ಸೌಂದರ್ಯ ಹೆಚ್ಚಿಸುವ ಕಾಸ್ಮೆಟಿಕ್ಸ್ ಸರ್ಜರಿ


Team Udayavani, May 4, 2017, 1:17 AM IST

Cosmetics-3-5.jpg

ಜನ್ಮತಃ ಸುಂದರಿ ಆಗುವ ಅದೃಷ್ಟ ಕೆಲವರಿಗಷ್ಟೇ. ಹಾಗಂತ ಚಿಂತಿಸುವ ಅಗತ್ಯವಿಲ್ಲ. ನಿಮಗಿಷ್ಟ ಬಂದಂತೆ ಅಂಗಸೌಂದರ್ಯವನ್ನು ಸರಿಪಡಿಸಿಕೊಳ್ಳಬಹುದು. ಆದರೆ, ಇದನ್ನೇ ಬಂಡವಾಳ ಆಗಿಸಿಕೊಂಡು ಸಮಾಜದಲ್ಲಿ ದಾರಿ ತಪ್ಪಿಸುವ ಕಾರ್ಯ ಸಾಗಿದೆ. ಅದರಿಂದ ದೂರಾಗಬೇಕಾದರೆ ಕೆಲವು ಸೂಕ್ಷ್ಮಗಳ, ಸೂಕ್ತ ವೈಜ್ಞಾನಿಕ ಪದ್ಧತಿಗಳ ಬಗ್ಗೆ ಗಮನಹರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಸಮಾಜದ ಎಚ್ಚರಿಕೆ ಗಂಟೆಯಾಗಿ ಕಾರ್ಯನಿರ್ವಹಿಸುತ್ತಿದೆ ಬೆಂಗಳೂರಿನ ರಾಜಾಜಿನಗರದ ಕರ್ಲ್ಸ್‌ ಆ್ಯಂಡ್‌ ಕರ್ವ್ಸ್- ಹೇರ್‌ ಟ್ರಾನ್ಸ್‌ಪ್ಲಾಂಟೇಷನ್‌ ಮತ್ತು ಕಾಸ್ಮೆಟಿಕ್‌ ಸರ್ಜರಿ ಸೆಂಟರ್‌. ‘ಸುಂದರ ದೇಹ, ಸುಂದರ ಮನಸ್ಸು, ಈ ಸೌಂದರ್ಯದಿಂದ ನೆಮ್ಮದಿ ಮತ್ತು ಆರೋಗ್ಯ ಈ ಎಲ್ಲವೂ ಒಂದಕ್ಕೊಂದು ಸಂಬಂಧವಿರುವುದನ್ನು ಅರಿತುಕೊಂಡೇ ಈ ಕಾಸ್ಮೆಟಿಕ್‌ ಸರ್ಜರಿ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಯಾವುದೇ ಪುರುಷ ಅಥವಾ ಮಹಿಳೆ ತಮ್ಮ ಜೀವನದಲ್ಲಿ ಕಳೆದುಕೊಂಡ ಆತ್ಮಗೌರವ, ಆತ್ಮವಿಶ್ವಾಸ ಪುನಃ ಪಡೆದುಕೊಳ್ಳಬಹುದು’ ಅಂತಾರೆ ಕರ್ಲ್ಸ್‌ ಆ್ಯಂಡ್‌ ಕರ್ವ್ಸ್ನ ಪ್ಲಾಸ್ಟಿಕ್‌ ಆ್ಯಂಡ್‌ ಕಾಸ್ಮೆಟಿಕ್‌ ಸರ್ಜನ್‌ ಮತ್ತು ಹೇರ್‌ ಟ್ರಾನ್ಸ್‌ಪ್ಲಾಂಟೇಷನ್‌ ತಜ್ಞ ಡಾ. ಎ.ಸಿ. ಗಿರೀಶ್‌. ಈ ಕುರಿತು ಉಪಯುಕ್ತ ಮಾಹಿತಿಗಳನ್ನು ಅವರು ಇಲ್ಲಿ ಹೇಳಿದ್ದಾರೆ.

ಕಾಸ್ಮೆಟಿಕ್‌ ಶಸ್ತ್ರಚಿಕಿತ್ಸೆ ಸುರಕ್ಷಿತವೇ?
ಖಂಡಿತವಾಗಿ ಕಾಸ್ಮೆಟಿಕ್‌ ಸರ್ಜರಿ (ಶಸ್ತ್ರಚಿಕಿತ್ಸೆ) ಸುರಕ್ಷಿತ ಎಂಬುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಬಹಳಷ್ಟು ವಿಧಾನಗಳಿರುತ್ತವೆ. ಇವುಗಳ ಮುಖ್ಯ ಉದ್ದೇಶ, ಯಾವುದೇ ವ್ಯಕ್ತಿಯ ಹುಟ್ಟಿನಿಂದ ಅಥವಾ ಪೆಟ್ಟಿನಿಂದಾದ ಅಥವಾ ಇನ್ನಿತರ ರೀತಿಯಿಂದಾದ ನ್ಯೂನತೆ, ಏರುಪೇರುಗಳನ್ನು ಸರಿಪಡಿಸುವ ವಿಧಾನವೇ ಕಾಸ್ಮೆಟಿಕ್‌ ಸರ್ಜರಿ. ತಲೆಯಿಂದ ಪಾದದವರೆಗೆ ಅನೇಕ ಥರದ ಕಾಸ್ಮೆಟಿಕ್‌ ಸರ್ಜರಿಗಳಿರುತ್ತವೆ. ಇಲ್ಲಿ ಮುಖ್ಯ ಅಂಶ, ಕಾಸ್ಮೆಟಿಕ್‌ ಸರ್ಜರಿಗಳಿಗೆ ಅರ್ಹ ವ್ಯಕ್ತಿಗಳು ಯಾರು ಎಂಬುದು. ಯಾವ್ಯಾವ ಕಾರಣಗಳಿಗೆ ಕಾಸ್ಮೆಟಿಕ್‌ ಸರ್ಜರಿ ಸಹಾಯಕವಾಗುತ್ತದೆ? ಸುಮಾರು 13ರಿಂದ 70 ವಯಸ್ಸಿನವರೆಗೆ ದೇಹದ ಯಾವುದೇ ರೀತಿಯ ಬಾಹ್ಯ ರೂಪದ ಏರುಪೇರುಗಳನ್ನು ಇಲ್ಲಿ ಸರಿಪಡಿಸಬಹುದು.

ಹೇರ್‌ ಟ್ರಾನ್ಸಪ್ಲಾಂಟೇಷನ್‌ (ಕೂದಲು ಕಸಿ): ತಲೆಯ ವಿಚಾರ ಬಂದಾಗ ಕೂದಲು ಕಸಿ ಒಂದು ಶಾಶ್ವತ ಪರಿಹಾರ. ಯಾವುದೇ ರೀತಿ ತೈಲಗಳು ಅಥವಾ ಮಾತ್ರೆಗಳ ಸೇವನೆಯಿಂದ ಕೂದಲು ಉದುರುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯ. ಹೊಸ ಕೂದಲ ಬೆಳವಣಿಗೆಗೆ ಇದು ಸಹಕಾರಿಯೂ ಆಗಿರುವುದಿಲ್ಲ. ಆದ್ದರಿಂದ ಕೂದಲ ಕಸಿ ಪುರುಷರಿಗಾಗಲಿ, ಮಹಿಳೆಯರಿಗಾಗಲಿ ಒಂದು ರೀತಿ ವರದಾನವೇ ಸರಿ ಎನ್ನುತ್ತಾರೆ ಡಾ. ಗಿರೀಶ್‌.

ಮುಖದ ಕಾಸ್ಮೆಟಿಕ್‌ ಸರ್ಜರಿ: ವಯಸ್ಸಿನಿಂದ ಬಂದಂಥ ಮುಖದ ಸುಕ್ಕುಗಳು, ಕಲೆಗಳು, ಗೆರೆಗಳ ನಿರ್ಮೂಲನೆ ಅಥವಾ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಚಿಕಿತ್ಸಾ ವಿಧಾನಗಳಿವೆ. ಫೇಸ್‌ಲಿಫ್ಟ್‌, ನೆಕ್‌ಲಿಫ್ಟ್‌, ಬ್ಲೆಫೆರೋಪ್ಲಾಸ್ಟಿ, ಕಣ್ಣು ರೆಪ್ಪೆಗಳ ಸೌಂದರ್ಯವರ್ಧನೆ, ಕೊಬ್ಬಿನ ಕಸಿ (ಫ್ಯಾಟ್‌ ಗ್ರಾಫ್ಟಿಂಗ್‌), ಡಿಂಪಲ್‌ ಕ್ರಿಯೇಷನ್‌ (ಗುಳಿ) ಹಾಗೂ ತುಟಿಯ ಏರುಪೇರುಗಳನ್ನು ಮುಖದ ಅಂದಕ್ಕೆ ತಕ್ಕಂತೆ ಸರಿಪಡಿಸುವುದು, ದಪ್ಪನೆ ತುಟಿಯನ್ನು ಸಣ್ಣದಾಗಿಸುವುದು ಅಥವಾ ಸಣ್ಣ ತುಟಿಯನ್ನು ಮುಖಕ್ಕನುಗುಣವಾಗಿ ಹಿಗ್ಗಿಸುವ ವಿಧಾನಗಳು ಜನಪ್ರಿಯ. ಅದರಲ್ಲಿ ಬಹುಮುಖ್ಯವಾದದ್ದು, ಮುಖದ ಸೌಂದರ್ಯವನ್ನು ಹೆಚ್ಚಿಸುವ ಕಾಸ್ಮೆಟಿಕ್‌ ಸರ್ಜರಿ. ಅಂದರೆ ಮೂಗಿನ ವಿಕಾರತೆ (ರೈನೊ ಪ್ಲಾಸ್ಟಿ) ಸರಿಪಡಿಸುವುದು.

ರೈನೊ ಪ್ಲಾಸ್ಟಿ: ಈ ವಿಧಾನದಲ್ಲಿ ಮೂಗಿನ ಆಕಾರದಲ್ಲಾಗುವ ಬದಲಾವಣೆ ಅಥವಾ ಪೆಟ್ಟಿನಿಂದಾಗುವ ತೊಂದರೆಗಳು ಅಥವಾ ಉಸಿರಾಟದ ತೊಂದರೆಗಳಿದ್ದಲ್ಲಿ ಇವುಗಳನ್ನು ಸರಿಪಡಿಸಿ ಮುಖಕ್ಕೆ ಅನುಗುಣವಾಗಿ ಅಂದ ಹೆಚ್ಚಿಸುವಂತೆ ಮಾಡಲಾಗುತ್ತದೆ.

ಬೊಜ್ಜಿನ ಸಮಸ್ಯೆ: ಬೊಜ್ಜು ನಿವಾರಣೆಗೆ ಪರಿಹಾರ ಹುಡುಕಲು ಹೋಗಿ ಹೈರಾಣಾದವರೇ ಹೆಚ್ಚು. ಅಂಥವರಿಗೆ ‘ಲೈಪೋಸಕ್ಷನ್‌’ ಎಂಬುದು ಶಾಶ್ವತ ಪರಿಹಾರ. ದೇಹದ ಯಾವುದೇ ಭಾಗದಲ್ಲಿನ ಬೊಜ್ಜು ಇಳಿಸುವುದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಸರಿಯಾದ ಆಕಾರ ಪಡೆಯಲು ಇದು ಸಹಕಾರಿ.

ಗೈನೆಕೋಮಾಸ್ಟಿಯಾ: ಹುಡುಗರಿಂದ ವಯಸ್ಸಾದವರಿಗೂ ಕಾಡುವ ಒಂದು ಮುಜುಗರ ಸಂಗತಿ ‘ಗೈನೆಕೋಮಾಸ್ಟಿಯಾ’. ಇದು ಪುರುಷರಿಗೆ ಸಂಬಂಧಪಟ್ಟ ಸ್ತನಗಳ ಸಮಸ್ಯೆ. ಎದೆಯ ಭಾಗ ಹೆಚ್ಚು ಉಬ್ಬಿದಂತಾಗಿರುತ್ತದೆ. ಇದೂ ಒಂದು ಸಾಮಾಜಿಕ ಪಿಡುಗಾಗಿದ್ದು, ಪುರುಷರೂ ಇದರಿಂದ ಖನ್ನತೆಗೊಳಗಾಗಿರುತ್ತಾರೆ. ಇಂಥವರಿಗೆ ಕಾಸ್ಮೆಟಿಕ್‌ ಸರ್ಜರಿ ಮೂಲಕ ಪರಿಹಾರ ಕಲ್ಪಿಸಲಾಗುವುದು.

ಸಿಲಿಕಾನ್‌ ಇಂಪ್ಲಾಂಟ್‌: ಮಹಿಳೆಯರಿಗೆ ಸ್ತನಗಳ ಸೌಂದರ್ಯವರ್ಧನೆ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಸ್ತನಗಳ ಗಾತ್ರ ಹೆಚ್ಚಿಸುವುದು, ತಗ್ಗಿಸುವುದು, ದೇಹದ ಗಾತ್ರಕ್ಕನುಗುಣವಾಗಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಲ್ಲಿ ಪ್ರಮುಖವಾದದ್ದು ಸಿಲಿಕಾನ್‌ ಇಂಪ್ಲಾಂಟೇಷನ್‌. ಮಹಿಳೆಯರ ದೇಹಕ್ಕನುಗುಣವಾಗಿ ‘ಸಿಲಿಕಾನ್‌ ಇಂಪ್ಲಾಂಟ್‌’ ಮಾಡಿ ಸ್ತನಗಳ ಗಾತ್ರ ಹೆಚ್ಚಿಸುವುದರ ಅಥವಾ ಕಡಿಮೆ ಮಾಡುವುದರ ಮೂಲಕ ಜೀವನಪರ್ಯಂತ ಸುಂದರವಾಗಿ ಕಾಣುವಂತೆ ಬದಲಾವಣೆ ಮಾಡಬಹುದು. ಒಮ್ಮೊಮ್ಮೆ ಸ್ತನಗಳ ಗಾತ್ರ ಹೆಚ್ಚಿದ್ದವರು ಮಾನಸಿಕ ಹಾಗೂ ದೈಹಿಕ ಅನಾನುಕೂಲಗಳಿಂದ ಖನ್ನತೆಗೆ ಒಳಗಾಗಿರುತ್ತಾರೆ. ಅಂಥವರಿಗೆ ಸ್ತನಗಳ ಗಾತ್ರವನ್ನು ಅವರ ದೇಹಕ್ಕೆ ಹೊಂದಾಣಿಕೆಯಾಗುವಂತೆ ಮಾಡುವುದರಿಂದ ಅವರು ಸಾಮಾನ್ಯ ಜೀವನ ನಡೆಸಲು ಅನುಕೂಲವಾಗುತ್ತದೆ. ಸಿಲಿಕಾನ್‌ ಇಂಪ್ಲಾಂಟ್‌ ನಂತರ ಹಾಲುಣಿಸುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಸ್ತನದ ಕ್ಯಾನ್ಸರ್‌ ಕೂಡ ಸುಳಿಯುವುದಿಲ್ಲ. ಒಟ್ಟಾರೆ ಇದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ.

ಡಿಂಪಲ್‌ ಕ್ರಿಯೇಷನ್‌: ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯಾಗಿರುವ ಕಾಸ್ಮೆಟಿಕ್‌ ಸರ್ಜರಿಗಳೆಂದರೆ; ಡಿಂಪಲ್‌ ಕ್ರಿಯೇಷನ್‌ (ಕೆನ್ನೆಗುಳಿ) ಮಾಡುವುದು ಹಾಗೂ ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಿ ಸುಂದರಗೊಳಿಸುವುದು. ಇತ್ತೀಚಿನ ದಿನಗಳಲ್ಲಿ ಕಾಸ್ಮೆಟಿಕ್‌ ಜನೈಟಲ್‌ ಸರ್ಜರಿಗಳೂ ಬೇಡಿಕೆಯಲ್ಲಿರುತ್ತವೆ.

ಒಂದು ದಿನದ ಶಸ್ತ್ರಚಿಕಿತ್ಸೆ: ಕಾಸ್ಮೆಟಿಕ್‌ ಸರ್ಜರಿ ಎಂಬುದು ಕೇವಲ ಒಂದು ದಿನದ ಶಸ್ತ್ರಚಿಕಿತ್ಸೆಯಾಗಿದ್ದು, ಕೆಲವೇ ದಿನಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ಶಸ್ತ್ರಚಿಕಿತ್ಸೆಯಲ್ಲಿ ನೋವು ಕಡಿಮೆಯಾಗಿರುತ್ತದೆ ಹಾಗೂ ಯಾವುದೇ ಸಮಸ್ಯೆಯಿಲ್ಲದಂತೆ ತಮ್ಮ ಮುಂದಿನ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು ಎಂದು ಡಾ. ಗಿರೀಶ್‌ ವಿವರಿಸಿದ್ದಾರೆ.

ಮತ್ತಷ್ಟು ಮಾಹಿತಿಯನ್ನು www.curlsncurves.comನಲ್ಲಿ ಪಡೆಯಬಹುದು ಅಥವಾ ಡಾ. ಗಿರೀಶ್‌ ಅವರ ಮೊ. 8088400400ಗೆ ಕರೆ ಮಾಡಿ ಇಲ್ಲವೆ ವಾಟ್ಸಾಪ್‌: 9448571216 ಮೂಲಕ ಸಂಪರ್ಕಿಸಿ.

– ಗೋಪಾಲ್‌ ತಿಮ್ಮಯ್ಯ

ಟಾಪ್ ನ್ಯೂಸ್

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

vidhana-soudha

2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

Vijayendra (2)

50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

Exam 2

CBSE; ಮುಂದಿನ ವರ್ಷ ಪಠ್ಯ ಶೇ. 15 ಕಡಿತಕ್ಕೆ ಚಿಂತನೆ

bjp-congress

BJP ಆಮಿಷ ನಿಜ: ಸಿಎಂ, ಡಿಸಿಎಂ ಹೇಳಿಕೆಗೆ ದನಿಗೂಡಿಸಿದ ಸಚಿವರು, ಶಾಸಕರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.