ಚಪ್ಪಲಿ ಕಚ್ಚಿತೇ?
Team Udayavani, Mar 11, 2020, 4:51 AM IST
“ಆಹಾ ಹೊಸ ಶೂ/ಚಪ್ಪಲಿ’ ಅಂತ ಬೆಳಗ್ಗೆ ಖುಷಿಯಿಂದ ಹಾಕಿಕೊಂಡು ಹೋದರೆ, ಸಂಜೆ ಬರುವಷ್ಟರಲ್ಲಿ “ಆ, ಇದೊಂದು ಹೊಸ ಚಪ್ಪಲಿ’ ಅನ್ನುವಂತಾಗಿರುತ್ತೆ. ಎಷ್ಟೇ ನೋಡಿ ಮಾಡಿ, ಅಳತೆಗೆ ಸರಿಯಾದ ಚಪ್ಪಲಿ ಖರೀದಿಸಿದರೂ, ಅದರಿಂದ ಕಚ್ಚಿಸಿಕೊಳ್ಳದವರಿಲ್ಲ. ಕೆಲವೊಮ್ಮೆ ಹೊಸ ಶೂ/ಚಪ್ಪಲಿಯಿಂದ ಆಗುವ ಗಾಯದ ಕಲೆ, ಕಾಲಿನ ಅಂದವನ್ನೇ ಕೆಡಿಸುವುದುಂಟು. ಹಲ್ಲಿಲ್ಲದೆ ಕಚ್ಚುವ ಚಪ್ಪಲಿಯಿಂದಾಗುವ ಗಾಯಕ್ಕೆ ಏನು ಮಾಡಬೇಕು ಗೊತ್ತಾ?
-ಗಾಯವಾಗಿರುವ ಜಾಗಕ್ಕೆ ಕೊಬ್ಬರಿ ಎಣ್ಣೆಯನ್ನು ಸವರಿ. ಗಾಯ ವಾಸಿ ಆಗುವವರೆಗೂ ಆ ಹೊಸ ಪಾದರಕ್ಷೆ ಧರಿಸಬೇಡಿ.
-ಪಾದರಕ್ಷೆಯ ಅಂಚಿಗೆ ಸ್ವಲ್ಪ ಎಣ್ಣೆ ಸವರಿದರೆ, ಅದರಿಂದ ಗಾಯವಾಗುವುದನ್ನು ತಪ್ಪಿಸಬಹುದು.
-ಜೇನುತುಪ್ಪವನ್ನು ಹಚ್ಚಿದರೆ ಗಾಯ ಬೇಗ ವಾಸಿಯಾಗುವುದಷ್ಟೇ ಅಲ್ಲದೆ, ಕಲೆ ಕೂಡಾ ಮಾಯವಾಗುತ್ತದೆ. ಜೇನಿನ ಜೊತೆಗೆ ಒಂದು ಹನಿ, ಎಳ್ಳೆಣ್ಣೆ ಮಿಶ್ರಣ ಮಾಡಿದರೆ ಹೆಚ್ಚು ಪರಿಣಾಮಕಾರಿ.
-ಅಕ್ಕಿಹಿಟ್ಟನ್ನು ನೀರಿನಲ್ಲಿ ಬೆರೆಸಿ, ಪೇಸ್ಟ್‌ನಂತೆ ಮಾಡಿ ಗಾಯದ ಮೇಲೆ ಸವರಿಕೊಳ್ಳಿ.
-ಅಲೋವೆರ ಜೆಲ್ ಅಥವಾ ತಾಜಾ ಲೋಳೆಸರವನ್ನು ಗಾಯದ ಮೇಲೆ ಸವರಿದರೆ ಬೇಗ ವಾಸಿಯಾಗುತ್ತದೆ.
-ಪೆಟ್ರೋಲಿಯಂ ಜೆಲ್ಲಿ ಅಥವಾ ಅದರಿಂದ ತಯಾರಿಸಲ್ಪಟ್ಟ ಕ್ರೀಂ ಕೂಡಾ ಬಳಸಬಹುದು.
– ಆಲೂಗಡ್ಡೆಯ ರಸ ಹಚ್ಚಿದರೆ ಗಾಯ ಬೇಗ ಮಾಯುತ್ತದೆ.
-ಶೂ ಧರಿಸುವ ಮುನ್ನ ಅದರೊಳಗೆ ಟಾಲ್ಕಮ್ ಪೌಡರ್ ಹಾಕಿದರೆ, ಅದರಿಂದ ಗಾಯವಾಗುವ ಅಪಾಯ ಕಡಿಮೆಯಿರುತ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.