ರಾಶಿ ರಾಶಿ ಭವಿಷ್ಯ!

ಸುಮ್ನೆ ತಮಾಷೆಗೆ

Team Udayavani, Jan 1, 2020, 5:21 AM IST

MS-10

ನಗುವಿನಿಂದ, ಸಂಭ್ರಮದಿಂದ ಹೊಸವರ್ಷದ ಮೊದಲ ದಿನವನ್ನು ಆರಂಭಿಸಿದರೆ ಅದೇ ಉತ್ಸಾಹ ವರ್ಷವಿಡೀ ಜೊತೆಗಿರುತ್ತದೆ ಎಂಬುದು ಹಲವರ ನಂಬಿಕೆ. ವರ್ಷದ ಮೊದಲ ದಿನ ಭವಿಷ್ಯ ಹೇಳುವ ನೆಪದಲ್ಲಿ ಎಲ್ಲರ ಮೊಗದಲ್ಲಿ ನಗು ಚೆಲ್ಲಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸುತ್ತಿದ್ದೇವೆ. ಇಲ್ಲಿನ ಭವಿಷ್ಯ ನಿಜವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ!

1.ಮೇಷ
(ಚು, ಚೆ, ಚೊ, ಲ, ಲಿ, ಲು, ಲೆ, ಲೊ, ಸೆ)
ಕೋಪವನ್ನು ಕಡಿವಾಣದಲ್ಲಿಡಿ, ಕೆಟ್ಟ ಆಲೋಚನೆಗಳಿಗೆ ಆಸ್ಪದ ನೀಡದಿರಿ. ಪತಿಯೊಡನೆ ಕಲಹ, ಊಟವಿಲ್ಲದೆ ಖಾಲಿ ಹೊಟ್ಟೆಯಿಂದಾಗಿ ಪತಿಗೆ ವಾಯು ಪ್ರಕೋಪ ಸಾಧ್ಯತೆ. ಹೊಸ ವಸ್ತ್ರ ಅಥವಾ ಆಭರಣ ಖರೀದಿಯ ಲಕ್ಷಣಗಳಿವೆ. ಯಾಕೆಂದರೆ ಪತಿಯ ಶರ್ಟಿನ ಹಿಂಬದಿಯಲ್ಲಿ ಅಂಟಿಕೊಂಡಿದ್ದ ಉದ್ದ ಕೂದಲೊಂದು ನಿಮ್‌ ಕಣ್ಣಿಗೆ ಕಾಣಿಸಿಕೊಳ್ಳಲಿದೆ.
ಶುಭ ಸಂಖ್ಯೆ: ನೀವು ಪತಿಯನ್ನು ಯಾವ ಮೊತ್ತದ ಖರೀದಿಗೆ ಒಪ್ಪಿಸುತ್ತೀರಿ ಅನ್ನೋದರ ಮೇಲೆ ನಿಂತಿದೆ.

2.ವೃಷಭ
(ಅ, ಇ, ಉ, ಎ, ಒ, ವ, ವಿ, ವು, ಸೊ)
ನಿಮ್ಮ ದಿನವಿಂದು ಯುಗಾದಿ ಹಬ್ಬದಂತಿರುತ್ತದೆ. ದುಬಾರಿ ರೇಷ್ಮೆ ಸೀರೆ ಖರೀದಿಸಲಿದ್ದೀರಿ, ಅದೇ ಸೀರೆ ಉಟ್ಟು ಅದ್ಧೂರಿ ಸಮಾರಂಭವೊಂದರಲ್ಲಿಯೂ ಭಾಗವಹಿಸಲಿದ್ದೀರಿ. ದುರಾದೃಷ್ಟವಶಾತ್‌ ಆ ಸಮಾರಂಭದಲ್ಲಿ ಬಹುತೇಕ ಮಹಿಳೆಯರು ಅದೇ ಬಣ್ಣ ಮತ್ತು ಡಿಸೈನಿನ ಸೀರೆ ಧರಿಸಿ ಬಂದಿರುತ್ತಾರೆ… ಹೇಳಿರಲಿಲ್ವಾ, ಇಂದು ನಿಮಗೆ ಬೇವು ಬೆಲ್ಲ ಅಂತ.
ಶುಭ ಸಂಖ್ಯೆ: 3ಅನ್ನು 3ರಿಂದ ಗುಣಿಸಿ 3 ಸಲ ಮೂರನ್ನು ಕಳೆಯಿರಿ.

3.ಮಿಥುನ
(ವೆ, ವೊ, ಕ, ಕಿ, ಕು, ಘ, ಫ‌, ದ)
ಆತ್ಮೀಯ ಗೆಳತಿಯ ಭೇಟಿ, ಸೌಂದರ್ಯವರ್ಧಕ ವಸ್ತುಗಳ ಖರೀದಿ, ಆರೋಗ್ಯ ಕೆಡುವ ಸಾಧ್ಯತೆಗಳಿರೋ ಕಾರಣ, ಆದಷ್ಟೂ ರಸ್ತೆಬದಿಯ ತಿಂಡಿಗಳಿಂದ ದೂರವಿರಿ. ಆಕಸ್ಮಿಕ ಧನಲಾಭದ ಸಾಧ್ಯತೆಗಳಿವೆ. ಇಂದು ಬೆಳಿಗ್ಗೆ ಬಟ್ಟೆ ನೆನೆ ಹಾಕುವ ಮೊದಲು ಪತಿಯ ಪ್ಯಾಂಟಿನ ಜೇಬುಗಳನ್ನು ಸರಿಯಾಗಿ ಚೆಕ್‌ ಮಾಡೋದನ್ನು ಮಾತ್ರ ಯಾವ ಕಾರಣಕ್ಕೂ ಮರೆಯದಿರಿ. ಅಲ್ಲಿ ಸಿಗದಿದ್ರೆ ಏನಾಯ್ತು, ಚಿಂತೆ ಬೇಡ, ಹೇಗೂ ಅವ್ರ ಕ್ರೆಡಿಟ್‌ ಕಾರ್ಡ್‌ ನಿಮ್‌ ಹತ್ರಾನೇ ಇದ್ಯಲ್ಲ…
ಶುಭ ಸಂಖ್ಯೆ: ಪತಿಯ ಕ್ರೆಡಿಟ್‌ ಕಾರ್ಡ್‌ ಪಿನ್‌ ನಂಬರ್‌!

4.ಕರ್ಕಾಟಕ
(ಕೆ, ಕೊ, ಹ, ಹಿ, ಹು, ಹೆ, ಹೊ, ಡ, ದಿ)
ದ್ವಿಚಕ್ರ ವಾಹನ ಚಲಾಯಿಸದಿರುವುದು ಉತ್ತಮ. ಯಾಕೆಂದರೆ ಕಂಟಕವಿದೆ. ನಿಮಗಲ್ಲ, ನಿಮ್ಮ ಅಕ್ಕಪಕ್ಕದ ವಾಹನ ಸವಾರರಿಗೆ. ಆರ್ಥಿಕವಾಗಿ ನಷ್ಟ ಅನುಭವಿಸಲಿದ್ದೀರಿ, ಹೇರ್‌ ಸ್ಟೈಲ್‌ ಹಾಳಾಗುತ್ತದೆಂಬ ಕಾರಣಕ್ಕೆ ಹೆಲ್ಮೆಟ್‌ ಧರಿಸದೆ ವಾಹನ ಚಲಾಯಿಸೋ ಸಾಧ್ಯತೆಗಳಿವೆ, ನೋ ಎಂಟ್ರಿಯಲ್ಲಿ ನುಗ್ಗೊದ್ರಿಂದ ತಪ್ಪಿಸಿಕೊಳ್ಳಬಹುದು, ನೋ ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸೋದ್ರಿಂದ ತಪ್ಪಿಸಿಕೊಳ್ಳಲಾರಿರಿ. ಹಾಗಾಗಿ ಪೊಲೀಸರಿಂದ ಭರ್ಜರಿ ಫೈನ್‌ ಬೀಳ್ಳೋ ಎಲ್ಲಾ ಸಾಧ್ಯತೆಗಳಿವೆ.
ಶುಭ ಸಂಖ್ಯೆ: ಆ ಪೊಲೀಸ್‌ ಹಾಕೋ ಫೈನ್‌ ಎಷ್ಟು ಅನ್ನೋದ್ರ ಮೇಲೆ ನಿರ್ಧಾರವಾಗುತ್ತೆ.

5.ಸಿಂಹ
(ಡಿ, ಡು, ಡೆ, ಡೊ, ಮ, ಮಿ, ಮು, ಮೆ, ದು)
ಸಿಹಿ ಸುದ್ದಿಯೊಂದು ಕಾದಿದೆ. ಆದರೆ, ಅದು ಬಹಳ ಕಾಲ ನಿಲ್ಲುವುದಿಲ್ಲ. ಬಹುಕಾಲದ ಕಷ್ಟಕಾರ್ಪಣ್ಯಗಳಿಗೊಂದು ಮುಕ್ತಿ ಸಿಗಲಿದೆ. ಆದರೆ, ಇದೂ ಬಹಳ ಸಮಯ ನಿಮ್ಮೊಂದಿಗೆ ಜೊತೆ ಇರೋದಿಲ್ಲ. ಯಾಕೆಂದರೆ ಅಂತೂ ಇಂತೂ ಕೊನೆಗೂ ತಿಂಗಳಿನಿಂದ ರಜೆಯಲ್ಲಿದ್ದ ಕೆಲಸದಾಕೆ ಮನೆಗೆ ಮರಳಲಿದ್ದಾಳೆ. ಉಭಯ ಕುಶಲೋಪರಿಯ ನಂತರ ರಜೆಯನ್ನು ಮತ್ತೂಂದು ತಿಂಗಳಿಗೆ ವಿಸ್ತರಿಸಲು ಕೇಳಿಕೊಳ್ಳಲಿದ್ದಾಳೆ. ನಿಮ್‌ ಕಷ್ಟ ನಂಗರ್ಥ ಆಗುತ್ತೆ, ಆದ್ರೆ ನಿಮ್‌ ರಾಶಿಗೆ ಅರ್ಥವಾಗ್ತಿಲ್ವಲ್ಲ.
ಶುಭ ಸಂಖ್ಯೆ: ಮನೆ ಕೆಲಸದಾಕೆ ಪಡೆದುಕೊಳ್ಳಲಿರೋ ಮುಂಗಡ ಹಣದ ಒಟ್ಟು ಮೊತ್ತ.

6.ಕನ್ಯಾ
(ಮೊ, ಟ, ಟಿ, ಟು, ಟೆ ಟೊ, ಪ, ಪಿ, ಖ)
ಆತ್ಮೀಯರಿಂದ ಧನಲಾಭ, ಹೋಟೆಲ್‌ ಊಟದ ಭಾಗ್ಯವಿದೆ. ಉಚಿತ ಕೊಡುಗೆಗಳು ಸಿಗುವ ಸಾಧ್ಯತೆ ಹೆಚ್ಚು. ಎಂ.ಟಿ.ಆರ್‌ ಪುಳಿಯೊಗರೆ ಪೌಡರ್‌ ತಗೊಂಡಾಗ ರಸಂ ಪೌಡರ್‌ ಉಚಿತ! ಆದರೂ ಆರ್ಥಿಕ ಸ್ಥಿತಿಯಲ್ಲಿ ಕೊಂಚಮಟ್ಟದ ಇಳಿಕೆಯೇ ಕಂಡುಬರುತ್ತದೆ. ಹೊಸ ಸೀರೆ ಖರೀದಿ ಯೋಗವಿದೆ. ಯಾಕೆಂದರೆ ಮನೆಯ ಹತ್ತಿರದಲ್ಲೇ ಹೊಸವರ್ಷದ ಪ್ರಯುಕ್ತ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ನಡೆಯುತ್ತಿದೆ.
ಶುಭ ಸಂಖ್ಯೆ: ಎರಡು ಸೀರೆ ಖರೀದಿಗೆ ಒಂದು ಉಚಿತ.

7.ತುಲಾ
(ಪು, ಷ, ಣ, ರ, ಪೆ, ಪೊ, ರ, ರಿ, ಯ)
ಇಂದು ನಿಮ್ಮ ಪಾಲಿಗೆ ಅದ್ಭುತವಾಗಿರಲಿದೆ. ಬಹುಕಾಲದಿಂದ ಕೇಳಲು ತವಕಿಸುತ್ತಿದ್ದ ಅಷ್ಟೂ ಹೊಗಳಿಕೆಯ ಪದಪುಂಜಗಳು ನಿಮಗಿಂದು ಕಾಣಲು ಸಿಗಲಿದೆ. ಸ್ನೇಹಬಳಗದಿಂದ ಪ್ರಶಂಸೆಗಳ ಸುರಿಮಳೆಯೇ ಸುರಿಯಲಿದೆ. ಯಾವುದಕ್ಕೂ ಫೇಸ್‌ಬುಕ್ಕಿನಲ್ಲಿ ನಿಮ್ಮ ಫೋಟೋವೊಂದನ್ನು ಅಪ್ಲೋಡ್‌ ಮಾಡೋದು ಮಾತ್ರ ಮರೆಯದಿರಿ.
ಶುಭ ಸಂಖ್ಯೆ :- 1k ಲೈಕು ಮತ್ತು 256 ಕಮೆಂಟುಗಳು.

8.ವೃಶ್ಚಿಕ
(ರು, ರೆ, ರೊ, ತ, ತಿ, ತು, ತೆ, ತೊ, ಥ)
ಇಷ್ಟದೇವತಾ ದರ್ಶನ, ಅನ್ಯರಿಂದ ನಿಂದನೆಯ ಮಾತುಗಳನ್ನು ಕೇಳಬೇಕಾಗಿ ಬರಬಹುದು, ಹಾಗಾಗಿ ಹೂವು, ತರಕಾರಿ ಮಾರುವ ಹೆಂಗಸರ ಜೊತೆ ಚೌಕಾಸಿಗಿಳಿದರೂ ಯಾವುದೇ ಕಾರಣಕ್ಕೂ ವಾದಕ್ಕೆ ಮಾತ್ರ ನಿಲ್ಲಬೇಡಿ. ದೇಗುಲಗಳ ಕಡೆ ಹೋದಾಗ ಗಂಡಾಂತರವಿರುವ ಕಾರಣ, ಪಾದರಕ್ಷೆಗಳನ್ನು ಚಪ್ಪಲಿ ಸ್ಟಾಂಡುಗಳಲ್ಲಿಯೇ ಇಡೋದನ್ನೂ ಮರೆಯದಿರಿ.
ಶುಭಸಂಖ್ಯೆ :– ನೂರಾ ಒಂದು ಈಡುಗಾಯಿ.

9.ಧನಸ್ಸು
(ನ, ನಿ, ನು, ನೆ, ನೊ, ಯ, ಯಿ, ಯು, ದೆ)
ಮನಸ್ಸು ಬದಲಾವಣೆಗೆ ತುಡಿಯುತ್ತಿದ್ದರೂ ನಿಮ್ಮ ರಾಶಿ ಬಿಡುತ್ತಿಲ್ಲ. ಇನ್ನೆರಡು ತಿಂಗಳು ಶುಭಶಕುನಗಳಿಲ್ಲ, ಹಾಗಾಗಿ ಬಹುಕಾಲದ ಬಯಕೆಗೆ ಮುಕ್ತಿ ಸಾಧ್ಯವಿಲ್ಲ. ಆದರೂ ಪ್ರಯತ್ನ ನಿರಂತರವಾಗಿರಲಿ, ಮೂರನೇ ತಿಂಗಳಲ್ಲಿ ನಿಮಗೊಂದು ಕಡಿಮೆ ಬಾಡಿಗೆಯಲ್ಲಿ ಉತ್ತಮ ಬಾಡಿಗೆ ಮನೆ ಖಂಡಿತಾ ದೊರೆಯಲಿದೆ.
ಶುಭ ಸಂಖ್ಯೆ: 3ನೇ ಮುಖ್ಯರಸ್ತೆಯ ಆರನೇ ಕ್ರಾಸಿನಲ್ಲಿ ಹುಡುಕಿ.

10.ಮಕರ
(ಯ, ಯೊ, ಬ, ಬಿ, ಬು, ಧ, ಭ, ಡ, ದೊ)
ನೆರೆಹೊರೆಯವರಿಂದ ಅಂತರ ಕಾಪಿಟ್ಟುಕೊಳ್ಳಿ, ಅವರಿಂದಾಗಿ ಮನದ ನೆಮ್ಮದಿ ನಾಶವಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಲಿದೆ, ಪತಿಯ ಆರೋಗ್ಯದಲ್ಲಿ ವ್ಯತ್ಯಯ ಆಗಲೂಬಹುದು. ಯಾಕೆಂದರೆ ಪಕ್ಕದ ಮನೆಯವರು ಹೊಸದಾಗಿ ಖರೀದಿಸಿದ ಆಭರಣಗಳನ್ನು ತೋರಿಸಲು ನಿಮ್ಮ ಮನೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.
ಶುಭ ಸಂಖ್ಯೆ: ಎರಡು ಬಳೆ ಒಂದ್‌ ನೆಕ್ಲೇಸು.

11.ಕುಂಭ
(ಬೆ, ಬೊ, ಜ, ಜಿ, ಶಿ, ಶು, ಶೆ, ಶೊ, ಚ)
ಪ್ರಯಾಣ ಯೋಗವಿದೆ, ಯಾಕೆಂದರೆ ಹೊಸಾ ಸೈಟೊಂದನ್ನು ನೋಡಲು ಹೋಗಲಿದ್ದೀರಿ. ಗೃಹ ಖರೀದಿ ಬಲವಿದೆ, ಆದರೆ ಗಂಡನ ಮನವೊಲಿಸುವುದೇ ಕಷ್ಟವಿದೆ. ವಿರೋಧಿಗಳ ಷಡ್ಯಂತ್ರಕ್ಕೆ ಬಲಿಯಾಗದಂತೆ ಎಚ್ಚರವಹಿಸಿ. ಯಾಕೆಂದರೆ ಕೊನೆಗಳಿಗೆಯಲ್ಲಿ ಪತಿಯ ಆಫೀಸಿನಲ್ಲಿ ಹಠಾತ್ತನೆ ಮೀಟಿಂಗೊಂದು ಏರ್ಪಾಡಾಗೋ ಎಲ್ಲಾ ಸಾಧ್ಯತೆಗಳಿವೆ.
ಶುಭಸಂಖ್ಯೆ: 30×50 ಅಥವಾ 60×40

12.ಮೀನ
(ಗ, ಗಿ, ಗು, ಗೆ, ಗೊ, ಸ, ಸಿ, ಸು, ಕಿ)
ದಿನವಿಡೀ ನಿಮ್ಮ ಪರವಾಗಿದ್ದರೂ ಸಂಜೆಯ ನಂತರ ಹಂತಹಂತವಾಗಿ ಮನಸ್ಸು ಖನ್ನತೆಯತ್ತ ಜಾರಲಿದೆ, ಊಟ ತಿಂಡಿಗಳಲ್ಲೂ ಆಸಕ್ತಿ ಕಳೆದುಕೊಳ್ಳಲಿದ್ದೀರಿ, ಇದರ ಪರಿಣಾಮ ಮನೆಯವರ ಮೇಲೂ ಉಂಟಾಗಲಿದೆ. ಏನೋ ಕಳೆದುಕೊಂಡ ಭಾವ, ನಿದ್ರಾಹೀನತೆ ನಿಮ್ಮನ್ನು ಕಾಡಲಿದೆ. ಯಾಕೆಂದರೆ ಏರಿಯಾದ ಟ್ರಾನ್ಸ್‌ಫಾರ್ಮರ್‌ ಹಾಳಾಗಿರುವ ಕಾರಣ ಕರೆಂಟಿಲ್ಲದೆ ಯಾವುದೇ ದೈನಂದಿನ ಧಾರಾವಾಹಿಗಳನ್ನು ನೋಡಲಾಗುವುದಿಲ್ಲ.
ಶುಭಸಂಖ್ಯೆ: 1912 ಇದು ಬೆಸ್ಕಾಂ ಫೋನ್‌ ನಂಬರ್‌.

– ಸುಧೀರ್‌ ಸಾಗರ್‌

ಟಾಪ್ ನ್ಯೂಸ್

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

1-TTD

Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!

web

Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.