ಬೊಂಬಾಟ್ ಬದನೆ
Team Udayavani, Jul 17, 2019, 5:27 AM IST
ವರ್ಷವಿಡೀ ಕಡಿಮೆ ಬೆಲೆಗೆ ಸಿಗುವ ತರಕಾರಿಯೆಂದರೆ ಬದನೆ. ಅದನ್ನು ಬಡವರ ಬಾದಾಮಿ ಎಂದೂ ಕರೆಯುವುದುಂಟು.
ರುಚಿಕರ ತರಕಾರಿಗಳ ಸಾಲಿನಲ್ಲಿ ಬದನೆಕಾಯಿಗಂತೂ ಪ್ರಮುಖ ಸ್ಥಾನ ಇದ್ದೇ ಇದೆ. ವಾಂಗೀಬಾತ್, ರೊಟ್ಟಿ- ಎಣ್ಣೆಗಾಯಿಯ ರುಚಿ ನೋಡಿದವರು ಈ ಮಾತನ್ನು ತಕರಾರಿಲ್ಲದೆ ಒಪ್ಪಿಕೊಳ್ಳುತ್ತಾರೆ. ಎಣ್ಣೆಗಾಯಿಯಷ್ಟೇ ಅಲ್ಲದೆ, ಬದನೆಯಿಂದ ತಯಾರಿಸಬಹುದಾದ ಇನ್ನೂ ಕೆಲವು ಸ್ವಾದಿಷ್ಟ ಖಾದ್ಯಗಳ ರೆಸಿಪಿ ಇಲ್ಲಿದೆ.
1. ಬೆಣ್ಣೆ ಬದನೆಕಾಯಿ
ಬೇಕಾಗುವ ಸಾಮಗ್ರಿ: ಎಳೆ ಬದನೆಕಾಯಿ- ಕಾಲು ಕೆ.ಜಿ, ಹಸಿ ಮೆಣಸು-6, ಈರುಳ್ಳಿ-2, ಬೆಣ್ಣೆ- ಅರ್ಧ ಕಪ್, ಕರಿಬೇವು- 2 ಎಸಳು, ಇಂಗು ಮತ್ತು ಜೀರಿಗೆ ತಲಾ ಎರಡು ಚಮಚ, ಸಾಸಿವೆ, ಕಡಲೇಬೇಳೆ, ಸಕ್ಕರೆ ಮತ್ತು ಉದ್ದಿಬೇಳೆ ತಲಾ ಒಂದು ಚಮಚ, ಹುಣಸೇಹಣ್ಣು, ಅರಿಶಿಣ, ಉಪ್ಪು, ಬೆಲ್ಲ, ಗರಂ ಮಸಾಲೆ, ಕೊತ್ತಂಬರಿ ಸೊಪ್ಪು ರುಚಿಗೆ ತಕ್ಕಷ್ಟು, ಹುರಿದ ಶೇಂಗಾ ಪುಡಿ ಮತ್ತು ತುರಿದ ಕೊಬ್ಬರಿ ತಲಾ ಒಂದು ಕಪ್.
ಮಾಡುವ ವಿಧಾನ: ಬದನೆಕಾಯಿಯನ್ನು ಚೆನ್ನಾಗಿ ತೊಳೆದು, ಮಧ್ಯದಲ್ಲಿ ಸೀಳಿ, ಬಿಸಿ ನೀರಿನಲ್ಲಿಟ್ಟು ಐದು ನಿಮಿಷ ಬೇಯಿಸಬೇಕು. ಈರುಳ್ಳಿ, ಹಸಿ ಮೆಣಸಿನಕಾಯಿ, ಹುಣಸೇ ಹಣ್ಣು, ಜೀರಿಗೆ, ಉಪ್ಪು, ಬೆಲ್ಲ, ಅರಿಶಿಣ, ಗರಂ ಮಸಾಲೆ ಪೌಡರ್, ಹುರಿದ ಶೇಂಗಾ ಪುಡಿ ಮತ್ತು ತುರಿದ ಕೊಬ್ಬರಿ ಹಾಕಿಯನ್ನು ರುಬ್ಬಿ, ಪೇಸ್ಟ್ ತಯಾರಿಸಿ, ಆ ಮಿಶ್ರಣವನ್ನು ಬದನೆಕಾಯಿಯ ಮಧ್ಯೆ ಇಡಬೇಕು. ನಂತರ, ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಬೆಣ್ಣೆ ಹಾಕಬೇಕು. ಅದು ಕರಗಿದ ನಂತರ ಉದ್ದಿನಬೇಳೆ, ಕಡಲೇಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಅವುಗಳು ಬಿಸಿಯಾದ ನಂತರ ಸ್ಟಫ್ ಮಾಡಿಟ್ಟುಕೊಂಡಿರುವ ಬದನೆಕಾಯನ್ನು ಅದರಲ್ಲಿ ಹಾಕಿ, ತಳ ಹತ್ತದಂತೆ ಕೈಯಾಡಿಸಿ. ಒಲೆಯ ಉರಿ ಚಿಕ್ಕದಾಗಿರಲಿ. ಬದನೆಕಾಯಿಗಳು ಬೆಂದು ಮೆತ್ತಗಾದ ನಂತರ, ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿ.
2. ಬದನೆಕಾಯಿ ಎಳ್ಳು ಹುಳಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆ, ಎಳ್ಳು- ಎರಡು ಚಮಚ, ಒಣಮೆಣಸಿನಕಾಯಿ-4, ಈರುಳ್ಳಿ- 1, ರುಚಿಗೆ ತಕ್ಕಷ್ಟು ಹುಣಸೆಹಣ್ಣು, ಬೆಲ್ಲ, ಉಪ್ಪು, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ: ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ, ರಸ ತೆಗೆಯಿರಿ. ಬದನೆಕಾಯಿಯನ್ನು ಬೆಂಕಿಯಲ್ಲಿ ಸುಟ್ಟು, ಅದು ತಣ್ಣಗಾದ ಬಳಿಕ ಸಿಪ್ಪೆ ಸುಲಿದು ತಿರುಳನ್ನು ತೆಗೆದಿಟ್ಟುಕೊಳ್ಳಿ. ಎಳ್ಳು ಹಾಗೂ ಒಣಮೆಣಸನ್ನು ಪುಡಿ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಒಗ್ಗರಣೆಯ ಸಾಮಗ್ರಿಗಳನ್ನು ಸೇರಿಸಿ. ಅವು ಚೆನ್ನಾಗಿ ಎಣ್ಣೆಯಲ್ಲಿ ಹುರಿದ ಬಳಿಕ ಹೆಚ್ಚಿದ ಈರುಳ್ಳಿ ಬೆರೆಸಿ, ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಹುಣಸೆ ರಸ ಸೇರಿಸಿ ಮುಚ್ಚಿಡಿ. ಹುಳಿಯಲ್ಲಿ ಬೇಯುವಾಗ ಅದಕ್ಕೆ ಬದನೆ ತಿರುಳು, ಉಪ್ಪು, ಎಳ್ಳು, ಮೆಣಸಿನ ಪುಡಿ, ಬೆಲ್ಲ ಹಾಕಿ ಕುದಿಸಿ. ಮಿಶ್ರಣ ಕುದ್ದ ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ.
3. ಬದನೆಕಾಯಿ ಮಂಚೂರಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆಕಾಯಿ, ನಾಲ್ಕು ತುಣುಕು ಬ್ರೆಡ್, ಈರುಳ್ಳಿ-2, ಹಸಿಮೆಣಸು- 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಟೊಮೆಟೋ ಸಾಸ್, ಮೈದಾ ಹಿಟ್ಟು- ತಲಾ 2 ಚಮಚ, ಸಾಸಿವೆ, ಖಾರದ ಪುಡಿ, ತೆಂಗಿನ ತುರಿ, ಧನಿಯಾ ಪುಡಿ, ಜೀರಿಗೆ- ತಲಾ 1 ಚಮಚ, ಅರಿಶಿಣ, ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಬ್ರಡ್ ತುಣುಕನ್ನು ಪುಡಿ ಮಾಡಿಕೊಳ್ಳಿ. ಬದನೆಕಾಯಿಯನ್ನು ಬೇಯಿಸಿ, ನುಣ್ಣಗೆ ಮಾಡಿಕೊಂಡು, ಅದಕ್ಕೆ ಉಪ್ಪು, ಖಾರ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಅರಿಶಿಣ, ಮೈದಾ ಹಿಟ್ಟು ಹಾಕಿ ಮಿಶ್ರ ಮಾಡಿ. ಈ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ, ಬ್ರೆಡ್ ಪುಡಿಯಲ್ಲಿ ಹೊರಳಿಸಿ, ಎಣ್ಣೆಯಲ್ಲಿ ಫ್ರೆç ಮಾಡಿ ತೆಗೆದಿಟ್ಟುಕೊಳ್ಳಿ. ಬೇರೊಂದು ಬಾಣಲೆಗೆ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಸಾಸಿವೆ ಹಾಕಿ ಅವು ಸಿಡಿದ ನಂತರ ಹೆಚ್ಚಿದ ಈರುಳ್ಳಿ ಹಾಕಿ. ಅದು ಮೆತ್ತಗಾದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ತೆಂಗಿನ ತುರಿ, ಧನಿಯಾ ಪುಡಿ ಹಾಕಿ ಸ್ವಲ್ಪ ಕಾಲ ಮುಚ್ಚಿಡಿ. ಬಳಿಕ, ಈಗಾಗಲೇ ಕರಿದಿರುವ ಬದನೆಕಾಯಿ ಉಂಡೆ, ಟೊಮೇಟೊ ಸಾಸ್, ಕೊತ್ತಂಬರಿ ಸೊಪ್ಪು ಹಾಕಿ, ಸಣ್ಣ ಉರಿಯಲ್ಲಿ ಐದು ನಿಮಿಷ ಬಿಸಿ ಮಾಡಿ ಕೆಳಗಿಳಿಸಿದರೆ ಮಂಚೂರಿ ರೆಡಿ.
4. ಬದನೆ ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿ: ಕಾಲು ಕೆ.ಜಿ ಬದನೆಕಾಯಿ, ಹೆಚ್ಚಿದ ಈರುಳ್ಳಿ- 1 ಕಪ್, ಒಣ ಮೆಣಸಿನಕಾಯಿ-3, ಹಸಿಮೆಣಸಿನಕಾಯಿ-3 ಹುಣಸೆಹಣ್ಣು, ಉಪ್ಪು, ಅರಿಶಿಣ, ಕರಿಬೇವು ಸ್ವಲ್ಪ, ಜೀರಿಗೆ, ಸಾಸಿವೆ, ಉದ್ದಿನಬೇಳೆ- ತಲಾ 2 ಚಮಚ, ಇಂಗು- ಅರ್ಧ ಚಮಚ, ಎಣ್ಣೆ- ನಾಲ್ಕು ಚಮಚ.
ಮಾಡುವ ವಿಧಾನ: ಬದನೆಕಾಯಿಯನ್ನು ಎಣ್ಣೆ ಹಚ್ಚಿ ಸುಟ್ಟು, ಸಿಪ್ಪೆ ಸುಲಿದು ಅದರ ಒಳಗಿನ ತಿರುಳನ್ನು ನುಣ್ಣಗೆ ಮಾಡಿಕೊಳ್ಳಿ. ಅದಕ್ಕೆ, ಹೆಚ್ಚಿದ ಈರುಳ್ಳಿ ಸೇರಿಸಿ ಸರಿಯಾಗಿ ಕಲಸಿ. ಆನಂತರ ಒಣಮೆಣಸು, ಹಸಿಮೆಣಸು, ಹುಣಸೆಹಣ್ಣು, ಉಪ್ಪು, ಅರಿಶಿಣ ಮಿಶ್ರ ಮಾಡಿ ಸಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ನಂತರ ಸಿದ್ಧ ಮಾಡಿಟ್ಟುಕೊಂಡ ಎರಡೂ ಮಿಶ್ರಣವನ್ನು ಹಾಕಿ ಚೆನ್ನಾಗಿ ಬೆರೆಸಿ. ಇದನ್ನು ಎರಡು ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿದರೆ ಚಟ್ನಿ ರೆಡಿ.
– ಶಿವಲೀಲಾ ಸೊಪ್ಪಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.