ಕಾಟನ್‌ಪೇಟೆ ಕಾಮಾಕ್ಷಿ : ಚೆಂದುಳ್ಳಿ ಉಟ್ಟ ಚೆಂದೇರಿ ಸ್ಯಾರಿ


Team Udayavani, May 18, 2017, 12:12 AM IST

Cotton-17-5.jpg

ಕಾಟನ್‌ ಸೀರೆ ಸಖತ್‌ ಲುಕ್‌ ಕೊಡುವಂಥ ಸೀರೆ. ಕಣ್ಣಿಗೆ ತಂಪೆನಿಸುವ ಬಣ್ಣ, ಮನಸ್ಸನ್ನು ಹುಚ್ಚೆಬ್ಬಿಸುವ ಡಿಸೈನ್‌ಗಳಲ್ಲಿ ಕಾಟನ್‌ ಸೀರೆ ಲಭ್ಯ. ಚೆಂದೇರಿ ಎಂಬ ಕಾಟನ್‌ ಸೀರೆ ಎಲ್ಲ ಲಲನೆಯರಿಗೆ ಹುಚ್ಚು ಹಿಡಿಸಿದೆ…

ಟ್ರೆಂಡಿ ಅಂತ ಲೆಕ್ಕವಿಲ್ಲದಷ್ಟು ಡ್ರೆಸ್‌ ಬಂದಿರಬಹುದು. ಆದರೆ, ನಾರಿಯನ್ನು ಎಲ್ಲರೂ ನೋಡಲು ಇಷ್ಟಪಡೋದು ಸೀರೆಯಲ್ಲಿ. ಅದಕ್ಕಾಗಿಯೇ ಮದ್ವೆ ಆಗದ ಹುಡ್ಗೀರೂ ಕೆಲವು ಸಲ ಸರ್‌ಪ್ರೈಸ್‌ ಭೇಟಿಗಳಿಗೆ ಅಥವಾ ಫ‌ಂಕ್ಷನ್‌ಗಳಿಗೆ ಸೀರೆಯನ್ನೇ ಉಡ್ತಾರೆ. ಅದರಲ್ಲೂ ಕಾಟನ್‌ ಸೀರೆ ಇಲ್ಲವೇ ನೈಲಾನ್‌ ಸೀರೆ ಅವರ ಮೊದಲ ಆಯ್ಕೆ. ಕಾಟನ್‌ ಅಂದ್ರೆ ಆಗೆಲ್ಲ ವಯಸ್ಸಾದವರಷ್ಟೇ ಉಡುವಂಥ ಸೀರೆ ಅಂತಾಗಿತ್ತು. ಸಾಲದ್ದಕ್ಕೆ ಸಿನಿಮಾಗಳಲ್ಲೂ ಆರ್ಟ್‌ ಚಿತ್ರಗಳ ನಟಿಯರು, ಪೋಷಕ ಸ್ತ್ರೀ ಪಾತ್ರಧಾರಿಗಳು ಅದನ್ನೇ ಉಟ್ಟೂ ಉಟ್ಟು ಸಂಪ್ರದಾಯದ ಚೌಕಟ್ಟಿಗೆ ಸೇರಿಸಿಬಿಟ್ಟಿದ್ದರು. ಈಗ ಹಾಗಲ್ಲ, ಕಾಟನ್‌ ಸೀರೆ ಸಖತ್‌ ಲುಕ್‌ ಕೊಡುವಂಥ ಸೀರೆ. 

ಭಗಲ್‌ಪುರಿ, ಲೆನಿನ್‌, ಕಾಟನ್‌ ಸಿಲ್ಕ್, ಕೈಮಗ್ಗದ ಸೀರೆಗಳು, ಕಸೂತಿ ಮಾಡಿದ ಕಾಟನ್‌ ಸೀರೆಗಳು, ಪೋಚಂಪಲ್ಲಿ ಕಾಟನ್‌, ಕೊಯಮತ್ತೂರು ಕಾಟನ್‌, ವೆಂಕಟಗಿರಿ ಕಾಟನ್‌, ಆರ್ಡಾಡಿ ಕಾಟನ್‌, ಕಂಚಿ ಕಾಟನ್‌, ಚೆಂದೇರಿ ಕಾಟನ್‌, ಬಾಂದನಿ ಕಾಟನ್‌, ಒರಿಯಾ ಕಾಟನ್‌… ಹೀಗೆ ಪೇಟೆಯಲ್ಲಿ ಕಾಟನ್‌ ಸೀರೆಗಳ ಕಲರವ ದೊಡ್ಡದು. ಕಣ್ಣಿಗೆ ತಂಪೆನಿಸುವ ಬಣ್ಣ, ಮನಸ್ಸನ್ನು ಹುಚ್ಚೆಬ್ಬಿಸುವ ಡಿಸೈನ್‌ಗಳಲ್ಲಿ ಕಾಟನ್‌ ಸೀರೆ ಲಭ್ಯ. ಮೊದಲು ಕಾಟನ್‌ ಸೀರೆಗಳು ಬಹಳ ಕಡಿಮೆ ದರದಲ್ಲಿ ಕೈಗೆಟಕುತ್ತಿದ್ದವು. ಆದರೆ, ಈಗ ಅವುಗಳಿಗೆ ಹೈಫೈ ಸಿಟಿಯಲ್ಲೂ ಡಿಮ್ಯಾಂಡ್‌ ಕುದುರಿದ ಮೇಲೆ ಕನಿಷ್ಠ ಬೆಲೆ ಸಾವಿರ ರೂ. ಮುಟ್ಟಿದೆ. ಯಾವ ವಯಸ್ಸಿನವರಿಗೂ ಚೆಂದ ಕಾಣುವ, ಉಟ್ಟರೆ ಮನಸ್ಸಿಗೆ ಚೇತೋಹಾರಿ ಎನಿಸುವ ಸೀರೆಗಳು ವಿವಿಧ ಬೆಲೆಗಳಿಗೆ ಸಿಗುತ್ತವೆ.

‘ಕಾಟನ್‌ ಸೀರೆ ಏನ್‌ ಚೆಂದಾರೀ, ಎಷ್ಟು ಎಲಿಗೆಂಟಾಗಿರುತ್ತೆ. ಕಾಟನ್‌ ಸೀರೆ ಉಟ್ಟಾಗ ಏನೋ ಒಂದು ಗತ್ತು ಬಂದು ಬಿಡುತ್ತೆ, ಅಲ್ವಾ?’- ಫ‌ಂಕ್ಷನ್ನುಗಳಲ್ಲಿ ಲಲನೆಯರ ಸಾಮಾನ್ಯ ಮಾತು ಇದು. “ವ್ಹಾವ್‌, ಹೌ ನೈಸ್‌! ಕಾಟನ್‌ ಸೀರೇನಾ? ಇದರ ಲುಕ್ಕೇ ಲುಕ್ಕಪ್ಪ!’ ಎಂದು ಉದ್ಗರಿಸದ ಹೆಣ್ಣೇ ಇಲ್ಲ ಎನ್ನಬಹುದೇನೋ. ಬೇರೆ ಸೀರೆಗಳಿಗಿಂತ ಕಾಟನ್‌ ಒಂದು ಚೂರು ಸೇವೆ ಜಾಸ್ತಿ ಕೇಳುತ್ತೆ ಅಷ್ಟೆ. ಅದನ್ನು ಚೆನ್ನಾಗಿ ನೋಡಿಕೊಂಡರೆ, ಅದು ನಿಮ್ಮನ್ನು ಸುಂದರಿಯರ ಸಾಲಿನಲ್ಲಿ ನಿಲ್ಸುತ್ತೆ ಎಂಬ ಮಾತಿಗೆ ದೂಸರಾ ಜವಾಬೇ ಇಲ್ಲ.

ಹೊಸ ಕಾಟನ್‌ ಸೀರೆ ಬಂದಿದೆ…
ಈ ಕಾಟನ್‌ ಜಗತ್ತಿಗೆ ಹೊಸ ಸೇರ್ಪಡೆ ಚೆಂದೇರಿ. ‘ಪೀಚ್‌ ಮೋಡ್‌’ ಎಂಬ ಆನ್‌ಲೈನ್‌ ಮಳಿಗೆ ಚೆಂದೇರಿ ಕಾಟನ್‌ ಸೀರೆಯನ್ನು ಪರಿಚಯಿಸಿದೆ. ಕ್ರೀಮ್‌ ಕಲರ್‌ ಮತ್ತು ಗೋಲ್ಡ್‌ ಕಲರ್‌ ಮಿಕ್ಸ್‌ ಇರುವ ಒಡಲಿಗೆ ಕಪ್ಪು ಅಂಚಿರುವ ಸೀರೆ. ಅದೇ ಕಪ್ಪಿನ ಮೇಲೆ ಜರಿಯ ಹೂಗಳಿರುವ ರವಿಕೆ. ಈ ಸೀರೆ ಉಟ್ಟು ಹಿತಮಿತವಾದ ಆಭರಣ ಧರಿಸಿ ನೀವು ಯಾವುದಾದರೂ ಕಾರ್ಯಕ್ರಮಕ್ಕೆ/ ಸಮಾರಂಭಕ್ಕೆ ಹೋದ್ರೆ ನೋಡೋರ ಕಣ್ಣೆಲ್ಲಾ ನಿಮ್ಮ ಮೇಲೆಯೇ!

ಬ್ಲೌಸ್‌ ಹೀಗಿದ್ರೆ ಚೆನ್ನ…
ಈ ರವಿಕೆಯನ್ನು ಬ್ರಾಡ್‌ ನೆಕ್‌ ಅಥವಾ ಬೋಟ್‌ ನೆಕ್‌ ಇಡಿಸಿ ಮೊಣಕೈವರೆಗೆ ಸ್ಲೀವ್ಸ್‌ ಇಡಿಸಿ ಹೊಲಿಸಿದರೆ ಇದರ ಲುಕ್‌ ಸಖತ್‌ ಗ್ರ್ಯಾಂಡಾಗಿರುತ್ತೆ. ಸೀರೆಯಿಡೀ ಪ್ಲೇನ್‌ ಇರುವುದರಿಂದ ತುಂಬು ತೋಳಿನ ಮತ್ತು ಸ್ಲೀವ್‌ಲೆಸ್‌ ರವಿಕೆಯೂ ವಿಶೇಷ ಲುಕ್‌ ನೀಡುತ್ತೆ.

ಹೀಗೆ ಸಿಂಗಾರ ಮಾಡ್ಕೊಳ್ಳಿ…
ಈ ಸೀರೆಗೆ ಅಥವಾ ಮುತ್ತಿನ ಉದ್ದನೆ ಸರ, ಮುತ್ತಿನ ಕಿವಿಯುಂಗುರ ಹಾಗೂ ಮುತ್ತಿನ ಒಂದೇ ಒಂದು ಬಳೆ ಧರಿಸಿದರೆ ಎಲಿಗೆಂಟಾಗಿ ಇರುವುದರಲ್ಲಿ ಡೌಟೇ ಇಲ್ಲ. ಕೂದಲನ್ನು ಬಾಚಿ, ಒಂದು ಸಣ್ಣ ಕ್ಲಿಪ್‌ ಹಾಕಿ ಹಾಗೆಯೇ ಬಿಡಿ.

ಆನ್‌ಲೈನ್‌ ಕ್ಲಿಕ್‌
ಪೀಚ್‌ಮೋಡ್‌ ಜಾಲತಾಣದಲ್ಲಿನ ಚೆಂದೇರಿ ಸೀರೆಗಳಿಗೆ ಲಿಂಕ್‌: goo.gl/af6ORZ

– ವೀಣಾ ರಾವ್‌

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.