ದೇಹವೇ ಗಂಧದಗುಡಿ
Team Udayavani, Jul 4, 2018, 6:00 AM IST
ಅನೇಕರಿಗೆ ಸುಗಂಧದ್ರವ್ಯವೇ ಬ್ಯೂಟಿಯ ಬಂಡವಾಳ. ಪರ್ಫ್ಯೂಮ್ ಪೂಸಿಕೊಳ್ಳದೇ, ಹೊರಗೆ ಕಾಲೇ ಇಡುವುದಿಲ್ಲ. ಹೋದಲ್ಲಿ, ಬಂದಲ್ಲಿ ನಮ್ಮದೇ ಹವಾ ಎನ್ನುವಂತೆ, ತಮ್ಮ ಓಡಾಟಕ್ಕೊಂದು ಸಿಗ್ನೇಚರ್ ರೀತಿ ಪರ್ಫ್ಯೂಮ್ ಅನ್ನು ಬಳಸುವ “ಬಳ್ಳಿ’ಗಳೇ ಎಲ್ಲೆಡೆ ಕಾಣಸಿಗುತ್ತಾರೆ. ಒಮ್ಮೆ ಸುಳಿದಾಡಿದರೆ ಸಾಕು; ಪಕ್ಕದಲ್ಲಿದ್ದವರ ತಲೆ ಗಿರ್ರೆನ್ನುವಂತೆ ಮಾಡುವ ಈ ಸುಗಂಧದ್ರವ್ಯಗಳ ಮೋಹಕ ಪರಿಮಳವೂ ಅನೇಕ ಸಲ ಕಿರಿಕಿರಿ ಸೃಷ್ಟಿಸುವುದಿದೆ. ಆ ಪರ್ಫ್ಯೂಮ್, ತಮ್ಮ ಚರ್ಮಕ್ಕೆ ಎಷ್ಟೆಲ್ಲ ಹಾನಿ ಮಾಡುತ್ತಿದೆ ಎನ್ನುವ ಸಂಗತಿಯನ್ನೂ ಮರೆತು, ಅವರು ಮಿಂಚುತ್ತಿರುತ್ತಾರೆ.
ಅಷ್ಟಕ್ಕೂ, ಲಲನೆಯರಿಗೆ ಘಮ್ಮೆನ್ನಲು ಪರ್ಫ್ಯೂಮೇ ಬೇಕಂತಲೂ ಇಲ್ಲ. “ಪರ್ಫ್ಯೂಮ್ ಫ್ರೀ’ ಎನ್ನುವ ಪರಿಕಲ್ಪನೆಯಲ್ಲೂ ಮಿಂಚಬಹುದು ಎಂಬುದು ನಿಮ್ಗೆ ಗೊತ್ತೇ? ಪರ್ಫ್ಯೂಮ್ ಪೂಸಿಕೊಂಡರೆ ಹೆಚ್ಚೆಂದರೆ, ನಾಲ್ಕೈದು ತಾಸು ಮಾತ್ರ ಅದರ ಪರಿಮಳವಷ್ಟೇ. ಆದರೆ, ಅದನ್ನು ಪೂಸಿಕೊಳ್ಳದೆಯೂ ದಿನಪೂರ್ತಿ ಪರಿಮಳಯುಕ್ತವಾಗಿರಬಹುದು. ಅದು ಹೇಗೆ ಗೊತ್ತೇ?
1. ಸೋಪ್ ಮತ್ತು ಗುಲಾಬಿದಳ
ಸ್ನಾನಕ್ಕೆ 30 ನಿಮಿಷ ಮೊದಲು ನೀರಿನಲ್ಲಿ ಗುಲಾಬಿ ದಳಗಳನ್ನು ನೆನೆಹಾಕಿ, ನಂತರ ಆ ನೀರಿನಿಂದ ಸ್ನಾನ ಮಾಡಿ. ಮಾಮೂಲಿ ಮೈಸೋಪ್‌ಗಿಂತ, ಗಾಢ ಪರಿಮಳಯುಕ್ತ ಸೋಪ್ ಅನ್ನು ಬಳಸಿ. ಇವೆರಡರ ಕಾಂಬಿನೇಷನ್ ನಿಮ್ಮ ದೇಹವನ್ನು ಹೆಚ್ಚು ಹೊತ್ತು ಸುಗಂಧದಲ್ಲಿ ಮೀಯುವಂತೆ ಮಾಡುತ್ತದೆ.
2. ಲೋಶನ್ ಅಥವಾ ಮಾಯಿಶ್ಚರೈಸರ್
ಲೋಶನ್ ಇಲ್ಲವೇ ಮಾಯಿಶ್ಚರೈಸರ್ ಕೂಡ ಸುಗಂಧದ್ರವ್ಯಕ್ಕೆ ಪರ್ಯಾಯ ವಸ್ತುಗಳೇ ಆಗಿವೆ. ಆದರೆ, ಹಾಗೆ ಪರಿಮಳ ನೀಡುವ ಎಲ್ಲ ಲೋಶನ್‌ಗಳೂ ನಿಮ್ಮ ಚರ್ಮಕ್ಕೆ ಆಗಿಬರುತ್ತವೆ ಎಂದು ಹೇಳಲಾಗದು. ನಿಮ್ಮ ಚರ್ಮದ ಗುಣಕ್ಕೆ ಹೊಂದಿಕೊಳ್ಳುವಂಥ ಪರಿಮಳಯುಕ್ತ ಲೋಶನ್‌ಗೆ ಆದ್ಯತೆ ನೀಡಿ.
3. ನೈಲ್ ಪಾಲಿಶ್
ಕೈ ಬೆರಳಲ್ಲೂ ಹೂವಿನ ಪರಿಮಳವನ್ನು ಹುದುಗಿಸಬಹುದು. ಇಂಥ ಪರಿಮಳದ ಮ್ಯಾಜಿಕ್ ಅನ್ನು ಸೃಷ್ಟಿಸಬಲ್ಲಂಥ ಸುಗಂಧಯುಕ್ತ ನೈಲ್ ಪಾಲಿಶ್‌ಗಳು ಈಗ ಟ್ರೆಂಡ್ ಆಗಿವೆ. ಮೈಗೆ ಸುಗಂಧ ಪೂಸಿಕೊಂಡಂತೆ ಅನುಮಾನ ಹುಟ್ಟಿಸಬಲ್ಲ ಇವು 20ಕ್ಕೂ ಅಧಿಕ ಪರಿಮಳಗಳಲ್ಲಿ ಲಭ್ಯ.
4. ಟೋನರ್‌ಗಳು
ಟೋನರ್‌ಗಳನ್ನು ಮುಖಕ್ಕೆ ಮಾತ್ರವೇ ಹಚ್ಚಿಕೊಳ್ಳಬಹುದಾದರೂ, ಪರ್ಫ್ಯೂಮ್‌ಗಿಂತ ಇವು ಉತ್ತಮ. ಇವುಗಳ ಪರಿಮಳವು ಮೂಗಿಗೆ ರಾಚುವುದೂ ಇಲ್ಲ. ನಿತ್ಯವೂ ಕಚೇರಿಯಲ್ಲಿ ದುಡಿಯುವವರು, ದಿನಕ್ಕೊಂದು ಟೋನರ್‌ಗಳನ್ನು ಹಚ್ಚಿಕೊಂಡು ಸಂಭ್ರಮಿಸಬಹುದು. ಈಗ ಬಗೆಬಗೆಯ ಟೋನರ್‌ಗಳೂ ಮಾರುಕಟ್ಟೆಯಲ್ಲಿವೆ.
5. ಹೇರ್ ಸ್ಪ್ರೆ
ಶಾಂಪೂ ಇಲ್ಲವೇ ಕಂಡೀಶನರ್‌ಗಳನ್ನೂ ಪರ್ಫ್ಯೂಮ್ ಬದಲಿಗೆ ಬಳಸಬಹುದು. ಆದರೆ, ಇವನ್ನು ನಿತ್ಯವೂ ಬಳಸಲಾಗುವುದಿಲ್ಲ ಎಂಬುದೇ ಒಂದು ಚಿಂತೆ. ಇವುಗಳ ಬದಲಿಗೆ ತಲೆಕೂದಲಿಗೆ ಪರಿಮಳಯುಕ್ತ ಹೇರ್‌ಸ್ಪ್ರೆàಗಳನ್ನು ಉಪಯೋಗಿಸಬಹುದು. ಇವುಗಳ ಪರಿಮಳವು ಅತ್ಯಂತ ಮಧುರ.
6. ಬಾಡಿ ಬಟರ್
ಚರ್ಮಕ್ಕೆ ಮೃದುತ್ವ ನೀಡಲು ನೆರವಾಗುವ ಬಾಡಿ ಬಟರ್‌ಗಳು ಕೂಡ ಪರ್ಫ್ಯೂಮ್‌ನಂತೆಯೇ ಕೆಲಸ ಮಾಡುತ್ತವೆ. ಯೋಗ್ಯ ಬ್ರ್ಯಾಂಡ್‌ಗಳಿಗೆ ಹೋದರಷ್ಟೇ ನೀವು ಈ ಬಟರ್‌ಗಳಿಂದ ಪರಿಮಳವನ್ನು ನಿರೀಕ್ಷಿಸಬಹುದು. ಶರೀರವನ್ನು ಮಲ್ಲಿಗೆ ಹೂವಿನಂತೆ ಕಾಪಿಡಲು ಇವೂ ಉತ್ತಮ.
-ಸುವಾಸಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.