ಕೋವಿಡ್ ಏನಿದು ನಿನ್ನ ಲೀಲೆ?

ವಾಕಿಂಗ್‌,ಟಾಕಿಂಗ್‌ಎಲ್ಲಾ ಮಿಸ್ಸಿಂಗ್‌!

Team Udayavani, Aug 26, 2020, 8:35 PM IST

ಕೋವಿಡ್  ಏನಿದು ನಿನ್ನ ಲೀಲೆ?

ಸಾಂದರ್ಭಿಕ ಚಿತ್ರ

ದಿನವೂ ಬೆಳಗ್ಗೆ ಬೇಗ ಎದ್ದು 5- 6 ಗಂಟೆವರೆಗೆ ಟಿ.ವಿ. ನೋಡ್ತಾ ಯೋಗ, ವ್ಯಾಯಾಮ ಮಾಡಿ, 6- 7 ಗಂಟೆಯವರೆಗೆ ವಾಕಿಂಗ್‌ ಹೋಗಿ, ನಡುವೆ ಸಿಗುವ ಪರಿಚಿತರನ್ನು ಮಾತನಾಡಿಸಿ, ಕುಶಲೋಪರಿಯಲ್ಲಿ ಪಾಲ್ಗೊಂಡು, ಮನೆಗೆ ಬಂದು ಟೀ ಕುಡಿಯುವುದರ ಮೂಲಕ ಅವ್ವನ ದಿನಚರಿ ಮುಂದುವರಿಯುತ್ತಿತ್ತು.

ಆದರೀಗ ಕೋವಿಡ್ ದಿಂದಾಗಿ, ಬೇಗ ಎದ್ದು ಎಂದಿನಂತೆ ಯೋಗ ವ್ಯಾಯಾಮ ಮಾಡಿದರೂ, ಹೊರಗಿನ ವಾಕಿಂಗ್‌ ಇಲ್ಲವಾಗಿದೆ. ಟೆರೇಸ್‌ ಮೇಲೆಯೇ ವಾಕ್‌ ಮಾಡುತ್ತಿದ್ದಾಳೆ. ಈ ಮೊದಲಿನಂತೆ, ವಾಕಿಂಗ್‌ ಸಮಯದಲ್ಲಿ ಸಿಗುವ ಜನರ ಜೊತೆ ಮಾತು ಇಲ್ಲವಾಗಿದೆ. ದಿನವೂ ಭೇಟಿ ಕೊಡುತ್ತಿದ್ದ ಎರಡು ದೇವಸ್ಥಾನಗಳಿಗೆ ಹೋಗುವುದನ್ನೂ ನಿಲ್ಲಿಸಲಾಗಿದೆ. ಬೇಕಾದಾಗ ಹೊರಗೆ ಹೋಗುವ ಸ್ವಾತಂತ್ರ್ಯ ಇಲ್ಲವೇ ಇಲ್ಲ. ಗƒಹ ಬಂಧನದಲ್ಲಿ ಇಟ್ಟ ಅನುಭವ ಅವ್ವಳಿಗೆ. ಮೂರು ತಿಂಗಳಿಂದ ಜನರನ್ನು, ಮಾತುಗಳನ್ನು, ದೇವಸ್ಥಾನಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾಳೆ. ಆರಾಮಾಗಿ, ಯಾವುದೇ ಒತ್ತಡವಿಲ್ಲದೆ ಆಹ್ಲಾದಕರ ಪರಿಸರವನ್ನು ತನ್ನಷ್ಟಕ್ಕೆತಾನೇ ಅನುಭವಿಸುವ ದಿನಚರಿ ಸಂಪೂರ್ಣವಾಗಿ ನಿಂತು ಹೋಗಿದೆ.

“ಎಂಥಾ ರೋಗಗಳನ್ನ ಕಾಣುವ ಕಾಲ ಬಂತು. ಔಷಧ ಕೂಡ ಸಿಗ್ತಿಲ್ಲ. ಎಲ್ಲೂ ಹೊರಗೆ ಹೋಗೋಕೆ ಆಗುತ್ತಿಲ್ಲ. ಪ್ಲೇಗ್‌ ಬಗ್ಗೆ ಆಯಿ ( ಅಜ್ಜಿ) ಹೇಳ್ಳೋದ ಕೇಳಿದ್ವಿ. ಆಗ ಊರಿಗೆ ಊರೇ ಖಾಲಿ ಆಗತಿತ್ತಂತ. ಆದ್ರ ಈ ಕೋವಿಡ್, ಇಡೀ ಜಗತ್ತನ್ನ ಹಿಡದೈತಿ. ಒಂಥರಾ ಭಯದ ವಾತಾವರಣ ನಿರ್ಮಾಣ ಆಗೇತಿ. ಎಂದರ ಈ ರೋಗ ಮಾಯ ಆಗತೈತಿ ದೇವರೇ… ನೀವೆಲ್ಲ ಅನಿವಾರ್ಯ ಕೆಲಸದ ನಿಮಿತ್ತ ಹೊರಗೆ ಹೋಗುವುದು ಬಂದೈತಿ…’ ಎಂದು ನಾನು ವ್ಯಾಲ್ಯುವೇಷನ್‌ ಕೆಲಸಕ್ಕೆ ಹೋಗಿದ್ದನ್ನು, ಅಕ್ಕ ತನ್ನ ಶಾಲೆ, ತಮ್ಮ ಕೋರ್ಟ್‌ ಕೆಲಸಕ್ಕೆ ಹೋಗಿದ್ದನ್ನು ನೆನೆದು ಅವ್ವ ಆಡೊ ಮಾತುಗಳಿವು.

ಕೋವಿಡ್ ಎಲ್ಲವನ್ನೂ, ಎಲ್ಲರನ್ನೂ ಅಲುಗಾಡಿಸಿ ಬಿಟ್ಟಿದೆ. ಜೀವನ ನಾರ್ಮಲ್‌ ಅಂತ ಅನ್ನಿಸುತ್ತಿಲ್ಲ. ಹೊರಗೆಲ್ಲೂ ಹೋಗಲಾಗದ ಅವ್ವ ಮೊಮ್ಮಕ್ಕಳೊಂದಿಗೆ ಪಗಡೆ, ಕೇರಂ, ಕಾರ್ಡ್ಸ್‌, ಲುಡೊ ಆಡುತ್ತಾ ಕಾಲ ಕಳೆಯುತ್ತಿದ್ದಾಳೆ. ಮಧ್ಯೆಮಧ್ಯೆ ಮೊಮ್ಮಕ್ಕಳಿಗೆ ಏನಾದರೂ ಓದಲೋ, ಬರೆಯಲೋ ಹೇಳುತ್ತಾಳೆ. ಕಾಲಕ್ಕನುಗುಣವಾಗಿ ತನ್ನನ್ನು ಬ್ಯುಸಿ ಮಾಡಿಕೊಂಡಿದ್ದಾಳೆ. ನಾವೂ ಭಯದಲ್ಲೇ ಹೊರಗೆ ಹೋಗಿ ಬರುತ್ತಿದ್ದೇವೆ. ಬ್ಯಾಂಕ್‌, ಪೋಸ್ಟ್ ಆಫೀಸ್‌ ಎಂದು ಅತೀ ಅನಿವಾರ್ಯ ಅಂದಾಗ ಅವ್ವನನ್ನೂ ಕರೆದೊಯ್ಯಬೇಕಾಗುತ್ತದೆ. ಆಗ ಮಾಸ್ಕ್ ಮತ್ತು ಸ್ಯಾನಿಟೈಸರ್‌ ನಿಗಾದ ಜೊತೆಗೆ, “ಅವ್ವಾ, ಅಲ್ಲಿ ಮುಟ್ಟಬೇಡ, ಇಲ್ಲಿ ಮುಟ್ಟಬೇಡ’ ಅನ್ನೋ ನಮ್ಮ ಮಾತುಗಳಿಗೆ ಹೊಂದಿಕೊಳ್ಳಲು ಆಕೆಗೆ ಕಷ್ಟವಾದರೂ, ಅದನ್ನು ತಪ್ಪದೆ ಪಾಲಿಸುತ್ತಾಳೆ. ­

 

– ಮಾಲಾ ಮ. ಅಕ್ಕಿಶೆಟ್ಟಿ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.