ಕೂದಲಿಗೆ ಬಿಯರ್ ಕುಡಿಸಿ! ರೇಷ್ಮೆಯಂಥ ಕೇಶಕ್ಕೆ 5 ಬಿಯರ್ ಪ್ಯಾಕ್ಸ್
Team Udayavani, Aug 23, 2017, 9:24 AM IST
ಬಿಯರ್ ಕೇವಲ ಪಾರ್ಟಿ ಡ್ರಿಂಕ್ಸ್ ಆಗಷ್ಟೇ ಅಲ್ಲ, ಹೇರ್ ಮಾಸ್ಕ್ ಆಗಿಯೂ ಉಪಯುಕ್ತ. ಕಾಂತಿ ಕಳೆದುಕೊಂಡಿರುವ ಕೂದಲಿಗೆ ಹೊಳಪು ನೀಡಲು, ಕೂದಲನ್ನು ಸಧೃಡವಾಗಿಸಲು ಬಿಯರ್ ಹೇರ್‌ಪ್ಯಾಕ್ ಬಳಸಬಹುದು…
1. ಬಿಯರ್ ಮಸಾಜ್: ಒಂದು ಗ್ಲಾಸ್ ಬಿಯರ್ ತೆಗೆದುಕೊಂಡು ಕೂದಲಿನ ಮೂಲಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದು ಹಾಗೇ ಒಣಗಲು ಬಿಡಿ.
2. ಬಿಯರ್- ಮೊಟ್ಟೆ ಮಾಸ್ಕ್: ಒಂದು ಕಪ್ ಬಿಯರ್‌ಗೆ 2 ಮೊಟ್ಟೆ ಒಡೆದು ಹಾಕಿ ಹದವಾಗಿ ಮಿಶ್ರಣ ತಯಾರಿಸಿ. ಅದನ್ನು ತಲೆಗೆ ಹೇರ್‌ಪ್ಯಾಕ್‌ನಂತೆ ಹಚ್ಚಿಕೊಂಡು 20-30 ನಿಮಿಷ ಬಿಟ್ಟು ಸ್ನಾನ ಮಾಡಿ. ಆಗ ಕೂದಲಿಗೆ ಮೃದುತ್ವ ಬರುತ್ತದೆ.
3. ಬಿಯರ್, ಜೇನುತುಪ್ಪ, ಬಾಳೆಹಣ್ಣಿನ ಹೇರ್‌ಪ್ಯಾಕ್: ಜೇನು ಮತ್ತು ಬಾಳೆಹಣ್ಣು ಬಾಯಿಗಷ್ಟೇ ಅಲ್ಲ, ಕೂದಲಿಗೂ ಸಿಹಿಯೇ. ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ಅದಕ್ಕೆ 2 ಚಮಚ ಜೇನುತುಪ್ಪ, ಅರ್ಧ ಕಪ್ ಬಿಯರ್ ಸೇರಿಸಿ. ಅದು ಪೇಸ್ಟ್‌ನಂತೆ ಹದವಾದಾಗ ಹೇರ್‌ಪ್ಯಾಕ್ ಹಾಕಿಕೊಳ್ಳಿ. ಅರ್ಧಗಂಟೆ ಬಿಟ್ಟು ಸ್ನಾನ ಮಾಡಿ.
4. ಬಿಯರ್- ಆಯಿಲ್ ಹೇರ್‌ಪ್ಯಾಕ್: ಬಿಯರ್ ಮತ್ತು ಎಣ್ಣೆ ಕೂದಲಿಗೆ ನೈಸರ್ಗಿಕ ಹೊಳಪು ನೀಡುತ್ತವೆ. ಒಂದು ಕಪ್ ಬಿಯರ್‌ಗೆ ಒಂದು ಚಮಚ ಎಣ್ಣೆ (ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ , ಹರಳೆಣ್ಣೆ ಯಾವುದೇ ಆಗಬಹುದು)
5. ಬಿಯರ್- ಆ್ಯಪಲ್ ಸೈಡರ್ ವಿನೇಗರ್ ಮಾಸ್ಕ್: ಬಿಯರ್ ಮತ್ತು ಆ್ಯಪಲ್ ಸೈಡರ್ ವಿನೇಗರ್ ಅನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಬೆರಳಿನಿಂದ ನಿಧಾನವಾಗಿ ಹಚ್ಚಿ. ನಂತರ 15 ನಿಮಿಷ ಬಿಟ್ಟು, ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.