ಸುಮ್ನೆ ತಮಾಷೆಗೆ : ಕೋವಿಡ್ , ನಿನಗೆ ಕರುಣೆ ಇಲ್ಲವಾ?
Team Udayavani, May 6, 2020, 9:17 AM IST
ಲಾಕ್‌ಡೌನ್ ಮುಗಿದ ನಂತರದ ದಿನಗಳು, ಮೊದಲಿನಂತೆ ಇರುವುದಿಲ್ಲ. ವೈರಸ್ ಹರಡುವ ಭಯ ಇರುವುದರಿಂದ, ಎಲ್ಲರೂ ಬಹಳಷ್ಟು ಜಾಗ್ರತರಾಗಿ ಇರಬೇಕಾಗುತ್ತೆ. ಜನರು ಗುಂಪುಗೂಡುವಂತಿಲ್ಲ. ಮನೆಯಿಂದಲೇ ಕೆಲಸ ಮಾಡಬೇಕು, ಎಲ್ಲರೂ ಮಾಸ್ಕ್ ಧರಿಸಲೇಬೇಕು… ಇತ್ಯಾದಿ ನಿಯಮಗಳು ಬರಲಿವೆ.
ಇದರಿಂದ ಹೆಚ್ಚು ದುಃಖವಾಗಿರುವುದು ಹುಡುಗಿಯರಿಗಂತೆ. ಯಾಕೆ ಅಂತ ಕೇಳಿ- ದಿನಾ ಕಲರ್ ಕಲರ್ ಬಟ್ಟೆ ಹಾಕಿಕೊಂಡು, ಟ್ರೆಡಿಷನಲ್ ಡೇ, ಸ್ಯಾರಿ ಡೇ, ನವರಾತ್ರಿ ನೈನ್ ಕಲರ್ಸ್ ಅಂತೆಲ್ಲಾ ಹೇಳಿಕೊಂಡು, ಬಣ್ಣದ ಚಿಟ್ಟೆಗಳಂತೆ ಆಫೀಸ್‌ಗೆ ಹೋಗುತ್ತಿದ್ದವರಿಗೆ, ಹತ್ತಿಪ್ಪತ್ತು ಜನ ಅಂಟಿಕೊಂಡು ಒಂದೇ ಸೆಲ್ಫಿಯೊಳಗೆ ಸೆರೆಯಾಗುತ್ತಿದ್ದವರಿಗೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮನೆಯಿಂದಲೇ ಕೆಲಸ ಮಾಡಿ ಅಂದರೆ ಹೇಗಾಗಬೇಡ? ಅದೂ ಅಲ್ಲದೆ, ಹೊರಗೆ ಹೋಗುವಾಗ ಮಾಸ್ಕ್ ಧರಿಸಬೇಕಂತೆ. ಮುಖ ಚಂದ ಕಾಣಿಸಲಿ ಅಂತ ದುಬಾರಿ ಲಿಪ್‌ಸ್ಟಿಕ್‌ಗಳನ್ನು, ಫೌಂಡೇಶನ್ ಕ್ರೀಮ್‌ಗಳನ್ನು ಬಳಸುತ್ತಿದ್ದವರಿಗೆ, “ಮುಖ ಮುಚ್ಚಿಕೊಂಡು ಓಡಾಡಿ’ ಅಂದ್ರೆ, ಬೇಜಾರಾಗದೇ ಇರುತ್ತಾ? ಪಿಂಕ್, ಲೈಟ್ ಪಿಂಕ್, ರೆಡ್, ಡಾರ್ಕ್ ರೆಡ್, ಪೀಚ್, ಕೋರಲ್, ನ್ಯೂಡ್, ಡಸ್ಟಿ, ರೋಸ್, ಬೆರಿ, ಚೆರಿ ರೆಡ್ ಅಂತೆಲ್ಲಾ ಹತ್ತಾರು ಬಗೆಯ ಲಿಪ್‌ಸ್ಟಿಕ್‌ಗಳನ್ನು ಬಳಸುತ್ತಿದ್ದವರಿಗೆ, ಮಾಲ್ಲಾ ಹಾಕಿಕೊಂಡೇ ಹೊರಗೆ ಬನ್ನಿ ಅನ್ನೋದು ಎಂಥ ಅನ್ಯಾಯ ಅಲ್ವಾ? ಈಗ ಹುಡುಗಿಯರೆಲ್ಲಾ ಒಟ್ಟಾಗಿ, “ಕೋವಿಡ್ ನಿನಗೆ ಕರುಣೆ ಬಾರದೆ? ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿಸಿದ, ಮಾಲ್ಲಾ ನೊಳಗೆ ನಮ್ಮ ಸೌಂದರ್ಯವನ್ನು ಮರೆಮಾಚಿದ
ನೀನೊಬ್ಬ ಗಂಡಸೇ ಇರಬೇಕು. ನಿಂಗೆ ಒಳ್ಳೇದಾಗಲ್ಲ ನೋಡು…’ ಅಂತ ವೈರಸ್ ಮೇಲೆ ಮುನಿಸಿಕೊಂಡಿದ್ದಾರಂತೆ! ದೇವರೇ, ಈ ಹುಡುಗಿಯರ ಶಾಪ ತಟ್ಟಿ, ಕೋವಿಡ್ ಆದಷ್ಟು ಬೇಗ ದೂರವಾಗಲಪ್ಪಾ ತಂದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.