ಫಸ್ಟ್ ಪೀರಿಯೆಡ್: ಮಗಳಿಗೆ ಅಮ್ಮ ಹೇಳಬೇಕಾದ ಗುಟ್ಟುಗಳು
Team Udayavani, Jul 12, 2017, 10:41 AM IST
ಮುಟ್ಟು ಸೃಷ್ಟಿಯ ಗುಟ್ಟು. ಅದರಿಂದಲೇ ಇನ್ನೊಂದು ಜೀವಿಯ ಹುಟ್ಟು. ಇನ್ನೊಂದು ಜೀವವನ್ನು ಸೃಷ್ಟಿಸುವ ಶಕ್ತಿ ಹೆಣ್ಣಿನ ಕೈಯಲ್ಲಿದೆ. ಮುಟ್ಟಾದ ಹೆಂಗಸರು ಕೊಳಕು ಅಥವಾ ರೋಗಿ ಎನ್ನುವ ಭಾವನೆಯೇ ಅಮಾನವೀಯ. ಆದರೆ, ಆಕೆಯು ಮಾನಸಿಕವಾಗಿ ದೈಹಿಕವಾಗಿ ಪರಿವರ್ತನೆ ಹೊಂದುತ್ತಿರುವ ಪರ್ವ ಕಾಲ ಎಂದು ಯಾರೂ ಊಹಿಸುವುದಿಲ್ಲ. ದೇಹ ವಯಸ್ಸಿಗೆ ತಕ್ಕಂತೆ ಸೂಕ್ತವಾಗಿ ಕೆಲಸ ಮಾಡುತ್ತದೆ ಎನ್ನುವುದರ ಸೂಚನೆಯೇ ಮುಟ್ಟು. ಮೊದಲ ಬಾರಿಗೆ ಮಗಳು ಋತುಮತಿ ಆದಾಗ ತಾಯಿಯೊಬ್ಬಳ ಕರ್ತವ್ಯ ಏನಿರುತ್ತದೆ?
1. ಆಕೆಯ ಜೊತೆ ಮುಕ್ತವಾಗಿ ಮಾತಾಡಿ…
ಹೆಣ್ಣು ಮೊದಲ ಬಾರಿಗೆ ಋತುಮತಿಯಾದಾಗ ಹಾರ್ಮೋನ್‌ಗಳ ಬದಲಾವಣೆಗಳಿಂದ ಮಾನಸಿಕವಾಗಿ ನೊಂದುಕೊಳ್ಳುತ್ತಾಳೆ. ಈ ವೇಳೆ ಮನದಲ್ಲಿ ಏನೋ ಭಯ ಆವರಿಸುತ್ತದೆ. ಈ ಸಂದರ್ಭದಲ್ಲಿ ತಾಯಿಯು ಮಗಳಿಗೆ, ಋತುಚಕ್ರದ ಬಗ್ಗೆ ಅರಿವನ್ನು ಮೂಡಿಸಬೇಕು. ಆಕೆಯ ಭಾವನೆಗಳಿಗೆ ಮುಕ್ತವಾಗಿ ಸ್ಪಂದಿಸಬೇಕು.
2. ಅಗತ್ಯ ವಸ್ತುಗಳ ಖರೀದಿ
ಮಗಳು ಋತುಮತಿಯಾಗುವ ಸಂದರ್ಭ ಹತ್ತಿರಬಂದಂತೆ ಎಲ್ಲ ಜವಾಬ್ದಾರಿಗಳನ್ನು ಆಕೆಯ ಮೇಲೆ ಹಾಕಬೇಡಿ. ಇದರಿಂದಾಗಿ ಅವಳು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ನೀವೇ ಅವಳಿಗೆ ಅಗತ್ಯವಾಗಿ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಿ, ಅವರ ಬಳಿ ಅದು ಯಾವಾಗಲೂ ಇರುವಂತೆ ನೋಡಿಕೊಳ್ಳಿ.
3. ವಸ್ತುಗಳ ಬಳಕೆಯ ಬಗ್ಗೆ ಅರಿವು
ಋತುಸ್ರಾವದ ಸಂದರ್ಭದಲ್ಲಿ ಪ್ಯಾಡ್‌ಗಳ ಬಳಕೆ ಯಾವ ತರಹ ಮಾಡಬೇಕು ಎಂಬುದನ್ನು ಮಗಳಿಗೆ ಸೂಕ್ತವಾಗಿ ತಿಳಿಸಿ. ಬಟ್ಟೆಗಳನ್ನು ಬಳಸುವಾಗ ಒಣಗಿದ ಮೃದುವಾದ ಹತ್ತಿಯ ಬಟ್ಟೆಗಳನ್ನು ಬಳಸಲು ಸಲಹೆ ನೀಡಿ. ಆ ದಿನಗಳಲ್ಲಿ ಯಾವ ರೀತಿ ಸುರಕ್ಷಿತವಾಗಿರಬೇಕು, ಸ್ವತ್ಛತೆಯಿಂದ ಇರಬೇಕು ಎಂಬುದನ್ನೂ ತೀಳಿ ಹೇಳಿ.
4. ಪೌಷ್ಟಿಕ ಆಹಾರ
ಋತುಚಕ್ರದ ವೇಳೆ ಅತಿಯಾದ ರಕ್ತಸ್ರಾವ ಆಗುತ್ತದೆ. ನಿರಂತರ ರಕ್ತಸ್ರಾವದಿಂದ ಅಶಕ್ತರಾಗುವ ಸಾಧ್ಯತೆಗಳಿರುತ್ತವೆ. ಈ ವೇಳೆ ಮಗಳಿಗೆ ಪೌಷ್ಟಿಕವಾದ ಆಹಾರವನ್ನು ನೀಡಿ. ಅವಶ್ಯ ಇದ್ದಾಗ ವೈದ್ಯಕೀಯ ಸಲಹೆ ಪಡೆಯುವುದು ಸೂಕ್ತ.
5. ಮಾನಸಿಕ ಸ್ಥೈರ್ಯ
ಋತುಮತಿಯು ಹಲವು ಮಾನಸಿಕ ತೊಳಲಾಟಗಳು ಮತ್ತು ಅನುಮಾನಗಳ ಹೊರೆ ಹೊತ್ತು ಬಳಲುತ್ತಿರುತ್ತಾಳೆ. ಋತುಮತಿಯನ್ನು ಏಕಾಂಗಿಯಾಗಿರಲು ಬಿಡದೆ, “ನಿನ್ನೊಂದಿಗೆ ನಾನಿದ್ದೇನೆ’ ಎಂದು ಮಾನಸಿಕವಾಗಿ ಧೈರ್ಯ ತುಂಬಬೇಕು.
6. ವಿಶ್ರಾಂತಿ ಮುಖ್ಯ
ಋತುಮತಿಯರು ಮಾನಸಿಕವಾಗಿ ಮಾತ್ರವಲ್ಲದೆ, ದೈಹಿಕವಾಗಿ ಅಸ್ವಸ್ಥರಾಗುವುದು ಸಾಮಾನ್ಯ. ಮಹಿಳೆ ಎಂದಮಾತ್ರಕ್ಕೆ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಕೆಲಸ ಮಾಡದೆ, ಹೆಚ್ಚು ಸಮಯವನ್ನು ವಿಶ್ರಾಂತಿಗಾಗಿ ಮಿಸಲಿಡಬೇಕು. ತ್ರಾಸದಾಯಕ ಕೆಲಸಗಳನ್ನು ಈ ವೇಳೆ ಮಾಡಬಾರದು.
ವಹೀದಾ ನದಾಫ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.