ಫ್ಯಾನ್‌ ಫಾಲೋವಿಂಗ್‌ ಒಳ್ಳೇದಲ್ಲ…


Team Udayavani, Jul 17, 2019, 5:00 AM IST

n-6

ಬಿಸಿಲಾದರೇನು, ಮಳೆಯಾದರೇನು… ಕೆಲವರಿಗಂತೂ ಫ್ಯಾನ್‌ ಬೇಕೇ ಬೇಕು. ಮೈ ಕೊರೆಯುವ ಚಳಿ ಇದ್ದರೂ, ಫ್ಯಾನು ತಿರುಗದಿದ್ದರೆ, ಅದರ ಶಬ್ದ ಕಿವಿಗೆ ಬೀಳದಿದ್ದರೆ ನಿದ್ದೆ ಬರುವುದಿಲ್ಲ ಅನ್ನುವವರಿದ್ದಾರೆ. ಆದರೆ, ಹೀಗೆ ಹಗಲೂ-ರಾತ್ರಿ ಫ್ಯಾನ್‌ನ ಗಾಳಿ ಸೇವಿಸುವುದು ಒಳ್ಳೆಯದಲ್ಲ ಅನ್ನುತ್ತವೆ ಸಂಶೋಧನೆಗಳು. ತಣ್ಣನೆಯ ಗಾಳಿ ಎಷ್ಟು ಆಹ್ಲಾದಕರವೋ, ಅಷ್ಟೇ ಅಪಾಯಕಾರಿಯೂ ಹೌದಂತೆ. ಹಾಗಾದ್ರೆ, ಫ್ಯಾನ್‌ ಬಳಕೆಗೆ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.

-ಫ್ಯಾನ್‌ನ ಕಾರಣದಿಂದ, ಕೋಣೆಯಲ್ಲಿ ಗಾಳಿ ಸದಾ ಚಲನೆಯಲ್ಲಿರುತ್ತದೆ. ಆಗ, ಗಾಳಿಯಲ್ಲಿನ ಧೂಳು, ಮೂಗಿನೊಳಗೆ ಸೇರುವ ಸಂಭವ ಹೆಚ್ಚಿದ್ದು, ಶ್ವಾಸಕೋಶದ ಅಲರ್ಜಿಯುಂಟಾಗುವ ಅಪಾಯವೂ ಹೆಚ್ಚಿರುತ್ತದೆ.

– ತಜ್ಞರು ಹೇಳುವ ಪ್ರಕಾರ, ಅಸ್ತಮಾ, ಶೀತ-ಜ್ವರ, ಧೂಳಿನ ಅಲರ್ಜಿ ಉಳ್ಳವರಿಗೆ ಫ್ಯಾನ್‌ನ ಕೃತಕ ಗಾಳಿ ಒಳ್ಳೆಯದಲ್ಲ.

– ಫ್ಯಾನ್‌ ಗಾಳಿಯಿಂದ ಏಳುವ ಧೂಳಿನ ಕಣಗಳು ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತವೆ. ಕೃತಕ ಗಾಳಿಯಿಂದ ಶುಷ್ಕ ಚರ್ಮ ಮತ್ತಷ್ಟು ಶುಷ್ಕವಾಗಬಹುದು.

– ಅರೆಗಣ್ಣು ತೆರೆದು ಮಲಗುವ ಅಭ್ಯಾಸವಿದ್ದವರ ಕಣ್ಣಿನ ದ್ರವವನ್ನು ಫ್ಯಾನ್‌ ಗಾಳಿಯು ಸಂಪೂರ್ಣವಾಗಿ ಒಣಗಿಸುತ್ತದೆ. ಇದರಿಂದ ಕಣ್ಣಿನ ಅಲರ್ಜಿಯೂ ಉಂಟಾಗಬಹುದು.

-ಬಾಯಿಯನ್ನು ಸಂಪೂರ್ಣ ಮುಚ್ಚದೇ ಮಲಗಿದರೆ, ಗಾಳಿಯಲ್ಲಿ ತೇಲಿ ಬರುವ ಕ್ರಿಮಿ ಕೀಟಗಳು ಬಾಯಿಯ ಮೂಲಕ ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ.

-ಶೀತ ದೇಹದವರಿಗೆ ಕೃತಕ ಗಾಳಿ ಒಗ್ಗುವುದೇ ಇಲ್ಲ. ಯಾಕೆಂದರೆ, ಗಾಳಿಯಿಂದ ಮೂಗು ಕಟ್ಟಿ, ಉಸಿರಾಟಕ್ಕೆ ತೊಂದರೆ ಆಗುತ್ತದೆ. -ಕೃತಕ ಗಾಳಿಯಿಂದಾಗಿ ಮೂಗಿನ ಮೇಲ್ಭಾಗವು ಒಣಗಿ, ಕಫ‌ದ ರೀತಿ ಲೋಳೆ ಉತ್ಪಾದನೆಯಾಗಿ ಉಸಿರಾಟಕ್ಕೆ ಅಡಚಣೆಯಾಗಬಹುದು.

-ದೇಹದಲ್ಲಿ ಸ್ವಲ್ಪ ಸುಸ್ತು, ಸ್ನಾಯು ಸೆಳೆತ ಕಾಣಿಸಿಕೊಂಡರೂ ಮೊದಲು ನೆನಪಾಗುವುದು ಮೇಜಿನ ಮೇಲಿನ ಪುಟ್ಟ ಟೇಬಲ್‌ ಫ್ಯಾನ್‌. ಅದನ್ನು ಆನ್‌ ಮಾಡಿದಾಗ ತಕ್ಷಣದಲ್ಲಿ ಹಾಯ್‌ ಎನಿಸಿದರೂ, ಅತಿ ಹತ್ತಿರದಿಂದ ಕೃತಕ ಗಾಳಿ ಸೇವಿಸುವುದರಿಂದ ಭವಿಷ್ಯದಲ್ಲಿ ಶಾಶ್ವತ ಸ್ನಾಯು ಸೆಳೆತ ಉಂಟಾಗಬಹುದು ಅನ್ನುತ್ತವೆ ಸಂಶೋಧನೆಗಳು.

-ಪುಷ್ಪಾ

ಟಾಪ್ ನ್ಯೂಸ್

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Naxaliam-End

Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌

Mangaluru: ರಾಜ್ಯದಲ್ಲೇ ಮೊದಲ ಹವಾಮಾನ ಡಾಪ್ಲರ್‌ ರಾಡಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.