ಮೊದಲ ಮಗು v/s ಎರಡನೇ ಮಗು


Team Udayavani, Jan 10, 2018, 4:51 PM IST

10-47.jpg

ಮೊದಲನೇ ಮಗು ಹುಟ್ಟುತ್ತೆ ಅನ್ನೋವಾಗ ಗರ್ಭಿಣಿಗೆ ವಿಶೇಷ ಮರ್ಯಾದೆ. ಸಾಲು ಸಾಲು ಬಯಕೆಗಳ ಈಡೇರಿಕೆ. ಬಗೆಬಗೆಯಲ್ಲಿ ಫೋಟೋಶೂಟು. ಮನೆಯ ಗೋಡೆಯ ತುಂಬಾ ಮುದ್ದುಮುದ್ದು ಮಕ್ಕಳ ಪೋಸ್ಟರು. ವಾರ್ಡ್‌ರೋಬ್‌ನಲ್ಲಿ ಅದಾಗಲೇ ಮುಂದಿನ ಮಗುವಿನ ಬಟ್ಟೆ, ಶೂ. ಚೆಂದದ ಹೆಸರಿಗಾಗಿ ಭರ್ಜರಿ ಅನ್ವೇಷಣೆ. ಆದರೆ, ಇವೆಲ್ಲ ಸಂಭ್ರಮ, ಕಾತುರಗಳು ಎರಡನೇ ಮಗುವಿಗೆ ದಕ್ಕುವುದೇ ಇಲ್ಲ. ಏಕೆ ಹೀಗೆ?

ಮದುವೆಯಾಗಿ ಮೂರು ವರ್ಷಕ್ಕೆ ಮನೆಗೊಂದು ಹೊಸ ಅತಿಥಿ ಬರುವ ಸೂಚನೆ ಸಿಕ್ಕಾಗ ಎಲ್ಲೆಲ್ಲೂ ಸಂತೋಷ ಸಂಭ್ರಮ. ಮೊದಲ ಬಾರಿ ಅಪ್ಪ- ಅಮ್ಮ, ಅಜ್ಜ- ಅಜ್ಜಿ, ಅತ್ತೆ- ಮಾವ… ಹೀಗೆ ಎಲ್ಲರಿಗೂ ಹೊಸ ಪಟ್ಟದ ಕಾತುರ. ಹೆಂಡತಿ ನಡೆದರೆ ಎಲ್ಲಿ ನೋಯುತ್ತದೋ ಎಂದು ಗಂಡ ಹೆದರಿದರೆ, ಆಕೆಗಂತೂ ಜೋರಾಗಿ ಉಸಿರಾಡಲೇ ಭಯ!! ಮನೆಯ ಗೋಡೆಗಳಿಗೆಲ್ಲ ನಗುವ ಮುದ್ದು ಮಗುವಿನ ಚಿತ್ರ, ಬರಲಿರುವ ಪಾಪುವಿಗೊಂದು ಚೆಂದದ ತೊಟ್ಟಿಲು, ದುಬಾರಿ ಕ್ರೀಂ- ಪೌಡರ್‌, ಮೆತ್ತಗಿನ ಬಟ್ಟೆ, ಆಟದ ಸಾಮಾನು… ಎಲ್ಲವೂ ಸಜ್ಜು. ಸಂಜೆಯಾದೊಡನೆ ಗಂಡ- ಹೆಂಡಿರ ನಡುವೆ ದಿನಾ ಮಗುವಿನ ಹೆಸರಿನ ಬಗ್ಗೆ ಚರ್ಚೆ, ಏನು ತಿನ್ನಬೇಕು, ಮಗುವನ್ನು ಹೇಗೆ ಸಾಕಬೇಕು ಎನ್ನುವ ಪುಸ್ತಕಗಳ ಗಂಭೀರ ಓದು, ಒಟ್ಟಿಗೇ ಯೋಗಾಭ್ಯಾಸ ಇದ್ದದ್ದೇ. ವಾರ ವಾರಕ್ಕೆ ವಿವಿಧ ಸೀರೆಯುಟ್ಟು ಫೋಟೋಶೂಟ್‌, ನೆಂಟರಿಷ್ಟರ ಮನೆಯಲ್ಲಿ ಊಟ. ಒಟ್ಟಿನಲ್ಲಿ ಮೊದಲ ಮಗುವಿನ ಸ್ವಾಗತಕ್ಕಾಗಿ ಭರ್ಜರಿ ಸಿದ್ಧತೆ. ಅಂತೂ ಮಗು ಹುಟ್ಟಿತು. ಎಲ್ಲರ ಕೈಗೊಂಬೆಯಾಗಿ ಮೂರು ವರ್ಷಗಳು ಉರುಳಿದವು.

ಇದೀಗ ಮತ್ತೂಮ್ಮೆ ಸಿಹಿ ಸುದ್ದಿ! ಬೇಕು ಎಂದೇ ಆದದ್ದು, ಆದರೂ ಅದೇಕೋ ಹಿಂದಿನ ಸಡಗರ ಸಂಭ್ರಮವಿಲ್ಲ. ಬಸುರಿ ಎಂದು ಕುಳಿತರೆ ಬಿದ್ದಿರುವ ಕೆಲಸದ ಗತಿ? ಕೈಗೆ- ಕಾಲಿಗೆ ಸಿಗುವ ದೊಡ್ಡ ಮಗುವನ್ನು ಸಂಭಾಳಿಸುವವರಾರು? ವಾಂತಿ- ತಲೆ ಸುತ್ತು ಇದ್ದರೂ ಅದೆಲ್ಲಾ ಮಾಮೂಲು ಎಂಬುದು ಅನುಭವಕ್ಕೆ ಬಂದದ್ದೇ, ಹೀಗಾಗಿ ಗಾಬರಿಯಾಗುವ ಅವಶ್ಯಕತೆಯಿಲ್ಲ. ಈ ಪಾಪುವಿಗೆ ಹೊಸತನ್ನು ತರಬೇಕು? ದೊಡ್ಡ ಪಾಪುವಿನದ್ದು ಬೇಕಷ್ಟು ಇವೆಯಲ್ಲ! ಹೊಸತು ತಂದರೆ ಬರೀ ದುಡ್ಡು ದಂಡ! ಪುಸ್ತಕ ಓದಿ ಪ್ರಯೋಜನವಾದದ್ದು ಅಷ್ಟರಲ್ಲೇ ಇದೆ, ಅದು ಬೇಡ. ಹುಟ್ಟಿದ ಮೇಲೆ ಹೆಸರಿಟ್ಟರಾಯ್ತು, ಈಗೇನು ಅವಸರ? ಊಟ- ಫೋಟೋಶೂಟ್‌ಗೆ ಟೈಮಿಲ್ಲ. ಹೀಗೆ ಎಲ್ಲಾ ಬೇಡಗಳ ನಡುವೆಯೇ ಎರಡನೇ ಮಗು!

ಇದು ಮೊದಲ ಮತ್ತು ಎರಡನೇ ಮಗುವಿನ ಬರೀ ಹುಟ್ಟಿಗಷ್ಟೇ ಅಲ್ಲ, ಬೆಳೆಸುವಾಗಲೂ ತಾಯಿ- ತಂದೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಧೋರಣೆ. ಪೋಷಕರು ತಮ್ಮದೇ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ ಎರಡು ಮಕ್ಕಳನ್ನು ಸಮಾನವಾಗಿ ಪ್ರೀತಿಸಬೇಕು, ಬೆಳೆಸಬೇಕು ಎಂಬುದು ನಿಜ. ಆದರೆ, ವಾಸ್ತವದಲ್ಲಿ ಹಾಗಾಗುವುದಿಲ್ಲ. ತಮ್ಮ ಮಕ್ಕಳನ್ನು ಒಂದೇ ತರಹ ಪ್ರೀತಿಸುತ್ತೇವೆ ಎಂದು ಹೇಳಿದರೂ ಆ ಪ್ರೀತಿಯನ್ನು ತೋರಿಸುವ ರೀತಿ, ವಿಧಾನಗಳು ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಮೊದಲ ಮಗುವನ್ನು ಕಂಡರೆ ಪ್ರೀತಿ ಹೆಚ್ಚು ಎಂಬುದು ಜನರಲ್ಲಿರುವ ಸಾಮಾನ್ಯ ನಂಬಿಕೆಯಾದರೂ ಕೆಲವೊಮ್ಮೆ ಸಣ್ಣವರು ಎಂದೆಂದಿಗೂ ಸಣ್ಣವರಾಗಿಯೇ ಇದ್ದು ಅಪ್ಪ-ಅಮ್ಮರ  ಪ್ರೀತಿಪಾತ್ರರಾಗಿರುತ್ತಾರೆ.

ಒಂದು ಸರ್ವೆ ಪ್ರಕಾರ, ಮಗುವಿನಿಂದ ಮಗುವಿಗೆ ಪೋಷಕರು ನೀಡುವ ಗಮನ ಕಡಿಮೆಯಾಗುತ್ತಾ ಹೋಗುತ್ತದಂತೆ. ಮೊದಲ ಮಗುವಿನ ಊಟ- ಆಟ- ಪಾಠ ಎಲ್ಲದರಲ್ಲಿಯೂ ಪೋಷಕರು ಸಕ್ರಿಯರಾಗುವುದರಿಂದ ಮೊದಲ ಮಗು ತಮ್ಮ ಸಹೋದರ/ರಿಗಿಂತ ಮೂರು ಸೆಂ.ಮೀ. ಎತ್ತರ ಬೆಳೆಯುವುದಲ್ಲದೇ ಹೆಚ್ಚಿನ ಬುದ್ಧಿಶಕ್ತಿ ಹೊಂದಿರುತ್ತಾರೆ! ಈ ಕುರಿತು ಕುಟುಂಬದ ಕಿರಿಯ ಮಗಳಾದ ಯಲಹಂಕದ ಸಾಧನಾ, ತಮ್ಮ ಅನುಭವ ವಿವರಿಸುತ್ತಾರೆ: “ಮನೆಯಲ್ಲಿ ಅಕ್ಕನಿಗೆ ಯಾವಾಗಲೂ ಮೊದಲ ಪ್ರಾಶಸ್ತ್ಯ ಇರುತ್ತಿತ್ತು.ನನಗೆ ಆಕೆ ಬಳಸಿದ ಪುಸ್ತಕ, ಬಟ್ಟೆ, ಆಟದ ಸಾಮಾನು… ಎಲ್ಲವೂ ಹೀಗೆ ಸೆಕೆಂಡ್‌ ಹ್ಯಾಂಡ್‌ ವಸ್ತುಗಳು. ಮೊದಮೊದಲು ಇದು ಗೊತ್ತಾಗುತ್ತಿರಲಿಲ್ಲ. ಬುದ್ಧಿ ಬಂದಂತೆ ಬಹಳ ಬೇಸರವಾಗುತ್ತಿತ್ತು. ನಾನು ಏನೇ ಮಾಡಿದರೂ ಅದನ್ನು ಅಕ್ಕನ ಸಾಧನೆಗೆ ಹೋಲಿಸಲಾಗುತ್ತಿತ್ತು. ಬೇಕೆಂದೇ ಹೀಗೆ ಮಾಡುತ್ತಿರಲಿಲ್ಲವೇನೋ! ಆದರೆ, ಆ ವಯಸ್ಸಿನಲ್ಲಿ ನನ್ನನ್ನು ಕಂಡರೆ ಅಪ್ಪ- ಅಮ್ಮನಿಗೆ ಇಷ್ಟವಿಲ್ಲ ಅನಿಸುತ್ತಿತ್ತು. ಕೆಲವೊಮ್ಮೆ ನಾನು ದತ್ತು ಮಗುವೇನೋ ಎಂಬ ಸಂಶಯವೂ ಕಾಡುತ್ತಿತ್ತು. ಅಕ್ಕ ಅಂದರೆ, ಒಳಗೊಳಗೇ ಸಿಟ್ಟು! ಪುಣ್ಯಕ್ಕೆ ಕಾಲೇಜಿಗೆ ಬಂದಂತೆ ವಿದ್ಯಾಭ್ಯಾಸಕ್ಕೆ ಬೇರೆ ಊರಿಗೆ ಹೋದೆ. ಆಗ ಆತ್ಮವಿಶ್ವಾಸ ಬೆಳೆಯಿತು, ನನ್ನನ್ನು ನಾನು ಸ್ವತಂತ್ರಳಾಗಿ ಗುರುತಿಸಿಕೊಂಡೆ. ಈಗ ನಾನೇ ಆ ಸ್ಥಾನದಲ್ಲಿ ನಿಂತಾಗ ತಾಯಿಗೆ ಯಾವ ಮಕ್ಕಳಾದರೂ ಪ್ರೀತಿಯೇ. ಆದರೆ, ಸಮಯ- ಸಂದರ್ಭಗಳಿಂದ ಈ ರೀತಿ ಆಗುವುದು ಸಹಜ ಅನಿಸುತ್ತದೆ’.

ಇದಕ್ಕೆ ವಿರುದ್ಧವಾದ ಅಭಿಪ್ರಾಯ ಚೆನ್ನೈನ ಸುಶೀಲಾರದ್ದು. ಸಂಪ್ರದಾಯಸ್ಥ ಕುಟುಂಬದಲ್ಲಿ ಮೊದಲ ಮಗು ಗಂಡಾಗಲಿ ಎಂದು ನಿರೀಕ್ಷಿಸುತ್ತಿ¨ªಾಗ ಹುಟ್ಟಿದ್ದು ನಾನು. ಆಗಲೇ ಗಂಡು ಮಗನಿಗಾಗಿ ಕಾಯುವಿಕೆ ಶುರುವಾಗಿತ್ತು. ಅದಕ್ಕೆ ಸರಿಯಾಗಿ ತಮ್ಮ ಹುಟ್ಟಿದಾಗ, ನನ್ನನ್ನು ಕೇಳುವವರೇ ಇಲ್ಲವಾದರು. ಆತ ಅತ್ತರೂ, ನಕ್ಕರೂ, ಬಿದ್ದರೂ ಚೆಂದ. ನನಗೆ ಮಾತ್ರ ದೊಡ್ಡವಳು ಎಂಬ ಮುಳ್ಳಿನ ಕಿರೀಟ. ಸಣ್ಣವಳಿರುವಾಗ ಈ ತಮ್ಮ ಇರದಿದ್ದರೆ ಎಷ್ಟು ಚೆಂದವಿತ್ತು ಎಂದು ದಿನವೂ ಯೋಚಿಸುತ್ತಿ¨ªೆ. ದೊಡ್ಡವರಾದ ಮೇಲೂ ನನ್ನ ತಮ್ಮ ನನಗೆ ಹತ್ತಿರವಾಗದಿರುವುದಕ್ಕೆ ಅಪ್ಪ- ಅಮ್ಮರ ಈ ವರ್ತನೆ ಕಾರಣ ಅಂತ ದುಃಖವಾಗುತ್ತದೆ. 

ಏನು ಕಾರಣ?
ಪೋಷಕರು ತಮ್ಮದೇ ಮಕ್ಕಳಲ್ಲಿ ಹೀಗೆಲ್ಲ ವ್ಯತ್ಯಾಸವನ್ನು ತೋರಲು ಹಲವು ಕಾರಣಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಈ ವರ್ತನೆ ಉದ್ದೇಶಪೂರ್ವಕವಾಗಿರುವುದಿಲ್ಲ. ಮೊದಲ ಬಾರಿ ಅಪ್ಪ- ಅಮ್ಮರಾಗುವುದು ವಿಶೇಷ ಅನುಭವ. ಹಾಗಾಗಿ ಕುತೂಹಲ, ಆತಂಕ, ಸಡಗರ ಎಲ್ಲವೂ ಹೆಚ್ಚೇ. ಏರು ಪ್ರಾಯದ ಅಪ್ಪ ಅಮ್ಮರಿಗೆ ಮೊದಲ ಕಂದನನ್ನು ಸಾಕುವಾಗ ಅದೇ ಸರ್ವಸ್ವ. ದುಡ್ಡು, ಸಮಯ, ಗಮನ ಎಲ್ಲವೂ ಅದರತ್ತಲೇ! ಆದರೆ, ಎರಡನೇ ಕಂದ ಬರುವಾಗ ಮಗು ಹೊಸತಾದರೂ ಅಪ್ಪ- ಅಮ್ಮರಾಗುವ ಅನುಭವ ಹಳೆಯದಾಗಿರುತ್ತದೆ. ಏನಾಗುತ್ತದೆ ಎಂಬ ಸ್ಪಷ್ಟ ಕಲ್ಪನೆ ಮೂಡಿರುತ್ತದೆ. ವಯಸ್ಸು ಹೆಚ್ಚುವುದರ ಜತೆಗೆ ದೊಡ್ಡ ಮಗುವಿನ ಜವಾಬ್ದಾರಿ ಹೆಗಲೇರಿರುತ್ತದೆ. ಕೆಲಮಟ್ಟಿಗೆ ಭಾವುಕತೆ ಕಡಿಮೆಯಾಗಿ ಪ್ರಾಯೋಗಿಕತೆ ಮೂಡುತ್ತದೆ. ಅಂದರೆ, ಎರಡನೇ ಮಗುವಿನ ಆಗಮನ ಬೇಡ ಅಥವಾ ಅದನ್ನು ಕಂಡರೆ ಕಡಿಮೆ ಪ್ರೀತಿ ಎಂದಲ್ಲ. ಅನುಭವ ಕಲಿಸಿದ ಜೀವನ ಪಾಠ ಅದು. 

ಸೆಕೆಂಡ್‌ ಚೈಲ್ಡ್ ಸಿಂಡ್ರೋಮ್
ಪೋಷಕರು ಮೊದಲನೇ ಮಗುವಿಗೆ ಅತೀ ಹೆಚ್ಚಿನ ಗಮನ ಕೊಟ್ಟು ಎರಡನೆಯದನ್ನು ನಿರ್ಲಕ್ಷಿಸಿದಾಗ ಆ ಮಗುವಿನಲ್ಲಿ ಕಂಡುಬರುವ ಸಮಸ್ಯೆಗಳಿಗೆ “ಸೆಕೆಂಡ್‌ ಚೈಲ್ಡ… ಸಿಂಡ್ರೋಮ…’ ಎಂದು ಗುರುತಿಸಲಾಗುತ್ತದೆ. ಆತ್ಮವಿಶ್ವಾಸದ ಕೊರತೆ, ಒಡಹುಟ್ಟಿದವರ ಬಗ್ಗೆ ಅಸೂಯೆ, ಸಾಮಾಜಿಕವಾಗಿ ಬೆರೆಯದೇ ಹಿಂಜರಿಯುವುದು, ಒಂಟಿಯಾಗಿರುವುದು ಮಗುವಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಪ್ರತೀ ಮಗುವೂ ವಿಶಿಷ್ಟ ಮತ್ತು ವಿಭಿನ್ನ. ಮಗುವಿಗೆ ಕಲಿಸುತ್ತಾ, ತಾವೂ ಕಲಿಯುತ್ತಾ ಸಂಬಂಧಗಳು ರೂಪುಗೊಳ್ಳಬೇಕು. ಹೀಗಾಗಿ, ಎರಡನೇ ಮಗು ಹುಟ್ಟುವ ಮೊದಲೇ ಪೋಷಕರಿಗೆ ಆಪ್ತ ಸಮಾಲೋಚನೆ, ಮಾನಸಿಕ ತರಬೇತಿ ಒಳ್ಳೆಯದು. ಯಾವುದೇ ಮಗುವಿನ ಹೋಲಿಕೆ ಇನ್ನೊಬ್ಬರೊಂದಿಗೆ ಮಾಡುವುದರ ಬದಲಾಗಿ ಸರಿ- ತಪ್ಪು ಯಾವುದು ಎಂಬುದನ್ನು ಕಲಿಸಬೇಕು. ತಂದೆ- ತಾಯಿಗೆ ಎರಡನೇ ಮಗುವಾದರೂ, ಮಗುವಿಗೆ ಒಂದೇ ತಂದೆ- ತಾಯಿ ಎಂಬುದು ನೆನಪಿರಲಿ. ತಪ್ಪು ಯಾರೇ ಮಾಡಿದರೂ ತಿದ್ದುವ ಕೆಲಸ ನಡೆಯಬೇಕು, ದೊಡ್ಡವರು- ಸಣ್ಣವರು ಎಂದು ಸಮರ್ಥಿಸುವುದು ಸಲ್ಲ. ಪ್ರೀತಿಯನ್ನು ಅಳೆದು ತೂಗಿ ಸಮಾನವಾಗಿ ಹಂಚಲು ಸಾಧ್ಯವಿಲ್ಲ; ಆದರೆ, ಪೋಷಕರು ಪ್ರತೀ ಮಗುವಿಗೂ ಅಪ್ಪ- ಅಮ್ಮರಿಗೆ ತಾನೆಂದರೆ ಪ್ರೀತಿ ಎಂಬ ಭಾವನೆ ಮೂಡಿಸುವ ಸಣ್ಣ ಪುಟ್ಟ ಕ್ರಿಯೆಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಎರಡನೇ ಮಗು ತನ್ನ ತಮ್ಮ- ತಂಗಿ, ಪ್ರತಿಸ್ಪರ್ಧಿಯಲ್ಲ ಎಂಬ ಭಾವ ಮೊದಲ ಮಗುವಿನಲ್ಲಿ ಮೂಡಿದಾಗ ಆತ್ಮೀಯತೆ ಬೆಳೆಯುತ್ತದೆ. ಹೂಮುತ್ತು, ಬೆಚ್ಚಗಿನ ಅಪ್ಪುಗೆ, ಒಟ್ಟಿಗೇ ಊಟ, ಕತೆ ಹೇಳುವುದು, ಹಳೇ ಫೋಟೋ ನೋಡುವುದು… ಇವೆಲ್ಲಾ ಭಾವನಾತ್ಮಕವಾಗಿ ಬೆಸೆಯುವಿಕೆಗೆ ಸಹಕಾರಿ. ಒಟ್ಟಿನಲ್ಲಿ ಮಕ್ಕಳನ್ನು ಬೆಳೆಸಲು ಸಿದ್ಧ ಸೂತ್ರ ಎಂಬುದಿಲ್ಲ, ಹಾಗಾಗಿ ಅದು ಸುಲಭವೂ ಅಲ್ಲ!

ಯಾಕೆ ಹೀಗಾಗುತ್ತೆ ಅಂದರೆ…
ಪ್ರತೀ ಮಗುವೂ ಬೇರೆಯಾಗಿರುವುದರಿಂದ ಬೆಳೆಸುವಾಗಲೂ ವ್ಯತ್ಯಾಸ ಸಹಜವೇ. ಮಕ್ಕಳ ಪಾಲನೆಯಲ್ಲಿ ಮಕ್ಕಳ ನಡುವಿನ ಅಂತರ, ಹೆಣ್ಣು- ಗಂಡು ಎಂಬ ಬೇಧ, ಮಗುವಿನ ಸ್ವಭಾವ, ಪೋಷಕರ ವೈಯಕ್ತಿಕ ಅನುಭವ, ಅನುಕೂಲ, ಆರೋಗ್ಯ, ಆರ್ಥಿಕ ಪರಿಸ್ಥಿತಿ- ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲನೇ ಮಗುವಿಗೆ ಪೋಷಕರ ಸಂಪೂರ್ಣ ಗಮನ- ಆರೈಕೆಯ ಲಾಭ ದೊರೆತರೆ, ಎರಡನೇ ಮಗುವಿಗೆ ಅನುಭವಿ ಪೋಷಕರು ಸಿಗುತ್ತಾರೆ. ಮೊದಲ ಮಗುವಿಗೆ ಉತ್ಸಾಹದಿಂದ ಕಲಿಸುವುದು ನಿಜವಾದರೂ, ಅದರ ಮೇಲೆ ನಿರೀಕ್ಷೆಗಳೂ ಹೆಚ್ಚು. ಎರಡನೇ ಮಗುವಿಗೆ ಒಡಹುಟ್ಟಿದವರು ಕಲಿಯುವುದನ್ನು ಕಂಡು- ಕೇಳಿ, ಕಲಿಕೆ ಸುಲಭ; ನಿರೀಕ್ಷೆಗಳೂ ಕಡಿಮೆ. ಹೀಗೆ ಪ್ರತಿಯೊಂದರಲ್ಲೂ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳಿವೆ. ಸೂಕ್ಷ್ಮ ಮನಸ್ಸಿನ ಮಕ್ಕಳನ್ನು ಬೆಳೆಸುವಾಗ ಮಗುವಿನ ಸ್ವತಂತ್ರ ಬೆಳವಣಿಗೆಗೆ ಅವಕಾಶ ನೀಡುತ್ತಲೇ, ಪ್ರೀತಿ ಮತ್ತು ಶಿಸ್ತಿನ ಸಮತೋಲನ ಸಾಧಿಸುವ ಕಷ್ಟಕರ ಕೆಲಸವನ್ನು ಪೋಷಕರು ಮಾಡಬೇಕು.
ಡಾ.ಕೆ.ಆರ್‌. ಶ್ರೀಧರ್‌, ಹಿರಿಯ ಮನೋವೈದ್ಯರು

ಎರಡನೇ ಮಗು ಹುಟ್ಟುವಾಗ…
 ಪೋಷಕರಿಗೆ ಆ ಮಗುವಿನ ಮೇಲೆ ಅಷ್ಟೊಂದು ಕುತೂಹಲ ಇರೋಲ್ಲ.
– ಮಗುವಿನ ತಾಯಿಗೆ “ಬಯಕೆ’ ಸಂಪ್ರದಾಯಗಳು ಸಿಗೋಲ್ಲ.
– ಹೆಸರುಗಳ ದೊಡ್ಡ ಪಟ್ಟಿ ತಯಾರಾಗೋಲ್ಲ.
– ಗರ್ಭಿಣಿಯ ಫೋಟೋ ತೆಗೆಯೋದು, ಮಗು ಹುಟ್ಟಿದ ಮೇಲೆ ಅದರ ಫೋಟೋಗಳನ್ನು ಕ್ಲಿಕ್ಕಿಸೋದು ಅಪರೂಪವೇ ಆಗಿಬಿಡುತ್ತೆ.
– ಹೊಸ ಬಟ್ಟೆ, ಹೊಸ ಶೂ, ಹೊಸ ಆಟಿಕೆಗಳಿಂದ 2ನೇ ಮಗು ಸದಾ ವಂಚಿತ.
– ಪೋಷಕರ ಪ್ರೀತಿಯನ್ನು ಮೊದಲನೇ ಮಗು ಅದಾಗಲೇ ಹೈಜಾಕ್‌ ಮಾಡಿಕೊಂಡಿರುತ್ತೆ.

ಡಾ. ಕೆ.ಎಸ್‌. ಚೈತ್ರಾ

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.