ಕರೆಂಟು ಬಂತು,ನಮ್ಮನೆಗೆ…


Team Udayavani, Oct 3, 2018, 1:08 PM IST

25874.jpg

 ಮಳೆ ಅಂದ್ರೆ ಈಗಲೂ ಬೆಚ್ಚುತ್ತದೆ ಕೊಡವರ ನಾಡು. ಮನೆಗಳೇ ಕೊಚ್ಚಿ ಹೋಗುವಾಗ, ಅಲ್ಲಿ ವಿದ್ಯುತ್‌ ಕಂಬ ನಿಟಾರನೆ ನಿಂತಿತಾದರೂ ಹೇಗೆ? ಆದರೆ, ವಿದ್ಯುತ್‌ ಕಂಬ ಆ ಪ್ರಮಾಣದಲ್ಲಿ ಧರಾಶಾಯಿಯಾಗಿದ್ದರೂ ಈ ಲೇಖಕಿಯ ಮನೆಯಲ್ಲಿ ವಿದ್ಯುದ್ದೀಪ ಇರುಳೂ, ಹಗಲೂ ಉರಿಯುತ್ತಿತ್ತು. ಮಿಕ್ಸಿ ಓಡುತ್ತಿತ್ತು. ಫ್ಯಾನ್‌ ತಿರುಗುತ್ತಿತ್ತು. ಕಾರಣ ಗೊತ್ತೇ?

ಈಚೆಗೆ ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಆದ ಹಾನಿ ಎಲ್ಲರಿಗೂ ತಿಳಿದಿರುವಂಥದ್ದೇ. ಎಲ್ಲೇಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದು ನಾನಿರುವ ಚೆಂಬು ಗ್ರಾಮವೂ ಸೇರಿದಂತೆ ನೂರಾರು ಗ್ರಾಮಗಳು ಕತ್ತಲಲ್ಲಿ ಮುಳುಗಿಬಿಟ್ಟವು. ಊರಿಗೆ ಊರೇ ಹಳೇ ಕಾಲಕ್ಕೆ ಹಿಂದಿರುಗಿತು. ಆಗಾಗ ರಿಂಗಣಿಸುವ ಮೊಬೈಲ್‌ಗ‌ಳು ಸ್ತಬ್ಧ. ಮಿಕ್ಸಿ- ಗೆùಂಡರ್‌ಗಳಿಗೂ ವಿಶ್ರಾಂತಿ. ಸಂತ್ರಸ್ತರಲ್ಲದ ಹೆಣ್ಣುಮಕ್ಕಳು ಒಂದು ದಿನ ಉಪ್ಪಿಟ್ಟು ಮಾಡಿದರು. ಮರುದಿನ ಚಿತ್ರಾನ್ನ ಮಾಡಿದರು. ಊಟಕ್ಕೆ ಬೇಳೆ ಸಾರು ಮಾಡಿದರು. ಎಷ್ಟು ದಿನ ಅಂತ ಇವುಗಳನ್ನೇ ಮಾಡುವುದು? ದೋಸೆ, ಇಡ್ಲಿ, ತೆಂಗಿನಕಾಯಿ ಹಾಕಿ ಸಾಂಬಾರ್‌ ಮಾಡಬೇಕಾದರೆ ರುಬ್ಬಲೇ ಬೇಕು. ಈಗ ಎಲ್ಲರ ಮನೆಯ ಮೂಲೆಯಲ್ಲಿದ್ದ ಕಡೆಯುವ ಕಲ್ಲುಗಳೂ ಹೊರಬಂತು. ಆಧುನಿಕ ಸ್ತ್ರೀಯರೂ ರುಬ್ಬುವ ಕಲ್ಲಿಗೆ ಶರಣಾಗದೆ ಬೇರೆ ದಾರಿ ಇರಲಿಲ್ಲ. ಪರಿಸ್ಥಿತಿ ಹೀಗಿದ್ದರೂ, ವಿದ್ಯುತ್‌ ಕಂಬ ಧರಾಶಾಯಿಯಾಗಿದ್ದರೂ ನನ್ನ ಮನೆಯಲ್ಲಿ ಮಾತ್ರ ವಿದ್ಯುದ್ದೀಪ ಇರುಳೂ, ಹಗಲೂ ಉರಿಯುತ್ತಿತ್ತು. ಮಿಕ್ಸಿ ಓಡುತ್ತಿತ್ತು. ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವೇ? ಹೇಳುತ್ತೇನೆ ಕೇಳಿ.

  ನನ್ನ ಮನೆಯಲ್ಲಿ ಮೊದಲು ಅಂದರೆ 2010ನೇ ಇಸವಿಯವರೆಗೂ ಕರೆಂಟ್‌ ಇರಲಿಲ್ಲ. ತೊಂಬತ್ತರ ದಶಕದ ಕೊನೆಯವರೆಗೂ ಚಿಮಣಿ ದೀಪವೊಂದೇ ಬೆಳಕಿಗೆ ಆಧಾರವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಲ್ಯಾಂಪ್‌ ಉರಿಸುವ ಮೊದಲು ಅದರ ಮಸಿ ಹಿಡಿದ ಗಾಜಿನ ಬುರುಡೆಯನ್ನು ತೊಳೆಯಲು ನಾನೂ, ಗಂಡನೂ ಜಗಳವಾಡುತ್ತಿ¨ªೆವು. “ನೀನು ತೊಳೆ’ ಎಂದು ಅವರು, “ದಿನಾ ನಾನೇ ತೊಳೆಯಬೇಕು. ಇಂದು ನೀವು ತೊಳೆಯಿರಿ’ ಎಂದು ನಾನು ವಾದ ಮಾಡುತ್ತಿ¨ªೆವು. ಅದರ ಮಿಣಿಮಿಣಿ ಮಂದ ಬೆಳಕಲ್ಲಿ ರಾತ್ರಿ ಓದುವುದು, ಬರೆಯುವುದು ಬಿಡಿ, ಪೇಪರ್‌- ಪುಸ್ತಕ ಹಿಡಿದ ತಕ್ಷಣ ನಿದ್ರಾದೇವಿ ಆವರಿಸುತ್ತಿದ್ದಳು. 1998ರಲ್ಲಿ ನನ್ನ ಮನೆಗೆ ಸೋಲಾರ್‌ ಲೈಟ್‌ ಬಂತು. ಮಳೆಗಾಲದಲ್ಲಿ ನಮ್ಮೂರಿನಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಆ ಸಮಯದಲ್ಲಿ ಸೀಮೆಎಣ್ಣೆ  ದೀಪ ಉರಿಸಲೇ ಬೇಕಾಗಿತ್ತು. ನನ್ನ ಮಕ್ಕಳು ದೀಪದ ಹೊಗೆಯಲ್ಲೇ  ಓದಿ, ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು.
  ನನಗೆ ಆಗ ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ. ಏಳು- ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ, ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ  ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. ಇದರಿಂದ ನನಗೆ ಬಿಡುಗಡೆ ಯಾವಾಗ? ಎಲ್ಲರ ಮನೆಯಲ್ಲಿ ಇರುವಂತೆ ನನ್ನ ಮನೆಯಲ್ಲೂ ಕರೆಂಟ್‌ ಇರುತ್ತಿದ್ದರೆ… ಎಂದು ಅನಿಸಿ ದುಃಖವೆನಿಸುತ್ತಿತ್ತು. ನಮ್ಮ ಊರಿಗೆ ಸುಮಾರು ಐದು ಕಿ.ಮೀ. ದೂರದಿಂದ ವಿದ್ಯುತ್‌ ಕಂಬಗಳನ್ನು ನೆಟ್ಟು ಲೈನ್‌ ಎಳೆಯಬೇಕಿತ್ತು. ದಟ್ಟ ಅರಣ್ಯ ಪ್ರದೇಶದಲ್ಲಿ ನಮ್ಮ ಊರು ಇರುವುದರಿಂದಲೋ ಏನೋ ನಾವು ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಸರ್ಕಾರ ನಮಗೆ ವಿದ್ಯುತ್ಛಕ್ತಿ ಒದಗಿಸಲಿಲ್ಲ. ಇದಕ್ಕೆ ಪರ್ಯಾಯ ಏನು ಎಂದು ನಾನು ಚಿಂತಿಸತೊಡಗಿದೆ. 

   ಆಗ ನಮ್ಮೂರಿನ ಸಮೀಪ ಇರುವ ಉಂಬಳೆ ಸದಾಶಿವ ಭಟ್‌ ಎಂಬವರು ತನ್ನ ಮನೆ ಸಮೀಪ ಹರಿಯುವ ಹಳ್ಳದ ನೀರಿನಿಂದ ಸ್ವತಃ ಕರೆಂಟ್‌ ತಯಾರಿಸಿ ಬಳಸಲು ಶುರುಮಾಡಿದ್ದರು. ನಾನು ಮತ್ತು ಗಂಡ ಅದನ್ನು ನೋಡಿ ಬಂದೆವು. ಆದರೆ, ಅದು ತುಂಬಾ ಖರ್ಚಿನ ಬಾಬತ್ತಾಗಿತ್ತು. ನೀರಿನ ರಭಸಕ್ಕೆ  ಚಕ್ರ ತಿರುಗುವಾಗ ಅದಕ್ಕೆ ಅಳವಡಿಸಿದ ಬೆಲ್ಟ್ ಆಗಾಗ ತುಂಡಾಗುತ್ತಿತ್ತು. ಯಂತ್ರವೂ ಕೆಡುತ್ತಿತ್ತು. ಅದನ್ನು ರಿಪೇರಿ ಮಾಡಬೇಕಾದರೆ, ಬಿಡಿ ಭಾಗಗಳನ್ನು ತರಬೇಕಾದರೆ ತಮಿಳುನಾಡಿನ ಕೊಯಮತ್ತೂರಿಗೆ ಹೋಗಬೇಕಿತ್ತು. ಇದೆಲ್ಲ ಆಗುವ ಕೆಲಸವಲ್ಲ ಎಂದು ನಮಗೆ ಅನಿಸಿತು. ಆದರೆ, ಮನೆಗೆ ವಿದ್ಯುತ್‌ ತರಿಸಲೇಬೇಕು ಎಂಬ ಹಠವಂತೂ ಇತ್ತು. ಅದೇ ಸಮಯದಲ್ಲಿ, ಶಿವಮೊಗ್ಗದ ನಿಸರ್ಗ ಎನ್‌ವಿರಾನ್‌ಮೆಂಟ್‌ ಟೆಕ್ನಾಲಜೀಸ್‌ನವರು ಹರಿಯುವ ನೀರು ಇರುವ ಕಡೆ ಕಿರುಜಲ ವಿದ್ಯುತ್‌ ಘಟಕ ಸ್ಥಾಪಿಸಿಕೊಟ್ಟರು. ಇದಕ್ಕೆ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಧನ ಸಹಾಯವನ್ನೂ ಒದಗಿಸಿಕೊಡುತ್ತದೆ’ ಎಂಬ ಮಾಹಿತಿ ಸಿಕ್ಕಿತು. ನಮ್ಮ ಮನೆ ಸಮೀಪವೇ ಎತ್ತರದಿಂದ ಧುಮುಕುವ ಜಲಪಾತ ಇದೆ. ಬೇಸಿಗೆಯಲ್ಲಿ ನೀರು ಬತ್ತಿದರೂ ಮಳೆಗಾಲದಲ್ಲಾ  ದರೂ ಕರೆಂಟು ಉತ್ಪಾದಿಸಬಹುದಲ್ಲ ಎಂದು ಅವರನ್ನು ಸಂಪರ್ಕಿಸಿದೆವು. ಅವರು ವಿದ್ಯುತ್‌ ಉತ್ಪಾದಿಸುವ ಯಂತ್ರವನ್ನು ತಂದು ಅಳವಡಿಸಿಕೊಟ್ಟರು.  

ಸುಮಾರು 40 ಮೀಟರ್‌ ಎತ್ತರದಿಂದ ಬೀಳುವ ನೀರನ್ನು 500 ಮೀಟರ್‌ ಉದ್ದದ ಎರಡೂವರೆ ಇಂಚಿನ ಪಿವಿಸಿ ಪೈಪ್‌ ಮೂಲಕ ಜಲವಿದ್ಯುತ್‌ ಘಟಕಕ್ಕೆ ಹರಿಸಿದ್ದೇವೆ. ಆಗ ಮೋಟಾರು ತಿರುಗಿ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಇದರ ಸಾಮರ್ಥ್ಯ ಒಂದು ಕಿಲೋವ್ಯಾಟ. ಹೀಗೆ ಉತ್ಪಾದನೆ ಆದ ವಿದ್ಯುತ್‌ ಅನ್ನು 60 ಮೀಟರ್‌ ಉದ್ದದ ಎರಡು ಕೇಬಲ್‌ಗ‌ಳ ಮೂಲಕ ಅಡಕೆ ತೋಟದ ನಡುವೆ ಸಾಗಿಸಿ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ. 2010ರಲ್ಲಿ ಇದಕ್ಕೆ ಆದ ಖರ್ಚು 1.10 ಲಕ್ಷ ರೂಪಾಯಿ. ಇದರ ಮುಕ್ಕಾಲು ಭಾಗ ಹಣವನ್ನು ಕೇಂದ್ರ ಸರ್ಕಾರ ಭರಿಸಿದೆ. ಈಗ ಈ ಸ್ವಂತ ವಿದ್ಯುತ್‌ನಿಂದಲೇ ನಮ್ಮ ಮನೆಯ ಲೈಟ್‌, ಫ್ರಿಡ್ಜ್, ಟೀವಿ, ಮಿಕ್ಸಿ, ಫ್ಯಾನ್‌, ಮೊಬೈಲ್‌ ಚಾರ್ಜರ್‌, ಇಸಿŒ ಪೆಟ್ಟಿಗೆ ನಡೆಯುತ್ತದೆ.

2014ರಲ್ಲಿ ಸರ್ಕಾರದ ಕರೆಂಟೂ ಬಂತು. ಆದರೇನು? ಮಳೆಗಾಲದಲ್ಲಿ ನಮ್ಮೂರಲ್ಲಿ ಮರ ಮತ್ತು ಅದರ ಕೊಂಬೆಗಳು ವಿದ್ಯುತ್‌ ತಂತಿಯ ಮೇಲೆ ಆಗಾಗ ಬೀಳುತ್ತಲೇ ಇರುವುದರಿಂದ ಸರ್ಕಾರದ ಕರೆಂಟ್‌ ಕೈಕೊಡುವುದೇ ಹೆಚ್ಚು. ಬೇಸಿಗೆಯನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ನಮ್ಮದೇ ನೀರಿನಿಂದ ಉತ್ಪಾದಿಸುವ ಕರೆಂಟ್‌ ನಮ್ಮ ಮನೆಯನ್ನು ಬೆಳಗುತ್ತದೆ. ಅದೂ ಯಾವುದೇ ಖರ್ಚಿಲ್ಲದೆ! ಆಗೆÇÉಾ ಸರ್ಕಾರಕ್ಕೆ ಮಿನಿಮಮ್‌ ಬಿಲ್‌ ಕಟ್ಟುತ್ತೇವೆ.

ಮಲೆನಾಡು ಹಾಗೂ ಕರಾವಳಿಯಲ್ಲಿ ಗುಡ್ಡದಿಂದ ಹರಿದು ಬರುವ ತೊರೆಗಳು ಸಾಕಷ್ಟಿವೆ. ಸರಕಾರ ಕಿರುಜಲವಿದ್ಯುತ್‌ ಘಟಕಕ್ಕೆ ಸಬ್ಸಿಡಿ ಕೊಡುವುದರಿಂದ ಹರಿಯುವ ನೀರು ಹೊಂದಿರುವ ರೈತರು ಈ ಘಟಕ ಸ್ಥಾಪಿಸಿ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬಹುದು.

ಮರ ಕಡಿಯಬೇಕಿಲ್ಲ…
ಇದು ಪರಿಸರಸ್ನೇಹಿ ವಿದ್ಯುತ್‌. ಈ ಘಟಕ ಸ್ಥಾಪಿಸಲು ಮರ ಕಡಿಯಬೇಕಾಗಿಲ್ಲ. ಹರಿದು ಹೊರ ಹೋಗುವ ನೀರನ್ನು ಬಳಸುವುದರಿಂದ ನೀರಿನ ಅಪವ್ಯಯ ಇಲ್ಲ. ಜಲವಿದ್ಯುತ್‌ ಘಟಕಕ್ಕೆ ಹರಿಸಿದ ನೀರೂ ವ್ಯರ್ಥವಾಗುವುದಿಲ್ಲ. ಅದನ್ನು ತೋಟಕ್ಕೆ, ಗದ್ದೆಗೆ ಬಳಸಬಹುದು. ತಿಂಗಳು ತಿಂಗಳು ಬಿಲ್‌ ಕಟ್ಟಲು ಇಲ್ಲ. ನಿರ್ವಹಣೆ ಅಂತ ಏನೂ ಇರುವುದಿಲ್ಲ. ಆದರೆ, ಜೋರು ಮಳೆ ಬರುವಾಗ ಪೈಪ್‌ನ ಫಿಲ್ಟರ್‌ನಲ್ಲಿ ಕಸಕಡ್ಡಿ ನಿಲ್ಲುತ್ತದೆ. ಅದನ್ನು ತೆಗೆಯಬೇಕು. ಫೆಬ್ರವರಿಯಿಂದ ಮೇ ತನಕ ಜಲಪಾತ ಬತ್ತುವುದರಿಂದ ಈ ಸಮಯದಲ್ಲಿ ನಮಗೆ ನೀರಿನ ಕರೆಂಟ್‌ ಇರುವುದಿಲ್ಲ.

ಸಹನಾ ಕಾಂತಬೈಲು

ಟಾಪ್ ನ್ಯೂಸ್

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.