ಶ್ರೀಮತಿ… ಪ್ರೆಸೆಂಟ್ ಸರ್   


Team Udayavani, Dec 26, 2018, 11:07 AM IST

bri.jpg

ಅವಳು ಬಂದ ಕೂಡಲೇ ಆ ಕುಮಾರಿಯರೆಲ್ಲ ಗಪ್‌ಚುಪ್‌. ತುಂಟ ಮಾತುಗಳನ್ನು ನಿಲ್ಲಿಸುತ್ತಾರೆ. ಕೋಳಿ ಜಗಳಕ್ಕೆ ಬ್ರೇಕ್‌ ಬೀಳುತ್ತೆ. ಅವಳಂದ್ರೆ ಅವರಿಗೆಲ್ಲ ಅದೇನೋ ಗೌರವ. ಅವಳ ಕೊರಳಲ್ಲಿ ತಾಳಿ, ಕಾಲ್ಬೆರಳಿನಲ್ಲಿನ ಉಂಗುರಗಳನ್ನು ಆಗಾಗ್ಗೆ ಕದ್ದು ನೋಡುತ್ತಾ, ಮುಸಿ ಮುಸಿ ಮಾತಾಡಿಕೊಳ್ಳುವ ತುಂಟಿಯರೂ ಇದ್ದಾರೆ. ನಮಗಿಂತಲೂ ಆಕೆ ಫಾಸ್ಟ್‌ ಎನ್ನುವ ಭಾವ ಅವರದ್ದೆಲ್ಲ. ಮದುವೆಯಾದ ಹುಡುಗಿ ಕ್ಲಾಸ್‌ರೂಮ್‌ನಲ್ಲಿ ಹೋಗಿ ಕುಳಿತಾಗ, ಇಂಥ ವಿಚಿತ್ರ ಮೌನವೊಂದು ಆಕೆಯನ್ನು ತಬ್ಬುತ್ತದೆ…

ಆಗ ತಾನೆ ಪಿಯು ಮುಗಿಸಿ ಡಿಗ್ರಿಗೆ ಸೇರಿದ್ದೆ. ಕಾಲೇಜು ಎಂಬ ಬಣ್ಣದ ಲೋಕ ನಿಜವಾಗಿ ತೆರೆದುಕೊಳ್ಳತೊಡಗಿದ್ದೇ
ಆಗ. ಹೊಸ ಜಾಗ, ಹೊಸ ಕಾಲೇಜು, ಹೊಸ ಸ್ನೇಹಿತರು. ನಿಧಾನವಾಗಿ ಒಬ್ಬೊಬ್ಬರೇ ಸ್ನೇಹಿತರಾಗತೊಡಗಿದ್ದರು. ಇವರೆಲ್ಲರ ಮಧ್ಯೆ ವಿಶೇಷವಾಗಿ ಕಾಣುತ್ತಿದ್ದವಳು ನೀಲು. ಮೂವತ್ತು ಜನ ಹುಡುಗಿಯರ ಗುಂಪಿನಲ್ಲಿ, ನೀಲು ನಮ್ಮೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಿದ್ದಳು. ಅವಳ ಕೊರಳಲ್ಲಿ ತಾಳಿ, ಕಾಲಲ್ಲಿ ಕಾಲುಂಗುರ ಎದ್ದು ಕಾಣುತ್ತಿತ್ತು. ಆ
ಕಾರಣದಿಂದಲೇ ಅವಳಿಗೆ ಹತ್ತಿರವಾಗಲು ನಾವೆಲ್ಲರೂ ಸ್ವಲ್ಪ ಹಿಂದೇಟು ಹಾಕುತ್ತಿದ್ದೆವು. ಮಾತನಾಡುವಾಗಲೂ ಅಷ್ಟೇ, “ನೀವು- ಹೋಗಿ- ಬನ್ನಿ’ ಎಂದು ಗೌರವ ತೋರಿಸುತ್ತಲೇ, ನಡುವೆ ಒಂದು ಅಂತರವನ್ನು ಇಟ್ಟುಕೊಂಡಿದ್ದೆವು. ಅವಳು ಬಂದಳೆಂದರೆ ಸಾಕು, ತರಲೆ ಮಾತುಗಳನ್ನೆಲ್ಲ ನಿಲ್ಲಿಸಿ, ಗಪ್‌ಚುಪ್‌ ಆಗಿಬಿಡುತ್ತಿದ್ದೆವು. ಅವಳನ್ನು ಕಂಡರೆ ನಮಗೆ ಒಂಥರಾ ಭಯಮಿಶ್ರಿತ ಗೌರವ. ಬದುಕಿನಲ್ಲಿ ನಮಗಿಂತ ಸ್ವಲ್ಪ ಮುಂದುವರಿದಿದ್ದಾಳೆಂಬ ಭಾವನೆ.

ನೀಲು ಕೂಡ ಇದನ್ನೆಲ್ಲ ಗಮನಿಸುತ್ತಿದ್ದಳು. ಒಂದು ದಿನ ಲಂಚ್‌ ಬ್ರೇಕ್‌ ಸಮಯದಲ್ಲಿ ಮೇಲೆದ್ದವಳೇ, “ಹೀಗೆಲ್ಲ ಗೌರವ ಕೊಟ್ಟು, ನನ್ನನ್ನು ದೂರ ಮಾಡಬೇಡಿ. ನನ್ನನ್ನೂ ನಿಮ್ಮಲ್ಲಿ ಒಬ್ಬಳಂತೆ ನೋಡಿ. ನನಗೆ ಮದುವೆ ಆಗಿದೆ
ಅಷ್ಟೇ. ನನ್ನ ಹೆಸರಿನಲ್ಲಿನ ಕುಮಾರಿ ಹೋಗಿ ಶ್ರೀಮತಿ ಬಂದಿರಬಹುದು. ಹಾಗಂತ ನನ್ನಲ್ಲೇನೂ ಬದಲಾವಣೆಯಾಗಿಲ್ಲ. ಈಗಲೂ ನಾನು ನಿಮ್ಮಂತೆಯೇ ಇದ್ದೇನೆ. ನನ್ನೊಳಗಿನ ಸ್ವಂತಿಕೆಯನ್ನು ಮದುವೆ ಎನ್ನುವ ಬೇಲಿ ಪೊರೆಯುತ್ತಿದೆಯೇ ಹೊರತು ನನ್ನ ಬೆಳವಣಿಗೆಗೆ, ಸ್ವಾತಂತ್ರಕ್ಕೆ ಅದು ಮಾರಕವಾಗಿಲ್ಲ. ನಾನು ನಿಮ್ಮೊಟ್ಟಿಗಿದ್ದಾಗ, ಮುಚ್ಚುಮರೆ ಮಾಡುವುದು ಬೇಕಿಲ್ಲ. ನೀವು ನನ್ನನ್ನು ಹೀಗೆ ದೂರ ತಳ್ಳಿದರೆ ತುಂಬಾ
ಬೇಜಾರಾಗುತ್ತೆ. ನಾನು ಯಾವುದೋ ಗ್ರಹದಿಂದ ಬಂದವಳೇನೋ ಅಂತ ಅನ್ನಿಸುತ್ತೆ. ಕಾಲೇಜಿಗೆ ಬರುವ ಆಸಕ್ತಿಯನ್ನು, ಓದಬೇಕೆನ್ನುವ ನನ್ನ ಮಹದಾಸೆಯನ್ನು ನಿಮ್ಮ ನಡವಳಿಕೆ ತಣ್ಣಗಾಗಿಸಬಹುದು. ದಯವಿಟ್ಟು
ಅದಕ್ಕೆ ಅವಕಾಶ ಮಾಡಿಕೊಡಬೇಡಿ’ ಎಂದು ತನ್ನೊಳಗಿನ ಭಾವನೆಗಳನ್ನು ಹೇಳಿಕೊಂಡಳು. ಜೊತೆಗೆ, “ನೀವೆಲ್ಲಾ ಹೀಗೆ ನಡೆದುಕೊಂಡರೆ, ಕೊಂದು ಬಿಡುತ್ತೇನೆ ಹುಷಾರ್‌’ ಎಂದು ನಮಗೆಲ್ಲರಿಗೂ ತಮಾಷೆಯಾಗಿ,
ಧಮ್ಕಿಯನ್ನೂ ಹಾಕಿದಳು.

ಆವತ್ತಿನಿಂದ ನಮ್ಮ ನಡುವಿದ್ದ ಅಂತರ ಮಾಯವಾಯಿತು. ನಾವು ಅವಳಿಗಲ್ಲ, ಅವಳೇ ನಮಗೆಲ್ಲ ಹೊಂದಿಕೊಂಡು,ನಮಗಿಂತ ಹೆಚ್ಚು ತರಲೆ ಪುಟ್ಟಿಯಾಗಿ ಡಿಗ್ರಿ ಮುಗಿಸಿದಳು. ಓದಿನಲ್ಲಿ ತಾನಂದುಕೊಂಡಿದ್ದನ್ನು ಸಾಧಿಸಿದ್ದಲ್ಲದೆ, ದೊಡ್ಡ ಕಂಪನಿಯಲ್ಲಿ ಮ್ಯಾನೇಜರ್‌ ಹುದ್ದೆಯನ್ನು ಅಲಂಕರಿಸಿ, ಎಲ್ಲರಿಂದಲೂ ಸೈ
ಎನ್ನಿಸಿಕೊಂಡು ಬಿಟ್ಟಳು. ಮದುವೆ ಎನ್ನುವುದು ಬಂಧನವಲ್ಲ ಅಂತ ಸಾಧಿಸಿ
ತೋರಿಸಿದಳು.

ಮದುವೆ ಬಂಧನವೇ?
ಮದುವೆ, ಬಂಧನ ಅಂತಲೇ ಹೆಚ್ಚಿನವರು ಭಾವಿಸಿದ್ದಾರೆ. ಮದುವೆಯಾದ ಮೇಲೆ ಇನ್ನೇನು ಉಳಿದಿದೆ?
ಮನೆಯೇ ಗುಡಿಯಮ್ಮ, ಪತಿಯೇ ದೇವರಮ್ಮ ಎಂದು ತಿಳಿದು ತಮ್ಮ ಕಾಲಮೇಲೆ ತಾವೇ ಕಲ್ಲು
ಹಾಕಿಕೊಂಡವರಿದ್ದಾರೆ. ಮುಂದೆ ಓದುವ ಆಸೆಯಿತ್ತು. ಆದರೆ, ಅಪ್ಪ-ಅಮ್ಮ ಒತ್ತಾಯ ಮಾಡಿಮದುವೆ ಮಾಡಿ  ನನ್ನ ಜೀವನಾನೇ ಹಾಳು ಮಾಡಿದರು ಎಂದು ಹೆತ್ತವರಮೇಲೆ ಗೂಬೆ ಕೂರಿಸುವವರೂ ಇ¨ದ್ದಾರೆ. ಮದುವೆ ನಂತರ
ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮುಂದುವರಿಸದಿರಲು, ಗಂಡನ ಮನೆಯವರಿಂದಪ್ರೋತ್ಸಾಹ ಸಿಗದಿರುವುದು ಒಂದು ಕಾರಣವಾದರೆ, ಮದುವೆ ಆದವಳು ಕಾಲೇಜಿಗೆ ಹೊರಟರೆ ನೋಡಿದವರು ಏನಂತಾರೆ ಅನ್ನೋ ಮುಜುಗರವೂ ಮುಖ್ಯ ಕಾರಣವೇ.

ಸುಲಭದ ಹಾದಿಯಲ್ಲ…
ಅದಕ್ಕಾಗಿಯೇ, ನೀಲು ಅಂಥವರು ವಿಶೇಷವಾಗಿ ಕಾಣುತ್ತಾರೆ. ಯಾಕೆಂದರೆ,  ಅವರ ಹಾದಿ ಅಷ್ಟು ಸುಲಭವಾಗಿರುವುದಿಲ್ಲ. ಗಂಡ ಹಾಗೂ ಅವನ ಮನೆಯವರನ್ನು ಒಪ್ಪಿಸಿ, ಮನೆಯಿಂದ ಹೆಜ್ಜೆ
ಹೊರಗಿಡುವುದರಿಂದ ಹಿಡಿದು ಓದಿನ ವೆಚ್ಚದವರೆಗೆ, ಹೊರಗೆ ಹೋಗಿ ಏನೇನು ಮಾಡುತ್ತಾಳೆ ಎನ್ನುವ ಅವರ ಅನುಮಾನಗಳಿಗೆ ಪ್ರತಿದಿನ ಅವಳು ಉತ್ತರಿಸಬೇಕಾಗುತ್ತದೆ. ಅವೆಲ್ಲವನ್ನೂ ಸಮಾಧಾನದಿಂದ ನಿಭಾಯಿಸಿ
ಗೆಲ್ಲುವವಳು ಮಾತ್ರ ಸಾಧಿಸಲು ಸಾಧ್ಯ. ಇಲ್ಲವಾದರೆ, ಮದುವೆಯ ನಂತರ ಕನಸುಗಳನ್ನೆಲ್ಲ ಮೂಟೆ ಕಟ್ಟಿಟ್ಟು, ಸ್ವಂತ ವ್ಯಕ್ತಿತ್ವವನ್ನೇ ಮರೆತು ಬಾಳ ಬೇಕಾಗುತ್ತದೆ.

ನಂಬಿಕೆಯೇ ದಾರಿದೀಪ
ಇದು ಎಲ್ಲರ ಬದುಕಿನಲ್ಲೂ ಬರುವ ಹಂತವಲ್ಲ. ಈ ಹಂತದ ಒಳಗೆ ನುಸುಳಿ ಜೀವನದ ಮೆಟ್ಟಿಲನ್ನು ಏರಲು ಬಯಸುವವರಿಗೆ ತನ್ನ ಮೇಲೆ ಅಗಾಧ ನಂಬಿಕೆ ಇರಬೇಕು, ಸಾಧಿಸುವ ಛಲ ಇರಬೇಕು. ಎಲ್ಲದ್ದಕ್ಕೂ ಮುಖ್ಯವಾಗಿ ಗಂಡ ಮತ್ತು ಅವನ ಮನೆಯವರು ಅವಳನ್ನು ನಂಬಿ, ಬೆನ್ನೆಲುಬಾಗಿ ನಿಲ್ಲಬೇಕು. ಈ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣಿನ ಆಸೆ- ಆಕಾಂಕ್ಷೆಗಳನ್ನು ಚಿವುಟಿಯೋ ಅಥವಾ ನಿರ್ಲಕ್ಷಿಸಿಯೋ ಅಥವಾ ತುಳಿದೋ ಮುನ್ನುಗ್ಗುವ ಗಂಡು ಪ್ರಾಣಿಗಳೇ ಹೆಚ್ಚು. ಆದರೆ, ಎಲ್ಲರೂ ಹಾಗಲ್ಲ. ಹೆಣ್ಣು ಕೂಡ ನಮ್ಮ
ಹಾಗೆಯೇ ಒಂದು ಜೀವ. ಅದಕ್ಕೂನೂರೆಂಟು ಕನಸುಗಳಿರುತ್ತವೆ. ಎಲ್ಲವನ್ನೂಈಡೇರಿಸಲು ಸಾಧ್ಯವಾಗದಿದ್ದರೂ ಕೆಲವೊಂದನ್ನಾದರೂ ಪೂರೈಸಬೇಕೆಂದು ಆಲೋಚಿಸುವ ಗಂಡಸರು ಇದ್ದಾರೆ. ಅವಳು ಹತ್ತುವ ಮೆಟ್ಟಿಲುಗಳಲ್ಲಿ ಆಸರೆಯಾಗುವ ಗಂಡನ ಮನೆಯವರಿದ್ದಾರೆ. ಸಾಮಾನ್ಯ ಸಮಾಜದ ಮುಂದೆ ಇಂಥವರು ಎದ್ದು ಕಾಣುತ್ತಾರೆ.

ಅಗ್ನಿಪರೀಕ್ಷೆಯದು…
ಅವಳನ್ನು ಓದಿಸುವ ಸಮಯ, ಅದು ಅವಳೊಬ್ಬಳ ಪರೀಕ್ಷೆಯಲ್ಲ. ಒಂದಿಡೀ ಕುಟುಂಬದಸತ್ವ ಪರೀಕ್ಷೆ. ಅವಳಿಗೇನು ಬಂದಿದೆ? ಏನೋ ಓದ್ತಾಳಂತೆ, ಇವರು ಓದಿಸ್ತಾರಂತೆ. ಅತ್ತೆಮನೆಯವರಿಗಾದರೂ
ಬುದ್ಧಿ ಬೇಡವೇ? ಮಗನಿಗೇಕೆ ಮದುವೆ ಮಾಡಿದ್ದಾರೆ? ಅತ್ತೆಗೂ ವಯಸ್ಸಾಗಿದೆ. ಆಕೆ, ರಾಮಾ-ಕೃಷ್ಣ ಅಂತ ಕುಂತು ತಿನ್ನೋ ವಯಸ್ಸಿನಲ್ಲಿ ಮಗನ ಜೊತೆಗೆ ಸೊಸೆಗೂ ಅಡುಗೆ ಮಾಡಿ ಬಡಿಸುತ್ತಿದ್ದಾಳಂತೆ. ಮೊಮ್ಮಕ್ಕಳ ಆಡಿಸುವ ವಯಸ್ಸಿನಲ್ಲಿ ಇದೇನ್‌ ಕರ್ಮ? ಕಾಲೇಜಿನಲ್ಲಿ ಯಾವನ್ನಾದರೂ ಕಟ್ಟಿಕೊಂಡು ಅವಳು ಓಡಿ ಹೋದರೆ ಇವರಿಗೆ ಬುದ್ಧಿ ಬರುತ್ತದೆ- ಹೀಗೆ ಕೇಳಲು ಅಸಾಧ್ಯವಾದ ಮಾತುಗಳನ್ನೆಲ್ಲ ಎದುರಿಸಬೇಕಾಗುತ್ತದೆ. ಇವೆಲ್ಲದಕ್ಕೂ ತಾಳ್ಮೆ ಇರಬೇಕು ಅವಳಲ್ಲಿಯೂ, ಗಂಡನಲ್ಲಿಯೂ ಮತ್ತು ಅವನ ಮನೆಯವರಲ್ಲಿಯೂ. ಈ ತಾಳ್ಮೆ ಸಹನೆ ಬೇರೆ ಯಾರೋ ಹೇಳಿ ಬರುವಂಥದ್ದಲ್ಲ. ಸೊಸೆಯೂ ನಮ್ಮ ಮಗಳಿದ್ದಂತೆಯೇ ಎನ್ನುವ ಭಾವನೆ ಅತ್ತೆ ಮನೆಯವರಲ್ಲಿ, ಹಾಗೆಯೇ ಹೆಂಡತಿಯೂ ನನ್ನಂತೆಯೇ, ಮಹತ್ವಾಕಾಂಕ್ಷೆಯನ್ನು ಹೊತ್ತ ಜೀವ ಎಂದು ಗಂಡನಿಗೆಅನ್ನಿಸಬೇಕು. ಅದು ಸಾಧ್ಯವಾದರೆ ಮಾತ್ರ ಹೆಣ್ಣೊಬ್ಬಳ ಏಳಿಗೆಯಾಗುತ್ತದೆ.

ಗಂಡನೇ ಗೆಳೆಯನಾಗಿ…

ಜಗತ್ತು ಎಷ್ಟೇ ಬದಲಾಗಿದ್ದರೂ, ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ಯಾವುದಕ್ಕೂ ಪ್ರೋತ್ಸಾಹ ಸಿಗುವುದಿಲ್ಲ. ಮದುವೆಯೊಂದೇ ಅವಳ ಬದುಕನ್ನು ಪರಿಪೂರ್ಣಗೊಳಿಸುವ ಅಂಶವೆಂದು ಜನ ಭಾವಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡದಿದ್ದರೆ, ವಯಸ್ಸಾದ ಮೇಲೆ ಹುಡುಗ ಸಿಗುವುದು ಕಷ್ಟ ಎನ್ನುವ ಭಾವನೆ ಹೆತ್ತವರದ್ದು. ಹೀಗಿರುವಾಗ, ಗಂಡನಾಗುವವನು ಗೆಳೆಯನೂ ಆಗಬೇಕು. ಯಾಕೆಂದರೆ, ಹೆಂಡತಿಯನ್ನು ಗಂಡನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಆಕೆಯ ಕನಸುಗಳಿಗೆ ಕಿವಿಯಾಗಿ, ಹೆತ್ತವರನ್ನು ಒಪ್ಪಿಸುವ ಜವಾಬ್ದಾರಿ ಆತನ ಮೇಲಿರುತ್ತದೆ. ಸೊಸೆ ಕಾಲೇಜಿಗೆ ಹೊರಟಾಗ ಮನೆಯ ಕೆಲಸಗಳಲ್ಲಿ ಕೈಜೋಡಿಸಲು ಸಾಧ್ಯವಾಗದೇ, ಅತ್ತೆ- ಸೊಸೆಯ ಮಧ್ಯೆ, ಗಂಡ-ಹೆಂಡತಿಯ ನಡುವೆ ಮನಸ್ತಾಪಗಳು ಮೂಡಬಹುದು. ಸಣ್ಣಪುಟ್ಟ ರಗಳೆಗಳು, ದೊಡ್ಡ ರಾದ್ಧಾಂತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಅವನದ್ದೇ.

ಜಮುನಾರಾಣಿ ಎಚ್‌.ಎಸ್‌.

ಟಾಪ್ ನ್ಯೂಸ್

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

Mandya-Sahitya

ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.