ಹಗಲು ಬೋಧಕಿ, ರಾತ್ರಿ ಅರ್ಜುನ!


Team Udayavani, May 2, 2018, 12:36 PM IST

hagalu.jpg

ಇವರು ಕ್ಲಾಸಿನಲ್ಲಿ ಮೆಲುದನಿಯ ಉಪನ್ಯಾಸಕಿ, ಪಿಎಚ್‌ಡಿ ವಿದ್ಯಾರ್ಥಿನಿ, ಮಹಿಳಾ ಯಕ್ಷಗಾನ ತಂಡದ ಸ್ಥಾಪಕಿ. ಅಷ್ಟೇ ಅಲ್ಲ ರಂಗದ ಮೇಲೆ ಭೀಷ್ಮ, ಸುಧನ್ವ, ಅರ್ಜುನ, ಕೃಷ್ಣ… ಹೀಗೆ ಬಹುಮುಖ ಪಾತ್ರ ನಿರ್ವಹಿಸುತ್ತಿರುವವರು ಉಷಾ ನಾಯಕ್‌…

ರಾತ್ರಿಯಿಡೀ ರಂಗದ ಮೇಲೆ ಆರ್ಭಟಿಸುತ್ತಾ, ಚಂಡೆ ಮದ್ದಳೆಯನ್ನು ಮೀರಿದ ದನಿಯಲ್ಲಿ ಭಾಗವತಿಕೆ ಹಾಡುತ್ತಾ ವಿಶಿಷ್ಟ ಲೋಕವನ್ನು ಸೃಷ್ಟಿಸುವ ಯಕ್ಷಗಾನದಲ್ಲಿ ಪುರುಷರಿಗೇ ಆದ್ಯತೆ ಹೆಚ್ಚು. ಆದರೆ, ಈ “ಗಂಡುಕಲೆ’ಯನ್ನು ಸಲೀಸಾಗಿ ನಿರ್ವಹಿಸುವ ಕಲಾವಿದೆ ಉಷಾ ನಾಯಕ್‌. ಕೇವಲ ಕಲಾವಿದೆಯಾಗಷ್ಟೇ ಅಲ್ಲ, ಮಹಿಳಾ ಯಕ್ಷತಂಡದ ಸ್ಥಾಪಕಿಯಾಗಿ ಇವರ ಕಲಾಸೇವೆ ಅನನ್ಯ.

ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ  ಉಪನ್ಯಾಸಕಿಯಾಗಿರುವ ಉಷಾನಾಯಕ್‌ಗೆ ಯಕ್ಷಗಾನದ ಮೇಲೆ ಅಪಾರ ಪ್ರೀತಿ. ಹೈಸ್ಕೂಲಿನಲ್ಲಿದ್ದಾಗ ಮೊದಲ ಬಾರಿಗೆ ಬಣ್ಣ ಹಚ್ಚಿದ ಇವರು ಮುಂದೆ ಗುಳ್ಮೆ ನಾರಾಯಣ ಪ್ರಭು, ಚೇರ್ಕಾಡಿ ಮಂಜುನಾಥ ಪ್ರಭು, ಕೆ.ಜೆ. ಗಣೇಶ್‌ ಅವರಿಂದ ಯಕ್ಷ ತರಬೇತಿ ಪಡೆದರು.

ಬಡಗುತಿಟ್ಟಿನಲ್ಲಿ ಉಷಾ ನಿರ್ವಹಿಸುವುದು ಪುರುಷ ಪಾತ್ರಗಳನ್ನೇ. ಭೀಷ್ಮ, ಸುಧನ್ವ, ಅರ್ಜುನ, ಕೃಷ್ಣ, ಚಿತ್ರ ಸೇನಾ, ವಿಷ್ಣು, ರುಕ್ಮ ಪಾತ್ರ ದಲ್ಲಿ ಬಳಿರೇ ಎನ್ನುವಂತೆ ಅಭಿನಯಿಸಿ ಪ್ರೇಕ್ಷ ಕರ ಮನಸ್ಸನ್ನು ಗೆದಿದ್ದಾರೆ. 2009ರಲ್ಲಿ 10 ಮಹಿಳೆಯರನ್ನು ಸೇರಿಸಿ ಬಡಗುತಿಟ್ಟಿನ “ಮಹಾಲಕ್ಷಿ ಮಹಿಳಾ ಯಕ್ಷ ಕಲಾ ಮಂಡಳಿ’ಯನ್ನು ಸ್ಥಾಪಿಸಿದರು.

ಈ ತಂಡ ಈಗಾಗಲೇ 9 ಪ್ರಸಂಗಗಳನ್ನು ಕಟ್ಟಿಕೊಡುತ್ತಿದೆ. ಪತಿ ಸುರೇಶ್‌ ನಾಯಕ್‌ ಹಾಗೂ ಮಕ್ಕಳಾದ ಗುರುಪ್ರಸಾದ್‌ ಮತ್ತು ರಕ್ಷಿತ್‌ರ ಬೆಂಬಲದಿಂದಾಗಿ ಇಷ್ಟನ್ನೆಲ್ಲ ಸಾಧಿಸಿದೆ ಎನ್ನುವ ಉಷಾ, ಪ್ರಸ್ತುತ ಪಿಎಚ್‌.ಡಿ ಅಧ್ಯಯನ ನಡೆಸುತ್ತಿದ್ದಾರೆ. 

ಯಕ್ಷಗಾನವು ನನ್ನ ಮನಸ್ಸಿಗೆ ಖುಷಿ ಕೊಡುವ ಕಲೆ. ಈ ಗಂಡು ಕಲೆ ಯಾವತ್ತೂ ನನಗೆ ಕಷ್ಟವಾಗಿದ್ದೇ ಇಲ್ಲ. ಪುರುಷರ ಯಕ್ಷಗಾನದಂತೆ ಮಹಿಳಾ ಯಕ್ಷಕಲೆಯೂ ಅಪಾರ ಜನಪ್ರಿಯತೆ ಪಡೆಯುತ್ತಿದೆ. ಇನ್ನಷ್ಟು ಹೆಣ್ಮಕ್ಕಳು ಬಣ್ಣ ಹಚ್ಚಿ, ರಂಗಸ್ಥಳವನ್ನು ಏರಲಿ ಎನ್ನುವುದೇ ನನ್ನ ಆಸೆ.
-ಉಷಾ ನಾಯಕ್‌ 

* ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

Ambari-utsava

Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sathish-sail–court

Belekeri Mining Case: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಜೈಲು ಶಿಕ್ಷೆಗೆ ಹೈಕೋರ್ಟ್‌ ತಡೆ

Ambari-utsava

Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’

Basavaraj-horatti

CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.