ಚರ್ಮಕ್ಕೂ ಉಪವಾಸ ಮಾಡಿಸಿ!
Team Udayavani, Feb 19, 2020, 4:50 AM IST
ಏಕಾದಶಿ, ಸಂಕಷ್ಟಹರ ಚತುರ್ಥಿ, ಅಂತ ದೇವರ ಹೆಸರಿನಲ್ಲಿ ಉಪವಾಸ ಮಾಡುವವರಿದ್ದಾರೆ. ಹಾಗೆ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಹಾಗೆಯೇ, ಚರ್ಮವೂ ಆಗಾಗೊಮ್ಮೆ ಉಪವಾಸ ಮಾಡಬೇಕು. ಈ ಮಾತನ್ನು ಬ್ಯೂಟಿ ಎಕ್ಸ್‌ಪರ್ಟ್‌ಗಳು ಕೂಡಾ ಹೇಳುತ್ತಿರುತ್ತಾರೆ. ಚರ್ಮಕ್ಕೆ ಉಪವಾಸ ಮಾಡಿಸುವುದು ಹೇಗೆ ಅಂದಿರಾ?..
ಯಾವುದೇ ರೀತಿಯ ರಾಸಾಯನಿಕ (ಕ್ರೀಂ, ಪೌಡರ್, ಲೋಷನ್, ಮಾಯಿಶ್ಚರೈಸರ್, ಟೋನರ್, ನೈಟ್ ಕ್ರೀಮ್ ಇತ್ಯಾದಿ) ಲೇಪಿಸದೆ, ಚರ್ಮಕ್ಕೆ ಸರಾಗವಾಗಿ ಉಸಿರಾಡಲು ಅವಕಾಶ ಮಾಡಿಕೊಡುವುದಕ್ಕೆ “ಸ್ಕಿನ್ ಫಾಸ್ಟಿಂಗ್’ ಎನ್ನಲಾಗುತ್ತದೆ. ಅಂದರೆ, ಮೇಕಪ್ ಮಾಡದೇ ಇರುವುದೇ ಚರ್ಮದ ಉಪವಾಸ ಅಂತ ಅರ್ಥ. ಒಂದೆರಡು ದಿನವಲ್ಲ, ಕನಿಷ್ಠ 1-2 ತಿಂಗಳು ಮೇಕಪ್ ಬಳಸಬಾರದು ಅಂತಾರೆ ಚರ್ಮ ತಜ್ಞರು.
ಯಾಕೆ ಮಾಡಬೇಕು?
ಚರ್ಮವೂ ಕೂಡಾ ತನ್ನ ರಂಧ್ರಗಳ ಮೂಲಕ ಉಸಿರಾಡುತ್ತದೆ ಅಂತ ಎಲ್ಲರಿಗೂ ಗೊತ್ತೇ ಇದೆ. ಸತತವಾಗಿ ಕ್ರೀಂ, ಪೌಡರ್, ಲೋಷನ್ ಮುಂತಾದ ಉತ್ಪನ್ನಗಳನ್ನು ಬಳಸುವುದರಿಂದ ಚರ್ಮದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಆಗ, ಮೊಡವೆ, ಕಜ್ಜಿ ಮುಂತಾದ ಸಮಸ್ಯೆಗಳು ಎದುರಾಗಬಹುದು. ಸ್ಕಿನ್ ಫಾಸ್ಟಿಂಗ್‌ನಿಂದ, ಚರ್ಮದ ರಂಧ್ರಗಳು ಸ್ವತ್ಛವಾಗಿ, ಉಸಿರಾಡಲು ಅನುವು ಮಾಡಿಕೊಟ್ಟಂತಾಗುತ್ತದೆ.
ಹೇಗೆ ಮಾಡುವುದು?
ಕನಿಷ್ಠ ಒಂದೆರಡು ತಿಂಗಳ ಕಾಲ ಮೇಕಪ್ ಮಾಡಿಕೊಳ್ಳಲೇಬೇಡಿ.ಚರ್ಮ ತಜ್ಞರು ನೀಡಿದ ಔಷಧಗಳನ್ನು ಬಳಸುತ್ತಿದ್ದರೆ, ಅವರಿಂದ ಅಗತ್ಯ ಸಲಹೆ-ಸೂಚನೆ ಪಡೆಯಲು ಮರೆಯಬೇಡಿ.
ಉಪಯೋಗವೇನು?
ಚರ್ಮವು ತನ್ನಿಂತಾನೇ ಕಾಂತಿಯುತವಾಗುತ್ತದೆ.
-ತಿಂಗಳುಗಟ್ಟಲೆ ಮೇಕಪ್ ಮಾಡದೇ ಇರಲು ಸಾಧ್ಯವಿಲ್ಲ ಅನ್ನುವವರು, ಕನಿಷ್ಠ ವಾರದಲ್ಲಿ ಎರಡು ದಿನ “ನೋ ಮೇಕಪ್’ ನಿಯಮ ಪಾಲಿಸಿ.
-ಈ ಸಮಯದಲ್ಲಿ ಬಿಸಿಲಿನಲ್ಲಿ ಹೆಚ್ಚಾಗಿ ಅಡ್ಡಾಡಬೇಡಿ.
-ಹೆಚ್ಚು ನೀರು, ತಾಜಾ ಜ್ಯೂಸ್, ಹಣ್ಣು-ತರಕಾರಿ ಸೇವಿಸಿ.
-ಶುಷ್ಕ ತ್ವಚೆಯವರು ಮಾಯಿಶ್ಚರೈಸರ್‌ನ ಬದಲು ಕೊಬ್ಬರಿ ಎಣ್ಣೆ ಬಳಸಬಹುದು.
-ಎಣ್ಣೆ ಚರ್ಮದವರು ಕ್ಲೆನ್ಸರ್‌ನ ಬದಲು, ಒದ್ದೆ ಟವಲ್/ ಟಿಶ್ಯೂ ಪೇಪರ್‌ನಿಂದ ಆಗಾಗ್ಗೆ ಮುಖ ಒರೆಸಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.