ಕಿವಿಗೂ ಕ್ಲಿಪ್ಪು!
Team Udayavani, Jun 13, 2018, 6:00 AM IST
ಮದುವೆಗಳಲ್ಲಿ, ಶಾಲೆ- ಕಾಲೇಜುಗಳ ಎತ್ನಿಕ್ ಡೇ, ಕಾಲೇಜ್ ಡೇಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಮಿಂಚುವ ಹುಡುಗಿಯರಿಗೆ ಈ ಕಿವಿಯೋಲೆ ಅಚ್ಚುಮೆಚ್ಚಿನದ್ದು. ಆನ್‌ಲೈನ್‌ನಲ್ಲಿಯೂ ಲಭ್ಯ ಇರುವ ಕಾರಣ, ಪ್ರೀತಿಪಾತ್ರರಿಗೆ ಇಯರ್ ಕ್ಲಿಪ್‌ಗ್ಳನ್ನು ಉಡುಗೊರೆಯಾಗಿಯೂ ನೀಡಬಹುದು…
ಮಾರುಕಟ್ಟೆಯಲ್ಲಿ ಲಭ್ಯವಿರುವ ಬಗೆಬಗೆಯ ವಿನ್ಯಾಸದ ಕಿವಿಯೋಲೆಗಳನ್ನು ಕಂಡಾಗಲೆಲ್ಲ, ಇದನ್ನು ಕೊಂಡುಕೊಳ್ಳಬೇಕು, ಅದನ್ನೂ ಕೊಂಡುಕೊಳ್ಳಬೇಕು ಎಂಬ ಆಸೆ ಹುಟ್ಟುತ್ತೆ. ಆದರೆ ಥರಥರದ ಕಿವಿಯೋಲೆಗಳನ್ನು ತೊಡಬೇಕೆಂಬ ಆಸೆಯಿಂದ, ಅದೆಷ್ಟು ಬಾರಿ ಕಿವಿ ಚುಚ್ಚಿಸಿಕೊಳ್ಳೋಕೆ ಸಾಧ್ಯ ಹೇಳಿ? ಕಿವಿ ಚುಚ್ಚಿಸಿಕೊಳ್ಳಲು ಅಂಜುವವರು ಅಥವಾ ಇಷ್ಟ ಇಲ್ಲದವರು ಏನು ಮಾಡಬೇಕು ಎಂಬ ಯೋಚನೆಯೇ ಬೇಡ. ಅವರಿಗಾಗಿಯೇ ಈಗ ಮಾರುಕಟ್ಟೆಗೆ ಲಗ್ಗೆ ಹಾಕಿವೆ ಇಯರ್ ಕ್ಲಿಪ್‌ಗ್ಳು.
ಇಯರ್‌ಗೂ ಬಂತೇ ಕ್ಲಿಪ್?
ಹೇರ್ ಕ್ಲಿಪ್ ಬಗ್ಗೆ ಗೊತ್ತು. ಏನಿದು ಇಯರ್ ಕ್ಲಿಪ್ ಅಂತೀರಾ? ಹುಕ್‌ನಂತೆ ಕಾಣುವ ಈ ಕ್ಲಿಪ್‌ಗ್ಳನ್ನು ಕಿವಿಯ ಮೇಲ್ಭಾಗಕ್ಕೆ ಒತ್ತಿ ಹಾಕಿಕೊಂಡರಾಯಿತು. ಪ್ರಸ್ ಟೈಪ್ ಮೂಗುತಿ ಇದ್ದ ಹಾಗೆ, ಇದು ಪ್ರಸ್ ಟೈಪ್ ಕಿವಿಯೋಲೆ! ಹಾಗಾಗಿ ಕಿವಿ ಚುಚ್ಚಿಸಿಕೊಳ್ಳುವ ಬದಲಿಗೆ ಇಯರ್ ಕ್ಲಿಪ್ ಧರಿಸಿದರೆ ಆಗೋಯ್ತು, ಸಿಂಪಲ…!
ಇದೇನು ಹೊಸದಲ್ಲ…
ಇಯರ್ ಕ್ಲಿಪ್‌ಗ್ಳು ಲೇಟೆಸ್ಟ್ ಫ್ಯಾಶನ್ ಅನಿಸಿಕೊಂಡರೂ, ಅದಷ್ಟೇ ನಿಜವಲ್ಲ. ಅನಾದಿ ಕಾಲದಿಂದಲೂ ಹೆಣ್ಣು ಮಕ್ಕಳು ಇಯರ್ ಕ್ಲಿಪ್‌ಗ್ಳನ್ನು ತೊಡುತ್ತಿ¨ªಾರೆ. ಅಜ್ಜಿ, ಅತ್ತೆ, ಅಮ್ಮಂದಿರು ತೊಡುತ್ತಿದ್ದ ಕೊಪ್ಪು, ಈಗ ಮೇಕ್‌ಓವರ್ ಪಡೆದು ಇಯರ್ ಕ್ಲಿಪ್ ಆಗಿದೆ. ವಜ್ರ, ಚಿನ್ನ, ಬೆಳ್ಳಿ, ಮುತ್ತು, ಹವಳ, ರತ್ನಗಳಿಗೆ ಸೀಮಿತವಾಗದೆ, ಪ್ಲಾಸ್ಟಿಕ್, ಗಾಜು, ತಾಮ್ರ, ಕಂಚು ಹಾಗೂ ಮರದ ತುಂಡಿನಿಂದ ತಯಾರಾದ ಇಯರ್ ಕ್ಲಿಪ್‌ಗ್ಳೂ ಈಗ ಲಭ್ಯ.
ವಿಧ ವಿಧದ ವಿನ್ಯಾಸ
ಹೂವು, ಸೂರ್ಯ, ಚಂದ್ರ, ನಕ್ಷತ್ರದ ಆಕೃತಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಯರ್ ಕ್ಲಿಪ್ ಇದೀಗ ಅಕ್ಷರಗಳು ಮತ್ತು ಪದಗಳ ಆಕೃತಿಯಲ್ಲೂ ಸಿಗುತ್ತಿವೆ. ನವಿಲು ಗರಿ, ಬುರುಡೆ, ಘಂಟೆ, ಉರ್ದು ಲಿಪಿ, ಚೀನೀ ಅಕ್ಷರಗಳು, ನಿಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು, ಜನ್ಮ ದಿನಾಂಕ, ಶ್ರೀ, ಓಂ, ಸ್ವಸ್ತಿಕ, ಶಿಲುಬೆಯ ಆಕೃತಿ ಮುಂತಾದವುಗಳಿಂದ ಕೂಡಿದ ಇಯರ್ ಕ್ಲಿಪ್‌ಗ್ಳನ್ನು ತೊಟ್ಟು ಮಹಿಳೆಯರು ಮಿನುಗುತ್ತಿದ್ದಾರೆ. ಇಂಥದ್ದೇ ಅಕ್ಷರ ಅಥವಾ ಪದಗಳ ವಿನ್ಯಾಸದ ಇಯರ್ ಕ್ಲಿಪ್ ಬೇಕು ಎಂದರೆ, ಅದನ್ನೂ ಮಾಡಿಸಿಕೊಳ್ಳಬಹುದು.
ಹುಡುಗಿಯರಿಗೆ ಅಚ್ಚುಮೆಚ್ಚು
ಮದುವೆಗಳಲ್ಲಿ, ಶಾಲೆ- ಕಾಲೇಜುಗಳ ಎತ್ನಿಕ್ ಡೇ, ಕಾಲೇಜ್ ಡೇಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಮಿಂಚುವ ಹುಡುಗಿಯರಿಗೆ ಈ ಆಭರಣ ಅಚ್ಚುಮೆಚ್ಚಿನದ್ದು. ಪರ್ಸನಲೈ… ಹಾಗೂ ಕಸ್ಟಮೈ… ಇಯರ್ ಕ್ಲಿಪ್ ಮಾಡಿಕೊಡುವ ಅಂಗಡಿ ಮತ್ತು ಆನ್‌ಲೈನ್‌ನಲ್ಲಿಯೂ ಲಭ್ಯ ಇರುವ ಕಾರಣ, ಪ್ರೀತಿಪಾತ್ರರಿಗೆ ಇದನ್ನು ಉಡುಗೊರೆಯಾಗಿಯೂ ನೀಡಬಹುದು.
ಇಯರ್ ಕ್ಲಿಪ್‌ಗ್ೂ, ಇಯರ್ ಕಫ್ಗೂ ಏನು ವ್ಯತ್ಯಾಸ?
ಇಯರ್ ಕಫ್, ಕಿವಿಯಷ್ಟೇ ದೊಡ್ಡದಾಗಿದ್ದು, ಪೂರ್ತಿ ಕಿವಿಯನ್ನು ಮುಚ್ಚುತ್ತದೆ. ಆದರೆ, ಇಯರ್ ಕ್ಲಿಪ್, ಪೇಪರ್ ಕ್ಲಿಪ್ ನಂತೆ ಚಿಕ್ಕದಾಗಿದ್ದು, ಕಿವಿಯ ಮೇಲ್ಭಾಗದಲ್ಲಷ್ಟೇ ಕುಳಿತುಕೊಳ್ಳುತ್ತದೆ. ಗೆಜ್ಜೆಯಂಥ ಹ್ಯಾಂಗಿಂಗÕ… ಮತ್ತು ಟ್ಯಾಸೆಲ್ಸ… ಇರುವ ಇಯರ್ ಕ್ಲಿಪ್ ಸದ್ದು ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತದೆ.
ಕ್ಯೂಟ್ ಡಿಸೈನ್‌ಗಳಲ್ಲಿ ಕ್ಲಿಪ್
ಮಗುವಿನ ಪಾದದ ಆಕೃತಿಯ, ಪೆಟ್ ನೇಮ್ ಇರುವ ಇಯರ್ ಕ್ಲಿಪ್, ಶ್ವಾನ ಪ್ರಿಯರಿಗೆ ನಾಯಿ ಆಕೃತಿಯ, ಬೆಕ್ಕನ್ನು ಇಷ್ಟ ಪಡುವವರಿಗೆ ಬೆಕ್ಕಿನ ಆಕೃತಿಯ ಇಯರ್ ಕ್ಲಿಪ್… ಹೀಗೆ ಎಣಿಸಲು ಸಾಧ್ಯವಿಲ್ಲದಷ್ಟು ಆಯ್ಕೆಗಳು ಲಭ್ಯ ಇರುವ ಕಾರಣ, ಉಟ್ಟ ಉಡುಪಿಗೆ ಹೋಲುವ ಇಯರ್ ಕ್ಲಿಪ್ ತೊಡಬಹುದು. ಇನ್ನೇಕೆ ತಡ? ನಿಮ್ಮ ಬಳಿ ಇರುವ ಸಾಂಪ್ರದಾಯಿಕ ಕೊಪ್ಪು, ಪಡೆಯಲಿ ಹೊಸ ಟ್ವಿÓr…! ನಿಮಗಿಷ್ಟದ ಚಿತ್ರ ವಿಚಿತ್ರ ಇಯರ್ ಕ್ಲಿಪ್ ತೊಟ್ಟು, ಸ್ಟೈಲ್ ಸ್ಟೇಟ್‌ಮೆಂಟ್ ಮಾಡಿ…
– ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.