ತಾಯ್ತನಕ್ಕೆ ಕೊನೆಯೆಂಬುದಿಲ್ಲ…
Team Udayavani, Mar 10, 2021, 7:05 PM IST
ಸಾಂದರ್ಭಿಕ ಚಿತ್ರ
ಅಮ್ಮನೆಂಬ ವ್ಯಕ್ತಿತ್ವವನ್ನು ನೆನೆಸಿಕೊಂಡಾಗಲೆಲ್ಲಾ ಅನಿರ್ವಚನೀಯ ಭಾವವೊಂದು ಜೊತೆಯಾಗುತ್ತದೆ. ಮನೆಯವರ ಬಯಕೆಗಳನ್ನೆಲ್ಲ ನಿಷ್ಠೆಯಿಂದ ಪೂರೈಸುವ, ಆದರೆ ತನ್ನ ಬಯಕೆಗಳನ್ನೆಂದೂ ಹೇಳಿಕೊಳ್ಳದ ಜೀವಿಯೊಂದು ಈ ಪ್ರಪಂಚದಲ್ಲಿ ಇದೆ ಎಂದರೆ ಅದು ಅಮ್ಮ ಮಾತ್ರ!
ಹೆಗಲೆತ್ತರ ಬೆಳೆದ ಮೊಮ್ಮಕ್ಕಳ ಅಜ್ಜನಾಗಿರುವ ನನ್ನ ಎದುರುಮನೆಯ ಕಂಠಿ ಅಂಕಲ್, ಪ್ರತೀ ಬಾರಿ ಹೊರ ಹೊರಟೊಡನೆ ತಮ್ಮ ತೊಂಭತ್ತುವಯಸ್ಸಿನ ತಾಯಿಗೆ ಮರೆಯದೆ ಪುಟ್ಟಮಗುವಿನಂತೆ “ಹೋಗಿ ಬರ್ತೀನಿ ಅಮ್ಮಾ’ ಎಂದು ಹೇಳುವುದನ್ನು ಇನ್ನೂ ಬಿಟ್ಟಿಲ್ಲ ಎಂದರೆ, ಇಂಥ ಗಳಿಕೆ ತಾಯಿಯ ಔದಾರ್ಯಕ್ಕೆ ಮಾತ್ರ ಸಾಧ್ಯವಾಗುವುದು ಹೊರತು ಇನ್ನೋರ್ವರಿಗೆ ಕಷ್ಟಸಾಧ್ಯ.
ಒಂದು ಅರ್ಜಿಯನ್ನು ಮರಳಿಸುವ ಸಂದರ್ಭದಲ್ಲಿ ನನಗಾದ ಅನುಭವ ಇದು: ಮೀಟರುಗಟ್ಟಲೆ ಉದ್ದ ಸರತಿಯ ಸಾಲು ಇದ್ದುದರಿಂದ, ಆವತ್ತು ನನ್ನ ಮೂರು ವರ್ಷದ ಮಗಳ ನೆವ ಹೇಳಿ ಸ್ವಲ್ಪ ಬೇಗ ಪರಿಶೀಲಿಸಲು ಅಧಿಕಾರಿಗಳನ್ನು ಕೋರಿಕೊಂಡೆ. ಇದನ್ನು ಕೇಳಿಸಿಕೊಂಡ ಇನ್ನೊಂದು ಮಹಿಳೆ-“ಮೇಡಂ, ಅವರದ್ದು ಮೂರು ವರ್ಷದ ಮಗು, ನಾನು ಮೂರು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ಬಂದಿದ್ದೇನೆ, ನನ್ನದೇ ಮೊದಲು ತೆಗೆದುಕೊಳ್ಳಿ’ ಎಂದರು!. ಆಗ ಆ ಅಧಿಕಾರಿ- “ನೋಡೀ,
ಮಗು ಮೂರು ತಿಂಗಳಿನದ್ದಾಗಲೀ, ಮೂರು ವರ್ಷದ್ದಾಗಲೀ, ಅಮ್ಮನಿಗೆ ಅದುಯಾವತ್ತೂ ಮಗುವೇ. ಮಕ್ಕಳಿಗೆ ವರ್ಷ ಜಾಸ್ತಿಯಾದರೆ ತಾಯಿಗೆ ಅವುಗಳ ಮೇಲಿನಪ್ರೇಮವೇನೂಕಡಿಮೆಯಾಗುವುದಿಲ್ಲ’ ಎಂದರು.
ಅವರ ಈ ಮಾತುಗಳು ಅನುಭವಜನ್ಯ ಎನಿಸಿ ಗೌರವ ಮೂಡಿತು. ಹೀಗಾಗಿ ಮಕ್ಕಳು ಹುಟ್ಟಿದಾಗ ಮೂಡುವ ಪ್ರೀತಿ ಅದು ಅವಳ ಅಂತ್ಯದವರೆಗೂ ಲವಲೇಶವೂಕಡಿಮೆಯಾಗುವುದಿಲ್ಲ. ಮಕ್ಕಳ ಮೇಲಿನಮಮತೆ ಅವಳ ಅಂತ್ಯದವರೆಗೂ ಸ್ಥಾಯಿ.ಇದನ್ನೇ ಕರಾವಳಿ ಜನಪದ “ಮಕ್ಕಳತಾಯೀನ ಸುಟ್ಟರೂ ಬೇಯಳು, ಮಕ್ಕೀಗದ್ದೇಲಿ ನಿಂತ್ಕಂಡ್| ತಾಯಮ್ಮ ಮಕ್ಳೀಗಿನ್ಯಾರು ಗತಿಯೆಂಬುದು’ ಅಂದರೆ ತಾಯಿ ತನ್ನ ಸಾವಿನಲ್ಲೂ ಮಕ್ಕಳಿಗಾಗಿಕನಲುತ್ತಾಳೆ ಎನ್ನುತ್ತದೆ. ಮಕ್ಕಳು ಎಷ್ಟೇ ಪಾಕಪ್ರವೀಣರೇಆಗಿದ್ದರೂ, ಅಮ್ಮ ಬರೇ ಉಪ್ಪು, ಹುಳಿ, ಖಾರ ಹಾಕಿದ ಅಡುಗೆರುಚಿಯಾಗುವುದು-ಅದರೊಂದಿಗೆ ಮಿಳಿತವಾಗಿರುವ ನಿಸ್ವಾರ್ಥ ಪ್ರೀತಿಯಕಾರಣಕ್ಕೆ. ಅದಕ್ಕೆ ತಾಯಿಯೆಂದಾಗನಮ್ಮಲ್ಲಿ ದೈವತ್ವದ ಪೂಜ್ಯಭಾವನೆಯೊಂದು ಹಾಗೇ ಮನಸ್ಸಿನಲ್ಲಿಮೂಡಿದರೆ ಅದು ಆ ಪದವಿಗಿರುವಶ್ರೇಷ್ಠತೆ, ಪ್ರಕೃತಿ ಮಾನವನಿಗೆ ಕೊಟ್ಟ ಅತ್ಯಮೂಲ್ಯ ಕಾಣಿಕೆ
– ಶ್ರೀರಂಜನಿ ಅಡಿಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.