ಕಾಡುವ ನೆಗಡಿಗೆ
Team Udayavani, Mar 11, 2020, 4:36 AM IST
“ನಿಮಗೆ ನೆಗಡಿಯಾಗಿದೆಯೇ?’
“ಹೌದಪ್ಪಾ, ಹೌದು!’.
ಟಿ.ವಿಯಲ್ಲಿ ನಟ ಶಿವಾಜಿ ಪ್ರಭು ಮೂಗು, ಹಣೆ, ತಲೆ ಹಿಂಡುತ್ತಾ ಹೇಳುವ ಈ ಜಾಹೀರಾತು ಒಂದೆಡೆ ನಗೆ ತರಿಸಿದರೆ, ಇನ್ನೊಂದೆಡೆ ಅನುಕಂಪ ಮೂಡಿಸುತ್ತದೆ. ಯಾಕಂದ್ರೆ, ನೆಗಡಿಯ ಗಡಿಬಿಡಿ, ಸಿಡಿಸಿಡಿ ಅನುಭವಿಸುವುದು ಕಷ್ಟವೇ. ಶೀತವಾದಾಗ, ಅಡುಗೆಮನೆಯಲ್ಲಿ ಇರುವ ಸಾಮಗ್ರಿಗಳನ್ನೇ ಔಷಧವಾಗಿ ಬಳಸಬಹುದು.
– ಬಿಸಿ ಹಾಲಿಗೆ ಕಲ್ಲು ಸಕ್ಕರೆ ಹಾಗೂ ಕಾಳು ಮೆಣಸಿನ ಪುಡಿ ಬೆರೆಸಿ ಕುಡಿಯಿರಿ.
– ಒಂದು ಹಿಡಿ ತುಳಸಿ ಎಲೆ, ಅರ್ಧ ಚಮಚ ಕಾಳು ಮೆಣಸಿನ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ, ದಿನಕ್ಕೆ 3 ಬಾರಿ ಜೇನುತುಪ್ಪ ಬೆರೆಸಿ ಸೇವಿಸಿ.
-ಮೂಗಿನ ಸುತ್ತಲೂ ಕೊಂಚ ಸಾಸಿವೆ ಎಣ್ಣೆ ಹಚ್ಚಿದರೆ ನೆಗಡಿ ಮಾಯವಾಗುತ್ತದೆಂಬ ನಂಬಿಕೆಯಿದೆ.
-ಬಿಸಿ ಬಿಸಿ ಟೀಗೆ ಲಿಂಬೆ ಹಣ್ಣಿನ ರಸ ಬೆರೆಸಿ ಕುಡಿಯಿರಿ.
– 50 ಗ್ರಾಂ ಹುರುಳಿ, 10 ಗ್ರಾಂ ನೆಲ್ಲಿಹೋಳು, 3 ಗ್ರಾಂ ಹಿಪ್ಪಲಿಯನ್ನು ಕುಟ್ಟಿ ಕಷಾಯ ಮಾಡಿ, ಸೋಸಿ ಕುಡಿಯಬೇಕು.
-ಬೆಳ್ಳುಳ್ಳಿ ಮತ್ತು ಬೆಲ್ಲವನ್ನು ಸಮ ಪ್ರಮಾಣದಲ್ಲಿ ಕುಟ್ಟಿ, ರಾತ್ರಿ ಮಲಗುವ ಮುನ್ನ ತಿನ್ನಿ.
-ಒಂದಷ್ಟು ಸಬ್ಬಸಿಗೆ ಸೊಪ್ಪಿಗೆ ಅದರ ಎರಡರಷ್ಟು ಜೇಷ್ಠ ಮಧು ಬೆರೆಸಿ ಕುಟ್ಟಿ ಚೂರ್ಣ ಮಾಡಿಕೊಳ್ಳಿ. ಆ ಚೂರ್ಣಕ್ಕೆ ಒಂದಕ್ಕೆ ಎರಡರಂತೆ ಸಕ್ಕರೆ ಬೆರೆಸಿ ದಿನಕ್ಕೆ 3 ಬಾರಿ ಸೇವಿಸಿ.
– ಅಮೃತಬಳ್ಳಿ ಸೊಪ್ಪಿಗೆ ಉಪ್ಪು ಬೆರೆಸಿ ಜಗಿದು ಅದರ ರಸ ನುಂಗಬೇಕು.
-ಅಳಲೆಕಾಯಿ, ಶುಂಠಿ ಮತ್ತು ಕಾಳು ಮೆಣಸನ್ನು ಹುರಿದು ಚೂರ್ಣ ಮಾಡಿ, ಸಮಾಂಶ ಬೆಲ್ಲದೊಂದಿಗೆ ಎಳ್ಳೆಣ್ಣೆ ಸೇರಿಸಿ ಕಲಸಿ ಕೊಂಚ ಕೊಂಚ ಸೇವಿಸಿ.
ಕೆ. ಶ್ರೀನಿವಾಸರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.