ಕೂಚಿಪುಡಿ ಕುವರ, ರತಿ ನೋಟದ ಹುಡುಗನ ಹೆಜ್ಜೆಗಳು
Team Udayavani, Dec 27, 2017, 6:50 AM IST
ಬಡ ಬೆಸ್ತ ಕುಟುಂಬದಲ್ಲಿ ಜನಿಸಿದ ಬಸವರಾಜ್, ಸ್ತ್ರೀವೇಷ ಹಾಕಿದಾಗ, ಥೇಟ್ ರತಿಯಂತೆ ಕಾಣಿಸುತ್ತಾರೆ. ವೇಷ ಕಳಚಿದರೆ ನೋಡಲು ಮನ್ಮಥನಂತೆ ಕಾಣಿಸುತ್ತಾರೆ…
ಹೆಣ್ಣಿನಂತೆ ಅಭಿನಯಿಸುವುದು ಒಬ್ಬ ಪುರುಷನಿಗೆ ನಿಜಕ್ಕೂ ಕಷ್ಟದ ಮಾತೇ. ಆ ನೋಟ, ಮುಗ್ಧತೆ, ಕಣ್ಣಾಳದ ಪ್ರೀತಿ, ನಾಚಿಕೆ, ವೈಯ್ನಾರ- ಇವೆಲ್ಲವುಗಳನ್ನು ತುಂಬಿಕೊಂಡು, ಮುಖಭಾವ ಹೊಮ್ಮಿಸುವುದು ಸವಾಲೇ ಸರಿ. ಆದರೆ, ಬಳ್ಳಾರಿ ಜಿÇÉೆಯ ಸಿರುಗುಪ್ಪದ ಬಲಕುಂದಿ ಬಸವರಾಜ್ ಅವರಿಗೆ ಇದು ಸುಲಭ. ಕೂಚಿಪುಡಿ ನೃತ್ಯ ಪ್ರಕಾರದಲ್ಲಿ ಅವರು ಸ್ತ್ರೀ ವೇಷ ಧರಿಸಿ, ಅಂಥ ಮುಗ್ಧತೆ ಹೊರಹೊಮ್ಮಿಸುತ್ತಾರೆ. ಸ್ತ್ರೀ ವೇಷಧಾರಿ ಪುರುಷ ಎಂದು ಒಂದಿಂಚೂ ಸಂಶಯ ಮೂಡದ ಹಾಗೆ ನರ್ತಿಸುವುದು ಬಸವರಾಜು ವಿಶೇಷತೆ.
ಬಡ ಬೆಸ್ತ ಕುಟುಂಬದಲ್ಲಿ ಜನಿಸಿದ ಬಸವರಾಜ್, ಸ್ತ್ರೀ ವೇಷ ಹಾಕಿದಾಗ, ಥೇಟ್ ರತಿಯಂತೆ ಕಾಣಿಸುತ್ತಾರೆ. ವೇಷ ಕಳಚಿದರೆ ನೋಡಲು ಮನ್ಮಥನಂತೆ ಕಾಣಿಸುತ್ತಾರೆ. ಗೆಜ್ಜೆಕಟ್ಟಿ ಕುಣಿಯುವಾಗ ಆ ವೈಯ್ನಾರದಲ್ಲಿ, ಹೆಣ್ಣಿನ ಅಷ್ಟೂ ಭಾವಗಳನ್ನು ಅತ್ಯಂತ ಸಹಜವಾಗಿ ಪ್ರಕಟಿಸುತ್ತಾರೆ. ಅಂದಹಾಗೆ, ಬಸವರಾಜ್ ಅವರಲ್ಲಿ ನೃತ್ಯ ಪ್ರತಿಭೆ ಅರಳಿಸಿದ್ದು, ಗುರುಗಳಾದ ಅಂಧ್ರಪ್ರದೇಶದ ಮಹಮದ್ ಗೌಸ್ ಅವರು.
ಈಗ ವಿಶ್ವಜ್ಯೋತಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ನೃತ್ಯ ಶಿಕ್ಷಕರಾಗಿರುವ ಬಸವರಾಜ್, ಸದ್ಯ ಕರ್ನಾಟಕದಲ್ಲಿ ಸ್ತ್ರೀ ವೇಷದಲ್ಲಿ ಕೂಚಿಪುಡಿ ನೃತ್ಯ ಪ್ರದರ್ಶಿಸುತ್ತಿರುವ ಏಕೈಕ ಕಲಾವಿದ. ಮೈಸೂರು ದಸರಾ, ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ಕಿತ್ತೂರು ಉತ್ಸವ ಸೇರಿದಂತೆ ಹಲವು ಪ್ರಮುಖ ನಾಡಸಂಭ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.
ಇವರ ಕಿತ್ತೂರು ರಾಣಿ ಚೆನ್ನಮ್ಮನ ಪೌರಾಣಿಕ ಪಾತ್ರದ ನೃತ್ಯ ಬಲು ಜನಪ್ರಿಯ.
19ನೇ ವಯಸ್ಸಿನಿಂದ ನೃತ್ಯ ಪ್ರದರ್ಶನ ಆರಂಭಿಸಿದ ಇವರು, ದೇಶ- ವಿದೇಶ ಸೇರಿದಂತೆ ಸುಮಾರು 800ಕ್ಕೂ ಅಧಿಕ ಪ್ರದರ್ಶಗಳನ್ನು ನೀಡಿದ್ದಾರೆ.
ಕನ್ನಡಿ ಮುಂದೆ ನಿಂತು ತಮ್ಮ ಅಲಂಕಾರವನ್ನು ತಾವೇ ಮಾಡಿಕೊಳ್ಳುವಾಗ ಸ್ತ್ರೀಯರೂ ನಾಚುವುದುಂಟು. ಕೇವಲ ಒಂದು ತಾಸಿನಲ್ಲಿ ಅಲಂಕಾರ ಮುಗಿಸುತ್ತಾರೆ. ತಮ್ಮ ನೃತ್ಯದ ಬಟ್ಟೆಗಳನ್ನು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ನಾಟ್ಯ ಕೌಮುದಿ ಪ್ರಶಸ್ತಿ, ನಾಟ್ಯ ತೇಜಸ್ವಿನಿ, ಕರ್ನಾಟಕ ನಾಟ್ಯಸಿರಿ, ನಾಟ್ಯ ಮಯೂರಿ ಪ್ರಶಸ್ತಿಗೆ ಇವರು ಭಾಜನರು.
– ಪ್ರಕಾಶ್ ಕೆ.ನಾಡಿಗ್, ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.