ಭಾಳ ಡಿಫರೆಂಟು ಈ ಮಿಸ್ಸು !
ಸ್ತ್ರೀಲೋಕ
Team Udayavani, Jan 1, 2020, 4:27 AM IST
ಹೆಣ್ಣುಮಕ್ಕಳಿಗೆ ತಾಳ್ಮೆ ಜಾಸ್ತಿ. ಚಿಕ್ಕಮಕ್ಕಳನ್ನು ಸಂಭಾಳಿಸುವ ಚಾಕಚಕ್ಯತೆ ಜಾಸ್ತಿ. ಅದಕ್ಕಾಗಿಯೇ, ನರ್ಸರಿ, ಪ್ರೈಮರಿ ಶಾಲೆಗಳಲ್ಲಿ ಸರ್‌ಗಳಿಗಿಂತ, ಮಿಸ್‌ಗಳೇ ಹೆಚ್ಚಿರುವುದು. ಮಕ್ಕಳೂ ಅಷ್ಟೇ, “ಭಾಳ ಒಳೊರ್ ನಮ್ ಮಿಸ್ಸು’ ಅಂತ ಮಿಸ್‌ಗಳನ್ನೇ ಮೆಚ್ಚಿಕೊಳ್ಳುವುದು. ಇದು ಅಂಥದ್ದೇ ಒಬ್ಬ “ಭಾಳ ಒಳ್ಳೇ ಮಿಸ್’ನ ಕಥೆ.
ಸ್ಪೇನ್‌ನ 43 ವರ್ಷದ ವೆರೋನಿಕಾ ಡುಕ್, ಪ್ರೈಮರಿ ಶಾಲೆಯೊಂದರಲ್ಲಿ ಶಿಕ್ಷಕಿ. ಅವರು, ಆರ್ಟ್, ಇಂಗ್ಲಿಷ್, ಸ್ಪ್ಯಾನಿಷ್, ನ್ಯಾಚುರಲ್ ಸೈನ್ಸ್‌ನ ಪಾಠ ಮಾಡುತ್ತಾರೆ. ವಿನೂತನ ಐಡಿಯಾಗಳನ್ನು ಬಳಸಿ, ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡುವುದು ವೆರೋನಿಕಾರ ಸ್ಪೆಷಾಲಿಟಿ. ಇತ್ತೀಚೆಗೆ ತರಗತಿಯಲ್ಲಿ ಅವರು ಪ್ರಯೋಗಿಸಿದ “ಹೊಸ ಐಡಿಯಾ’, ಎಲ್ಲೆಡೆ ಸದ್ದು ಮಾಡುತ್ತಿದೆ. ಮಾನವನ ದೇಹದಲ್ಲಿ ಯಾವ ಅಂಗಗಳು (ಹೃದಯ, ಕರುಳು, ಶ್ವಾಸನಾಳ) ಎಲ್ಲೆಲ್ಲಿವೆ ಅಂತ ತೋರಿಸಲು, ತರಗತಿಯಲ್ಲಿ ಮಾದರಿ ಚಿತ್ರಗಳನ್ನು ತೋರಿಸುವುದು ರೂಢಿ. ಆದರೆ, ವೆರೋನಿಕಾ, ದೇಹದ ಅಂಗಗಳ ಚಿತ್ರವಿರುವ ಬಾಡಿಸೂಟ್ ತೊಟ್ಟು, ಕ್ಲಾಸ್‌ಗೆ ಹೋಗಿದ್ದಾರೆ. ಆ ಬಾಡಿ ಸೂಟ್ ಮೇಲೆ ದೇಹದ ಪ್ರತಿ ಅಂಗವೂ ಎಲ್ಲೆಲ್ಲಿದೆ ಎಂಬುದನ್ನು ಯಥಾವತ್ತಾಗಿ ಚಿತ್ರಿಸಲಾಗಿತ್ತು. ಆ ಬಟ್ಟೆ ತೊಟ್ಟಾಗ, ದೇಹದ ಒಳಗೆ ಏನೇನಿದೆ, ಎಲ್ಲೆಲ್ಲಿದೆ ಎಂಬುದು ಸುಲಭವಾಗಿ ಅರ್ಥವಾಗುವಂತಿತ್ತು. ಈ ರೀತಿ ಮಾಡಲು, ಸ್ವಿಮ್‌ಸೂಟ್‌ನ ಜಾಹೀರಾತೊಂದು ಅವರಿಗೆ ಪ್ರೇರಣೆ ನೀಡಿತಂತೆ. ಅಷ್ಟೇ ಅಲ್ಲ, ರಂಗ ಪರಿಕರಣಗಳನ್ನು ಬಳಸುವುದು, ರಾಜ/ರಾಣಿಯರಂತೆ ವೇಷ ತೊಟ್ಟು ಇತಿಹಾಸದ ಪಾಠ ಮಾಡುವುದು, ಇವರ ವೈಖರಿಯಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.