ಮತ್ತೆ ಮಾತಾಡಿತು ಚೈತ್ರ
Team Udayavani, Jan 25, 2017, 2:41 PM IST
ಹಳ್ಳಿಕೇರಿ ಹೀರೋಯಿನ್ ಅಡುಗೆಮನೆ ಹುಡುಗಿ ಆಗಿದ್ದು ಹೇಗೆ?
“ಖುಷಿ’, ” ಪ್ರೀತಿಗಾಗಿ’ ಸೇರಿದಂತೆ ಹದಿನೈದಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಚೈತ್ರಾ ಹಳ್ಳಿಕೇರಿ ನಂತರ ವಿವಾಹವಾಗಿ ಬ್ರೇಕ್ ತಗೊಂಡ್ರು. ಈಗ ಹನ್ನೊಂದು ವರ್ಷಗಳ ನಂತರ ಚೈತ್ರಾ ಪೋತ್ರಾಜು ಎಂಬ ಹೆಸರಲ್ಲಿ ಮತ್ತೆ ಕ್ಯಾಮರಾ ಫೇಸ್ ಮಾಡಿದ್ದಾರೆ. ಕಲರ್ಸ್ ಕನ್ನಡದ “ಸ್ಟಾರ್ ಸವಿರುಚಿ’ ಕಾರ್ಯಕ್ರಮ ನಿರೂಪಕಿಯಾಗಿ ಮೂವತ್ತು ಎಪಿಸೋಡ್ ಪೂರೈಸಿದ್ದಾರೆ. ಈ ನಡುವೆ ರಾಷ್ಟ್ರಮಟ್ಟದ “ಮಿಸ್ಸೆಸ್ ಇಂಡಿಯಾ’ ಸ್ಪರ್ಧೆಯಲ್ಲಿ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. “ಮಿಸೆಸ್ ಬ್ಯೂಟಿಫುಲ್ ಫೇಸ್’ ಎಂಬ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳು ದೇವ್, ದೇವಯಾನಿ ಹಾಗೂ ಪತಿ ಬಾಲಾಜಿ ಜೊತೆಗೆ ಲೈಫ್ಜರ್ನಿ ಮುಂದುವರಿಸಿರುವ ಚೈತ್ರಾ “ಸೆಲೆಬ್ರಿಟಿ ಕಿಚನ್’ ನಲ್ಲಿ ಮಾತನಾಡಿದ್ದಾರೆ.
*
“ಅಮ್ಮಾ ನಾನೂ ನಿನ್ ಹಂಗೆ ಆ್ಯಕ್ಟರ್ ಆಗ್ಬೇಕು, ಡ್ರಾಮಾ ಕ್ಲಾಸ್‌ಗೆ ಸೇರೊಳ್ಳಾ?’ ಅಂತಾಳೆ ಪುಟ್ಟ ಮಗಳು ದೇವಯಾನಿ.
ಇಲ್ಲಿಯವರೆಗೂ ತನ್ನ ಜೊತೆಗೆ ಫ್ರೆಂಡ್ ಥರ ಇದ್ದ ಅಮ್ಮ ಇದ್ದಕ್ಕಿದ್ದ ಹಾಗೆ ಶೂಟಿಂಗ್ ಅಂತ ಹೊರಟಾಗ ಅವಳಿಗೆ ಆಶ್ಚರ್ಯ. ಅಲ್ಲಿಯವರೆಗೆ ಶೂಟಿಂಗ್ ಅನ್ನೋ ಶಬ್ಧ ಅವಳ ಕಿವಿಗೆ ಬಿದ್ದಿದ್ದಿಲ್ಲ. ಅಮ್ಮ ಆಗಾಗ ಶೂಟಿಂಗ್‌ಗೆ ಹೋಗುವಾಗ, ಅದು ಹೇಗಿರುತ್ತೆ? ಅಲ್ಲಿ ಯಾರ್ಯಾರಿರ್ತಾರೆ? ಅಂತ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳ್ತಾಳೆ. ಸ್ವಲ್ಪ ದಿನ ಬಿಟ್ಟು ಅಮ್ಮನನ್ನು ಟಿವಿಯಲ್ಲಿ ಕಂಡಾಗ ಖುಷಿಯೋ ಖುಷಿ, ತಬ್ಬಿ ಮುತ್ತಿಡುತ್ತಾಳೆ.
ನೀವು ಕಲರ್ ಕನ್ನಡದಲ್ಲಿ “ಸ್ಟಾರ್ ಸವಿರುಚಿ’ ಕಾರ್ಯಕ್ರಮ ನೋಡಿದ್ರೆ ಅದರ ನಿರೂಪಕಿ ಚೈತ್ರಾ ಪೋತ್ರಾಜ್‌ನ್ನೂ ನೋಡಿರಿ¤àರಿ. ಎತ್ತರ ನಿಲುವಿನ ಸಾಫಾrಗಿ ಮಾತಾಡೋ ಚೆಂದದ ಹುಡುಗಿ ಇಬ್ಬರು ಮಕ್ಕಳ ತಾಯಿ. ಮಕ್ಕಳ ಜೊತೆ ಫ್ರೆಂಡ್ ಥರ ಇರೋ ಅಮ್ಮ. ಮದುವೆ ಆದಮೇಲೆ ಚಿತ್ರರಂಗದಿಂದ ದೂರ ಸರಿದಿದ್ದಾಯ್ತು. ಫ್ಯಾಮಿಲಿ ಮಕ್ಕಳು ಅಂತ ಮುಳುಗಿ ಹೋಗಿದ್ದಾಯ್ತು. ಆ ನಡುವೆ ರಾಷ್ಟ್ರಮಟ್ಟದ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಭಾಗವಹಿಸಿ, ಟಾಪ್ 5ನಲ್ಲಿ ಮಿಂಚಿದ್ದಾಗಿದೆ. ಈಗ ಮತ್ತೆ ನಟನೆಯ ಪ್ರೀತಿ ಆವರಿಸಿಕೊಂಡಿದೆ. ಬಹಳ ದಿನಗಳಿಂದ ಅವಕಾಶಕ್ಕೆ ಕಾಯ್ತಿದ್ದವರಿಗೆ “ಸ್ಟಾರ್ ಸವಿರುಚಿ’ ನಿರೂಪಣೆಯ ಹೊಣೆ ಸಿಕ್ಕಿತು. ಅಲ್ಲಿ ಕಾಣಿಸಿಕೊಂಡಿದ್ದೇ ಸೀರಿಯಲ್‌ನಿಂದ ಆಫರ್ ಬರಲಾರಂಭಿಸಿದೆ.
– ಹನ್ನೊಂದು ವರ್ಷಗಳ ನಂತರ ಮತ್ತೆ ಕ್ಯಾಮರ ಫೇಸ್ ಮಾಡಿದ್ದು ಬಹಳ ಎಕ್ಸೆ„ಟಿಂಗ್ ಆಗಿರಬೇಕಲ್ವಾ?
ಅಫ್ಕೋರ್ಸ್, ಬಹಳ ಎಕ್ಸಾಟಿಂಗ್ ಆಗಿತ್ತು. ಜೊತೆಗೆ ಗೊಂದಲ, ನರ್ವಸ್‌ನೆಸ್ ಇತ್ತು. ಬಹಳ ಸಮಯ ಆಯ್ತಲ್ಲ ಕ್ಯಾಮರ ಫೇಸ್ ಮಾಡಿ, ಒಂಥರ ಟೆನ್ಶನ್ ಇತ್ತು. ಈ ವರ್ಷಗಳಲ್ಲಿ ಟೆಕ್ನಾಲಜಿ ಬಹಳ ಮುಂದುವರಿದಿದೆ. ನಮಗೆಲ್ಲ ಟಾಕ್‌ಬ್ಯಾಕ್ ಇರಲಿಲ್ಲ. ಅದನ್ನ ಹಾಕ್ಕೊಂಡ್ರೆ ಕಮಾಂಡ್ ಜೊತೆಗೆ ಹಿಂದೆ ಮಾತಾಡೊದೆಲ್ಲ ಕೇಳ್ತಾ ಇರುತ್ತೆ, ಅದನ್ನು ಕೇಳ್ತಾ ಹೇಳ್ಬೇಕಾಗಿರೋದೇ ಮರೆತುಹೋಗುತ್ತೆ. ಹಾಗಾಗಿ ಬಹಳ ಟೇಕ್ ತಗೊಂಡೆ, ಪಾಪ ಎಲ್ಲರೂ ಕೂಲಾಗಿದ್ರು. ಸಣ್ಣ ಸಿಡಿಮಿಡಿ ತೋರಿಸಿದ್ರೂ ನನ್ನ ಟೆನ್ಶನ್ ಹೆಚ್ಚಾಗ್ತಿತ್ತು, ಅವ್ರು ಬಹಳ ತಾಳ್ಮೆಯಿಂದ ಸಹಕಾರ ಕೊಟ್ಟಕಾರಣ ಎರಡೇ ದಿನದಲ್ಲಿ ಸುಧಾರಿಸಿದೆ. ರಾತ್ರಿ ಎಂಟಕ್ಕೆಲ್ಲ ಪ್ಯಾಕ್‌ಅಪ್ ಆಗ್ತಿತ್ತು. ಅಲ್ಲಿಯವರೆಗೆ ಯಾವತ್ತೂ ಅಷ್ಟು ಬೇಗ ಪ್ಯಾಕ್‌ಅಪ್ ಆಗಿದ್ದಿಲ್ಲವಂತೆ.
– ನಿಮ್ಮ ಪ್ರೋಗ್ರಾಂನಲ್ಲಿರೋ ರೆಸಿಪಿಗಳನ್ನು ಮನೆಯಲ್ಲಿ ಟ್ರೈ ಮಾಡ್ತೀರಾ?
ಟ್ರೈ ಮಾಡ್ತೀನಿ, ಊಟ್ ಆ್ಯಪ್‌ನಲ್ಲಿ ನಾವಿಲ್ಲಿ ಮಾಡಿರೋ ರೆಸಿಪಿಗಳನ್ನೇ ನೋಡ್ಕೊಂಡು ಮನೆಯಲ್ಲಿ ಪ್ರಯೋಗ ಮಾಡ್ತೀನಿ.
– ಅಡುಗೆಯಲ್ಲಿ ಮೊದಲೇ ಆಸಕ್ತಿ ಇತ್ತಾ ಅಥವಾ ಕಾರ್ಯಕ್ರಮ ನಿರೂಪಣೆ ಮಾಡ್ತಾ ಇಂಟ್ರೆಸ್ಟ್ ಬಂದಿದ್ದಾ?
ಮದುವೆ ಆದ್ಮೇಲೆ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿಯವರೆಗೆ ಮನೆಯ ಆ ಒಂದು ಭಾಗಕ್ಕೆ ನನ್ನ ಭೇಟಿ ಬಹಳ ಕಡಿಮೆ ಇರಿ¤ತ್ತು. ನಮ್ಮದು ಇಂಟರ್‌ಕ್ಯಾಸ್ಟ್ ಮದುವೆ, ನಮ್ಮದು ಶುದ್ಧ ಸಸ್ಯಾಹಾರಿ ಕುಟುಂಬ. ಅವರ ಮನೆಯಲ್ಲಿ ನಾನ್‌ವೆಜ್ ಪ್ರಿಯರೇ ಹೆಚ್ಚು. ಮದುವೆ ಆದಮೇಲೆ ವೆಜಿಟೇರಿಯನ್ ಜೊತೆಗೆ ನಾನ್‌ವೆಜ್ ಅಡುಗೆ ಮಾಡೋದನ್ನೂ ಕಲಿತೆ.
– ನಾನ್ ವೆಜ್ ಫಸ್ಟ್ ತಿಂದಿದ್ದು ಹೇಗಿತ್ತು?
ನನ್ನ ಹಸ್ಬೆಂಡ್ ಈ ವಿಚಾರದಲ್ಲಿ ಬಹಳ ತಲೆ ಓಡಿಸಿರಬೇಕು, ಬೆಸ್ಟ್ ಹೊಟೇಲ್‌ಗೆ ಕರೊRಂಡು ಹೋಗಿ ಅಲ್ಲಿನ ಬೆಸ್ಟ್ ನಾನ್‌ವೆಜ್ ಐಟಂನ್ನ ತರಿಸಿದ್ರು. ನೋಡಿದ್ರೆ ತಿನ್ಬೇಕು ಅನಿಸೋ ಹಾಗಿತ್ತು. ಮೊದಲ ಸಲ ರುಚಿ ನೋಡಿದಾಗ ಸಖತ್ತಾಗಿತ್ತು ಅನಿಸಿತು, ಅಂಥ ಹೊಟೇಲ್‌ಗಳಲ್ಲಿ ನಾನ್‌ವೆಜ್ ತಿಂದು ತಿಂದೂ ಅಭ್ಯಾಸ ಆಯ್ತು. ಇನ್ನು ಮದ್ವೆ ಆದ್ಮೇಲೆ ಮನೆಯಲ್ಲೂ ಅಡುಗೆ ಮಾಡ್ಬೇಕಿತ್ತಲ್ಲಾ, ಮೊದ ಮೊದಲು ಬಹಳ ಹಿಂಸೆ ಆಗೋದು. ನಂಗೆ ಅದನ್ನ ಕೈಯಿಂದ ಮುಟ್ಟಲಿಕ್ಕೆ ಒಂಥರ. ದಪ್ಪದ ದೊಡ್ಡ ಗ್ಲೌಸ್ ಹಾಕ್ಕೊಂಡು ಅಡುಗೆ ಮಾಡ್ತಿದ್ದೆ. ಕೆಲಸದವ್ರು ಬರಲಿಲ್ಲ ಅಂದ್ರೆ ಮಾತ್ರ ಈ ಕೆಲಸ, ಇಲ್ಲಾಂದರೆ ಅವರೇ ಕ್ಲೀನ್ ಮಾಡಿ, ಕಟ್ ಮಾಡಿ ಕೊಡ್ತಿದ್ರು. ಆಮೇಲೆ ರೂಢಿಯಾಯ್ತು, ಈಗ ಕ್ರಾಬ್‌ನ್ನೂ ಕೂಡ ಕುಟ್ಟಿ, ಮಾಂಸ ತೆಗೆದು ಅಡುಗೆ ಮಾಡ್ತೀನಿ. ನಾನ್‌ವೆಜ್‌ನ್ನ ಇಷ್ಟಪಟ್ಟು ತಿಂತೀನಿ, ಅಡುಗೆಯನ್ನೂ ಖುಷಿ ಖುಷಿಯಾಗಿ ಮಾಡ್ತೀನಿ.
– ಮೊದಲು ಅಡುಗೆ ಮಾಡಿದ್ದು?
ಅದು ಮದುವೆಗೂ ಮೊದಲೇ, ಸಂಕ್ರಾಂತಿ ಹಬ್ಬದ ಸಮಯ. ನನ್ನ ಭಾವಿ ಪತಿಗೋಸ್ಕರ ಅವರ ಅಕ್ಕನ ಹತ್ರ ಕೇಳಿ ಪೊಂಗಲ್ ಮಾಡಿದ್ದೆ, ಸ್ವೀಟ್, ಖಾರ ಎರಡೂ ಮಾಡಿಕೊಟ್ಟಿದ್ದೆ. ಅದೇ ನಾನು ಮಾಡಿದ ಮೊದಲ ಅಡುಗೆ. “ಹೇಗಿತ್ತು?’ ಅಂತ ಅವ್ರನ್ನು ಕೇಳಿದ್ರೆ, “ಎಷ್ಟಾದ್ರೂ ನನ್ನ ಸಿಸ್ಟರ್ ಹೇಳ್ಕೊಟ್ಟಿದಲ್ವಾ, ರುಚಿಯಾಗಿತ್ತು’ ಅಂದ್ರು! ಅದೂ ನಿಜನೇ ಅವರ ಅಕ್ಕ ಸಖತ್ತಾಗಿ ಅಡುಗೆ ಮಾಡ್ತಾರೆ.
– ಮನೆಯಲ್ಲಿ ನಿಮ್ಮ ಅಡುಗೆಯಲ್ಲಿ ಸ್ವಂತದ್ದೆಷ್ಟು, ಆನ್‌ಲೈನ್‌ದೆಷ್ಟು?
ಸ್ವಂತದ್ದೇನಿಲ್ಲ. ಎಲ್ಲ ಆನ್‌ಲೈನ್ ನೋಡ್ಕೊಂಡೇ ಮಾಡೋದು. ಊಟ್‌ಆ್ಯಪ್ ನೋಡ್ಕೊಂಡು ಹೊಸ ಹೊಸ ವೆರೈಟಿ ಮಾಡ್ತಿರಿ¤àನಿ.
ಬೆಳಗ್ಗೆ ದೋಸೆ, ಉಪ್ಪಿಟ್ಟು, ಶ್ಯಾವಿಗೆ, ಚಿತ್ರಾನ್ನ, ಉಸುಲಿ ಎಲ್ಲ ಮಾಡ್ತೀನಿ. ಬಹಳ ರೆಸಿಪಿ ಗೊತ್ತು ನಂಗೆ
– ನಿಮ್ಮ ಪ್ರಯೋಗಕ್ಕೆ ಮನೆಯವರ ಪ್ರತಿಕ್ರಿಯೆ ಹೇಗಿರುತ್ತೆ?
ಅಯ್ಯೋ, ನನ್ನ ಕೈ ರುಚಿ ಚೆನ್ನಾಗಿರುತ್ತೆ. ಉಪ್ಪು, ಖಾರ ಹಾಕೋದ್ರಲ್ಲಿ ಯಾವತ್ತೂ ಆಚೀಚೆ ಆಗಲ್ಲ. ಮನೆಯವ್ರಿಗೆ ಮಕ್ಕಳಿಗೆ ಎಲ್ಲರಿಗೂ ನಾನು ಮಾಡೋ ಅಡುಗೆ ಇಷ್ಟ. ಮಕ್ಕಳಿಗೋಸ್ಕರ ಖಾರ ಕಮ್ಮಿ ಹಾಕ್ತೀನಿ.
– ಶೂಟಿಂಗ್ ಇದ್ರೆ ಮಕ್ಕಳ ಜವಾಬ್ದಾರಿ ಯಾರ ಮೇಲಿರುತ್ತೆ?
ನನ್ನ ಹಸ್ಬೆಂಡ್, ಅಮ್ಮ ಯಾರಾದ್ರೂ ಇರ್ತಾರೆ, ಅವ್ರನ್ನು ಮಾತ್ರ ಅಂತ ಬಿಡಲ್ಲ.
– ಸ್ಟಾರ್ ಸವಿರುಚಿಯಲ್ಲಿ ಯಾರ್ ಮಾಡಿರೋ ಅಡುಗೆ ಸಖತ್ ಟೇಸ್ಟಿಯಾಗಿತ್ತು?
ವಿಜಯ ರಾಘವೇಂದ್ರ ಅವರ ಅಕ್ಕ ಮಾಡಿದ ಬಿರಿಯಾನಿ ಸಖತ್ತಾಗಿತ್ತು, ಧರ್ಮ ಅವರ ಅಮ್ಮ ಮೀನು ಸಾರು ಮಾಡಿದ್ರು, ರಾಹುಲ್ ಶ್ರಾಮ್‌ಗಡ್ಡೆ ಮಾಡಿದ್ರು. ಸಖತ್ ಟೇಸ್ಟಿಯಾಗಿತ್ತು.
ಚಿತ್ರರಂಗ ಬಿಟ್ಟ ಮೇಲೆ ಯಾರ ಸಂಪರ್ಕವೂ ಇರಲಿಲ್ಲ. ನನ್ನ ಅದೃಷ್ಟಕ್ಕೆ ಸ್ಟಾರ್ ಸವಿರುಚಿಗೆ ಗೆಸ್ಟಾಗಿ ಬಂದವೆÅಲ್ಲ ನನ್ನ ಹಳೆಯ ಪರಿಚಯದವರೇ. ಇಂಡಸ್ಟ್ರಿಯನ್ನು ಮತ್ತೆ ಕಂಡಹಾಗಾಯ್ತು. ಖುಷಿಯಾಯ್ತು.
– ಚೈತ್ರಾ ಪೋತ್ರಾಜ್, ನಟಿ
*
ನಂಗೆ ಕಿರುತೆರೆ, ಹಿರಿತೆರೆ ಅಂತಿಲ್ಲ. ನಟನೆಗೆ ಯಾವ ಬೌಂಡರಿಯನ್ನೂ ಹಾಕ್ಕೊಂಡಿಲ್ಲ. ಕಿರುತೆರೆಯಿಂದ ಆಫರ್‌ಗಳು ಬರುತ್ತಿವೆ, ಆದರೆ ಸಿನಿಮಾದಿಂದ ಬರಿ¤ಲ್ಲ, ಮೋಸ್ಟಿ$É ನಾನು ಹಳಬಳಾದನೇನೋ?
– ಚೈತ್ರಾ ಪೋತ್ರಾಜ್, ನಟಿ
– ಪ್ರಿಯಾ ಕೆರ್ವಾಶೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.