ಅದರ ಅಂಚಿಗೆ ಇದರ ಮಿಂಚು, ಶಿಫಾನ್ ಸೀರೆಲಿ ಬನಾರಸ್ ಪ್ರಿಂಟ್!
Team Udayavani, Jan 11, 2017, 3:45 AM IST
ಬನಾರಸ್ ಸೀರೆಗಳನ್ನು ನೀವು ನೋಡಿರಬಹುದು. ಶಿಫಾನ್‌ನಂತೂ ಎಲ್ಲರ ಫೇವರೆಟ್ ಸೀರೆ. ಆದರೆ ಬನಾರಸಿ ಶೇಡೆಡ್ ಶಿಫಾನ್ ಸೀರೆ. ಸೀರೆಯಂಗಳದಲ್ಲಿ ಝಲ್ಲನೆ ನಗೋ ಮಿಂಚು ಸೀರೆ!
*
ಬನಾರಸ್ ಸೀರೆಗಳ ಮೂಲ ವಾರಣಾಶಿ, ಬನಾರಸ್ ಅರ್ಥಾತ್ ಕಾಶಿ . ಅದರಿಂದಲೇ ಮೈ ತುಂಬ ಜರಿಗಳ ಈ ಸೀರೆಗೆ ಬನಾರಸ್ ಸೀರೆ ಅನ್ನುವ ಹೆಸರು ಬಂದಿದೆ. ವುಲ್ಲನ್ ಸಿಲ್ಕ್ನಿಂದ ಮಾಡಿರುವ ಈ ಸೀರೆಗೆ ಚಿನ್ನ ಅಥವಾ ಬೆಳ್ಳಿ ಜರಿಯ ಅಂಚುಗಳು. ಈ ಚೆಂದದ ಸಿಲ್ಕ್ ಮೆಟೀರಿಯಲ್ ಮೇಲೆ ಎಂಬ್ರಾಯಿಡರಿ ವರ್ಕ್‌ನ್ನು ನೋಡೋದೆ ಖುಷಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಬನಾರಸಿ ಸೀರೆಯಲ್ಲಿ ಮೊಘಲ್ ಇನ್‌ಫುÉಯೆನ್ಸ್ ದಟ್ಟವಾಗಿರುವುದನ್ನು ಕಾಣಬಹುದು. ಪರಸ್ಪರ ಕೂಡಿದಂತಿರುವ ಎಲೆಗಳ ವಿನ್ಯಾಸ, ಜರಿ ವರ್ಕ್ ಈ ಸೀರೆಯ ವಿಭಿನ್ನತೆಗೆ ಸಾಕ್ಷಿ.
ಇದರ ಜೊತೆಗೆ ಚಿಕ್ಕಚಿಕ್ಕ ಡೀಟೈಲ್‌ಗಳು, ಮೆಟಾಲಿಕ್ ಎಫೆಕ್ಟ್ಗಳು, ಪಲ್ಲು, ಅದರ ಅಂಚು ಎಲ್ಲದರಲ್ಲೂ ಎದ್ದು ಕಾಣುವ ಗುಣ ಇದೆ. ಈ ಬನಾರಸ್ ಸೀರೆಯ ಇನ್‌ಫುÉಯೆನ್ಸ್ ಬೇರೆ ಬೇರೆ ಮಾದರಿ ಸೀರೆಗಳಲ್ಲಿದೆ. ಅದರಲ್ಲೂ ಆಧುನಿಕ ಸೀರೆಯ ವಿನ್ಯಾಸಗಳು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಸಾಂಪ್ರದಾಯಿಕ ಸೀರೆಯ ಅಂಶಗಳನ್ನು ಒಳಗೊಂಡಿರುತ್ತವೆ. ಇಂಥ ಸೀರೆಗಳನ್ನು ನೇಯಲು 15 ದಿನಗಳಿಂದ 6 ತಿಂಗಳ ಅವಧಿ ಬೇಕಾಗುತ್ತೆ.
ಇಲ್ಲಿರುವ ಸೀರೆಗಳೆಲ್ಲ ಬನಾರಸಿಯ ಪ್ರಿಂಟ್‌ಗಳನ್ನು ಒಳಗೊಂಡವು. ಆದರೆ ಮೆಟೀರಿಯಲ್ ನೋಡಿದ್ರೆ ಅದು ಶಿಫಾನ್.
ಹಾಗೆ ನೋಡಿದ್ರೆ ಈ ಶಿಫಾನ್ ಮೆಟೀರಿಯಲ್‌ಗಳು ನಮ್ಮ ನೆಲದವಲ್ಲ. ಅವು ಫ್ರೆಂಚ್ ಪರಂಪರೆಯಲ್ಲಿ ಕಾಣಸಿಗುವ ವಸ್ತ್ರಗಳು. ಹಿಂದೆಲ್ಲ ಶಿಫಾನ್‌ನಲ್ಲಿ ರೇಶೆ¾ಯೇ ಪ್ರಧಾನವಾಗಿರುತ್ತಿತ್ತು, ಆದರೆ ಈಗ ನೈಲಾನ್ ವರ್ಶನ್‌ನಲ್ಲಿರುವ ಶಿಫಾನ್‌ಗಳೇ ಜನಪ್ರಿಯ. ಶಿಫಾನ್ ಫ್ರಾನ್ಸ್‌ನಲ್ಲಿ ಸಂಜೆ ಉಡುಪಾಗಿ ಫೇಮಸ್. ಅದರಲ್ಲೂ ಗೌನ್ ಮೇಲಿಂದ ಆವರಿಸುವ ಜಾಳು ಜಾಳಾದ ಓವರ್‌ಕೋಟ್ ಮಾದರಿಯ ಶಿಫಾನ್ ಮೆಟೀರಿಯಲ್ ಇಂದಿಗೂ ಅಲ್ಲಿನ ಮಂದಿಯ ಅಚ್ಚುಮೆಚ್ಚು.
ನಮ್ಮಲ್ಲಿ ಈ ಶಿಫಾನ್ ಮೆಟೀರಿಯಲ್‌ಗಳು ಸೀರೆಗಳಾಗಿದೆ. ಹಗುರವಾದ ಮೈಗಂಟಿ ನಿಲ್ಲುವ ಈ ಸೀರೆಗಳು ಎಲ್ಲ ವಯಸ್ಸಿನ ಹೆಣ್ಮಕ್ಕಳಿಗೂ ಅಚ್ಚುಮೆಚ್ಚು.
ಈಗ ಶಿಫಾನ್ ಸೀರೆಗಳಲ್ಲಿ ಬನಾರಸ್ ಶೈಲಿಯ ಪ್ರಿಂಟ್‌ಗಳು ಸಖತ್ ಎಲಿಗೆಂಟ್ ಲುಕ್‌ನಲ್ಲಿವೆ.
ಬಾಲಿವುಡ್ ಬೆಡಗಿಯರಲ್ಲಿ ಹಲವರು ಈ ಅಂದಕ್ಕೆ ಮಾರುಹೋಗಿದ್ದಾರೆ. ಗಾರ್ಜಿಯಸ್ ಲುಕ್, ಚೆಂದದ ನಗುವಿನ ಅನ್ವರ್ಥದಂತಿರುವ ದಿಯಾಮಿರ್ಜಾ ಇತ್ತೀಚೆಗೆ ಪಾರ್ಟಿಯೊಂದಕ್ಕೆ ಮೈತುಂಬ ಬನಾರಸ್ ವಿನ್ಯಾಸದ ಶಿಫಾನ್ ಸೀರೆಯುಟ್ಟು ಬಂದಿದ್ದರು. ಅಂಚುಗಳಲ್ಲಿ ಬನಾರಸ್ ಪಾರಂಪರಿಕ ವಿನ್ಯಾಸ,ಮೈ ತುಂಬ ಬಳ್ಳಿ ಎಲೆ ಹೂ ಮಿಂಚು. ಆ ಕಡುಗೆಂಪು ಬಣ್ಣದಲ್ಲಿ ಮುದ್ದಿನ ಸಿಂಗಾರಿಯಂತೆ ಕಾಣುವ ದಿಯಾ. ಆಕೆ ಗೋಲ್ಡನ್ ಕಲರ್ ವಲ್ವೆಟ್ ಬ್ಲೌಸ್ ತೊಟ್ಟಿದ್ದು ಇನ್ನೊಂದು ವಿಶೇಷ.
ಕಂಗನಾ ರಾನಾವತ್ ಬೋಲ್ಡ್ ಡ್ರೆಸಿಂಗ್ ಸ್ಟೈಲ್‌ಗೆ ಇನ್ನೊಂದು ಹೆಸರು. ಆದರೆ ಇತ್ತೀಚಿನ ಸಮಾರಂಭವೊಂದಕ್ಕೆ ಮಾತ್ರ ಸಾಂಪ್ರದಾಯಿಕ ಚೆಲುವೆಯಾಗಿ ಬಂದಿದ್ರು. ಕಡುಹಸಿರು ಬಣ್ಣದ ರೇಶೆ¾ ಮಿಶ್ರಿತ ಶಿಫಾನ್‌ನ ತುಂಬ ಪಾರಂಪರಿಕ ಬನಾರಸ್ ಸೀರೆಗಳ ಪ್ರಿಂಟ್ ಇದೆ. ಈ ಬ್ರೈಟ್ ಕಲರ್, ಟ್ರೆಡಿಶನಲ್ ಡಿಸೈನ್ ಎರಡಕ್ಕೂ ಹೊಂದಾಣಿಕೆ ಇದೆ. ಸರಳತೆ ಮತ್ತು ಗಾಂಭೀರ್ಯ ಬೆರೆತ ಲುಕ್ ಇದೆ. ಕಡುಹಸಿರು ಬಳೆಗಳ ಜೊತೆಗೆ ಅಗಲ ಪೆಂಡೆಂಟ್‌ಗಳ ನೆಕ್‌ಸೆಕ್ ಧರಿಸಿದ್ದು ಸೀರೆಯ ಅಂದ ಹೆಚ್ಚಿಸಿದೆ.
ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ ಮೊದಲಾದವರೂ ಬನಾರಸಿ ಪ್ರಿಂಟ್ ಇರುವ ಶಿಫಾನ್ ಸೀರೆಯುಟ್ಟು ಮೆರೆದವರೇ. ಶಿಫಾನ್ ಮೆಟೀರಿಯಲ್‌ನಲ್ಲಿ ಬನಾರಸ್ ಪ್ರಿಂಟ್ ಇರುವ ಚೆಂದದ ಸೀರೆಗಳು ನಿಮಗೆ ಆನ್‌ಲೈನ್‌ನಲ್ಲೂ ಸಿಗಬಹುದು. ನಿಮ್ಮ ಮೈಬಣ್ಣ, ನಿಲುವೆಗೆ ತಕ್ಕಂಥ ಸೀರೆ ಆರಿಸೋದು ಮರೀಬೇಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.