ಮುದ್ದಿನ ಮಗಳೇ… ಅಪ್ಪನೆಂಬ ಆಪ್ತಮಿತ್ರನ ಓಲೆ
Team Udayavani, Nov 29, 2017, 6:35 AM IST
ಎದೆಯೆತ್ತರ ಬೆಳೆದ ಮಗಳು ಕಣ್ತಪ್ಪಿಸಿ ಮಾತಾಡುತ್ತಿದ್ದಾಳೆ. ಹತ್ತು ಪ್ರಶ್ನೆಗೆ ಒಂದೇ ಉತ್ತರ. ಕೆಲವೊಮ್ಮೆ ಅದೂ ಇಲ್ಲ. ಅವಳ ಮೌನ ಗಟ್ಟಿ ಧ್ಯಾನವನ್ನೂ ಕಂಡ ತಂದೆ ಪತ್ತೇದಾರನಾಗಿ ಬಿಡುತ್ತಾನೆ. ಅವನಿಗೊಂದು ಹೊಸ ಸತ್ಯ ಗೋಚರಿಸುತ್ತದೆ. ಆಗ ಅವನು ಮಗಳಿಗೆ ಹೇಳುವ ಮಾತುಗಳೆಲ್ಲಾ ಇಲ್ಲಿ ಅಕ್ಷರದ ಹೂವಾಗಿ ಹರಡಿಕೊಂಡಿವೆ. ಬಹುಪಾಲು, ಎಲ್ಲ ಅಪ್ಪಂದಿರ ಮನದ ಮಾತೂ ಹೀಗೇ ಇರುತ್ತದೆ….
ನಂಗೆ ಗೊತ್ತು. ಈ ಪತ್ರ ಕಂಡದ್ದೇ ನೀನು ಗಾಬರಿಯಾಗ್ತಿàಯ. ಓದುವುದಕ್ಕೆ ಮೊದಲೇ ಬೆಚ್ಚಿ ಬೀಳ್ತೀಯ. ಈ ಪತ್ರ ಯಾವ ಸಂಕಟಕ್ಕೆ ಮುನ್ನುಡಿ ಎಂದು ಯೋಚಿಸಿ ಹಣ್ಣಾಗಿರಿ¤àಯ. ರಾತ್ರಿ ಗುಡ್‌ನೈಟ್ ಹೇಳಿ ಮಲಗಿಸಿದ ಅಪ್ಪ, ಮಧ್ಯರಾತ್ರಿ ಎದ್ದುಬಂದು ಹಣೆಗೆ ಮುತ್ತಿಟ್ಟ ಅಪ್ಪ, ಬೆಳಗ್ಗೆ ಹಾರ್ಲಿಕ್ಸ್‌ನ ಜತೆಗೇ ಬಂದು ಗುಡ್‌ಮಾರ್ನಿಂಗ್ ಹೇಳಿದ ಅಪ್ಪ, ಬಲವಂತ ಮಾಡಿ ತಿಂಡಿ ತಿನ್ನಿಸಿದ ಅಪ್ಪ, ಕಾಲೇಜಿಂದ ಬೇಗ ಬಂದಿºಡೂ…ಎಂದು ಎಚ್ಚರಿಸಿದ ಅಪ್ಪ, ನಿಧಾನವಾಗಿ ಸ್ಕೂಟಿ ಓಡಿಸು ಎಂದು ಬುದ್ಧಿ ಹೇಳಿದ ಅಪ್ಪ, ಗಂಟೆಗಂಟೆಗೂ ಫೋನ್ ಮಾಡಿ ಕಷ್ಟ ಸುಖ ವಿಚಾರಿಸುವ ಅಪ್ಪ, ಹುಡುಗ್ರು ಕಾಟ ಕೊಡ್ತಾರೋ ಎಂದು ಕೇಳಿ ಕಣ್ಣು ಹೊಡೆದ ಅಪ್ಪ, ಈಗ ಇದ್ದಕ್ಕಿದ್ದಂತೆ ಪತ್ರ ಬರೆದದ್ದೇಕೆ ಎಂಬುದು ನಿನ್ನ ಪ್ರಶ್ನೆಯಲ್ಲವಾ ಮಗಳೇ?
ಕಂದಾ, ನನ್ನಲ್ಲಿ ಗುಟ್ಟುಗಳಿಲ್ಲ. ಹಠವಿಲ್ಲ. ಅನುಮಾನವಿಲ್ಲ. ಸಂಶಯದ ಈಟಿಯಿಲ್ಲ. ನನ್ನದು ಪುಟ್ಟ ಪ್ರಪಂಚ. ಅಲ್ಲಿರುವುದು ಅವಳೊಬ್ಬಳೇ- ನನ್ನ ಮಗಳು. ಅವಳು ಜಾಣೆ, ತುಂಟಿ, ಹಠಮಾರಿ, ಮೊಂಡು ಮೂಗಿನ ಸುಂದರಾಂಗಿ, ನನ್ನ ಥರಾನೇ ಸ್ವಲ್ಪ ಭಾವುಕಿ. ಸ್ವಲ್ಪ ಅಮಾಯಕಿ. ಸ್ವಲ್ಪ ಮಟ್ಟಿಗಿನ ಯಾಮಾರಿಸುವ ಗಿರಾಕಿ! ಹೌದು ಕಣೇ, ಅದೆಲ್ಲಾ ನೀನು.
ಚಿಕ್ಕಂದಿನಿಂದಲೂ ಅಷ್ಟೆ, ನನಗೆ ತುಂಬ ಇಷ್ಟವಾದದ್ದು ನಿನ್ನ ಪ್ರಾಮಾಣಿಕತೆ. ಯಾರೂ ಹೇಳಿ ಕೊಡದೇ ನಿನಗೆ ಬಂದದ್ದು ಅದು. ಹೌದಲ್ವಾ? ಯಾವತ್ತಿಗೂ ನೀನು ಸುಳ್ಳು ಹೇಳಲಿಲ್ಲ. ಬ್ಯಾಡ್ ಗರ್ಲ್ ಅನ್ನಿಸಿಕೊಳ್ಳಲಿಲ್ಲ. ನಂಗೆ ಇದೇ ಬೇಕು, ಇಂಥದೇ ಆಗಬೇಕು ಎಂದು ಹಟ ಹಿಡಿಯಲಿಲ್ಲ. ಸೋತಾಗ ಕುಗ್ಗಲಿಲ್ಲ, ಗೆದ್ದಾಗ ಹಿಗ್ಗಲಿಲ್ಲ. ಅಮ್ಮ ನಿನ್ನನ್ನು ಬಿಟ್ಟು ಹೋದಾಗ ಕೂಡ- ಹೌದು ಮಗಳೇ, ಆಗಲೂ ನೀನು ಧೈರ್ಯ ಕಳೆದುಕೊಳ್ಳಲಿಲ್ಲ. ಕಣ್ಣೀರು ಹಾಕಲಿಲ್ಲ. ನಿದ್ರೆಯಲ್ಲಿ ಕನವರಿಸಲಿಲ್ಲ. ದೇವರ ಮುಂದೆ ನಿಂತು- ನಂಗೆ ನಮ್ಮಮ್ಮ ಬೇಕೂ ಎಂದು ಅಳುತ್ತ ನಿಲ್ಲಲಿಲ್ಲ. ಬದಲಿಗೆ, ನನಗೇ ಸಮಾಧಾನ ಹೇಳಿದೆ. “ಅಮ್ಮ ಜತೆಗಿಲ್ಲ ಕಣಪ್ಪಾ ಈಗ, ಹುಷಾರಾಗಿರು ನೀನು. ಮನೇಲಿ ಒಂಟಿ ಇರಿ¤àಯ. ವಾಕ್ ಮಾಡುವಾಗ ಹುಷಾರು. ನೆಲ ಜಾರುತ್ತೆ. ಹುಷಾರಾಗಿ ನಡೆದಾಡು. ಮಾತ್ರೆ ತಗೊಳ್ಳೋದು ಮರೀಬೇಡ. ಸ್ವೀಟ್ ಕಡೆ ಅಪ್ಪಿತಪ್ಪಿ ಕೂಡ ತಿರುಗಿ ನೋಡಬೇಡ…’ ಎಂದೆಲ್ಲ ಬುದ್ಧಿ ಹೇಳಿದೆ. ಒಂಟಿಯಾಗಿ ಬದುಕೋದು ಹೇಗೆ ಅಂತ ಹೇಳಿಕೊಟ್ಟೆ. ಇದನ್ನೆಲ್ಲ ಕಂಡಾಗ ಮಗಳೇ…ನನಗೆ ನಮ್ಮಮ್ಮ ನೆನಪಾಗ್ತಾ ಇದುÛ. ಹಾಂ…ಓದ್ತಾ ಇದೀಯ ತಾನೇ?
ನಿನ್ನ ಪ್ರೀತಿ, ನಿನ್ನ ನೇರವಂತಿಕೆ, ನಿನ್ನ ಒಳ್ಳೆಯತನ, ನಿನ್ನ ಮುಗ್ಧತೆ, ಯಾವತ್ತಿಗೂ ಕಡಿಮೆಯಾಗದ ನಿನ್ನ ಪ್ರಾಮಾಣಿಕತೆಯನ್ನು ಕಂಡು- ನನ್ನ ಮಗಳು ದೇವರು ಅಂದುಕೊಂಡೆ. ನನಗೆ ಸಿಕ್ಕಿರೋದು ದೇವರ ಕಂದ; ಅದು ದೇವರು ಕೊಟ್ಟ ವರ, ಎಟಛ’s ಎಜಿfಠಿ ಎಂದುಕೊಂಡೆ. ನನ್ನ ಪಾಲಿಗೆ ಮಗಳೇ ದೇವರು ಅಂದುಕೊಂಡೆ. ದೇವರು ನನ್ನನ್ನು ಬಿಟ್ಟು ಹೋಗುವುದಿಲ್ಲ. ನನಗೆ ಸುಳ್ಳು ಹೇಳುವುದಿಲ್ಲ, ನನ್ನ ಕಣ್ತಪ್ಪಿಸಿ ತಿರುಗುವುದಿಲ್ಲ….ಹೀಗೆಲ್ಲ ಅಂದುಕೊಂಡಿದ್ದೇ ಮಗಳೇ.
ಆದರೆ… ಯಾಕೋ ಇತ್ತೀಚೆಗೆ ನನ್ನ ಮಾತುಗಳ ಮೇಲೆ ನನಗೇ ನಂಬಿಕೆ ಬರ್ತಾ ಇಲ್ಲ. ನನ್ನ ದೇವರು ನನಗೆ ಮೋಸ ಮಾಡೋಕೆ ಪ್ರಯತ್ನಿಸ್ತಾ ಇದಾನೆ ಅನ್ನಿಸ್ತಿದೆ. ನನ್ನ ಪುಟ್ಟ ಪ್ರಪಂಚಕ್ಕೆ ಇನ್ಯಾರೋ ಎಂಟ್ರಿಯಾದ ಹಾಗೆ ಕಾಣಿಸ್ತಿದೆ. ಅದಕ್ಕೇ ಇರಬೇಕು; ನನಗೆ ಯಾಕೋ ಸಂಕಟವಾಗ್ತಿದೆ. ಯಾಕೋ ಕೋಪ ಬರ್ತಾ ಇದೆ. ಇದ್ದಕ್ಕಿದ್ದ ಹಾಗೆ ನನ್ನ ಮುದ್ದಾದ ಗೊಂಬೆಯನ್ನು ಬೇರೆ ಯಾರೋ ಕಿತ್ಕೊàತಾ ಇದಾರೆ ಅನ್ನಿಸ್ತಿದೆ. ಈ ಜಗತ್ತಿನಲ್ಲಿ ನಾನು ಒಂಟಿ, ಒಂಟಿ, ಒಬ್ಬಂಟಿ ಅನಿಸೋಕೆ ಶುರುವಾಗಿದೆ. ನಿಜ ಹೇಳಲಾ ಮಗಳೇ-
ಹೌದು, ನೀನೀಗ ಮೊದಲಿನಂತಿಲ್ಲ. ನನ್ನಿಂದ ಅದೇನೋ ಮುಚ್ಚಿಡ್ತಾ ಇದೀಯ. ಗುಟ್ಟು ಮಾಡೋಕೆ ನೋಡ್ತಾ ಇದೀಯ. ಮುಂಜಾನೆಯೇ ದೇವರು ಮುಂದೆ ನಿಂತು- “ಯಾಕುಂದೇಂದು ತುಷಾರ ಹಾರ ಧವಳಾ…’ ಎಂದು ಶ್ಲೋಕ ಹೇಳ್ತಿದ್ದೆ ನಿಜ. ಆದ್ರೆ, ನಿನ್ನ ಕಣ್ಮುಂದೆ ಬೇರೆ ಯಾರದೋ ಚಿತ್ರವಿದ್ದ ಹಾಗಿತ್ತು. ನನಗೆ ಅರ್ಥವಾಗದ ಹಾಗೆ, ತುಂಬ ಸಂದರ್ಭದಲ್ಲಿ ನನ್ನ ಸಮಾಧಾನಕ್ಕಾಗಿ ಮಾತ್ರ ನೀನು ಶ್ಲೋಕ ಹೇಳಿದ ಹಾಗಿತ್ತು. ಆನಂತರದಲ್ಲಿ, ಮಗಳೇ- ಅಗತ್ಯ ಬಿದ್ದಾಗಲೆಲ್ಲ ನೀನು ಕೈಗೆ ಸಿಗದೆ ಅಡ್ಡಾಡಿದೆ. ಅಕಸ್ಮಾತ್ ಸಿಕ್ಕಾಗ ಕೂಡ ಏನೋ ನೆಪ ಹೇಳಿ ಮಾತು ಮರೆಸಿದೆ. ಮಾತಿಗೆ ಕೂತಾಗ ಕೂಡ ಸುಮ್ಮಸುಮ್ಮನೇ ಮೊಬೈಲು ಕಿವಿಗಿಟ್ಟುಕೊಂಡು ಎದ್ದು ಹೋಗುತ್ತಿದ್ದೆ!
ಹೌದು ಮಗಳೇ, ಸುದ್ದಿ ನನಗೇ ತಲುಪಿದೆ. ನೀನು ಯಾರನ್ನೋ ಪ್ರೀತಿಸ್ತಿದೀಯಂತೆ! ಅವನು ಯಾರು? ಹೇಗಿದ್ದಾನೆ? ಎಲ್ಲಿಯವನು? ಏನು ಮಾಡ್ತಾನೆ? ಯಾವ ಜಾತಿಯವನು? ಉಹುಂ, ಇಂಥ ಯಾವ ಪ್ರಶ್ನೆಯನ್ನೂ ನಾನು ಕೇಳಲ್ಲ. ಯಾಕೆಂದರೆ ನಿನ್ನ ಸೆಲೆಕ್ಷನ್ ಯಾವತ್ತೂ ಗ್ರ್ಯಾಂಡ್ ಆಗಿಯೇ ಇರ್ತದೆ- ನಿನ್ನ ಹಾಗೆ! ನಿಜ ಹೇಳಲಾ? ನನ್ನ ಪ್ರಕಾರ ಪ್ರೀತಿಸುವುದು ತಪ್ಪಲ್ಲ, ಪ್ರೀತಿಸದೇ ಬದುಕ್ತೀವಲ್ಲ? ಅದು ತಪ್ಪು! ನೀನು ಪ್ರೀತಿಸ್ತಾ ಇದೀಯ ಅನ್ನೋ ವಿಷಯ ಕೇಳಿದಾಗಿನಿಂದ ಯಾಕೋ ನಾನು ಒಂಟಿ ಅನ್ನಿಸ್ತಿದೆ. ಇನ್ನು ಮುಂದೆ, ಪ್ರೀತಿಸಿದ ಹುಡುಗನೇ ನಿನ್ನ ಪ್ರಪಂಚ ಆಗಿಬಿಡ್ತಾನೇನೋ; ಅವನ ಪ್ರೀತಿಯಲ್ಲಿ, ಅವನ ಮೋಹದಲ್ಲಿ, ಅವನ ಧ್ಯಾನದಲ್ಲಿ, ಅವನ ಆರೈಕೆಯಲ್ಲಿ ನನ್ನನ್ನು ನೀನು ಮರೆತುಬಿಡ್ತೀಯೇನೋ? ಎಂದೆಲ್ಲ ಅನಿಸಿಬಿಡುತ್ತೆ ನನಗೆ. ಅಂಥ ಸಂದರ್ಭದಲ್ಲೆಲ್ಲ- ಹೂಂ ಕಣೇ, ಯಾಕೋ ಕಣ್ತುಂಬಿ ಬರುತ್ತೆ. ನಿನ್ನ ಹೆಸರು ಕೂಗಲು ನೋಡಿದ್ರೆ ಧ್ವನಿ ಗದ್ಗದ. ಕಣ್ಣುಜ್ಜಿಕೊಳ್ಳೋಣ ಅಂದ್ರೆ ಅಷ್ಟು ಹೊತ್ತಿಗಾಗಲೇ ಕಣ್ಣೀರು ಕೆನ್ನೆಗಿಳಿದಿರುತ್ತದೆ. ಮಗಳು ಹೊರಟುಹೋದರೆ ಈ ಬದುಕಿಗೆ ಅರ್ಥವೇ ಇರೋದಿಲ್ಲ. ಆಗ ನನ್ನ ನಗುವಿಗೆ ಸಂಭ್ರಮಿಸುವವರಿಲ್ಲ. ಅಳುವಿಗೆ ಸಂಕಟಪಡೋರಿಲ್ಲ. ನಾನು ಬದುಕಲಿ ಅಂತ ಪ್ರಾರ್ಥಿಸುವವರೂ ಇರಲ್ಲ ಅನ್ನಿಸಿಬಿಡುತ್ತೆ. ಹೀಗೆ ಅನ್ನಿಸಿದಾಗಲೆಲ್ಲ-ಜಾತ್ರೆಯ ಮಧ್ಯೆ ಮಾತು ಬಾರದ ಮಗುವನ್ನು ಬಿಟ್ಟುಹೋದ್ರೆ ಆಗುತ್ತೆ ನೋಡು? ಅಂಥ ಸಂಕಟ ಆಗುತ್ತೆ.
ಅರ್ಥವಾಯ್ತು ಮಗಳೇ, ನಾನಿಲ್ಲದೆ, ನನ್ನ ಹಾರೈಕೆಯಿಲ್ಲದೆ, ನನ್ನ ಪ್ರೀತಿಯಿಲ್ಲದೆ, ನನ್ನ ಸಿಡಿಮಿಡಿ ಇಲ್ಲದೆ, ನನ್ನ ರಕ್ಷಣೆಯೂ ಇಲ್ಲದೆ ನೀನು ಬದುಕಬಲ್ಲೆ ನಿಜ. ಆದರೆ, ನೀನಿಲ್ಲದೆ ನಾನು ಬದುಕಲಾರೆ. ನಿನ್ನ ಹುಸಿಮುನಿಸು, ಕರಡಿ ಪ್ರೀತಿ, ಬೆಚ್ಚನೆಯ ಗುಡ್‌ಮಾರ್ನಿಂಗ್ ಕೇಳದೆ ನಾನು ಬದುಕಲಾರೆ. ನಿನಗೆ ಹಲೋ ಹೇಳದೆ ನಾನು ಉಸಿರಾಡಲಾರೆ ಮಗಳೇ…ನಿನ್ನ ಕನವರಿಕೆ ಇಲ್ಲದೆ ನಿದ್ರಿಸಲಾರೆ. ಹೌದು ಕಣೇ, ನಿನ್ನ ಮುನಿಸು ನೋಡದೆ ಮಾತೂ ಆಡಲಾರೆ.
ಒಂದು ಮಾತು ಕೇಳು: ಇಷ್ಟು ಚಿಕ್ಕ ವಯಸ್ಸಿಗೇ ಪ್ರೀತಿಯ ಹೊಳೆಗೆ ಬೀಳುವ ಅರ್ಜೆಂಟು ನಿನಗಿಲ್ಲ. ಪ್ರೀತಿಯ ನೆಪದಲ್ಲಿ ಎಲ್ಲರನ್ನೂ ಧಿಕ್ಕರಿಸಿ ಹೋಗುವ ವಯಸ್ಸೂ ನಿನ್ನದಲ್ಲ. ಗೊತ್ತಲ್ಲ, ನಿನಗಿನ್ನೂ ಓದಲಿಕ್ಕಿದೆ. ಸಾಧಿಸಲು ಬಹಳಷ್ಟಿದೆ. ಮೊದಲು ಬದುಕಲ್ಲಿ ನೆಲೆ ಕಂಡುಕೋ. ಅವೆಲ್ಲಕ್ಕಿಂತ ಹೆಚ್ಚಾಗಿ, ಈಗ ನಿನ್ನ ಒಲುಮೆಯಿಂದಷ್ಟೇ ಉಸಿರಾಡುತ್ತಿರುವ ಈ ಬಡಪಾಯಿ ಅಪ್ಪನ ಮೇಲೆ ಒಂದೆರಡು ವರ್ಷಗಳ ಮಟ್ಟಿಗಾದರೂ ಕರುಣೆ ತೋರಿರು.
ಕಂದಾ, ಹೇಳಲಿಕ್ಕೆ ಇನ್ನೂ ತುಂಬಾ ಇದೆ. ಆದರೆ, ಅದನ್ನೆಲ್ಲ ಅಕ್ಷರಗಳಲ್ಲಿ ಹಿಡಿದಿಡಲು ಆಗುತ್ತಿಲ್ಲ. ಸಂಜೆ ಬಂದಾಗ ಒಂದೇ ಒಂದು ಬಾರಿ ನನ್ನ ಕಣ್ಣು ನೋಡು. ಎಲ್ಲವೂ ನಿನಗೇ ಅರ್ಥವಾಗುತ್ತೆ….
ನಿನ್ನ
ಪಪ್ಪ
-ಅಪರಿಚಿತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.