ನೆನೆವುದೆನ್ನ ಮನಂ ಅವಲಕ್ಕಿಯಂ..!


Team Udayavani, Nov 4, 2020, 7:33 PM IST

avalu-tdy-2

ಅವಲಕ್ಕಿ ಪವಲಕ್ಕೀ… ಹೌದರಿ. ನಾವೆಲ್ಲಾ ಸಣ್ಣವರಿದ್ದಾಗಿಂದ ಈ ಅವಲಕ್ಕಿ ತಿಂದನ ದೊಡ್ಡವ್ರಾಗೇವಿ. ಮಡೀ ಮಡೀ ಅಂತ ಅಜ್ಜಿ, ಅವ್ವಾ, ಅಪ್ಪಾ ಎಲ್ಲಾರೂ ಹಾರಾಡವ್ರು. ದಿನಾ ಒಂದೊಂದು ದೇವರ ಸ್ಪೆಶಲ್‌ ದಿನಾ… ಅಡಿಗಿ ಮಡೀಲೇ ಆಗಬೇಕಂದ್ರ ಒಲೀ ಮುಸರಿ ಮಾಡಂಗಿಲ್ಲಾ. ಅಂದಮ್ಯಾಲ ಈ ಅವಲಕ್ಕಿಗಿಂತಾ ಪರಮೋಚ್ಚ ಖಾದ್ಯ ಯಾವದದ ಹೇಳರಿ?

ಮುಂಜಾನೆ ಎದ್ದಕೂಡ್ಲೆ ಛಾ, ಕಷಾಯಾ ಅಂತೇನ ಇರತಿದ್ದಿಲ್ಲಾ.. ಕೋಲ್ಗೇಟ್‌ ಟೂತ್‌ಪೇಸ್ಟ್‌ನಿಂದ ! ಹ್ಹಾ ಹ್ಹಾ! ಎಲ್ಲೀದರೀ? ಮಂಕೀ ಛಾಪ್‌ ಕಪ್ಪು ಹಲ್ಲು ಪುಡಿಂದತೋರಬೆರಳ ಹಾಕಿ ಗಸಾಗಸಾ ಹಲ್ಲ ತಿಕ್ಕೊಂಡು ಕೈಕಾಲು ಮಾರೀ ತೊಳಕೊಂಡು, ಬಾಗಲಾ ಕಸಾ, ರಂಗೋಲಿ ಹಾಕಿ ಬರೂದರಾಗ ಅವ್ವಾ ಒಂದ ದೊಡ್ಡ ಬೋಗೋಣೀ ತುಂಬ ಅವಲಕ್ಕಿ ತೊಗೊಂಡು ಅದಕ್ಕ ಇಂಗಿನ ಒಗ್ಗರಣೀ ಹಾಕಿ, ಮೆಂತೇದ ಹಿಟ್ಟು, ಚಟ್ನಿ ಪುಡೀ, ಉಪ್ಪು, ಹಾಕಿ ಕಲಸಾಕಿ. ಮ್ಯಾಲ ಈಡಾಗಿ ಹಸೀ ಖೊಬ್ರಿ ಹಾಕಿ, ಸಣ್ಣ ಸಣ್ಣ ತಟ್ಟಿಯೊಳಗ ಹಾಕಿ ಕೊಡಾಕಿ…

ಇವು ದಿನದ ಅವಲಕ್ಕಿ! ಸಂಜೀಕೆ ಅಜ್ಜೀ ಫ‌ರಾಳಾ… ಅದನ ಕಾಯಕೋತ ಕೂಡಾವ್ರು ಅಕೀ ಸೂತ್ಲೂ ನಾವೆಲ್ಲಾ ಮಮ್ಮಕ್ಳೂ. ಅವ್ವಾ ಬೈಯಾಕಿ… ಇದೇ ಈಗಿನ್ನೂ ಹೊಟ್ಟೀ ತುಂಬ ಊಟಾ ಮಾಡೀರಲಾ… ಸಾಕಾಗಿಲ್ಲೇನ? ಖೋಡಿಗೋಳು… ಪಾಪಾ, ಅವರ ಒಂದ ಮುಕ್ಕ ಅವಲಕ್ಕೀಗೂ ಗಂಟಲಗಾಣ ಆಗತಾವ! ಅಂತ. ಅಜ್ಜಿ ಮಾತ್ರ ನಾವೇನರೆ ಹೊರಗ ಆಟಕ್ಕ ಬಿದ್ದಿದ್ರೂ ಕರಿಯಾಕಿ… ಆ ಅವಲಕ್ಕಿ ರುಚೀನ ಬ್ಯಾರೆ. ಒಂದ ಮುಷ್ಟಿ ಅಜ್ಜಿಗೆ… ಇನ್ನೆರಡ ಮುಷ್ಟಿ ನಮಗ.

ರಗಡಷ್ಟು ಸೇಂಗಾದ ಹಸೀ ಎಣ್ಣೀ, ಮೆಂತ್ಯದ ಹಿಟ್ಟು, ಚಟ್ನಿ ಪುಡಿ ಹಾಕಿ ಮಿದ್ದಿ ಮಿದ್ದಿ ಕಲಸಾಕಿ. ಮ್ಯಾಲ ಹಸೀ ಖೊಬ್ರಿ… ಸವತೀಕಾಯ ಕೊಚ್ಚಿದ್ದೂ… ಒಂದಿಷ್ಟು ಯಾವದರೆ ಹಸಿ ಚಟ್ನಿ… ಯಾವದೂ ಇಲ್ಲಾಂದ್ರ ಮಾವಿನಕಾಯಿ ಚಟ್ನಿ… ಆಹಾಹಾ… ಏನ ರುಚೀ! ಇನ್ನ ನಾಳೆ ಹಬ್ಬಂತಿರಲಿಕ್ಕೇ ಹಚ್ಚೋ ಅವಲಕ್ಕಿ ಗಮ್ಮತ್ತ ಬ್ಯಾರೆ.

ಮಧ್ಯಾಹ್ನ ಬಿಸಲಿಗೆ ಅಪ್ಪನ ಒಗದ್ದ ಬಿಳೆ ಧೋತರಾ ಹಾಸಿ, ಅದರ ಮ್ಯಾಲ ಅವಲಕ್ಕಿ ಹರವಿರತಿದ್ರು. ಮಧ್ಯಾಹ್ನ ನಾಲ್ಕ ಗಂಟೇಕ್ಕ ಒಳಗ ತೊಗೊಂಡ ಬಂದು, ದೊಡ್ಡ ಖಬ್ಬಣ ಬುಟ್ಟ್ಯಾಗ ಘಾಣದ ಎಣ್ಣೀ ಹಾಕಿ ದಣದಣ ಉರೀ ಮ್ಯಾಲ ಒಗ್ಗರಣೀ… ಸಾಸಿವಿ ಜೀರಿಗಿ ಚಟಪಟಾ ಅಂದಮ್ಯಾಲ ಒಂದ ಬಟ್ಟಲಾ ಬಿಳೆ ಎಳ್ಳು ಹಾಕಿ ಚಟಪಟಾ ಅನಸಿ ಹುರದು ಸಿಪ್ಪೀ ತಗದ ಸೇಂಗಾ ಹಾಕಿ ಆಮ್ಯಾಲ ಪುಠಾಣಿ ಹಾಕೀ, ಮೆಂತ್ಯೆ ಮೆಣಸಿನಕಾಯಿ ಕರದು, ಒಂದ ಬಟ್ಟಲದಷ್ಟು ಒಣಾಖೊಬ್ರಿವು ತೆಳ್ಳಗ ಹೆಚ್ಚಿದ ಚೂರು ಘಮ್ಮನಸಿ, ಬುಟ್ಟಿ ಕೆಳಗ ಇಳಿಸಿಟ್ಟು, ಮೆಂತ್ಯ ಹಿಟ್ಟು, ಕೆಂಪ ಖಾರದ ಪುಡೀ, ಉಪ್ಪು, ಸ್ವಲ್ಪ ಸಕ್ರೀ ಹಾಕಿ ಕೈಯಾಡೀಸಿ ಅವಲಕ್ಕಿ

ಹಾಕಿ ಹಚ್ಚಿಡವ್ರು… ಆಹಾಹಾ! ಸಾಲಿಂದ ಮನಿ ಒಳಗ ಕಾಲಿಡತಿದ್ಹಂಗನ ಅವ್ವಾ, ಅವಲಕ್ಕಿ ನಂಗ.. ಅಂತನ ಬರವ್ರು… ಹಾಂ.. ಮರತ್ತಿದ್ದೆ, ಅಜ್ಜಿ ಉಪ್ಪಿಲ್ದ ಉಪಾಸಾ ಮಾಡೂಮುಂದ ಅವಲಕ್ಕೀಗೆ ಬೆಲ್ಲದ ಹೆರಕಲಾ, ಹೆತ್ತುಪ್ಪಾ, ಹಸೀ ಖೊಬ್ರಿ ಹೆರಕಲಾ ಹಾಕಿದ ಅವಲಕ್ಕಿ ರೆಡಿ ಆಗತಿದ್ವು ಅವೂ ಭಾರೀ ರುಚೀ… ಒಟ್ಟಿನ ಮ್ಯಾಲ, ನಾ ನೆನಪಿಸಿಕೊಳ್ಳೋದು, ಪಂಪನ್ಹಂಗ…. ಆರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಈ ತರಾತರದ ಅವಲಕ್ಕಿಯಂ!­

 

ಮಾಲತಿ ಮುದಕವಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.