ಓಪನ್‌ ಹೇರು ಬಿಟ್ಕೊಂಡು!

Team Udayavani, Feb 28, 2018, 5:50 PM IST

hair.jpg

ತಲೆಗೆ ಎಣ್ಣೆ ಹಾಕಿ, ನೀಟಾಗಿ ಜಡೆ ಹೆಣೆಯುತ್ತಿದ್ದುದು ಹಳೆಯ ಸ್ಟೈಲ್‌. ಉದ್ದ ಕೂದಲಿಗೆ ಕತ್ತರಿ ಹಾಕಿ ಹೇರ್‌ಕ್ಲಿಪ್‌, ಹೇರ್‌ಬ್ಯಾಂಡ್‌ ಹಾಕೋದು ನಂತರ ಬಂದ ಸ್ಟೈಲ್‌. ಕೂದಲು ಬಾಚದೆ, ಮನಸ್ಸಿಗೆ ಬಂದಂತೆ ಬಿಡುವುದೇ ಲೇಟೆಸ್ಟ್‌ ಟ್ರೆಂಡ್‌, ಅದುವೇ ಮೆಸ್ಸಿ ಹೇರ್‌ಸ್ಟೈಲ್‌!

ಗಿಡ್ಡ ಕೂದಲಿನವರು ಉದ್ದನೆಯ ಜಡೆ ಕಂಡು ಆಸೆ ಪಡುತ್ತಾರೆ. ಉದ್ದ ಕೂದಲುಳ್ಳವರು, ಬಾಬ್‌ಕಟ್‌ ಕಂಡು ಎಷ್ಟು ಆರಾಮಾಗಿದೆ ಎನ್ನುತ್ತಾರೆ. ಹುಡುಗಿಯರ ಕೂದಲಿನ ಕಥೆ ಇಷ್ಟೇ! ಕಷ್ಟಪಟ್ಟು ಬೆಳೆಸಿದ ಕೂದಲನ್ನು ಕತ್ತರಿಸಲು ಹಿಂದೆ – ಮುಂದೆ ನೋಡುವವರು ಒಂದು ಕಡೆಯಾದರೆ, ತಲೆ ಬಾಚಿಕೊಳ್ಳುವ ಕಿರಿಕಿರಿ ಬೇಡವೆಂದು ಕೂದಲನ್ನು ಗಿಡ್ಡ ಮಾಡಿಸಿಕೊಳ್ಳುವವರು  ಇನ್ನೊಂದು ಕಡೆ. ಇಂಥ ತಾಪತ್ರಯವೇ ಬೇಡ ಎಂದೇ “ಮೆಸ್ಸಿ ಹೇರ್‌ ಸ್ಟೈಲ್‌’ ಶುರುವಾಗಿದ್ದು! ತಲೆ ಕೂದಲು ಉದ್ದವಿರಲಿ, ಗಿಡ್ಡವಿರಲಿ ಮೆಸ್ಸಿ ಹೇರ್‌ ಸ್ಟೈಲ್‌ ಎರಡಕ್ಕೂ ಸೈ.

ತಲೆ ಬಾಚದಿರೋದೇ ಸ್ಟೈಲು
ಏನಿದು ಮೆಸ್ಸಿ ಹೇರ್‌ ಅಂತ ಜಾಸ್ತಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಲೆಗೂದಲು ಬಾಚಿಯೇ ಇಲ್ಲ ಅನ್ನುವ ಹಾಗೆ ಕಾಣುವಂತೆ ಮಾಡಿಕೊಳ್ಳುವ ಕೇಶಾಲಂಕಾರವೇ ಮೆಸ್ಸಿ ಹೇರ್‌! ವಿಚಿತ್ರವಾಗಿದ್ದರೂ ಇದು ನಿಜ. ತಲೆ ಕೂದಲನ್ನು ಅದರ ಪಾಡಿಗೆ ಬಿಟ್ಟು ಬಿಟ್ಟರೆ ಅದು ಸಿಕ್ಕು ಕಟ್ಟುತ್ತದೆ. ಆದ್ದರಿಂದಲೇ ತಲೆ ಬಾಚಿ, ಜಡೆ, ಜುಟ್ಟು ಅಥವಾ ತುರುಬು ಹಾಕಲಾಗುತ್ತದೆ. ಆದರೆ, ಕೈ ಬೆರಳುಗಳಿಂದಲೇ ಸಿಕ್ಕು ಬಿಡಿಸಿದಂತೆ ಮಾಡಿ ಜುಟ್ಟು ಹಾಕಿದರೆ ಅಥವಾ ತಲೆ ಕೂದಲನ್ನು ಹಾಗೇ ಬಿಟ್ಟರೆ ಅದೇ ಮೆಸ್ಸಿ ಹೇರ್‌ ಸ್ಟೈಲ್‌.

ಕೂದಲಿನ ಆರೈಕೆ ಮಾಡಿ
ಕೈ ಬೆರಳುಗಳಿಂದ ಸಿಕ್ಕು ಬಿಡಿಸಿಕೊಳ್ಳುವುದರಿಂದ, ಸಾಫr… ಬ್ರಿಸಲ್ಸ್‌ ಇರುವ ಬ್ರಷ್‌ ಅಥವಾ ಮರದ ಬಾಚಣಿಗೆ ಬಳಸಿದರೆ ಸ್ಟಾಟಿಕ್‌ ಎಲೆಕ್ಟ್ರಿಸಿಟಿ (ಸ್ಥಿರ ವಿದ್ಯುತ್‌) ಉತ್ಪತ್ತಿ ಕಡಿಮೆಯಾಗುತ್ತದೆ. ಆಗ ತಲೆ ಕೂದಲು ಕರೆಂಟ್‌ ಶಾಕ್‌ ಹೊಡೆದಂತೆ ನಿಲ್ಲುವುದಿಲ್ಲ. ಬ್ಲೋ ಡ್ರೈಯರ್‌ ಮತ್ತು  ಸ್ಟ್ರೇಟ್ನಿಂಗ್‌ ಐರನ್‌ನ ಬಳಕೆ ಕಡಿಮೆ ಮಾಡಿದಷ್ಟೂ ಒಳ್ಳೆಯದು.
ಪ್ರೋಟಿನ್‌ ಆಹಾರ ಸೇವನೆಯಿಂದ ತಲೆ ಕೂದಲಿಗೆ ಪೋಷಣೆ ಸಿಗುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ಆದ್ದರಿಂದ ತಲೆ ಕೂದಲಿನ ಕಾಳಜಿ ವಹಿಸುವವರು ಮುಖ್ಯವಾಗಿ ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸಬೇಕು.

ಪ್ರಾಡಕ್ಟ್ ಬಗ್ಗೆ ಗಮನ ಕೊಡಿ
ಹೇರ್‌ ಸೀರಮ್‌, ಹೇರ್‌ ಜೆಲ್‌ ಮತ್ತು  ಹೇರ್‌ ಸ್ಪ್ರೆàನಂಥ ಹೇರ್‌ ಕೇರ್‌ ಪ್ರಾಡಕr…ಗಳನ್ನು ಮಿತವಾಗಿ ಬಳಸಿ. ಇಲ್ಲವಾದರೆ ಇವುಗಳಿಂದ ತಲೆ ಹೊಟ್ಟಿನ ಸಮಸ್ಯೆ ಉಂಟಾಗುತ್ತದೆ. ಹೇರ್‌ ಕೇರ್‌ ಪ್ರಾಡಕr…ಗಳನ್ನು ಕೂದಲ ಮೇಲೆ ಬಳಸಬೇಕೇ ಹೊರತು, ಕೂದಲಿನ ಬುಡಕ್ಕಲ್ಲ. ತಲೆ ಕೂದಲು ಬೈಹುಲ್ಲಿನಂತೆ ಕಾಣದಿರಲು ಉತ್ತಮ ಶ್ಯಾಂಪೂ ಹಾಗು ಕಂಡಿಷನರ್‌ ಬಳಸುವುದು ಒಳಿತು.

ಈ ಟ್ರೆಂಡ್‌ ಶುರುವಾಗಿದ್ದು ಹೇಗೆ?
ಹಲವು ಸಿನಿಮಾ ನಟಿಯರು ಇಂಥ ಹೇರ್‌ ಸ್ಟೈಲ್‌ ಮಾಡಿರುವುದನ್ನು ನೋಡಿರಬಹುದು. ಚಿತ್ರ ನಟಿಯರು ಬೆಳಗೆದ್ದು, ಮೇಕ್‌ಅಪ್‌ ಹಚ್ಚಿಕೊಳ್ಳದೆ, ತಲೆ ಬಾಚಿಕೊಳ್ಳದೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ಹ್ಯಾಷ್‌ ಟ್ಯಾಗ್‌ ಮೆಸ್ಸಿ ಹೇರ್‌ ((#MESSIHAIR), ಮಿಸ್‌ ಬೆಡ್‌ ಹೆಡ್‌ (#MISSBEDHEAD) ಎಂದೆಲ್ಲ ಬರೆಯಲು ಶುರು ಮಾಡಿದ್ದೇ ತಡ, ಮಾಡೆಲ್‌ಗ‌ಳು, ಧಾರಾವಾಹಿ ನಟಿಯರು, ಅಭಿಮಾನಿಗಳು, ಫ್ಯಾಷನ್‌ ಪ್ರಿಯರು ಎಲ್ಲರೂ ತಮ್ಮ ತಮ್ಮ ಮೆಸ್ಸಿ ಹೇರ್‌ ಸೆಲ್ಫಿ ಅಪ್ಲೋಡ್‌ ಮಾಡಿದರು. ಹಾಗಾಗಿ ಈ ಲುಕ್‌ ಹೇರ್‌ ಸ್ಟೈಲೇ ಆಗಿಬಿಟ್ಟಿತು! ಹಾಲಿವುಡ್‌ನ‌ಲ್ಲಿ ಶುರುವಾದ ಅಲೆ, ಬಾಲಿವುಡ್‌, ಸ್ಯಾಂಡಲ್‌ವುಡ್‌ ಮತ್ತು ಇತರ ಚಿತ್ರರಂಗದಲ್ಲೆಲ್ಲ ಬೀಸಿ, ಜನರನ್ನೂ ಆವರಿಸಿದೆ.

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.