್ನು ಬದಲಾಯಿಸಲು ಮರೆಯಬೇಡಿ. ಇಲ್ಲದಿದ್ದರೆ, ಕಳಲೆ ವಿಷವಾಗಿ ಪರಿಣಮಿಸಬಹುದು.
1. ಕಳಲೆ ಪಲ್ಯ
ಬೇಕಾಗುವ ಸಾಮಗ್ರಿ: ಸಣ್ಣದಾಗಿ ಹೆಚ್ಚಿದ ಕಳಲೆ, ಎಣ್ಣೆ, ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ,ಅರ್ಧ ಚಮಚ ಗರಂಮಸಾಲೆ.
ಮಾಡುವ ವಿಧಾನ: ಸಣ್ಣದಾಗಿ (ಉದ್ದಕೆ) ಹೆಚ್ಚಿದ ಕಳಲೆಯನ್ನು ಕುಕ್ಕರ್‌ನ ಪಾತ್ರೆಯಲ್ಲಿಟ್ಟು ಎರಡರಿಂದ ಮೂರು ವಿಷಲ್ ಬರಿಸಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ. ಬೇಕಿದ್ದರೆ ಈ ಒಗ್ಗರಣೆಗೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ನಂತರ, ಬೇಯಿಸಿಟ್ಟಿದ್ದ ಕಳಲೆಯನ್ನು ಹಾಕಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ,ಅರ್ಧ ಚಮಚ ಗರಂಮಸಾಲೆ ಸೇರಿಸಿ ಐದು ನಿಮಿಷಗಳ ಕಾಲ ಬೇಯಿಸಿದರೆ ಪಲ್ಯ ರೆಡಿ.
2. ಕಳಲೆ ಬೊಂಡಾ
ಬೇಕಾಗುವ ಸಾಮಗ್ರಿ: ಕಳಲೆ, ಕಡಲೆಹಿಟ್ಟು -ಒಂದು ಕಪ್, ಖಾರದ ಪುಡಿ, ಉಪ್ಪು, ಚಿಟಿಕೆ ಸೋಡಾ, ಜೀರಿಗೆ ಪುಡಿ- ಅರ್ಧ ಚಮಚ, ಎಣ್ಣೆ.
ಮಾಡುವ ವಿಧಾನ: ಕಳಲೆಯನ್ನು ಚಕ್ರಾಕರವಾಗಿ ಕತ್ತರಿಸಿ ನೀರಿನಲ್ಲಿ ನೆನೆಸಿಡಿ. ಕಡಲೆಹಿಟ್ಟು , ಖಾರದ ಪುಡಿ, ಉಪ್ಪು, ಚಿಟಿಕೆ ಸೋಡಾ, ಜೀರಿಗೆ ಪುಡಿ ಹಾಗೂ ನೀರನ್ನು ಹಾಕಿ ಬೊಂಡಾ ಹಿಟ್ಟನ್ನು ತಯಾರಿಸಿಕೊಳ್ಳಿ. ಈ ಹಿಟ್ಟಿಗೆ ಕಳಲೆಯನ್ನು ಅದ್ದಿ, ಕೆಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ.
3. ಕೆಸುವಿನ ಎಲೆಯ ಗೊಜ್ಜು
ಬೇಕಾಗುವ ಸಾಮಗ್ರಿ: ಕೆಸುವಿನ ಎಲೆ- 15, ಎಣ್ಣೆ, ಒಣಮೆಣಸಿನ ಕಾಯಿ- 4, ಉದ್ದಿನ ಬೇಳೆ- ಒಂದೂವರೆ ಚಮಚ, ಬೆಲ್ಲ, ಉಪ್ಪು, ಹುಣಸೆ ರಸ, ಇಂಗು, ಸಾಸಿವೆ.
ಮಾಡುವ ವಿಧಾನ: ಕೆಸುವಿನ ಎಲೆಗಳನ್ನು ತೊಳೆದು, ನೀರು ಹಾಕಿ ಚೆನ್ನಾಗಿ ಬೇಯಿಸಿ. ಸೊಪ್ಪು ಬೆಂದ ನಂತರ ಉಳಿದ ನೀರನ್ನು ಬಸಿಯಿರಿ. ಬಾಣಲೆಯಲ್ಲಿ ಎಣ್ಣೆ, ಒಣಮೆಣಸಿನ ಕಾಯಿ, ಉದ್ದಿನ ಬೇಳೆ ಹಾಕಿ ಕೆಂಪಗೆ ಹುರಿಯಿರಿ. ನಂತರ, ಬೇಯಿಸಿದ ಕೆಸುವಿನ ಎಲೆ, ಹುರಿದ ಪದಾರ್ಥ, ಬೆಲ್ಲ,ಉಪ್ಪು, ಹುಣಸೆ ರಸ, ಇಂಗು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಸಾಸಿವೆ, ಎಣ್ಣೆ ಹಾಕಿ ಸಿಡಿದ ನಂತರ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವರೆಗೆ ಮಗುಚಿ. (ಬೇಕಿದ್ದರೆ ಬೆಳ್ಳುಳ್ಳಿಯನ್ನೂ ಸೇರಿಸಬಹುದು)
4. ಕೆಸುವಿನ ನಿಣೆ (ಪತ್ರೊಡೆ ನಿಣೆ)
ಬೇಕಾಗುವ ಸಾಮಗ್ರಿ: ಅಕ್ಕಿ – ಒಂದೂವರೆ ಕಪ್, ತೊಗರಿ ಬೇಳೆ- ಕಾಲು ಕಪ್, ಧನಿಯಾ, ಜೀರಿಗೆ, ಒಣಮೆಣಸಿನ ಕಾಯಿ, ಮೆಂತ್ಯೆ - ರುಚಿಗೆ ಬೇಕಾದಷ್ಟು, ಕೆಸುವಿನ ಎಲೆ.
ಮಾಡುವ ವಿಧಾನ: ಅಕ್ಕಿ, ತೊಗರಿ ಬೇಳೆ, ಧನಿಯಾ, ಜೀರಿಗೆ, ಒಣಮೆಣಸಿನ ಕಾಯಿ ಹಾಗೂ ಮೆಂತ್ಯೆಯನ್ನು ನೀರಿನಲ್ಲಿ ಎರಡು ಗಂಟೆ ನೆನೆಸಿಟ್ಟು, ನಂತರ ಇಡ್ಲಿ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ. ಕೆಸುವಿನ ಎಲೆಗಳನ್ನು ತೊಳೆದು, ಒರೆಸಿ ಅಡಿ ಮೇಲಾಗಿಟ್ಟು ರುಬ್ಬಿದ ಹಿಟ್ಟನ್ನು ಒಂದು ಪದರ ಕೆಳಮುಖವಾಗಿ ಎಲೆಗೆ ಸವರಿ. ಇನ್ನೊಂದು ಎಲೆಯನ್ನು ಇಟ್ಟು ಹೀಗೇ ಮಾಡಿ. ಹೀಗೆ ನಾಲ್ಕು ಎಲೆಗಳನ್ನು ಒಂದರ ಮೇಲೆ ಒಂದನ್ನು ಇಟ್ಟು, ರುಬ್ಬಿದ ಹಿಟ್ಟನ್ನು ಹಾಕಿ ತೆಳುವಾಗಿ ಸವರಿ. ಎಲೆಗಳನ್ನು ಎಡ-ಬಲ ಮಡಚಿ ಎಲೆಯ ಕೆಳಭಾಗದಿಂದ ಮೇಲು¤ದಿಯವರೆಗೆ ಸುರುಳಿ ಸುತ್ತಿ ಮಡಚಿ.
ಇಡ್ಲಿ ಪಾತ್ರೆಗೆ ನೀರು ಹಾಕಿ, ತಟ್ಟೆಯನ್ನಿಟ್ಟು ಅದರ ಮೇಲೆ ಈ ಸುತ್ತಿದ ಮಸಾಲೆ ಸುರುಳಿಗಳನ್ನು ಒಂದರ ಮೇಲೊಂದು ಇಟ್ಟು ಅರ್ಧ ಗಂಟೆ ಬೇಯಿಸಿ, ಕತ್ತರಿಸಿ. ಇದು ಪತ್ರೊಡೆ ನಿಣೆ. ಇದು ಉಷ್ಣಕಾರಿ ಆಗಿರುವುದರಿಂದ ಬೆಣ್ಣೆಯೊಂದಿಗೆ ತಿಂದರೆ ಒಳ್ಳೆಯದು. ಕೊಬ್ಬರಿ ಎಣ್ಣೆಯೊಂದಿಗೂ ಸವಿಯಬಹುದು.
-ವೇದಾವತಿ ಎಚ್.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.