ಡೈನೋಸರ್‌ ಪ್ರಿಂಟ್‌, ಜಂಪರ್‌ ಮೇಲೆ ದೈತ್ಯಜೀವಿ!


Team Udayavani, Feb 8, 2017, 10:44 AM IST

dinosaras.jpg

ಟೀ ಶರ್ಟ್‌ ಅಥವಾ ಜಂಪರ್‌ ಅನ್ನೋ ಕಂಫ‌ರ್ಟ್‌ ಡ್ರೆಸ್‌ನ ಸಾರ್ವಕಾಲಿಕತೆ ಬಗ್ಗೆ ಯಾರೂ ಕಮಕ್‌ ಕಿಮಕ್‌ ಅನ್ನಲ್ಲ. ತೆಳ್ಳನೆಯ ದೇಹಕ್ಕೆ ಹಿತವಾಗುವ ಯಾವ ಸೀಸನ್‌ನಲ್ಲೂ ಧರಿಸಲು ಇಷ್ಟವಾಗೋ ಡ್ರೆಸ್‌ ಇದು. 
ಮೆಟೀರಿಯಲ್‌ನಲ್ಲೇನೋ ಹೆಚ್ಚಿನ ವ್ಯತ್ಯಾಸ ಇರಲ್ಲ. ಆದರೆ, ಟೀಶರ್ಟ್‌ ಡಿಸೈನ್‌ಗಳು ಬದಲಾಗುತ್ತ ಇರುತ್ತವೆ. ಅವುಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತವೆ. ಸದ್ಯಕ್ಕೀಗ ಡೈನೊಸರ್‌ ಟ್ರೆಂಡ್‌ ಟೀ ಶರ್ಟ್‌ನ್ನಾವರಿಸಿದೆ. ನಮ್ಮ ಬಾಲಿವುಡ್‌ಗಿಂತಲೂ ಹಾಲಿವುಡ್‌ನ‌ಲ್ಲೇ ಇದರ ಹವಾ ಹೆಚ್ಚು. 
*
ಟೀ ಶರ್ಟ್‌ಗಳಲ್ಲಿ ಎಷ್ಟೊಂದು ಟ್ರೆಂಡ್‌ಗಳು ಬಂದವು ಒಂದು ಸಲ ನೆನಪು ಮಾಡ್ಕೊಳ್ಳಿ. ಮೊದ ಮೊದಲು ಬಂದಿದ್ದು ಗ್ರಾಫಿಕ್ಸ್‌ ಪ್ರಿಂಟ್‌. ಟೀಶರ್ಟ್‌ನಲ್ಲಿ ಸಿಂಹ, ಹುಲಿ, ಚಿರತೆಗಳು ಗರ್ಜಿಸಿ, ಪರಚಿ ಮರೆಯಾದವು. ನಂತರ ಹೂಗಳ ಟ್ರೆಂಡ್‌ ಬಂತು. ಚೆಂದ ಹೂ ಬಳ್ಳಿಗಳು ಹೂ ಬಿಸಿಲಿನ ನಗು ಬೀರುತ್ತ ಬಾಯ್‌ ಮಾಡಿದವು. ಚೆಂದದ ಕೋಟ್‌ಗಳಿದ್ದ ಟೀ ಶರ್ಟ್‌ಗಳು ಬಂದವು, ಪ್ರೇಮ ನಿವೇದನೆ, ತತ್ವ, ಗಜಲ್‌, ಶಾಯಿರಿ, ಸೂಫಿ ಲೈನ್‌ಗಳೆಲ್ಲ ಟೀ ಶರ್ಟ್‌ನ ಮೇಲೆ ಓಡಾಡಿ ಅದನ್ನೋದಿದ ಹುಡುಗರ ಬಾಯಲ್ಲಿ ಒಳ್ಳೆ ಮಾತುಗಳು ಓಡಾಡಿದವು. ಇದಾಗಿ ಬೆಕ್ಕಿನ ಟೀ ಶರ್ಟ್‌ಗಳು ಫೇಮಸ್‌ ಆದವು. ಸೆ¾„ಲಿಗಳು ಕಾರುಬಾರು ಮಾಡಿದವು, ಅರಳಿದ ತುಟಿಗಳು ಟೀ ಶರ್ಟ್‌ ಮೇಲೆ ನಸುನಗೆ ಬೀರಿದವು. 

ಇವೆಲ್ಲ ಮೆರವಣಿಗೆ ಮುಗಿದು ಈಗ ಟೀ ಶರ್ಟ್‌ ಮೆರವಣಿಗೆಯಲ್ಲಿ ಡೈನೋಸರ್‌ಗಳ ಸವಾರಿ ಶುರುವಾಗಿದೆ.  ಇದಿನ್ನೂ ನಮ್ಮ ದೇಶದಲ್ಲಿ ಅಷ್ಟು ಫೇಮಸ್‌ ಆಗಿಲ್ಲ. ಆದರೆ ವಿದೇಶಗಳಲ್ಲಿ ಭರ್ಜರಿಯಾಗಿ ಓಡಾಡ್ತಿವೆ, ಇದನ್ನು ಮೊದಲು ಪರಿಚಯಿಸಿದ್ದು ಹಾಲಿವುಡ್‌. 

ಅದಕ್ಕೂ ಮೊದಲು ಇಂಗ್ಲೆಂಡ್‌ನ‌ ಸೂಪರ್‌ ಮಾಡೆಲ್‌ ಕೇಟ್‌ ಮೋಸ್‌ ಮೊದಲ ಸಲ ಡೈನೋಸರ್‌ ಜಂಪರ್‌ನಲ್ಲಿ ಮಿಂಚಿದ್ರು. ಅಂತರಾಷ್ಟ್ರೀಯ ಮಟ್ಟದ ಫ್ಯಾಶನ್‌ ಐಕಾನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ 43ರ ಹರೆಯದ ಕೇಟ್‌, ವೋಗ್‌ ಸೇರಿದಂತೆ 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮ್ಯಾಗಜಿನ್‌ಗಳ ಕವರ್‌ ಪೇಜ್‌ ಅಲಂಕರಿಸಿದವರು. ಕೇಟ್‌ಗೆ ಒಂದು ಖಯಾಲಿ ಇದೆ. ಫ್ಯಾಶನ್‌ನಲ್ಲಿ ಹೊಸತನ ತರಬೇಕು, ತಾನು ತೊಡುವ ಪ್ರತಿಯೊಂದು ಉಡುಪಿನಲ್ಲೂ ಹೊಸದೇನಾದರೂ ಇರಬೇಕು ಎಂಬ ಅಲಿಖೀತ ನಿಯಮವನ್ನು ಆಕೆ ಮಾಡಿಕೊಂಡಿದ್ದಾರೆ. ಸದಾ ಹೊಸತನ ಹುಡುಕಾಟದಲ್ಲಿರೋ ಆಕೆಗೆ ಈ ಡೈನೋಸರ್‌ ಸಪೈìಸ್‌ ಕೊಟ್ಟಿದೆ. ಖುಷಿ ಖುಷಿಯಾಗಿ ಡೈನೋಸರ್‌ ಜಂಪರ್‌ ಧರಿಸಿ, ಅದರ ಮೇಲಿಂದ ಚಿರತೆ ಪ್ರಿಂಟ್‌ನ ಜಾಕೆಟ್‌ ಹಾಕ್ಕೊಂಡು ಸ್ಟ್ರೀಟ್‌ ವಾಕ್‌ ಮಾಡಿದ್ರು. ಅದನ್ನು ಕಂಡು ಜನ ವ್ಹಾ, ವ್ಹಾ ಅಂದ್ರು. ಇಂಥ ಡೈನೋಸರ್‌ ಜಂಪರ್‌ ಎಲ್‌ ಸಿಗುತ್ತೆ ಅಂತನೂ ವಿಚಾರಿಸಿದರು. ಮೊದಲ ನಡೆಯಲ್ಲೇ ಆಕೆಯ ಸ್ಟೈಲ್‌ಗೆ ಸಿಕ್ಕ ಗೆಲುವು ಇದು. 

ಮುಂದೆ ಹಾಲಿವುಡ್‌ನ‌ಲ್ಲೆಲ್ಲ ಜನಪ್ರಿಯವಾದ ಡೈನೋಸರ್‌ ಪ್ರಿಂಟ್‌ ಟೀ ಶರ್ಟ್‌ ಬಗ್ಗೆ ಜನರಲ್ಲೂ ಕ್ರೇಜ್‌ ಬೆಳೆಯಿತು, ಇನ್ನೇನು ಕೆಲವೇ ದಿನಗಳಲ್ಲಿ ನಮ್ಮ ಬಾಲಿವುಡ್‌, ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಡೈನೋಸರ್‌ ಜಂಪರ್‌ ಧರಿಸಿ ತೆರೆಯ ಮೇಲೆ ಬಂದರೆ ಅಚ್ಚರಿಪಡಬೇಡಿ. 

ಆದರೆ ನಮ್ಮ ಆನ್‌ಲೈನ್‌ ಮಾರ್ಕೆಟಿಂಗ್‌ ಅಂತರಾಷ್ಟ್ರೀಯಮಟ್ಟದ್ದಾಗಿರೋ ಕಾರಣ ಬಾಲಿವುಡ್‌ಗೆ ಬರದ ಫ್ಯಾಶನ್‌ಗಳು ಇಲ್ಲಿ ಕಾಣಸಿಗುತ್ತವೆ. ಬಹಳ ಇಷ್ಟವಾದ್ರೆ ಆನ್‌ಲೈನ್‌ನಲ್ಲೇ ಡೈನಾಸರ್‌ ಪ್ರಿಂಟ್‌ ಇರೋ ಜಂಪರ್‌ಗಳನ್ನು ತರಿಸಿಕೊಳ್ಳಬಹುದು. 

ಡೈನೋಸರ್‌ ಜಂಪರ್‌ಗಳಲ್ಲಿ ಕಡುಬಣ್ಣದಲ್ಲಿ ಡೈನೋಸರ್‌ ಪ್ರಿಂಟ್‌ಗಳಿರೋದು ನೋಡಕ್ಕೂ ಚೆಂದ. ಅಂಥ ಡಿಸೈನ್‌ಗಳೇ ಹೆಚ್ಚು. ಕಡುನೀಲಿ, ಕಡುಗಪ್ಪು ಬಣ್ಣದ ಡೈನೋಸರ್‌ ಪ್ರಿಂಟ್‌ ಜಂಪರ್‌ಗಳನ್ನು ನೀವೂ ತೊಟ್ಕೊಳ್ಳಿ. 

– ನಿಶಾಂತ್‌ ಕಮ್ಮರಡಿ

ಟಾಪ್ ನ್ಯೂಸ್

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.