ಹುಣ್ಣೆಂದು ಹೆದರದಿರಿ…
Team Udayavani, Dec 4, 2019, 4:13 AM IST
ಬಾಯಿಹುಣ್ಣು, ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಆರೋಗ್ಯ ಸಮಸ್ಯೆ. ಕೆಲವೊಮ್ಮೆ ಬಾಯಿಹುಣ್ಣಿನಿಂದಾಗಿ ಎರಡೂರು ದಿನ ಊಟ ಮಾಡಲು, ಮಾತನಾಡಲು, ನೀರು ಕುಡಿಯಲೂ ಕಷ್ಟವಾಗುವುದುಂಟು. ನಿದ್ರಾಹೀನತೆ, ದೇಹದ ಉಷ್ಣಾಂಶ, ನೀರು ಕುಡಿಯದಿರುವುದು, ಮಾನಸಿಕ ಒತ್ತಡ, ಹಾರ್ಮೋನ್ ವ್ಯತ್ಯಾಸ, ಬ್ಯಾಕ್ಟೀರಿಯಾ, ವಿಟಮಿನ್ ಬಿ 12 ಕೊರತೆ, ಮಸಾಲಯುಕ್ತ ಆಹಾರ ಸೇವನೆ- ಹೀಗೆ, ಹತ್ತಾರು ಕಾರಣಗಳಿಂದ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗೆ ಅಡುಗೆಮನೆಯಲ್ಲಿಯೇ ಔಷಧವೂ ಇದೆ. ಆದರೆ, ಹುಣ್ಣು ಒಂದು ವಾರಕ್ಕಿಂತ ಹೆಚ್ಚು ಕಾಲ ಗುಣವಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
-ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಆ್ಯಪಲ್ ಸಿಡೆರ್ ವಿನೆಗರ್ ಹಾಕಿ, ಬಾಯಿ ಮುಕ್ಕಳಿಸಿದರೆ ಹುಣ್ಣು ಬೇಗ ಗುಣವಾಗುತ್ತದೆ.
-ಲವಂಗ ಜಗಿಯುವುದರಿಂದ, ಬಾಯಿಹುಣ್ಣನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.
-ಜೇನುತುಪ್ಪವನ್ನು ಹತ್ತಿಯಲ್ಲಿ ಅದ್ದಿ ಬಾಯಿಹುಣ್ಣಿಗೆ ಹಚ್ಚುತ್ತಿದ್ದರೆ ನೋವು ಕಡಿಮೆಯಾಗುತ್ತದೆ.
– ಗಸೆಗಸೆಯನ್ನು ಜಗಿದು ನುಂಗಿದರೆ ದೇಹದ ಉಷ್ಣ ಕಡಿಮೆಯಾಗಿ ಬಾಯಿಹುಣ್ಣು ಬೇಗ ಗುಣವಾಗುತ್ತದೆ.
-ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಕುಡಿಯುವುದು, ಹುಣ್ಣಿಗೆ ರಾಮಬಾಣ.
-ಬಾಯಿ ಹುಣ್ಣಿಗೆ ದಿನಕ್ಕೆ ಎರಡು ಬಾರಿ ಶುದ್ಧ ಅರಿಶಿಣವನ್ನು ಹಚ್ಚಿ.
-ಶುದ್ಧ ಕೊಬ್ಬರಿಎಣ್ಣೆ ಅಥವಾ ತುಪ್ಪ ಹಚ್ಚುವುದರಿಂದಲೂ ಹುಣ್ಣು ಗುಣವಾಗುತ್ತದೆ.
-ಉಗುರು ಬೆಚ್ಚಗಿನ ಉಪ್ಪು ನೀರಿನಲ್ಲಿ ಆಗಾಗ್ಗೆ ಬಾಯಿ ಮುಕ್ಕಳಿಸಿ.
– ಸೀಬೆ/ ಪೇರಳೆಯ ಚಿಗುರು ಎಲೆಗಳನ್ನು ಅಥವಾ ಬಸಳೆ ಸೊಪ್ಪನ್ನು ಜಗಿದು ನುಂಗಿ.
– ಬೆಳ್ಳುಳ್ಳಿ ರಸವನ್ನು ಹಚ್ಚಿದರೆ (ಸ್ವಲ್ಪ ಉರಿಯುತ್ತದೆ) ಹುಣ್ಣು ಮಾಯವಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.