“ಕೇಪ್’ ಆಫ್ ಗುಡ್ ಹೋಪ್!
Team Udayavani, Sep 26, 2018, 6:00 AM IST
ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್ ರೀತಿಯ ಬಟ್ಟೆ ಅದು. ಮುಂದೆ ಎದೆಯವರೆಗೂ ಮುಚ್ಚಿಗೆ; ಹಿಂದೆ ನೆಲ ಸಾರಿಸುವಷ್ಟು ಉದ್ದಕೆ… ಅದುವೇ “ಕೇಪ್’ನ ಆಕರ್ಷಣೆ. ಐತಿಹಾಸಿಕ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದ್ದ “ಕೇಪ್’ ಉಡುಪು, ಈಗ ಬೀದಿಬೀದಿಗಳಲ್ಲಿ ದಾರಿಹೋಕರ ಕಣ್ಮನ ಸೆಳೆಯುತಿದೆ…
ಐತಿಹಾಸಿಕ ಸಿನಿಮಾ/ ಧಾರಾವಾಹಿಗಳಲ್ಲಿ ಸೇನಾಧಿಕಾರಿಗಳ ಪೋಷಾಕು ನೋಡಿದ್ದೀರಾ? ಮಾಮೂಲಿ ದಿರಿಸಿನ ಜೊತೆಗೆ, ಇಡೀ ಬೆನ್ನನ್ನು ಮುಚ್ಚುವಂಥ ಗೌನ್ ರೀತಿಯ ಬಟ್ಟೆಯನ್ನು ಧರಿಸಲಾಗುತ್ತಿತ್ತು. ಮುಂದೆ ಎದೆಯವರೆಗೆ ಹಾಗೂ ಹಿಂದೆ ನೆಲ ತಾಕುವಷ್ಟು ಉದ್ದವಿರುವ ಆ ಉಡುಪಿಗೆ “ಕೇಪ್’ ಎಂದು ಹೆಸರು. ಅಷ್ಟೆಲ್ಲಾ ಯಾಕೆ, ಹೇರ್ ಸಲೂನ್‌ಗೆ ಹೋದಾಗ ನಮ್ಮನ್ನು ಕುರ್ಚಿಯ ಮೇಲೆ ಕೂರಿಸಿ, ಮೈಗೆ ಹೊದೆಸುವ ಬಟ್ಟೆಯೂ ಕೇಪ್ ವಿನ್ಯಾಸದ ಒಂದು ವಿಧ. ಆದರೀಗ ಕೇಪ್, ಕೇವಲ ಬಟ್ಟೆಯಷ್ಟೇ ಅಲ್ಲ, ಫ್ಯಾಷನ್ ಲೋಕದಲ್ಲಿ ಭಾರೀ ಸದ್ದು ಮಾಡುತ್ತಿರುವ ಟ್ರೆಂಡ್.
ಪಾರ್ಟಿಯಲ್ಲಿ ಎಲ್ಲರಿಗಿಂತ ಸುಂದರವಾಗಿ ಕಾಣಿಸಿಕೊಳ್ಳುವ ಆಸೆಯೇ? ಹಾಗಾದ್ರೆ ನಿಮ್ಮ ವಾರ್ಡ್‌ರೋಬ್‌ಗ ಕೇಪ್ ಡ್ರೆಸ್ ಅನ್ನು ಸೇರಿಸಿ. ಹಾಫ್ ಬ್ಲೇಝರ್‌ನಂತೆ ಕಾಣುವ ಈ ಡ್ರೆಸ್ ಅನ್ನು ಶಾರ್ಟ್ ಡ್ರೆಸ್, ಮಿನಿ ಸ್ಕರ್ಟ್ ಜೊತೆಗೆ ಮಾತ್ರವಲ್ಲ, ಅದ್ದೂರಿ ಪಾರ್ಟಿ ಗೌನ್‌ಗಳ ಜೊತೆಗೂ ಧರಿಸಬಹುದು.
ಗೌನ್ ಜೊತೆಗೇ ಕೇಪ್
ಕೇಪ್ ಅನ್ನು ಗೌನ್ ಮೇಲೆ ಪ್ರತ್ಯೇಕವಾಗಿ ಧರಿಸಬೇಕೆಂದಿಲ್ಲ. ಉದ್ದದ ಗೌನ್ ಜೊತೆಗೆ ಕೇಪ್‌ಗ್ಳು ಅಟ್ಯಾಚ್ ಆಗಿರುತ್ತವೆ. ಹಾಫ್ ಬ್ಲೇಝರ್‌ನಂತೆ ಮುಂದೆ ಮತ್ತು ಹಿಂದೆ, ಮೊಣಕೈವರೆಗೆ ಮಾತ್ರ ಕವರ್ ಆಗುವ ಕೇಪ್‌ಗ್ಳು ಸದ್ಯದ ಟ್ರೆಂಡ್.
ಉದ್ದನೆಯ ಕೇಪ್ ಗೌನ್
ಉದ್ದನೆಯ ಗೌನ್ ಜೊತೆಗೆ, ಇಡೀ ಬೆನ್ನನ್ನು ಕವರ್ ಮಾಡಿ, ನೆಲ ಮುಟ್ಟುವಷ್ಟು ಉದ್ದವಿರುವ ಕೇಪ್‌ಗ್ಳು ಅಟ್ಯಾಚ್ ಆಗಿರುತ್ತವೆ. ಇಂಥ ಗೌನ್‌ಗಳು ರಾಯಲ್ ಲುಕ್ ನೀಡುವುದರಿಂದ, ಮದುವೆಯಂಥ ದೊಡ್ಡ ಸಮಾರಂಭಗಳಿಗೆ ಹೇಳಿ ಮಾಡಿಸಿದ್ದಾಗಿವೆ.
ಶಾರ್ಟ್ ಕೇಪ್ ಡ್ರೆಸ್
ಶಾರ್ಟ್ ಡ್ರೆಸ್ ಪ್ರಿಯರೂ ತಮ್ಮ ದಿರಿಸಿಗೆ ಹೊಸ ಸ್ಪರ್ಶ ನೀಡಬಹುದು. ಶಾರ್ಟ್ ಡ್ರೆಸ್‌ಗಳ ಮುಂಭಾಗದಲ್ಲಿ ಮೊಣಕೈವರೆಗೆ ಹಾಗೂ ಹಿಂದೆ ಡ್ರೆಸ್‌ನಷ್ಟೇ ಉದ್ದ ಇರುವ ಕೇಪ್ ಅನ್ನು ಅಟ್ಯಾಚ್ ಮಾಡಲಾಗಿರುತ್ತದೆ. ಶಾರ್ಟ್ ಸಿಲ್ಕ್ ಡ್ರೆಸ್ ಜೊತೆಗೆ ಲೇಯರ್x ಕೇಪ್ ಇರುವ ಉಡುಪುಗಳು ಪಾರ್ಟಿಗಳಲ್ಲಿ ಫ್ಯಾಷನೇಬಲ್ ಎನಿಸುತ್ತವೆ.
ಪ್ಯಾಂಟ್ ಸೂಟ್ ಜೊತೆಗೆ ಕೇಪ್
ಬೋರಿಂಗ್ ಎನಿಸುವ ಪ್ಯಾಂಟ್‌ಸೂಟ್ಸ್/ ಜಂಪ್‌ಸೂಟ್‌ಗೂ ಈಗ ಕೇಪ್ ಹೊಸ ಲುಕ್ ನೀಡಿದೆ. ಫಿಟ್ ಇರುವ ಪ್ಯಾಂಟ್‌ಗೆ ಶಾರ್ಟ್, ಸೊಂಟದವರೆಗೆ ಬರುವ ಅಥವಾ ಪೂರ್ತಿ ಕವರ್ ಆಗಿ ನೆಲ ಮುಟ್ಟುವ ಕೇಪ್‌ಗ್ಳು ಅಟ್ಯಾಚ್ ಆಗಿರುತ್ತವೆ.
ಯಾವುದು ಉತ್ತಮ?
ಕೇಪ್ ಡ್ರೆಸ್‌ಗಳು ನೋಡಲು ಸ್ವಲ್ಪ ಅದ್ದೂರಿ ಅನ್ನಿಸುವುದರಿಂದ ಜೊತೆಗೆ ಧರಿಸುವ ಆ್ಯಕ್ಸೆಸರೀಸ್ ಆದಷ್ಟು ಸಿಂಪಲ್ ಆಗಿರಲಿ. ಸ್ಯಾಂಡಲ್ಸ್ ಅಥವಾ ಪೆನ್ಸಿಲ್ ಹೈ ಹೀಲ್ಸ್ ಉತ್ತಮ ಆಯ್ಕೆ. ಮೇಕಪ್ ಕೂಡ ತೆಳುವಾಗಿಯೇ ಇರಲಿ.
• ಕ್ರಾಪ್ಡ್ ಕೇಪ್/ ಕೇಪ್ಲೆಟ್ಸ್ (ಸೊಂಟದವರೆಗೆ ಉದ್ದವಿರುವ ಜ್ಯಾಕೆಟ್‌ನಂಥ ಉಡುಪು)ಗಳನ್ನು ಶಾರ್ಟ್ ಸ್ಕರ್ಟ್ ಜೊತೆಗೆ ಧರಿಸಿದರೆ ಚೆನ್ನ.
• ಲೇಯರ್ ಮತ್ತು ಫೋಲ್ಡ್‌ಗಳಿರುವ ಕೇಪ್‌ಗ್ಳನ್ನು ಪೆನ್ಸಿಲ್ ಸ್ಕರ್ಟ್ ಜೊತೆಗೆ ಧರಿಸಬಹುದು.
• ಮದುವೆಗೆ ಧರಿಸುವ ಬಿಳಿ ಗೌನ್ ಜೊತೆಗೆ ಕೇಪ್ ಫ್ಯಾಷನೇಬಲ್ ಆಗಿ ಕಾಣುತ್ತದೆ.
ಕೇಳಿರಿ, ಕೇಪ್ ಚರಿತೆ…
ಕೇಪ್ ಡ್ರೆಸ್‌ಗಳು ಮೊದಲು ಚಾಲ್ತಿಗೆ ಬಂದದ್ದು, ಕ್ರೈಸ್ತ ಸಮುದಾಯದ ಮೆನೊನೈಟ್ ಮಹಿಳೆಯರಿಂದ. ತಮ್ಮ ಸಾಂಪ್ರದಾಯಿಕ ಡ್ರೆಸ್‌ನ ಭಾಗವಾಗಿ ಅವರು ಕೇಪ್ ಡ್ರೆಸ್‌ಗಳನ್ನು ಧರಿಸುತ್ತಿದ್ದರು. 19ನೇ ಶತಮಾನದ ಕೊನೆಯವರೆಗೂ ಹೆಚ್ಚು ಸದ್ದು ಮಾಡದ ಈ ದಿರಿಸು ಈಗ ಕೇವಲ ಮೇಲುಡುಪಾಗಿ ಉಳಿದಿಲ್ಲ.
– ಪ್ರಿಯಾಂಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.