ಬ್ಯೂಟಿ ಪಾರ್ಲರ್‌ನಲ್ಲಿ ಕ್ಯಾರೆಟ್ ಕಮಾಲ್
Team Udayavani, Jan 11, 2017, 3:45 AM IST
ಕ್ಯಾರೆಟ್‌ನ್ನು ಹಸಿಯಾಗಿಯೇ ತಿನ್ನುವವರು ಬಹಳ ಮಂದಿ. ಟೈಂ ಪಾಸ್, ಆರೋಗ್ಯ, ರುಚಿ ಏನೇನೋ ಕಾರಣ ಇರುತ್ತೆ ಕ್ಯಾರೆಟ್ ತಿನ್ನೋದಿಕ್ಕೆ. ಆದರೆ ಈ ಕ್ಯಾರೆಟ್ ಸೌಂದರ್ಯವರ್ಧಕವೂ ಹೌದು. ಆ ಬಗ್ಗೆ ಒಂದಿಷ್ಟು ಡೀಟೈಲ್ಸ್ ಇಲ್ಲಿವೆ.
*
1. ಒಂದು ಕ್ಯಾರೆಟ್‌ನ್ನು ಕತ್ತರಿಸಿ ಮಿಕ್ಸರ್‌ನಲ್ಲಿ ಅರೆದು ತದನಂತರ ತೆಳ್ಳಗಿನ ಬಟ್ಟೆಯಲ್ಲಿ ಸೋಸಿ ಜ್ಯೂಸ್ (ರಸ) ತೆಗೆಯಬೇಕು. ಈ ಕ್ಯಾರೆಟ್ ರಸಕ್ಕೆ 2 ಚಮಚ ಜೇನುತುಪ್ಪ , 20 ಹನಿ ಬಾದಾಮಿ ತೈಲ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ತುದಿ ಬೆರಳಿನಿಂದ ಮೃದುವಾಗಿ ಮಾಲೀಶು ಮಾಡಬೇಕು. 1/2 ಗಂಟೆಯ ಬಳಿಕ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟರ್ಕಿ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ಹೀಗೆ 5-6 ಬಾರಿ ಶಾಖ ನೀಡಿದ ನಂತರ ತಣ್ಣೀರಿನಲ್ಲಿ ಅದ್ದಿದ ಟವೆಲ್‌ನಿಂದ ಮುಖವನ್ನು ತೊಳೆಯಬೇಕು. ಕ್ಯಾರೆಟ್‌ನ ನೆರಿಗೆನಿವಾರಕ ಫೇಸ್‌ಮಾಸ್ಕ್ ವಯಸ್ಸಾದಂತೆ ಅಥವಾ ಚರ್ಮ ಒಣಗಿದಾಗ ಅಧಿಕ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೆರಿಗೆ ನಿವಾರಣೆಗೆ ಕ್ಯಾರೆಟ್‌ನಿಂದ ಈ ವಿಧಾನದಲ್ಲಿ ಫೇಸ್ ಮಾಸ್ಕ್ ಬಳಸಿದರೆ ಹಿತಕರ.
2. ಕ್ಯಾರೆಟ್‌ನ ಹೊರ ಸಿಪ್ಪೆ ತೆಗೆದು ಕತ್ತರಿಸಿ, ಹಾಲಿನಲ್ಲಿ ಮೃದುವಾಗುವವರೆಗೆ ಬೇಯಿಸಬೇಕು. ತದನಂತರ ಚೆನ್ನಾಗಿ ಮಿಕ್ಸರ್‌ನಲ್ಲಿ ಅರೆದು, ಅದಕ್ಕೆ ಮೂರು ಚಮಚ ಜೇನು, ಮೂರು ಚಮಚ ಆಲಿವ್‌ತೈಲ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರಕ್ಕೆ 2-3 ಬಾರಿ ಈ ಫೇಸ್ ಮಾಸ್ಕ್ ಬಳಸಿದರೆ ನೆರಿಗೆಗಳು ನಿವಾರಣೆಯಾಗಿ ಮೊಗದ ಕಾಂತಿ, ಅಂದ ವರ್ಧಿಸುತ್ತದೆ. ಕ್ಯಾರೆಟ್‌ನ ಪೀಲ್ ಆಫ್ ಫೇಸ್ ಮಾಸ್ಕ್ ಮುಖದ ಕೊಳೆ, ಎಣ್ಣೆಯ ಪಸೆ, ಜಿಡ್ಡು , ರಂಧ್ರಗಳ ನಿವಾರಣೆಗೆ ಹಾಗೂ ತೈಲಯುಕ್ತ ತ್ವಚೆಯವರಿಗೆ ಈ ಮಾಸ್ಕ್ ಹಿತಕರ.
3. ಮೊದಲು ಒಂದು ಬೌಲ್‌ನಲ್ಲಿ ಒಂದು ಚಮಚ ಜೆಲ್ಯಾಟಿನ್, 1/2 ಕಪ್ ಕ್ಯಾರೆಟ್ ಜ್ಯೂಸ್ ಹಾಗೂ 1/2 ಚಮಚ ನಿಂಬೆರಸ ಚೆನ್ನಾಗಿ ಬೆರೆಸಿ ಇಡಬೇಕು. ತದನಂತರ ಮೈಕ್ರೋವೇವ್ ಅಥವಾ ಗ್ಯಾಸ್‌ನ ಬರ್ನರ್‌ನಲ್ಲಿ ಸಣ್ಣ ಉರಿಯಲ್ಲಿ ಇದನ್ನು ಬಿಸಿ ಮಾಡಬೇಕು. ಆರಿದ ನಂತರ ಫ್ರಿಡ್ಜ್ನಲ್ಲಿ 20-30 ನಿಮಿಷ ಇಡಬೇಕು. ಇದನ್ನು ಲೇಪಿಸುವ ಮೊದಲು ಮುಖಕ್ಕೆ ಆವಿ ತೆಗೆದುಕೊಳ್ಳಬೇಕು. ಅಥವಾ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ನಂತರ ಈ ಮಿಶ್ರಣವನ್ನು ದಪ್ಪವಾಗಿ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಬಳಿಕ ತೆಗೆಯಬೇಕು (ಪೀಲ್ ಆಫ್ ಮಾಡಬೇಕು) ತದನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ವಾರಕ್ಕೆ 1-2 ಬಾರಿ ಬಳಸಿದರೆ ಉತ್ತಮ ಪರಿಣಾಮ ಲಭ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.