ಕೊಬ್ಬರಿ ಎಣ್ಣೆ ಕಮಾಲ್…
Team Udayavani, Oct 2, 2019, 3:00 AM IST
ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನೂ ಬದಲಾಗುವುದಿಲ್ಲ ಅಂತಾರೆ. ಆದರೆ, ಕೊಬ್ಬರಿ ಎಣ್ಣೆ ಹಚ್ಚಿದರೆ ಕೆಲವೊಂದು ಬದಲಾವಣೆಗಳನ್ನು ಕಾಣಬಹುದು ಅನ್ನುತ್ತದೆ ಆಯುರ್ವೇದ. ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿದರೆ ಏನೇನೆಲ್ಲಾ ಆಗಿಬಿಡುತ್ತೆ ಗೊತ್ತಾ?
* ಕೊಬ್ಬರಿ ಎಣ್ಣೆಯನ್ನು ಕೊಂಚ ಬಿಸಿ ಮಾಡಿ, ರಾತ್ರಿ ಮಲಗುವ ಮುನ್ನ ಕೂದಲಿಗೆ ಹಚ್ಚಿ, ಬೆಳಗ್ಗೆ ಸ್ನಾನ ಮಾಡಿದರೆ ಶುಷ್ಕ ಕೂದಲು ಮೃದುವಾಗುತ್ತದೆ.
* ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಟೀ ಟ್ರೀ ಆಯಿಲ್ (ಅಂಗಡಿಗಳಲ್ಲಿ ಸಿಗುತ್ತದೆ) ಬೆರೆಸಿ, ರಾತ್ರಿ ಮಲಗುವ ಮುನ್ನ ಕೂದಲಿನ ಬುಡಕ್ಕೆ ಹಚ್ಚಿದರೆ ತಲೆಹೊಟ್ಟು ಹೋಗುತ್ತದೆ.
* ಕೊಬ್ಬರಿ ಎಣ್ಣೆಗೆ ಟೀ ಟ್ರೀ ಆಯಿಲ್ ಬೆರೆಸಿ, ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿದರೆ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.
* ರಾತ್ರಿ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಸವರಿ, ಸಾಕ್ಸ್ ಹಾಕಿ ಮಲಗಿದರೆ, ಕಾಲಿನ ಬಿರುಕುನ ನೋವು ತಗ್ಗುತ್ತದೆ.
* ಬಾಯಿಯಲ್ಲಿ ಹುಣ್ಣಾದಾಗ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದರೆ, ಬೆಳಗಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ.
* ರಾತ್ರಿ ಬ್ರಷ್ ಮಾಡಿದ ನಂತರ, ಒಸಡಿಗೆ ಕೊಬ್ಬರಿ ಎಣ್ಣೆ ಸವರಿದರೆ ಹಲ್ಲುಗಳು ಗಟ್ಟಿಯಾಗುತ್ತವೆ. ಒಸಡಿನ ರಕ್ತಸ್ರಾವವೂ ನಿಲ್ಲುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.