ಪರೀಕ್ಷೆ ಟಿಪ್ಸ್ ಮಕ್ಕಳಿಗಲ್ಲ, ಹೆತ್ತವರಿಗೆ….
Team Udayavani, Feb 19, 2020, 6:04 AM IST
ಪರೀಕ್ಷೆ ಎಂದರೆ, ಮಕ್ಕಳಿಗಷ್ಟೇ ಅಲ್ಲ ಹೆತ್ತವರಿಗೂ ಆತಂಕದ ವಿಚಾರ. ಓದಿದ್ದೆಲ್ಲ ಪರೀಕ್ಷೆ ದಿನ ನೆನಪಾಗುತ್ತೋ ಇಲ್ಲವೋ ಎಂದು ಮಕ್ಕಳು ಹೆದರಿದರೆ, ಅವರು ಸರಿಯಾಗಿ ಓದುತ್ತಿದ್ದಾರೋ, ಇಲ್ಲವೋ ಅಂತ ಹೆತ್ತವರು ಹತ್ತುಪಟ್ಟು ಜಾಸ್ತಿ ಚಿಂತಿಸುತ್ತಾರೆ. ಆದರೆ, ಮಕ್ಕಳಿಗೆ ನಿಶ್ಚಿಂತೆಯಾಗಿ ಓದುವ ವಾತಾವರಣ ಕಲ್ಪಿಸುವುದು ತಮ್ಮ ಕರ್ತವ್ಯವೆಂದು ಮರೆತು ಬಿಡುತ್ತಾರೆ. ಹಾಗಾಗಿ, ಪರೀಕ್ಷೆಯ ಸಂದರ್ಭದಲ್ಲಿ ಹೆತ್ತವರು ಅನುಸರಿಸಬೇಕಾದ ಕೆಲವು ಟಿಪ್ಸ್ ಇಲ್ಲಿದೆ.
-ಮಗುವಿಗೆ ಓದಿಕೊಳ್ಳಲು ಹೆಚ್ಚು ಗಾಳಿ, ಬೆಳಕಿರುವ ಪ್ರಶಸ್ತ ಸ್ಥಳ ಮಾಡಿ ಕೊಡಿ. ಮಗುವಿಗೆಂದು ಪ್ರತ್ಯೇಕ ಕೋಣೆ ಇರದಿದ್ದರೆ, ಮನೆಯಲ್ಲಿ ಸದ್ದು-ಗದ್ದಲ ಮಾಡದೆ, ನಿಶ್ಶಬ್ದವಾಗಿರಿ.
– ಓದುವ ಸಮಯದಲ್ಲಿ ಮಕ್ಕಳಷ್ಟೇ ಅಲ್ಲ, ಹೆತ್ತವರೂ ಟಿ.ವಿ, ಮೊಬೈಲ್‌ನಿಂದ ದೂರವಿದ್ದರೆ ಒಳ್ಳೆಯದು. ಇಲ್ಲವಾದರೆ, ಮಕ್ಕಳ ಗಮನ ಅವುಗಳತ್ತ ಸೆಳೆಯಲ್ಪಡಬಹುದು.
– ಮನೆಯಲ್ಲಿ ಜಗಳಗಳು ನಡೆಯದಂತೆ ನೋಡಿಕೊಳ್ಳಿ. ಮನಸ್ಸಿಗೆ ನೋವು ಮಾಡುವ ಘಟನೆಗಳು ಮಕ್ಕಳನ್ನು ಮತ್ತಷ್ಟು ಭಯ-ಆತಂಕಕ್ಕೆ ಈಡು ಮಾಡುತ್ತವೆ.
-ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಮಾತನಾಡಬೇಡಿ. ಪ್ರತಿ ಮಗುವಿನ ಸಾಮರ್ಥ್ಯವೂ ಬೇರೆ ಬೇರೆ ಆಗಿರುವುದರಿಂದ, ಹೋಲಿಕೆ ಮಾಡುವುದು ಸಲ್ಲ.
-“ನೀನು ದಡ್ಡ’, “ನೋಡು, ಕಳೆದ ಪರೀಕ್ಷೆಯಲ್ಲಿ ಎಷ್ಟು ಕಡಿಮೆ ಅಂಕ ತೆಗೆದಿದ್ದೀಯ’, “ಹೀಗೆ ಮಾಡ್ತಾ ಇದ್ರೆ ಫೇಲ್ ಆಗ್ತಿಯ!’, “90%ಗಿಂತ ಹೆಚ್ಚು ತೆಗೆಯದಿದ್ದರೆ ಮುಂದಿನ ಓದಿಗೆ ಫೀಸ್ ಯಾರು ಕಟಾ¤ರೆ?’… ಇತ್ಯಾದಿ ನೆಗೆಟಿವ್ ಮಾತುಗಳಿಂದ ಮಕ್ಕಳಲ್ಲಿ ಟೆನ್ಷನ್ ಹುಟ್ಟಿಸಬೇಡಿ.
-ಮಕ್ಕಳ, ಊಟ-ನಿದ್ರೆ-ಆರೋಗ್ಯದ ಕುರಿತು ಕಾಳಜಿ ಮಾಡಿ. ಓದುವಾಗ ನಡುನಡುವೆ ಹಾಲು, ಹಣ್ಣು, ಮೊಳಕೆ ಕಾಳು, ಜ್ಯೂಸ್ ಕೊಡುತ್ತಿರಿ. ಪರೀಕ್ಷೆ ಹಿಂದಿನ ಮಕ್ಕಳು ಚೆನ್ನಾಗಿ ನಿದ್ದೆ ಮಾಡಲಿ.
-ಮಕ್ಕಳು ಓದಲು ರಾತ್ರಿ ನಿದ್ದೆಗೆಟ್ಟರೆ, ಬೆಳಗ್ಗೆ ಬೇಗನೆ ಎದ್ದರೆ, ಸಾಧ್ಯವಾದರೆ ನೀವೂ ಸಾಥ್ ಕೊಡಿ.
-ಪರೀಕ್ಷೆ ಸಮಯದಲ್ಲಿ, ಓದಿನ ಜೊತೆಗೆ ದೈಹಿಕ ಚಟುವಟಿಕೆ, ಆಟವೂ ಮುಖ್ಯ. ಸಂಜೆ ಹೊತ್ತು ಸ್ವಲ್ಪ ಆಟವಾಡಲು ಬಿಡಿ.
-ಪರೀಕ್ಷೆಗಳೇ ಜೀವನವಲ್ಲ. ಆದರೆ, ಹೆಚ್ಚಿನ ಅಂಕಗಳಿಂದ ಆಗುವ ಲಾಭ ಮತ್ತು ಕಡಿಮೆ ಅಂಕಗಳಿಂದ ಆಗುವ ನಷ್ಟವನ್ನು ಮನವರಿಕೆ ಮಾಡಿ ಕೊಡಿ.
-ಜಯಶ್ರೀ ಕಜ್ಜರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.