ಕೊರೊನಾಕ್ಕೆ ಮುಂಜಾಗ್ರತೆಯೇ ಮದ್ದು…
Team Udayavani, Feb 12, 2020, 4:24 AM IST
ಮಾರಣಾಂತಿಕ ಕೊರೊನಾ ವೈರಸ್, ಚೀನಾದ ಗಡಿ ದಾಟಿ, 27ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದೆ. ಕೇರಳಕ್ಕೂ ಈ ವೈರಸ್ ಕಾಲಿಟ್ಟಿರುವುದರಿಂದ, ಸೋಂಕು ಹರಡದಂತೆ ಕರ್ನಾಟಕದಲ್ಲಿಯೂ ಕಟ್ಟೆಚ್ಚರ ವಹಿಸಬೇಕಾದ ಅನಿವಾರ್ಯವಿದೆ.
ಕೊರೊನಾ ವೈರಸ್ (coV) ಸಾಮಾನ್ಯವಾಗಿ ನೆಗಡಿ ಹಾಗೂ ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್. ಆದರೆ, ಚೀನಾದಲ್ಲಿ ಕಾಣಿಸಿಕೊಂಡಿರುವುದು ಹೊಸ ತಳಿಯ ನೊವೆಲ್ ಕೊರೊನಾ ವೈರಸ್ (2019 – ncoV). ಸಾಮಾನ್ಯ ನೆಗಡಿಯಿಂದ ಹಿಡಿದು, ತೀವ್ರ ರೋಗಗಳನ್ನು ಉಂಟು ಮಾಡುವ ಶಕ್ತಿ ಇದಕ್ಕಿದೆ. ಇದೊಂದು ಪ್ರಾಣಿಜನ್ಯ ರೋಗವಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.
ರೋಗ ಲಕ್ಷಣಗಳು:
ಸೋಂಕು ತಗುಲಿದ 1 -5 ದಿನಗಳಲ್ಲಿ, ದೇಹದಲ್ಲಿ ರೋಗ ಲಕ್ಷಣಗಳು ಪತ್ತೆಯಾಗಬಹುದು. ಮೂಗು ಸೋರುವುದು ,ತಲೆನೋವು, ಮೈ ಕೈ ನೋವು, ಕೆಮ್ಮು, ಗಂಟಲಿನಲ್ಲಿ ಕೆರೆತ ಮತ್ತು ಕಿರಿ ಕಿರಿ, ಜ್ವರ, ಸುಸ್ತು, ಲವಲವಿಕೆ ಇಲ್ಲದಿರುವುದು, ಶ್ವಾಸಕೋಶಕ್ಕೆ ಸೋಂಕು ಹಬ್ಬಿದಾಗ ಬ್ರೊಕೈಟಿಸ್, ನ್ಯೂಮೋನಿಯಾ ಉಂಟಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು.
ಮುಂಜಾಗ್ರತೆಯೇ ಮದ್ದು:
ಈ ರೋಗಕ್ಕೆ ನಿಶ್ಚಿತ ಚಿಕಿತ್ಸೆ ಇಲ್ಲ. ಲಸಿಕೆಯೂ ಇಲ್ಲ. ಮುಂಜಾಗ್ರತಾ ಕ್ರಮಗಳಿಂದ ರೋಗವನ್ನು ದೂರವಿಡುವುದೊಂದೇ ದಾರಿ. ಹಾಗಾದರೆ, ಸೋಂಕು ಹರಡದಂತೆ ಏನೆಲ್ಲಾ ಮಾಡಬಹುದು?
-ಖಚಿತ ರೋಗಿಯನ್ನು ಪ್ರತ್ಯೇಕಿಸುವುದು ಮತ್ತು ತ್ವರಿತ ತುರ್ತು ಚಿಕಿತ್ಸೆ ನೀಡುವುದು.
– ರೋಗಿಯ ಸಂಪರ್ಕದಿಂದ ದೂರ ಇರುವುದು.
– ಸಾಬೂನು ಮತ್ತು ಬಿಸಿ ನೀರು ಬಳಸಿ ಆಗಾಗ್ಗೆ ಕೈ ತೊಳೆಯುವುದು.
-ಕೈ ಮತ್ತು ಬೆರಳುಗಳನ್ನು ಮೂಗು, ಕಣ್ಣು, ಬಾಯಿಗಳತ್ತ ಒಯ್ಯದೇ ಇರುವುದು.
-ಯಥೇಚ್ಛವಾಗಿ ದ್ರವ ಆಹಾರ ಮತ್ತು ನೀರು ಸೇವಿಸುವುದು.
– ಗಂಟಲು ಕೆರೆತ, ಕಿರಿ ಕಿರಿಗೆ, ಜ್ವರ, ಮೈ ಕೈ ನೋವು ಕಾಣಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು.
– ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸುವುದು.
– ಮೂಗು, ಬಾಯಿ ಮುಚ್ಚುವಂತೆ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸುವುದು.
-ಪ್ರಾಣಿ ಸಾಕಾಣಿಕೆ ಕೇಂದ್ರ, ಮಾರಾಟ ಕೇಂದ್ರ, ಕಸಾಯಿಖಾನೆಗೆ ಹೋಗಬಾರದು.
-ಪ್ರಾಣಿಗಳನ್ನು ಹತ್ತಿರದಿಂದ ಮುದ್ದಿಸಬಾರದು.
-ಡಾ. ಕರವೀರಪ್ರಭು ಕ್ಯಾಲಕೊಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.