ಕೂದಲಿಗೆ ಆರೈಕೆಯ ಸೂತ್ರಗಳು
Team Udayavani, Jul 11, 2018, 6:00 AM IST
1. ಕಿರಣಗಳಿಂದ ರಕ್ಷಿಸಿ
ಸೂರ್ಯನ ನೇರ ಹಾಗೂ ತೀಕ್ಷ್ಣ ಕಿರಣಗಳು ಕೂದಲಿನ ಆರೋಗ್ಯಕ್ಕೂ ಹಾನಿಕರ. ಕೂದಲು ಸೀಳುಬಿಟ್ಟು, ಬಣ್ಣ ಮಾಸುವ ಅಪಾಯ ಕೂಡ ಹೆಚ್ಚು. ಮನೆಯಿಂದ ಹೊರಗೆ ಹ್ಯಾಟ್ ಧರಿಸುವ, ಸ್ಕಾಫ್ì ಕಟ್ಟುವ ಅಭ್ಯಾಸ ಮಾಡಿಕೊಳ್ಳಿ. ಇದು ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವುದಲ್ಲದೆ, ನೆತ್ತಿಯ ಆದ್ರìತೆಯನ್ನು ಉಳಿಸುತ್ತದೆ.
2. ಈಜುವ ಮುನ್ನ…
ಬೀಚ್‌ನಲ್ಲಿ ಆಟವಾಡುವುದು, ರಾಸಾಯನಿಕ ಬಳಸಿದ ಈಜುಕೊಳದಲ್ಲಿ ಈಜುವುದರಿಂದ ಕೂದಲು ಉದುರಬಹುದು. ಹೀಗೆ ಈಜಾಡುವ ಮುನ್ನ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಈಜಿದ ಮೊದಲು ಮತ್ತು ನಂತರ ತಲೆಗೆ ಸ್ನಾನ ಮಾಡಿ. ಇದಲ್ಲದೆ, ಈಜುವಾಗ ಈಜು ಟೋಪಿ ಬಳಸಲು ನೆರವಾಗುವಂತೆ ಕೂದಲನ್ನು ಜಡೆ ಹಾಕಿ.
3. ನೈಸರ್ಗಿಕವಾಗಿ ಒಣಗಿಸಿ
ಸ್ನಾನದ ನಂತರ ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸುವುದು ಅಷ್ಟು ಉತ್ತಮವಲ್ಲ. ತಲೆಗೂದಲನ್ನು ನೈಸರ್ಗಿಕ ಗಾಳಿಯಲ್ಲೇ ಒಣಗಲು ಬಿಡಿ. ಬೇಸಿಗೆಯಲ್ಲಿ ಫ್ಲಾಟ್ ಐರನ್ ಅಥವಾ ಕರ್ಲಿಂಗ್ ಐರನ್ ಮಾದರಿಯ ಹೇರ್‌ಕಟ್ ಸೂಕ್ತ.
4. ಎಣ್ಣೆ ಹಚ್ಚಿ ಸ್ನಾನ ಮಾಡಿ
ತೆಂಗಿನಕಾಯಿ, ಆಲಿವ್ ಮತ್ತು ಅವಕಾಡೊ ಎಣ್ಣೆಗಳು ಕೂದಲಿಗೆ ಮತ್ತು ನೆತ್ತಿಯ ಆದ್ರìತೆಗೆ ಉತ್ತಮ. ಕೂದಲಿನ ತುದಿಯಿಂದ ಬುಡದವರೆಗೂ ಎಣ್ಣೆ ಹಚ್ಚಿ. ಒಂದು ಹದವಾದ ಶ್ಯಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.
5. ಹೇರ್ ಜೆಲ್ ಬಳಸಿ
ಬೇಸಿಗೆಯಲ್ಲಿ ಕೂದಲಿಗೆ ತೇವಾಂಶ ಬೇಕಾಗುತ್ತದೆ. ಒಣ ಚರ್ಮಕ್ಕೆ ಲೋಷನ್ ಇದ್ದಂತೆ, ಕೂದಲಿಗೆ ತೇವಾಂಶವನ್ನು ಒದಗಿಸುವ ಹೇರ್ ಜೆಲ್ ಬಳಸಿ. ಕೂದಲು ಸಿಕ್ಕಾಗುವುದನ್ನೂ ಇದರಿಂದ ತಡೆಯಬಹುದು.
- ಡಾ. ಚಿತ್ರಾ ಆನಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.