ಬ್ಯೂಟಿ ಇನ್ ಬೂಟ್ಸ್!
ಕಾಲಕ್ಕೆ ತಕ್ಕಂತೆ ಕಾಲ್ ರಕ್ಷಣೆ
Team Udayavani, Dec 18, 2019, 5:51 AM IST
ಬೂಟುಗಳು, ಕಾಲುಗಳ ರಕ್ಷಣೆಗಷ್ಟೇ ಅಲ್ಲ, ಸ್ಟೈಲ್ ಸ್ಟೇಟ್‌ಮೆಂಟ್ ಕೂಡಾ ಹೌದು. ಮಾಡರ್ನ್ ವಸ್ತ್ರಗಳ ಜೊತೆಗೆ ಬೂಟ್ ಧರಿಸಿದರೆ ಬಬ್ಲಿ ಗರ್ಲ್ನಂತೆ ಮುದ್ದಾಗಿ ಕಾಣಬಹುದು. ಬಲ ಪಾದಕ್ಕೆ ಒಂದು ಬಣ್ಣ ಮತ್ತು ಎಡ ಪಾದಕ್ಕೆ ಇನ್ನೊಂದು ಬಣ್ಣದ, ಒಂದೇ ವಿನ್ಯಾಸದ ಎರಡು ಬೂಟುಗಳನ್ನು ತೊಡುವ ಟ್ರೆಂಡ್ ಕೂಡ ಇದೆ!
ಚಳಿಗಾಲದಲ್ಲಿ ದೇಹವನ್ನು ರಕ್ಷಿಸಲು ಏನೇನೆಲ್ಲಾ ಮಾಡುತ್ತೇವೆ. ತಲೆಗೆ ಟೊಪ್ಪಿ, ಕುತ್ತಿಗೆಗೆ ಸ್ಕಾಫ್ì, ದೇಹಕ್ಕೆ ಸ್ವೆಟರ್, ಅಂಗೈಗಳಿಗೆ ಗ್ಲೌಸ್ ಹಾಕಿ ಬೆಚ್ಚಗಾಗುತ್ತೇವೆ. ಇಷ್ಟೆಲ್ಲಾ ಜಾಗರೂಕತೆ ವಹಿಸುವ ನಾವು, ಕಾಲಿನ ಕಡೆಗೆ ಗಮನ ಕೊಡುವುದು ಕಡಿಮೆ. ಸಮೀಕ್ಷೆಯೊಂದು ಹೇಳುವಂತೆ, ಮನುಷ್ಯ ಅತಿ ಹೆಚ್ಚು ನಿರ್ಲಕ್ಷಿಸುವ ದೇಹದ ಅಂಗ ಎಂದರೆ ಅದು ಕಾಲುಗಳಂತೆ. ಅಯ್ಯೋ, ಕಾಲನ್ಯಾರು ನೋಡ್ತಾರೆ ಅನ್ನುವ ನಿರ್ಲಕ್ಷವೋ, ನೋಡುವವರಿಗೆ ಕಾಲು ಬೇಗ ಕಾಣಿಸುವುದಿಲ್ಲ ಎಂಬ ನಂಬಿಕೆಯೋ ಗೊತ್ತಿಲ್ಲ. ಆದರೆ, ಚಳಿಗಾಲದಲ್ಲಿ ಮಾತ್ರ ಕಾಲಿನ ರಕ್ಷಣೆಯ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ರಕ್ಷಣೆಯ ಜೊತೆಜೊತೆಗೆ ಫ್ಯಾಷನ್ ಕಡೆಗೂ ಗಮನ ಕೊಡುವುದು ಜಾಣತನ.
ಬೂಟು ತೊಟ್ಟು ನೋಡಿ
ನ್ಪೋರ್ಟ್ಸ್ ಶೂಸ್ ಅಥವಾ ಇನ್ಯಾವುದೋ ಬಗೆಯ ಶೂಗಳನ್ನು ಎಲ್ಲಾ ರೀತಿಯ ದಿರಿಸಿನೊಂದಿಗೆ ತೊಡಲು ಸಾಧ್ಯವಿಲ್ಲ. ಸ್ಟೈಲಿಶ್ ಆಗಿಯೂ ಕಾಣಬೇಕು, ಕಾಲಿಗೆ ಆರಾಮವೂ ಅನಿಸಬೇಕು ಎನ್ನುವುದಾದರೆ ಬೂಟುಗಳು ಸೂಕ್ತ. ಆದ್ದರಿಂದಲೇ ಈ ಬೂಟುಗಳು ಫ್ಯಾಷನ್ ಲೋಕದಲ್ಲಿ ಸದಾಕಾಲ ಟ್ರೆಂಡ್‌ನಲ್ಲಿಯೇ ಇರುತ್ತವೆ. ಜೀನ್ಸ್/ಡೆನಿಮ್ಸ…, ಲೆಗಿಂಗ್ಸ್, ಜಾಗರ್ಸ್, ಜೆಗಿಂಗ್ಸ್, ಥ್ರಿ ಫೋರ್ಥ್, ಸ್ಕರ್ಟ್, ಶಾರ್ಟ್ಸ್, ಟ್ರೆಂಚ್ ಕೋಟ್, ಜೊತೆಗೂ ಬೂಟುಗಳನ್ನು ತೊಡಬಹುದು. ಅಷ್ಟೇ ಅಲ್ಲ, ಬಲ ಪಾದಕ್ಕೆ ಒಂದು ಬಣ್ಣ ಮತ್ತು ಎಡ ಪಾದಕ್ಕೆ ಇನ್ನೊಂದು ಬಣ್ಣದ, ಒಂದೇ ವಿನ್ಯಾಸದ ಎರಡು ಬೂಟುಗಳನ್ನು ತೊಡುವ ಟ್ರೆಂಡ್ ಕೂಡ ಇದೆ!
ಬೂಟುಗಳು ಎಂದಾಕ್ಷಣ ಗಮ್ ಬೂಟುಗಳೇ ನೆನಪಿಗೆ ಬರುತ್ತವೆ. ಆದರೆ, ಪ್ಲಾಸ್ಟಿಕ್, ರಬ್ಬರ್ ಅಲ್ಲದೆ ಚರ್ಮ ಹಾಗೂ ಬಟ್ಟೆಯಿಂದ ತಯಾರಿಸಿದ ಬೂಟುಗಳು ಬಹಳ ಹಿಂದೆಯೇ ಮಾರುಕಟ್ಟೆಗೆ ಬಂದಿವೆ. ಕಣಕಾಲು (ಆ್ಯಂಕಲ…), ಮೊಣಕಾಲು (ಮಂಡಿ), ಮಂಡಿಗಿಂತ ಸ್ವಲ್ಪ ಕೆಳಗಿನವರೆಗೆ ಬರುವ ಬೂಟುಗಳು, ಹೀಗೆ ನಿಮ್ಮ ಅಭಿರುಚಿಗೆ ತಕ್ಕಂತೆ ಬೂಟು ಧರಿಸಬಹುದು.
ಬಣ್ಣದಲ್ಲೂ ನೂರು ಆಯ್ಕೆ
ಕಪ್ಪು, ಕಂದು ಅಥವಾ ಗಾಢವಾದ ಬಣ್ಣಗಳಲ್ಲಿ ಮಾತ್ರವಲ್ಲ, ಕಣ್ಣಿಗೆ ಮುದ ನೀಡುವ ತಿಳಿ ಬಣ್ಣಗಳಲ್ಲೂ ಬೂಟುಗಳು ಲಭ್ಯ. ಹೊಳೆಯುವಂಥ ಪೈಂಟ್, ಅನಿಮಲ್ ಪ್ರಿಂಟ್, ಮಿಲಿಟರಿ ಪ್ರಿಂಟ್, ಫ್ಲೋರಲ್ ಪ್ರಿಂಟ್, ರೇಡಿಯಂ ಬಣ್ಣ, ಪೋಲ್ಕಾ ಡಾಟ್ಸ್, ಚೆಕ್ಸ್, ಸಾಲಿಡ್ ಕಲರ್, ಸ್ಪ್ರೆ ಪೈಂಟ್, ಕಾಮನ ಬಿಲ್ಲಿನ ಬಣ್ಣಗಳು, ಸ್ಕಲ್ (ಬುರುಡೆ) ಡಿಸೈನ್, ಜಾಮೆಟ್ರಿಕ್ ಡಿಸೈನ್, ಕಾಟೂìನ್ (ವ್ಯಂಗ್ಯ ಚಿತ್ರ), ಆಲಬೆಟ್ ಪ್ರಿಂಟ್, ನ್ಯೂಸ್ ಪೇಪರ್ ಪ್ರಿಂಟ್, ಹೀಗೆ ಮುಗಿಯದಷ್ಟು ಉದ್ದದ ಪಟ್ಟಿಯೇ ಇದೆ!
ಕಸ್ಟಮೈಸ್ಡ್ ಬೂಟು
ಬಕಲ…, ಜಿಪ್, ಹುಕ್, ಬಟನ್, ವೆಲೊ, ಲೇಸ್, ಕ್ಲಿಪ್, ಕೀ ಚೈನ್‌ನಂಥ ಹ್ಯಾಂಗಿಂಗ್‌ಗಳು, ಮ್ಯಾಗ್ನೆಟ್ (ಅಯಸ್ಕಾಂತ), ಮಣಿಗಳು, ದಾರ, ಇಲಾಸ್ಟಿಕ್, ರಿಬ್ಬನ್ ಬಳಸಿ ಗಂಟು ಹಾಕುವ ಚಿಕ್ಕ ಪುಟ್ಟ ಬೋ, ವಜ್ರ, ನವಿಲು ಗರಿ, ಮುಂತಾದ ಆಯ್ಕೆಗಳೂ ಇವೆ. ಹೆಸರು, ಭಾವಚಿತ್ರ, ನಿಮ್ಮ ಸಾಕು ಪ್ರಾಣಿಯ ಹೆಸರು ಅಥವಾ ಚಿತ್ರ, ನೆಚ್ಚಿನ ಸೂಪರ್ ಹೀರೋ ಚಿತ್ರವನ್ನೂ ಬೂಟ್‌ಗಳಲ್ಲಿ ಮೂಡಿಸಬಹುದು. ಇವುಗಳನ್ನು ಮಾಡಿಕೊಡುವ ಆನ್‌ಲೈನ್ ಸೇವೆಗಳೂ ಇವೆ. ಆದರೆ ಕಸ್ಟಮೈಸ್ಡ್ ಬೂಟ್‌ಗಳ ಸೇವೆ ಸ್ವಲ್ಪ ದುಬಾರಿಯೇ.
ಹೀಲ್ಸ್‌ಗೆ ಸಾಟಿಯಿಲ್ಲ
ಫ್ಲಾಟ್ ಬೂಟುಗಳಿಗಿಂತ ಹೀಲ್ಸ್ ಇದ್ದರೇ ಚೆನ್ನ. ಹೈ ಹೀಲ್ಡ… ಆಯ್ಕೆಗಳಲ್ಲಿ ಬಗೆ ಬಗೆಯ ಬಣ್ಣಗಳು, ವಿನ್ಯಾಸಗಳು ಮತ್ತು ನಮೂನೆಗಳಿವೆ. ಸಿನಿಮಾಗಳಲ್ಲಿ ನಟರು, ನಟಿಯರು ಫ್ಯಾಷನಬಲ್ ಬೂಟುಗಳನ್ನು ತೊಟ್ಟು ಅವುಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದರು. “ಪುಸ್ ಇನ್ ಬೂಟ್ಸ್’ ಎಂಬ ಕಥೆಯಿಂದ ಮಕ್ಕಳಿಗೂ ಈ ಬೂಟುಗಳು ಪ್ರಿಯವಾದವು. ಈ ಕಥೆಯನ್ನು ಅನಿಮೇಟೆಡ್ ಚಿತ್ರವನ್ನಾಗಿಯೂ ಮಾಡಲಾಯಿತು. ಹಾಗಾಗಿ ಫ್ಯಾನ್ಸಿ ಡ್ರೆಸ್, ಹಾಲೊವೀನ್ ಅಥವಾ ಬರ್ತ್‌ಡೇ ಪಾರ್ಟಿಗಳಲ್ಲಿ ಬೂಟು ಧರಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು. ಈಗೆಲ್ಲ ಕೌಬಾಯ್ ಸಿನಿಮಾಗಳು ತೆರೆಯ ಮೇಲೆ ಬರುವುದು ಕಡಿಮೆ. ಆದರೂ ಈ ಬೂಟುಗಳು ಫ್ಯಾಷನ್ ಲೋಕದಲ್ಲಿ ತಮ್ಮ “ಹೆಜ್ಜೆ ಗುರುತನ್ನು’ ಅಳಿಸಿ ಹೋಗದಂತೆ ಛಾಪು ಉಳಿಸಿವೆ!
ಬುಲೆಟ್ ಪಾಯಿಂಟ್
– ಸ್ಯಾಂಡಲ್ಸ್‌ಗಿಂತ, ಬೂಟ್ ಧರಿಸುವುದರಿಂದ ಟಾಮ್‌ಬಾಯ್, ಬಬ್ಲಿ ಲುಕ್ ಸಿಗುತ್ತದೆ.
– ಚಪ್ಪಲಿ ಧರಿಸಿದಾಗ ಕಾಲುಗಳು ಗಿಡ್ಡ ಕಾಣುತ್ತವೆ. ಅದೇ, ಬೂಟ್ಸ್ ಧರಿಸಿದರೆ ಕಾಲು ಗ್ಲಾಮರಸ್ ಆಗಿ ಕಾಣಿಸುತ್ತದೆ.
-ಕ್ಲಾಸಿಕ್ ಲುಕ್‌ಗಾಗಿ ಲೆದರ್ ಬೂಟು ಧರಿಸಬಹುದು.
-ಶಾರ್ಟ್ ಫ್ರಾಕ್, ಮಿನಿ ಧರಿಸಿದಾಗ ಲೆದರ್ ಬೂಟು ಧರಿಸಿ.
-ಉದ್ದ ಕಾಲಿನವರು ಲಾಂಗ್ ಲೆಂತ್, ಗಿಡ್ಡ ಕಾಲಿನವರು ಆ್ಯಂಕಲ್ ಲೆಂತ್ ಬೂಟುಗಳನ್ನು ಧರಿಸಿದರೆ ಚೆನ್ನ.
-ಲೇಸ್ ಇರುವ ಬೂಟುಗಳಿಗೆ ಸೂಕ್ತ ಸಾಕ್ಸ್ ಧರಿಸಿ.
-ಅದಿತಿಮಾನಸ ಟಿ.ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Drone: ಪುರಿ ದೇಗುಲದ ಮೇಲೆ ಡ್ರೋನ್ ಹಾರಾಟ: ಪೊಲೀಸರಿಂದ ತನಿಖೆ
Washington: ಹಿಲರಿ, ಸೊರೋಸ್ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ
Govt.,: ಖಾಸಗಿ ಚಾಟ್ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.