ಅನುದಿನದ ದಂಗಲ್‌


Team Udayavani, Dec 20, 2017, 4:14 PM IST

20-31.jpg

ಕಥೆಗಳಲ್ಲಿ, ಸಿನಿಮಾ- ನಾಟಕಗಳಲ್ಲಿ ಹೆಣ್ಣುಮಕ್ಕಳು ವೀರಾವೇಶದಿಂದ ಯುದ್ಧ ಮಾಡುತ್ತಾರೆ. ಕುಸ್ತಿಯಲ್ಲಿ ಸೈಂಧವನಂಥ ಎದುರಾಳಿಯನ್ನು ಚಿತ್‌ ಮಾಡುತ್ತಾರೆ. ಕಾಮುಕರನ್ನೂ ಹಿಗ್ಗಾಮುಗ್ಗಾ ಚಚ್ಚಿ ಹಾಕುತ್ತಾರೆ. ಇದು ತೆರೆಯ ಮೇಲಿನ ಕಥೆಯಷ್ಟೇ. ಆದರೆ, ವಾಸ್ತವದಲ್ಲಿ ಎಲ್ಲವೂ ಉಲ್ಟಾ ಆಗಿರುತ್ತದೆ! ತೆರೆಯ ಮೇಲೆ ಮೂವತ್ತು ಜನರೊಂದಿಗೆ ಕತ್ತಿ ವರಸೆಯಾಡಿ ಗೆಲ್ಲುವ ಹುಡುಗಿ, ವಾಸ್ತವದಲ್ಲಿ 30 ಕೆ.ಜಿ.ಯಷ್ಟಿರುವ ನರಪೇತಲನ ಹಿಂಸೆ ತಾಳದೆ ತತ್ತರಿಸಿಹೋಗುತ್ತಾಳೆ. ಮೊನ್ನೆಯಷ್ಟೇ, “ದಂಗಲ್‌’ ನಟಿ ಝೈರಾ ವಿಮಾನದಲ್ಲಿ ತನಗಾದ ಕಿರುಕುಳದ ಬಗ್ಗೆ ಹೇಳಿಕೊಂಡು, ಕಣ್ಣೀರಿಟ್ಟಿದ್ದು ಇದಕ್ಕೊಂದು ತಾಜಾ ನಿದರ್ಶನ. ನಮ್ಮ ಕಣ್ಮುಂದೆಯೇ ನಡೆಯುವ ಅಂಥ ಸಂಕಟದ ಸಂದರ್ಭಗಳು ಹಾಗೂ ಅದನ್ನು ಮೀರಿ ನಿಲ್ಲುವುದು ಹೇಗೆ ಎಂಬುದರ ವಿವರಣೆ ಇಲ್ಲಿದೆ… 

ದಂಗಲ್ ಸಿನಿಮಾ ನೋಡಿದವರಿಗೆಲ್ಲಾ ಚೆನ್ನಾಗಿ ನೆನಪಿರುತ್ತದೆ: ತಮಗೆ ಯಾರೋ ಹುಡುಗರು ತಮಾಷೆ ಮಾಡಿದರೆಂದು ಅವರಿಗೆ ಆ ಚಿಕ್ಕ ವಯಸ್ಸಿನಲ್ಲೇ ಅಕ್ಕ- ತಂಗಿ (ಗೀತಾ-ಬಬಿತಾ) ಸೇರಿ ಸರಿಯಾಗಿ ಚಚ್ಚುತ್ತಾರೆ. ನಂತರ ನಡೆಯುವ ಕುಸ್ತಿ ಅಖಾಡದಲ್ಲೂ ತನಗಿಂತ ಬಲಿಷ್ಠ ಎಂದು ಗೊತ್ತಿದ್ದರೂ, ಹುಡುಗರೊಂದಿಗೆ ಕುಸ್ತಿಯಾಡಿ, ಅವರಿಗೆ ಮಣ್ಣು ಮುಕ್ಕಿಸಿ, ಧೂಳು ತುಂಬಿಕೊಂಡ ಕೈಯನ್ನು ಕೊಡವಿಕೊಂಡು ಗೀತಾ ಎದ್ದು ಬರುತ್ತಿದ್ದರೆ ಸುತ್ತಲೂ ಚಪ್ಪಾಳೆಯ ಸುರಿಮಳೆ. ಸಿನಿಮಾ ಮುಗಿಯುವವರೆಗೂ ಈ ಗಟ್ಟಿಗಿತ್ತಿಯರ ಸಾಹಸ ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ. ಸಿನಿಮಾದಲ್ಲಿ ಕುಸ್ತಿಯ ಸನ್ನಿವೇಶಗಳನ್ನು ಉಸಿರು ಬಿಗಿಹಿಡಿದು ವೀಕ್ಷಿಸಿದ್ದ ಸಿನಿಪ್ರಿಯರು, ಅಬ್ಟಾ, ಧೈರ್ಯ ಅಂದ್ರೆ ಹೀಗಿಬೇìಕು ಅಂತ ಹೇಳಿಕೊಂಡು ಹೊರಬರುತ್ತಾರೆ.

ಇನ್ನೊಂದು ಘಟನೆಯನ್ನು ನೋಡೋಣ. ಆರ್ಥಿಕ, ಸಾಮಾಜಿಕ ಸಂಕಷ್ಟಗಳನ್ನೆಲ್ಲ ಎದುರಿಸುತ್ತಲೇ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿರುತ್ತಾಳೆ ಆ ಹುಡುಗಿ. ಬಾಕ್ಸಿಂಗ್‌ ರಿಂಗ್‌ನಲ್ಲಿ ಅವಳ ಒಂದೊಂದು ಪಂಚ್‌ ನೋಡಿದ್ರೆ, ಮುಂದಿನ ಅಂತಾರಾಷ್ಟ್ರೀಯ ಕೂಟಗಳಲ್ಲೇಲ್ಲ ದೇಶಕ್ಕೆ ಚಿನ್ನದ ಪದಕ ಕಟ್ಟಿಟ್ಟ ಬುತ್ತಿ ಎಂಬ ಭಾವನೆ. ಇನ್ನೂ 21ರ ಹರೆಯದ ಆ ಯುವತಿಯ ದಿಟ್ಟತನದ ಎದುರು ಬೇರಾವುದೂ ಲೆಕ್ಕಕ್ಕಿಲ್ಲ ಎಂದು ನೋಡುಗರಿಗೆ ಅನಿಸದೇ ಇರದು. ಆದರೆ, ಮುಂದೆ ಆಗುವುದೇ ಬೇರೆ…

ಮೇಲೆ ಹೇಳಿರುವ ಎರಡೂ ಸನ್ನಿವೇಶಗಳು ನೋಡಲು, ಕೇಳಲು ರೋಚಕವಾಗಿವೆ. ಆದರೆ, ವಾಸ್ತವ ಬೇರೆಯೇ ಆಗಿರುತ್ತದೆ. ಸಿನಿಮಾ, ಕ್ರೀಡೆ, ವಿಜ್ಞಾನ.. ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ಹೆಣ್ಣುಮಕ್ಕಳು ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸುತ್ತಿ¨ªಾರೆಯೋ, ವಾಸ್ತವ ಅದಕ್ಕೆ ಸಂಪೂರ್ಣ ತದ್ವಿರುದ್ಧವಾಗುವುದು ವಿಷಾದನೀಯ. ಇಲ್ಲಿರುವ ಎರಡೂ ಉದಾಹರಣೆಗಳನ್ನು ನೋಡಿ- ಮೊದಲನೆಯದ್ದರಲ್ಲಿ, ಸಿನಿಮಾದಲ್ಲಿ ಹುಡುಗರನ್ನು ಸರಿಯಾಗಿ ಚಚ್ಚುವ ಯುವತಿ ಝೈರಾ ವಾಸಿಂ, ನಿಜ ಜೀವನದಲ್ಲಿ ತನಗೆ ಎದುರಾದ ಕಿರುಕುಳದ ಸನ್ನಿವೇಶವನ್ನು ಧೈರ್ಯವಾಗಿ ಎದುರಿಸಲಾಗದೇ ಸೋತಳು. ಮೊನ್ನೆ ಮೊನ್ನೆಯಷ್ಟೇ ವಿಮಾನದಲ್ಲಿ ಸಹಪ್ರಯಾಣಿಕನಿಂದ ಆದ ಕಿರುಕುಳ, ಮಾನಸಿಕ ಯಾತನೆಗೆ ಸ್ವಲ್ಪವೂ ಎದುರಾಡಲು ಸಾಧ್ಯವಾಗದೇ ಕಣ್ಣೀರಾದಳು. ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವವರು ಯಾರೂ ಇಲ್ಲ ಎಂದು ನೊಂದುಕೊಂಡಳು.

ಇನ್ನು ಎರಡನೇ ಘಟನೆ ನೋಡಿದರೆ, ನಿಜ ಜೀವನದಲ್ಲೇ ಬಾಕ್ಸಿಂಗ್‌ ಪಟುವಾಗಿದ್ದುಕೊಂಡು, ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬೇಕಾಗಿದ್ದ ಹೈದರಾಬಾದ್‌ನ ಯುವತಿಯೊಬ್ಬಳು ಕೋಚ್‌ ನೀಡುತ್ತಿದ್ದ ಲೈಂಗಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದಳು. ಇದು 2009ರಲ್ಲಿ ನಡೆದ ಘಟನೆ. ಇಂಥ ಎಷ್ಟೋ ಘಟನೆಗಳು ಇಂದಿಗೂ ನಮ್ಮ ಸುತ್ತ ನಡೆಯುತ್ತಲೇ ಇವೆ. ತೆರೆಯ ಮೇಲೆ ಎಲ್ಲವನ್ನೂ, ಎಲ್ಲರನ್ನೂ ಎದುರಿಸುವ ಸಾಮರ್ಥ್ಯ ನಮಗಿದೆ ಎಂದು ತೋರಿಸುವವರು ನಿಜ ಜೀವನದಲ್ಲಿ ಅಂಥ ಸಂದರ್ಭ ಎದುರಾದರೆ, ಕುಗ್ಗಿ ಹೋಗುತ್ತಾರೆ. ಝೈರಾ ವಾಸಿಂಗೆ ಆಗಿದ್ದೂ ಇದೇ ಸ್ಥಿತಿ. ಸಿನಿಮಾದಲ್ಲಿ ಕುಸ್ತಿ ಪಟು ಆಗಿದ್ದ ಆಕೆ, ತೆರೆಯ ಮೇಲೆ ತನಗಿಂತ ಬಲಿಷ್ಠನನ್ನು ಚಿತ್‌ ಮಾಡಿದ್ದ ಆಕೆ, ವಾಸ್ತವದಲ್ಲಿ ತನಗೇ ಹಿಂಸೆ ಆಗುತ್ತಿದ್ದರೂ, ಕಿರುಕುಳ ಕೊಟ್ಟವನು ಸಣಕಲನಂತೆ ಕಂಡರೂ ಅವನನ್ನು ಎದುರಿಸುವ ಧೈರ್ಯ ತೋರಲಿಲ್ಲ. ಆ ಕ್ಷಣದಲ್ಲಿ ತೀರಾ ಅಧೀರಳಾಗಿ ಹೋದ ಆ ಹೆಣ್ಣುಮಗಳಿಗೆ ಕಣ್ಣೀರಷ್ಟೇ ಜೊತೆಯಾಗುತ್ತದೆ. ಕಾಲ್ಪನಿಕ ಡೈಲಾಗ್‌ಗಳು, ಚಪ್ಪಾಳೆ ಗಿಟ್ಟಿಸಿಕೊಳ್ಳುವಂಥ ಫೈಟಿಂಗ್‌ ಒತ್ತಟ್ಟಿಗಿರಲಿ, ಹೀಗೇಕೆ ಮಾಡುತ್ತಿದ್ದೀಯಾ ಎಂದು ಕೇಳುವಷ್ಟು ಧ್ವನಿಯೂ ಇಲ್ಲವಾಗಿರುತ್ತದೆ.

ಇದು ಝೈರಾ ಒಬ್ಬಳ ಸ್ಥಿತಿಯಲ್ಲ. ಈಕೆಯೇನೋ ಸಿನಿಮಾ ನಟಿಯಷ್ಟೆ. ಆದರೆ, ನಿಜ ಜೀವನದಲ್ಲೇ ಕುಸ್ತಿಪಟುಗಳೂ, ಕ್ರೀಡಾಳುಗಳೂ ಆದವರೇ ತಮ್ಮ ಮೇಲೆ ದೌರ್ಜನ್ಯವಾದಾಗ ತುಟಿಪಿಟಿಕ್ಕೆನ್ನದೆ ಕಣ್ಣಂಚಲ್ಲಿ ನೀರು ತುಂಬಿಕೊಂಡು, ಸುಮ್ಮನಾಗಿದ್ದಿದೆ. ಈ ಪಟ್ಟಿಯಲ್ಲಿ ಮಹಿಳಾ ಹಾಕಿ ತಂಡದ ಸದಸ್ಯರು, ಜಿಮ್ನಾ…ಗಳು, ಸೆಲೆಬ್ರಿಟಿಗಳಾದ ಕಲ್ಕಿ ಕೊಚಿನ್‌, ಟ್ವಿಂಕಲ… ಖನ್ನಾ, ಸೋಫಿಯಾ ಹಯಾತ್‌, ಸೋಮಿ ಅಲಿ, ಲೇಡಿ ಗಾಗಾ, ವಿಶ್ವ ಪ್ರಸಿದ್ಧ ಸಿತಾರ್‌ ವಾದಕಿ ಅನೌಷ್ಕಾ ಶಂಕರ್‌ ಕೂಡ ಸೇರುತ್ತಾರೆ. ಇವರ ಪಾಡೇ ಹಿಂಗಾದರೆ, ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಸ್ಥಿತಿಯಂತೂ ಕೇಳುವುದೇ ಬೇಡ. ಬಸ್ಸು, ಆಟೋ, ರೈಲು, ಶಾಲೆ, ಕಚೇರಿ, ರಸ್ತೆ… ಎಲ್ಲೆಲ್ಲೂ ಮೈಕೈ ಮುಟ್ಟುವವರು, ಅಸಹ್ಯವಾಗಿ ವರ್ತಿಸುವವರು, ಕಿರುಕುಳ ನೀಡುವವರು ಇರುತ್ತಾರೆ. ಅಷ್ಟೇ ಏಕೆ, ಮನೆಗಳೂ ಈಗ ಸುರಕ್ಷಿತವಲ್ಲ ಎಂಬಂಥ ಸ್ಥಿತಿಯಿದೆ. ಕ್ಷಣಕ್ಷಣದ ಇಂಥ ಎಲ್ಲ ಅಡ್ಡಿ, ಆತಂಕಗಳನ್ನೂ ಎದುರಿಸುತ್ತಾ, ಸಮಾಜದ ಕೊಂಕು ನುಡಿಗಳನ್ನು ಆಲಿಸುತ್ತಾ ಬದುಕಬೇಕಾದಂಥ ಹೀನಾಯ ಪರಿಸ್ಥಿತಿ ಮಹಿಳೆಯರದ್ದು.

ಲೈಂಗಿಕ ಕಿರುಕುಳ ಎನ್ನುವುದು ಹೆಣ್ಣಿನ ಘನತೆ ಹಾಗೂ ವ್ಯಕ್ತಿತ್ವಕ್ಕಾಗುವ ಭೀಕರ ಗಾಯ. ಅದನ್ನು ಅಷ್ಟು ಸುಲಭದಲ್ಲಿ ವಾಸಿಮಾಡಲು ಸಾಧ್ಯವಿಲ್ಲ. ಆಕೆಗೆ ಎಲ್ಲ ರೀತಿಯಿಂದಲೂ ಸಾಂತ್ವನ ಹೇಳಬೇಕಾದ್ದು ಸಮಾಜದ ಕರ್ತವ್ಯ. ಆದರೆ, ನಾವೀಗ ಸೂಕ್ಷ್ಮತೆ ಕಳೆದುಕೊಂಡ ಸಮಾಜದಲ್ಲಿ ಬದುಕುತ್ತಿದ್ದೇವೆ. ದೈಹಿಕವಾಗಿ, ಮಾನಸಿಕವಾಗಿ ನೋವುಂಡ ಸಂತ್ರಸ್ತೆಯರಲ್ಲಿ ಆತ್ಮವಿಶ್ವಾಸ ತುಂಬಿ, ಅವರು ಆತ್ಮಗೌರವದಿಂದ ಬದುಕಲು ಪ್ರೇರಣೆ ನೀಡುವ ಬದಲಿಗೆ, ಆಕೆ ತನಗಾದ ದೌರ್ಜನ್ಯವನ್ನು ಬಹಿರಂಗಪಡಿಸುವ ಧೈರ್ಯ ತೋರಿದರೂ, ಸಮಾಜವು ಆಕೆಗಾದ ಅನ್ಯಾಯದ ಬಗ್ಗೆ ಮಾತಾಡುವುದಿಲ್ಲ, ಬದಲಿಗೆ ಅವಳನ್ನೇ ಪ್ರಶ್ನಿಸುತ್ತದೆ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ…ಗೆ ಗುರಿ ಮಾಡಲಾಗುತ್ತದೆ. ಒಂದು ಹೆಣ್ಣಿಗೆ ಅನ್ಯಾಯವಾಗಿದೆ ಎಂದು ತಿಳಿದ ನಂತರವೂ, ಇದೆಲ್ಲಾ ಹುಡುಗಿಯ ತಪ್ಪಿಂದಲೇ ಆಗಿರುವುದು, ಎಲ್ಲವೂ ಪ್ರಚಾರ ಗಿಟ್ಟಿಸುವ ತಂತ್ರವೆಂದೋ ಹಳಿಯಲಾಗುತ್ತದೆ. ಹಾಗಾಗಿ, ದೌರ್ಜನ್ಯದ ಬಗ್ಗೆ ಹೇಳಿಕೊಳ್ಳುವುದೂ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹೆಣ್ಣಾಗಿ ಎಲ್ಲವನ್ನು ಎದುರಿಸಿ ಬಾಳುವುದು ಸುಲಭವಲ್ಲ. ಜೀವನದ ಒಂದಲ್ಲ ಒಂದು ಘಟ್ಟದಲ್ಲಿ ಯಾವುದೇ ದೌರ್ಜನ್ಯ, ಕಿರುಕುಳಕ್ಕೆ ಒಳಗಾಗದ ಹೆಣ್ಣನ್ನು ಹುಡುಕುವುದೆಂದರೆ, ಸಾವಿಲ್ಲದ ಮನೆಯ ಸಾಸಿವೆ ತಂದಂತೆ. ಪರಿಸ್ಥಿತಿ ಹೀಗಿರುವಾಗ, ಎಲ್ಲವನ್ನು ಎದುರಿಸಿ ನಮಗೆ ನಾವೇ ಶಕ್ತಿಯಾಗಬೇಕು. ಅಸಹಾಯಕಳಾಗಿ ತಲೆತಗ್ಗಿಸುವುದನ್ನು, ಕಣ್ಣೀರಿಡುವುದನ್ನು ಬಿಟ್ಟು ಮುಷ್ಟಿ ಬಿಗಿ ಹಿಡಿದು ನಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಬೇಕು. ಹೀಗೆಲ್ಲಾ ಅಂದುಕೊಂಡಾಗಲೇ ಮಾರ್ಟಿನ್‌ ಲೂಥರ್‌ ಕಿಂಗ್‌ ಮಾತು ನೆನಪಾಗುತ್ತದೆ- ‘The time is always right to do what is right’

ಮೇರಿ ಕೋಂ ಕೂಡ ಹೊರತಾಗಿಲ್ಲ…
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಸರು ತಂದುಕೊಟ್ಟ ಬಾಕ್ಸರ್‌ ಮೇರಿ ಕೋಂ ಕೂಡ ತಮ್ಮ 17ನೇ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದರಂತೆ. ಹೀಗಂತ ಸ್ವತಃ ಅವರೇ ಕಳೆದ ವರ್ಷ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ತಾವು 2 ಬಾರಿ ಕಿರುಕುಳ ಅನುಭವಿಸಿರುವುದರ ಕುರಿತು ಬರೆದಿರುವ ಅವರು, ಹೆಣ್ಣು ಮಕ್ಕಳ ಬಗ್ಗೆ ಸಂವೇದನೆ ಇಟ್ಟುಕೊಳ್ಳುವಂತೆ, ಅವರನ್ನು ಗೌರವಿಸುವಂತೆ ತಮ್ಮ ಮಕ್ಕಳಿಗೆ ಬರೆದ ಪತ್ರವೊಂದು ವೈರಲ… ಕೂಡ ಆಗಿತ್ತು.

ಮಧ್ಯರಾತ್ರೀಲಿ ಮೆರಿನ್‌ ನಿಂತಾಗ…
ಕೇರಳದ ಕಲ್ಲಿಕೋಟೆಯ ಡಿಸಿಪಿ ಆಗಿರುವ ಮೆರಿನ್‌ ಜೋಸೆಫ್ ಇತ್ತೀಚೆಗೊಂದು ವಿಭಿನ್ನ ಟಾÓR… ಕೈಗೆತ್ತಿಕೊಂಡಿದ್ದರು. ನಗರದ ರಸ್ತೆಗಳು ರಾತ್ರಿ ವೇಳೆ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬುದನ್ನು ಅರಿಯಬೇಕು ಎಂಬ ಯೋಚನೆ ಅವರ ತಲೆ ಹೊಕ್ಕಿತ್ತು. ಯೂನಿಫಾರಂ ಬದಿಗಿಟ್ಟು, ಸಿವಿಲ… ಡ್ರೆಸ್‌ ಧರಿಸಿ ಇನ್ನಿಬ್ಬರು ಮಹಿಳಾ ಪೇದೆಗಳೊಂದಿಗೆ ರಸ್ತೆಗಿಳಿದೇ ಬಿಟ್ಟರು ಮೆರಿನ್‌ ಜೋಸೆಫ್. ಕಗ್ಗತ್ತಲಲ್ಲಿ ಮೂವರು ಮಹಿಳೆಯರು ನಡೆದುಹೋಗುತ್ತಿದ್ದರೆ, ರೋಡ್‌ ರೋಮಿಯೋಗಳು ವಿಶಲ… ಹಾಕುವುದು, ಬಾಯಿ ಮಾತಲ್ಲೇ ಅಸಭ್ಯ ಕಮೆಂಟ್‌ಗಳನ್ನು ಎಸೆಯುವುದು, ಇನ್ನು ಕೆಲವರು ವಿಚಿತ್ರವಾಗಿ ನೋಡುವುದು ಮುಂತಾದವುಗಳು ಅನುಭವಕ್ಕೆ ಬಂದವು. ಪೊಲೀಸ್‌ ಸಮವಸ್ತ್ರದಲ್ಲಿ ಹೋಗುವುದಕ್ಕೂ, ಜನಸಾಮಾನ್ಯರಂತೆ ಉಡುಪು ಧರಿಸಿ ಹೋಗುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎಂಬುದು ಅಂದು ನನ್ನ ಅರಿವಿಗೆ ಬಂತು ಎನ್ನುತ್ತಾರೆ ಮೆರಿನ್‌.

ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಆಗಿರುವ ಕಿರಣ್‌ ಬೇಡಿ ಅವರೂ ಇತ್ತೀಚೆಗೆ ಇದೇ ರೀತಿ ರಾತ್ರಿ ಹೊತ್ತು ಸ್ಕೂಟರ್‌ನಲ್ಲಿ ಚೂಡಿದಾರ್‌ ಧರಿಸಿ ಓಡಾಡಿದ್ದರು. ಪುದುಚೇರಿ ಮಹಿಳೆಯರಿಗೆ ಎಷ್ಟು ಸೇಫ್ ಎಂದು ಪರೀಕ್ಷಿಸಲೆಂದು ಅವರು ವೇಷ ಮರೆಸಿ ಹೋಗಿದ್ದರು. ಪುಣ್ಯಕ್ಕೆ ಅವರಿಗೆ ರೋಡ್‌ ರೋಮಿಯೋಗಳು ಎದುರಾಗಲಿಲ್ಲ. ಹಾಗಾಗಿ, ಪುದುಚೇರಿ ಸ್ವಲ್ಪ$ಮಟ್ಟಿಗೆ ಸೇಫ್ ಆಗಿಯೇ ಇದೆ ಎಂದಿದ್ದರು ಬೇಡಿ.

 ಹಲೀಮತ್‌ ಸ ಅದಿಯಾ

ಟಾಪ್ ನ್ಯೂಸ್

Mangaluru: Prisoners obstruct prison officers’ duties

Mangaluru: ಜೈಲಾಧಿಕಾರಿಗಳ ಕರ್ತವ್ಯಕ್ಕೆ ಕೈದಿಗಳಿಂದ ಅಡ್ಡಿ; ಹಲ್ಲೆಗೆ ಯತ್ನ

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

KTR and BRS leaders are under house arrest

House arrest: ಮಾರಾಮಾರಿ ಪ್ರಕರಣ; ಕೆಟಿಆರ್‌ ಸೇರಿ ಬಿಆರೆಸ್‌ ಪ್ರಮುಖರ ಗೃಹ ಬಂಧನ

Pathanamthitta: 44 people arrested in the case of asault of a Dalit girl

Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ

I will welcome anyone from North Karnataka to become the Chief Minister: S.R. Patil

Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ

7-tender-coconut

Tender Coconut: ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ….


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kasaragod ಭಾಗದ ಅಪರಾಧ ಸುದ್ದಿಗಳು: ಬಾಲಕನಿಗೆ ಕಿರುಕುಳ : ಫೋಕ್ಸೋ ಕೇಸು ದಾಖಲು

Kasaragod ಭಾಗದ ಅಪರಾಧ ಸುದ್ದಿಗಳು: ಬಾಲಕನಿಗೆ ಕಿರುಕುಳ : ಫೋಕ್ಸೋ ಕೇಸು ದಾಖಲು

11-uv-fusion

UV Fusion: ದುಡುಕಿನ ತೊಡಕುಗಳಿಗೆ ತಾಳ್ಮೆಯೇ ಮದ್ದು

Mangaluru: Prisoners obstruct prison officers’ duties

Mangaluru: ಜೈಲಾಧಿಕಾರಿಗಳ ಕರ್ತವ್ಯಕ್ಕೆ ಕೈದಿಗಳಿಂದ ಅಡ್ಡಿ; ಹಲ್ಲೆಗೆ ಯತ್ನ

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ  

Sachin Panchal Case: Sankranti shock for accused including Raju Kapanura

Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.