ಮಕ್ಕಳಿಗೆ ಸ್ವಚ್ಛತೆ ಪಾಠ
Team Udayavani, Mar 18, 2020, 4:22 AM IST
ಮಕ್ಕಳಿಗೆ ಪರೀಕ್ಷೆಗಳು ನಡೆಯುವ ಮುನ್ನವೇ ಕೊರೊನಾ ಕಾರಣದಿಂದ ರಜೆ ಸಿಕ್ಕಿಬಿಟ್ಟಿದೆ. ಇದು ನೆಮ್ಮದಿಯ ವಿಷಯವಾದರೂ, ಮಕ್ಕಳು ಬಹುಬೇಗನೆ ರೋಗ ರುಜಿನಗಳಿಗೆ ತುತ್ತಾಗುವುದರಿಂದ, ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಕೇವಲ ಕೊರೊನಾ ಅಷ್ಟೇ ಅಲ್ಲ; ಸಾಂಕ್ರಾಮಿಕ ರೋಗಗಳು ಹಾಗೂ ಅವು ಹರಡುವ ರೀತಿಯನ್ನು ಮಕ್ಕಳಿಗೆ ವಿವರಿಸುವುದು, ಸ್ವಚ್ಛತೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯ.
-ಪ್ರತಿನಿತ್ಯ ಶಾಲೆಯಿಂದ ಬಂದಕೂಡಲೇ ಕೈ-ಕಾಲು ತೊಳೆದುಕೊಳ್ಳುವ ಅಗತ್ಯವನ್ನು ಮನಗಾಣಿಸಿ.
– ಊಟಕ್ಕೂ ಮೊದಲು ತಪ್ಪದೇ ಕೈ ತೊಳೆಯುವ ಅಭ್ಯಾಸ ಬೆಳೆಸಿ.
-ಮಕ್ಕಳ ಕಿಸೆ/ ಬ್ಯಾಗ್‌ನಲ್ಲಿ ಕರವಸ್ತ್ರ ಇಡಿ.
-ಈಗ ಕೊರೊನಾ ಹಬ್ಬುತ್ತಿರುವುದರಿಂದ, ಕೆಮ್ಮಿದಾಗ, ಸೀನಿದಾಗ ತಪ್ಪದೆ ಸೋಪು/ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಲು ಹೇಳಿ.
-ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಕಡ್ಡಾಯವಾಗಿ ಅಡ್ಡ ಹಿಡಿಯಲು ತಿಳಿಸಿ ಕೊಡಿ.
-ಹೊರಗೆ ಹೊರಡುವಾಗ ಮುಖಕ್ಕೆ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬೇಕು.
-ಮನೆಯಿಂದ ಹೊರಗೆ ಹೋಗುವುದಿದ್ದರೆ ಸ್ಯಾನಿಟೈಸರ್ ಜೊತೆಗಿರಲಿ. ತಿನ್ನುವಾಗ, ಮುಖ-ಕಣ್ಣು ಮುಟ್ಟಿಕೊಳ್ಳುವ ಮುನ್ನ ಕೈ ತೊಳೆಯಲು ಹೇಳಿ.
-ಬಸ್, ರೈಲು, ಮೆಟ್ರೋನಂಥ ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವಾಗ ಜನರಿಂದ ಆದಷ್ಟು ದೂರ ನಿಲ್ಲಲು, ಸೀಟು, ಹ್ಯಾಂಡಲ್ ಅಥವಾ ಇತರೆ ವಸ್ತುಗಳನ್ನು ಮುಟ್ಟಬಾರದೆಂದು ತಿಳಿಸಿ.
-ಬಳಸಿದ ಟಿಶ್ಯೂ ಪೇಪರ್ ಅನ್ನು ಅತ್ತಿತ್ತ ಎಸೆಯದೆ, ಕಸದಬುಟ್ಟಿಯಲ್ಲೇ ಎಸೆಯಲು ಹೇಳಿ.
– ಪಾದರಕ್ಷೆ ಧರಿಸದೆ ಹೊರಗೆ ಅಡ್ಡಾಡದಂತೆ ತಡೆಯಿರಿ.
-ಬೀದಿ ಬದಿ ಮಾರುವ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಲು ಕೊಡಬೇಡಿ.
ಈ ಸ್ವಚ್ಛತಾ ಕ್ರಮಗಳು ಕೇವಲ ಕೊರೊನಾ ಅಷ್ಟೇ ಅಲ್ಲ, ಎಲ್ಲ ಬಗೆಯ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ದೂರ ಇಡುತ್ತವೆ. ಹಾಗಾಗಿ, ಸ್ವತ್ಛತೆಯ ಈ ಪರಿಪಾಠಗಳನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ರೂಢಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.