ಬಿಂದಿ ಇಟ್ಕೊಂಡು ಬೊಂಬಾಟಾಗಿ ಕಾಣಿ…
Team Udayavani, Jan 24, 2018, 2:41 PM IST
ಒಂದೇ ಒಂದು ಸಣ್ಣ ಚುಕ್ಕಿ ಎಂಥ ಅದ್ಭುತಗಳನ್ನು ಮಾಡಬಲ್ಲದು ಗೊತ್ತಾ? ಮೇಕಪ್ ಮಾಡದಿದ್ದರೂ, ಹಣೆಯ ಮೇಲೆ ಸಣ್ಣದೊಂದು ಬಿಂದಿ ಇಟ್ಟು ನೋಡಿ, ಮುಖದ ಕಳೆ ದುಪ್ಪಟ್ಟಾಗದಿದ್ದರೆ ಕೇಳಿ. ಈಗಂತೂ ಮುಖದ ಗಾತ್ರ, ಆಕಾರ ಹಾಗೂ ಡ್ರೆಸ್‌ನ ವೈವಿಧ್ಯ, ವಿನ್ಯಾಸಗಳಿಗೆ ತಕ್ಕಂತೆ ವಿಧ ವಿಧದ ಬಿಂದಿಗಳು ಲಭ್ಯ ಇವೆ…
ಹಣೆಗೆ ಬೊಟ್ಟು ಅಥವಾ ಬಿಂದಿ ಇಟ್ಟರೆ ಉಟ್ಟ ಉಡುಗೆಗೆ ಹೊಸ ಮೆರುಗು ಬರುವುದಲ್ಲದೆ, ಮುಖಕ್ಕೆ ಒಂದು ಕಳೆಯೂ ಬರುತ್ತದೆ. ಹಣೆಬೊಟ್ಟನ್ನು ಹೆಚ್ಚಾಗಿ ಸಾಂಪ್ರದಾಯಕ ದಿರಿಸಿನೊಂದಿಗೆ ಹಾಕಿಕೊಳ್ಳಲಾಗುತ್ತದೆ. ಆದರೀಗ ಜೀನ್ಸ್ ಮೇಲೆ ಕುರ್ತಾ ತೊಟ್ಟು, ಹಣೆಗೆ ಮುದ್ದಾದ ಬಿಂದಿ ಹಾಕಿಕೊಳ್ಳಲು ಹುಡುಗಿಯರು ಇಷ್ಟಪಡುತ್ತಾರೆ. ಮೈಲೀ ಸೈರಸ್, ಅಲಿಸಿ ಯಾಕೀಸ್, ಗ್ವೆನ್ ಸ್ಟೆಫಾನಿ, ಕೇಟಿಪೆರ್ರಿ ಮುಂತಾದ ಇಂಗ್ಲಿಷ್ ಗಾಯಕಿಯರು ಭಾರತದ ಸಂಪ್ರದಾಯ, ಸಂಸ್ಕೃತಿ ಮತ್ತು ಕಲೆಯಿಂದ ಪ್ರೇರಣೆ ಪಡೆದು ಹಲವು ಸಂದರ್ಭ ಗಳಲ್ಲಿ ಹಣೆಬೊಟ್ಟನ್ನು ತೊಟ್ಟಿದ್ದಾರೆ.
ಒಂದು ಚುಕ್ಕಿ, ನೂರು ವೈವಿಧ್ಯ:
ಬಿಂದಿಯಲ್ಲಿ ಬಗೆಬಗೆಯ ಪ್ರಕಾರಗಳಿವೆ. ದೊಡ್ಡಬೊಟ್ಟು, ಚಿಕ್ಕಬೊಟ್ಟು, ಉದ್ದಬೊಟ್ಟು, ನಾಮದಂಥ ಬೊಟ್ಟು, ಡಿಸೈನರ್ ಬೊಟ್ಟು ಇತ್ಯಾದಿ. ಮುಖದ ಆಕಾರಕ್ಕೆ ಹೋಲುವಂತೆ ಬೊಟ್ಟು ಇಟ್ಟುಕೊಂಡರೆ ಚೆಂದ. ಯಾಕೆಂದರೆ ಕೆಲವು ಬಗೆಯ ಬೊಟ್ಟು, ಕೆಲವು ಮುಖಕ್ಕೆ ಮಾತ್ರ ಒಪ್ಪುತ್ತದೆ.
ಹಾರ್ಟ್ ಶೇಪ್: ಹೃದಯಾಕಾರದ ಮುಖದವರಿಗೆ ಅಗಲವಾದ ಹಣೆ, ದೊಡ್ಡಕೆನ್ನೆಗಳು ಮತ್ತು ಕಿರಿದಾದ ಗಲ್ಲ ಇರುತ್ತದೆ. ಹಿಂದಿ ಚಿತ್ರ ನಟಿಯರಾದ ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಹೃದಯಾಕಾರದ ಮುಖ ಹೊಂದಿ¨ªಾರೆ. ಈ ಆಕಾರದ ಮುಖ ಉಳ್ಳವರು ದೊಡ್ಡ ಬೊಟ್ಟು ಇಟ್ಟರೆ, ಹಣೆ ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಆದ್ದರಿಂದ ಇಂಥವರು ಚಿಕ್ಕದಾದ ಬೊಟ್ಟು ಇಟ್ಟುಕೊಳ್ಳಬೇಕು.
ಮೊಟ್ಟೆಯ ಆಕಾರ: ಅಂಡಾಕಾರದ ಮುಖ ಉಳ್ಳವರಿಗೆ ಹಣೆಯಷ್ಟೇ ಅಗಲವಾದ ಕೆನ್ನೆಗಳಿರುತ್ತವೆ. ಇಂಥ ಮುಖದವರು ದೊಡ್ಡ ಬೊಟ್ಟು ಹಾಕಿಕೊಳ್ಳಬಹುದು. ಇವರಿಗೆ ದೊಡ್ಡಬೊಟ್ಟು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ, ಮೊಟ್ಟೆಯ ಆಕಾರದ ಮುಖ ಉಳ್ಳವರು ಉದ್ದದ ಬೊಟ್ಟು ಹಾಕಿಕೊಳ್ಳಬಾರದು. ಏಕೆಂದರೆ, ಉದ್ದ ಬೊಟ್ಟು ಹಾಕಿಕೊಂಡರೆ ಮುಖದ ಆಕಾರ ಇನ್ನಷ್ಟು ಉದ್ದವಾಗಿ ಕಾಣಿಸುತ್ತದೆ. ಹಿಂದಿ ಸಿನಿಮಾ ತಾರೆಯರಾದ ಮಾಧುರಿ ದೀಕ್ಷಿತ್ ಮತ್ತು ಸೋನಂ ಕಪೂರ್ ಮೊಟ್ಟೆಯಾಕಾರದ ಮುಖ ಹೊಂದಿದ್ದಾರೆ.
ರೌಂಡ್ ಫೇಸ್: ವೃತ್ತಾಕಾರದ ಮುಖದವರು ದೊಡ್ಡ ಬೊಟ್ಟು ಹಾಕುವ ಬದಲಿಗೆ ಉದ್ದದ ಬೊಟ್ಟು ಹಾಕಿಕೊಂಡರೆ ಚೆಂದ. ವೃತ್ತಾಕಾರದ ದೊಡ್ಡಬೊಟ್ಟಿನ ಬದಲಿಗೆ ಉದ್ದನೆಯ ರೇಖೆಗಳಿರುವ ಬೊಟ್ಟು ರೌಂಡ್ ಫೇಸ್‌ನ ಅಂದ ಹೆಚ್ಚಿಸುತ್ತದೆ. ವಿದ್ಯಾಬಾಲನ್, ಐಶ್ವರ್ಯಾ ರೈ ಬಚ್ಚನ್, ರಾಣಿ ಮುಖರ್ಜಿ ಉದ್ದಬೊಟ್ಟಿಗೆ ಮಾರುಹೋಗಿದ್ದಾರೆ.
ಸಮಚತುಷ್ಯಕೋನಾಕೃತಿ: ಕಿರಿದಾದ ಹಣೆ, ಅಗಲವಾದ ಕೆನ್ನೆ ಮತ್ತು ಗಲ್ಲ ಉಳ್ಳವರು ರೆಕ್ಟ್ಆ್ಯಂಗುಲರ್ (ಸಮಚತುಷ್ಯಕೋನಾಕೃತಿ)ಆಕಾರದ ಮುಖ ಹೊಂದಿರುತ್ತಾರೆ. ಉದಾಹರಣೆಗೆ ಹಿಂದಿ ನಟಿ ಬಿಪಾಶಾ ಬಸು. ಇಂಥ ಮುಖ ಉಳ್ಳವರು ಯಾವ ಆಕಾರದ ಹಣೆಬೊಟ್ಟನ್ನು ಬೇಕಾದರೂ ಹಾಕಿಕೊಳ್ಳಬಹುದು. ಬಗೆಬಗೆಯ ಪ್ರಯೋಗಗಳನ್ನು ಮಾಡಿ ನೋಡಬಹುದು.
ಚೌಕಾಕಾರ: ಇನ್ನು ಉಳಿದಿರುವುದು ಚೌಕಾಕಾರದ ಮುಖಗಳು. ಹಣೆಯಷ್ಟೇ ಅಗಲವಾದ ಕೆನ್ನೆ ಮತ್ತು ಗಲ್ಲ ಇರುವವರು ಚೌಕಾಕಾರದ ಮುಖ ಹೊಂದಿರುತ್ತಾರೆ. ಉದಾಹರಣೆಗೆ ಹಿಂದಿ ನಟಿ ಕರೀನಾ ಕಪೂರ್. ಇಂಥ ಮುಖದ ಮೇಲೆ ಅರ್ಧಚಂದ್ರ ಮತ್ತು ವೃತ್ತಾಕಾರದ ಚಿಕ್ಕ ಬೊಟ್ಟುಗಳು ಬಹಳ ಚೆನ್ನಾಗಿ ಕಾಣಿಸುತ್ತವೆ. ತ್ರಿಕೋನ, ಚೌಕ ಅಥವಾ ಉದ್ದನೆಯ ಬೊಟ್ಟುಗಳು ಅಂದವಾಗಿ ಕಾಣಿಸುವುದಿಲ್ಲ. ನಿಮ್ಮ ಮುಖದ ಆಕಾರ ಯಾವುದು ಎಂಬುದನ್ನು ಕನ್ನಡಿ ಮುಂದೆ ನಿಂತು ಗಮನಿಸಿ. ನಂತರ ನಿಮ್ಮ ಮುಖದ ಆಕಾರಕ್ಕೆ ಹೋಲುವ ಹಣೆಬೊಟ್ಟು ತೊಟ್ಟು ಮಿಂಚಿ!
ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Bengaluru: ಜಗಳ ಬಿಡಿಸಲು ಬಂದ ಮಾವನ ಕೊಂದ ಅಳಿಯ!
Bengaluru: ಬಿಯರ್ ಬಾಟಲಿ ಕಸಿದಿದ್ದಕ್ಕೆ ಸ್ನೇಹಿತನ ಹತ್ಯೆ; 7 ಜನ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.