ಸೀತಾಫಲ ರೋಗಗಳಿಗೆ ರಾಮಬಾಣ
Team Udayavani, Aug 28, 2019, 5:00 AM IST
ಇಂಗ್ಲಿಷ್‌ನಲ್ಲಿ ಕಸ್ಟರ್ಡ್ ಆ್ಯಪಲ್ ಎನ್ನುವ ಸೀತಾಫಲ, ಸೇಬುಹಣ್ಣಿನಷ್ಟೇ ಪೌಷ್ಟಿಕ ಅಂಶಗಳನ್ನು ಹೊಂದಿದೆ. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂಬ ಮಾತಿನಂತೆ, ಸೀತಾಫಲ ತಿನ್ನುವುದರಿಂದಲೂ ಆರೋಗ್ಯ ವೃದ್ಧಿಸುತ್ತದೆ. ಕೇವಲ ಹಣ್ಣು ಮಾತ್ರವಲ್ಲ, ಇದರ ಎಲೆ, ಬೇರು, ಕಾಂಡದಿಂದಲೂ ಅನೇಕ ಉಪಯೋಗಗಳಿವೆ.
– ಸೀತಾಫಲದಲ್ಲಿ ವಿಟಮಿನ್ ಎ, ಸಿ, ಕಬ್ಬಿಣಾಂಶ, ನಾರಿನ ಅಂಶ, ಮೆಗ್ನಿಷಿಯಂನಂಥ ಪೋಷಕಾಂಶಗಳು ಹೇರಳವಾಗಿವೆ.
– ವಿಟಮಿನ್ ಎ ಅಧಿಕವಾಗಿರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರವಿಡಬಹುದು.
– ಪ್ರತಿನಿತ್ಯ ಬೆಳಗ್ಗೆ ಒಂದು ಚಮಚ ಸೀತಾಫಲದ ಎಲೆಯ ರಸ ಕುಡಿದರೆ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದಂತೆ.
– ಸೀತಾಫಲದ ಎಲೆಯನ್ನು ನೀರಿನಲ್ಲಿ ಹಾಕಿ ಕಷಾಯ ಮಾಡಿ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.
– ಬಾಣಂತಿಯರು ಈ ಹಣ್ಣನ್ನು ಸೇವಿಸಿದರೆ ನಿಶ್ಶಕ್ತಿ ಕಾಡುವುದಿಲ್ಲ.
– ಈ ಹಣ್ಣಿನಲ್ಲಿರುವ ಕ್ಯಾಲ್ಸಿಯಂ ಅಂಶದಿಂದ ಬೆಳೆಯುವ ಮಕ್ಕಳ ಮೂಳೆ ಗಟ್ಟಿಯಾಗುತ್ತದೆ.
-ಸೀತಾಫಲವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
– ಗರ್ಭಿಣಿಯರ ಆರೋಗ್ಯಕ್ಕೆ ಮತ್ತು ಹೆರಿಗೆಯ ನಂತರ ಎದೆಹಾಲು ಉತ್ಪನ್ನ ಹೆಚ್ಚಳಕ್ಕೆ ಸೀತಾಫಲ ಸಹಕಾರಿ.
– ಸೀತಾಫಲದಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದ್ದು, ಶ್ವಾಸ ಸಂಬಂಧಿ ರೋಗಗಳನ್ನು ನಿಯಂತ್ರಿಸುತ್ತದೆ.
-ರಕ್ತಶುದ್ಧಿಯಲ್ಲಿ ಸಹಾಯ ಮಾಡುತ್ತದೆ.
– ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.
-ದಿನವೂ ಬೆಳಗ್ಗೆ ಸೀತಾಫಲವನ್ನು ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ.
– ಗ್ಯಾಸ್, ಆ್ಯಸಿಡಿಟಿ, ಅಜೀರ್ಣ, ಮಲಬದ್ದತೆಯಂಥ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ.
-ಹರ್ಷಿತಾ ಕುಲಾಲ್ ಕಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.