ಕ್ಯಾರೆಟ್ ಈಸ್ ಕರೆಕ್ಟ್, ಚೆಲುವೆಯ ಚಂದಕೆ ಕ್ಯಾರೆಟ್ ಸಾಥಿ
Team Udayavani, Feb 1, 2017, 3:45 AM IST
ಕ್ಯಾರೆಟ್ ಹಾಗೇ ತಿನ್ನೋಕೂ ಸೈ, ಹಲ್ವಾ ಮಾಡ್ಕೊಂಡು ಹಂಚೋಕು ಬೆಸ್ಟ್, ಮಾಸ್ಕ್ ಹಾಕ್ಕೊಂಡು ಬ್ಯೂಟಿಫುಲ್ಲಾಗಿ ಕಾಣಲಿಕ್ಕಂತೂ ಹೇಳಿಮಾಡಿಸಿದ್ದು. ಸಾಮಾನ್ಯವಾಗಿ ಫೇಸ್‌ಮಾಸ್ಕ್ ಹಾಕೋ ಮೊದುÉ ನಿಮ್ಮದು ಒಣಚರ್ಮವಾ, ಆಯಲೀ ಸ್ಕಿನಾ ಅಥವಾ ನಾರ್ಮಲ್ ಸ್ಕಿನ್ನಾ ಅಂತ ಟೆಸ್ಟ್ ಮಾಡಿಯೇ ಫೇಸ್‌ಮಾಸ್ಕ್ ಹಾಕ್ತಾರೆ. ಆದರೆ ಕ್ಯಾರೆಟ್ ಮಾಸ್ಕ್ ಹಾಕ್ಕೊಳ್ಳಬೇಕಾದರೆ ನಿಮ್ಮ ಚರ್ಮ ಹೀಗೇ ಇರಬೇಕು ಅಂತಿಲ್ಲ. ಎಲ್ಲ ಬಗೆಯ ಚರ್ಮದವರೂ ಕ್ಯಾರೆಟ್ ಮಾಸ್ಕ್ ಹಾಕ್ಕೊಳ್ಳಬಹುದು. ಮುಖ ಫ್ರೆಶ್ ಆಗೋ ಗ್ಯಾರೆಂಟಿ ಇರುತ್ತೆ. ಹೊಳಪು ಬರುತ್ತೆ. ಕ್ಯಾರೆಟ್‌ನಿಂದ ನಿಮ್ಮ ಚೆಂದ ಹೆಚ್ಚಿಸೋ ಬಗೆಗಳು ಇಲ್ಲಿವೆ. ಟ್ರೈ ಮಾಡಿ.
*
1. ಕ್ಯಾರೆಟ್ ಫೇಶಿಯಲ್ ಮಾಸ್ಕ್
ಈ ಮಾಸ್ಕ್ ಚರ್ಮ ತಾಜಾ, ಮೃದು ಹಾಗೂ ಕಾಂತಿಯುತವಾಗುತ್ತದೆ. ಚಳಿಗಾಲದಲ್ಲಿ ಈ ಮಾಸ್ಕ್ ಹಿತಕರ.
ಒಂದು ಕ್ಯಾರೆಟ್‌ನ್ನು ಕತ್ತರಿಸಿ ಮಿಕ್ಸರ್‌ನಲ್ಲಿ ಅರೆದು ತದನಂತರ ತೆಳ್ಳಗಿನ ಬಟ್ಟೆಯಲ್ಲಿ ಸೋಸಿ ಜ್ಯೂಸ್ (ರಸ) ತೆಗೆಯಬೇಕು. ಈ ಕ್ಯಾರೆಟ್ ರಸಕ್ಕೆ 2 ಚಮಚ ಜೇನುತುಪ್ಪ , 20 ಹನಿ ಬಾದಾಮಿ ತೈಲ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ತುದಿ ಬೆರಳಿನಿಂದ ಮೃದುವಾಗಿ ಮಸಾಜ್ ಮಾಡಬೇಕು. 1/2 ಗಂಟೆಯ ಬಳಿಕ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟರ್ಕಿ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ಹೀಗೆ 5-6 ಬಾರಿ ಶಾಖ ನೀಡಿದ ನಂತರ ತಣ್ಣೀರಿನಲ್ಲಿ ಅದ್ದಿದ ಟವೆಲ್‌ನಿಂದ ಮುಖವನ್ನು ತೊಳೆಯಬೇಕು.
2. ಕ್ಯಾರೆಟ್‌ನ ನೆರಿಗೆನಿವಾರಕ ಫೇಸ್‌ಮಾಸ್ಕ್
ವಯಸ್ಸಾದಂತೆ ಅಥವಾ ಚರ್ಮ ಒಣಗಿದಾಗ ಅಧಿಕ ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ನೆರಿಗೆ ನಿವಾರಣೆಗೆ ಕ್ಯಾರೆಟ್‌ನಿಂದ ಈ ವಿಧಾನದಲ್ಲಿ ಫೇಸ್ ಮಾಸ್ಕ್ ಬಳಸಿದರೆ ಹಿತಕರ. ಎರಡು ಕ್ಯಾರೆಟ್‌ನ ಸಿಪ್ಪೆ ತೆಗೆದು ಕತ್ತರಿಸಿ, ಹಾಲಿನಲ್ಲಿ ಮೃದುವಾಗುವವರೆಗೆ ಬೇಯಿಸಬೇಕು. ನಂತರ ಚೆನ್ನಾಗಿ ಮಿಕ್ಸರ್‌ನಲ್ಲಿ ರುಬ್ಬಿ ಅದಕ್ಕೆ ಮೂರು ಚಮಚ ಜೇನು, ಮೂರು ಚಮಚ ಆಲಿವ್‌ತೈಲ ಬೆರೆಸಿ ಚೆನ್ನಾಗಿ ಮಿಶ್ರ ಮಾಡಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರಕ್ಕೆ 2-3 ಬಾರಿ ಈ ಫೇಸ್ ಮಾಸ್ಕ್ ಬಳಸಿದರೆ ನೆರಿಗೆಗಳು ನಿವಾರಣೆಯಾಗಿ ಮುಖದ ಕಾಂತಿ, ಅಂದ ವರ್ಧಿಸುತ್ತದೆ.
3. ಕ್ಯಾರೆಟ್‌ನ ಪೀಲ್ ಆಫ್ ಫೇಸ್ ಮಾಸ್ಕ್
ಮುಖದ ಕೊಳೆ, ಎಣ್ಣೆಯ ಪಸೆ, ಜಿಡ್ಡು , ರಂಧ್ರಗಳ ನಿವಾರಣೆಗೆ ಹಾಗೂ ತೈಲಯುಕ್ತ ತ್ವಚೆಯವರಿಗೆ ಈ ಮಾಸ್ಕ್ ಬೆಸ್ಟ್. ಮೊದಲು ಒಂದು ಬೌಲ್‌ನಲ್ಲಿ ಒಂದು ಚಮಚ ಜೆಲ್ಯಾಟಿನ್, 1/2 ಕಪ್ ಕ್ಯಾರೆಟ್ ಜ್ಯೂಸ್ ಹಾಗೂ 1/2 ಚಮಚ ನಿಂಬೆರಸ ಚೆನ್ನಾಗಿ ಬೆರೆಸಿ ಇಡಬೇಕು. ಮೈಕ್ರೋವೇವ್ ಅಥವಾ ಗ್ಯಾಸ್‌ನ ಬರ್ನರ್‌ನಲ್ಲಿ ಸಣ್ಣ ಉರಿಯಲ್ಲಿ ಇದನ್ನು ಬಿಸಿ ಮಾಡಬೇಕು. ಆರಿದ ನಂತರ Åಜ್‌ನಲ್ಲಿ 20-30 ನಿಮಿಷ ಇಡಬೇಕು.
ಇದನ್ನು ಲೇಪಿಸುವ ಮೊದಲು ಮುಖಕ್ಕೆ ಹಬೆ ತೆಗೆದುಕೊಳ್ಳಬೇಕು. ಅಥವಾ ಬಿಸಿನೀರಿನಲ್ಲಿ ಅದ್ದಿ ಹಿಂಡಿದ ಟವೆಲ್‌ನಿಂದ ಮುಖಕ್ಕೆ ಶಾಖ ನೀಡಬೇಕು. ನಂತರ ಈ ಮಿಶ್ರಣವನ್ನು ದಪ್ಪವಾಗಿ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಬಳಿಕ ತೆಗೆಯಬೇಕು (ಪೀಲ್ ಆಫ್ ಮಾಡಬೇಕು) ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ವಾರಕ್ಕೆ 1-2 ಬಾರಿ ಬಳಸಿದರೆ ಉತ್ತಮ ಪರಿಣಾಮ ಲಭ್ಯ.
4. ಕ್ಯಾರೆಟ್ ಮಾಯಿಶ್ಚರೈಸಿಂಗ್ ಫೇಸ್‌ಮಾಸ್ಕ್
ಮುಖದ ತೇವಾಂಶ ವರ್ಧಿಸಿ ಒಣಗುವಿಕೆ, ಒರಟು ಚಮಚ ನಿವಾರಣೆ ಮಾಡಲು ಈ ಮಾಸ್ಕ್ ಹಿತಕರ. ಚಳಿಗಾಲದಲ್ಲಿಯೂ ಇದು ಬಹೂಪಯುಕ್ತ. ಒಣ ಹಾಗೂ ಒರಟು ಚರ್ಮ ಉಳ್ಳವರಿಗೆ ಇದು ಹೇಳಿಮಾಡಿಸಿದ ಫೇಸ್‌ಮಾಸ್ಕ್. ಒಂದು ಕ್ಯಾರೆಟ್‌ನ್ನು ಸಣ್ಣಗೆ ತುರಿಮಣೆಯಲ್ಲಿ ತುರಿಯಬೇಕು. ಇದಕ್ಕೆ ಎರಡು ಸ್ಕೂಪ್ ಅವಾಕಾಡೊ ಅಥವಾ ಬೆಣ್ಣೆ ಹಣ್ಣಿನ ಮಿಶ್ರಣ ಬೆರೆಸಿ, ಒಂದು ಚಮಚ ಶುದ್ಧ ಆಲಿವ್ ಆಯಿಲ್ ಸೇರಿಸಿ, 2 ಚಿಟಿಕೆ ಎಪ್ಸಮ್‌ಸಾಲ್ಟ್ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ ತುದಿಬೆರಳುಗಳಿಂದ ವರ್ತುಲಾಕಾರದಲ್ಲಿ ಮಾಲೀಶು ಮಾಡಬೇಕು. ಒಣಗಿದ ಚರ್ಮವು ಇದರಿಂದ ಎಕ್ಸ್‌ಫೋಲಿಯೇಟ್ ಅರ್ಥಾತ್ ನಿವಾರಣೆಯಾಗುತ್ತದೆ.
ಚರ್ಮ ಮೃದುವಾಗಿ ತೇವಾಂಶ ವೃದ್ಧಿಯಾಗುತ್ತದೆ.
– ಡಾ| ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.