ನಾಲ್ಕು ಕಿವಿಯ ಚೆಲುವೆ!
Team Udayavani, Dec 20, 2017, 3:46 PM IST
ಅಂಗಿಯಂತೆ ತೊಡಬಹುದಾದ ಸ್ವೆಟರ್‌ಗೆ ಹುಡಿ ಎಂಬ ಹೆಸರಿದೆ. ಈ ದಿರಿಸಿನಲ್ಲಿ ತಲೆಗವಸಿನ ಜೊತೆ ಎರಡು ಕಿವಿಗಳೂ ಇರುತ್ತವೆ. ಅದೇ ವಿಶೇಷ. ಗಡಗಡ ಚಳಿಯಿಂದ ಪಾರಾಗಲು ಹುಡಿ ನೆರವಾಗುತ್ತದೆ…
ಸ್ವೆಟ್ ಶರ್ಟ್ ಎಂದರೆ ಅಂಗಿಯಂತೆ ತೊಡಬಹುದಾದ ಸ್ವೆಟರ್. ತಲೆಗವಸು ಇರುವ ಸ್ವೆಟ್ ಶರ್ಟ್ ಅನ್ನು “ಹುಡಿ’ ಎಂದು ಕರೆಯುತ್ತಾರೆ. ಇದು ನಿನ್ನೆ, ಮೊನ್ನೆ ಬಂದಿದ್ದಲ್ಲ. 1970ರಲ್ಲಿಯೇ ಈ ಶೈಲಿ ಪ್ರಸಿದ್ಧವಾಗಿತ್ತು. ಆದರೂ, “ಹುಡಿ’ ಎಂಬ ಪದ ಫ್ಯಾಷನ್ ಲೋಕಕ್ಕೆ ಪದಾರ್ಪಣೆ ಮಾಡಿದ್ದು 1990ರಲ್ಲಿ. ಇದೀಗ ಈ ಹುಡಿ ಹೊಸ ಅವತಾರದಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಅದೇನದು ಹೊಸ ಅವತಾರ ಎಂದು ನೀವು ಯೋಚಿಸುವುದಾದರೆ, ಇಲ್ಲಿದೆ ವಿಷಯ. ತಲೆಗವಸಿನ ಮೇಲೆ ಎರಡು ಕಿವಿಗಳೂ ಇವೆ! ಹೌದು! ಬೆಕ್ಕಿನ ಕಿವಿ, ನಾಯಿಯ ಕಿವಿ, ಪಾಂಡಾ ಕಿವಿ, ಮೊಲದ ಕಿವಿ, ಕುದುರೆ ಕಿವಿ, ಚಿರತೆ ಕಿವಿ… ಹೀಗೆ ಹಲವಾರು ಪ್ರಾಣಿಗಳ ಕಿವಿಯನ್ನು ಹೋಲುವಂತೆ ತಲೆಗವಸಿನ ಮೇಲೆ ಬಟ್ಟೆಯಿಂದ ಎರಡು ಕಿವಿಗಳನ್ನು ಹೊಲಿಯಲಾಗುತ್ತದೆ. ಈ ಟ್ರೆಂಡ್ ಕೇವಲ ಪ್ರಾಣಿಗಳ ಕಿವಿಗಳಿಗೆ ಸೀಮಿತವಾಗದೆ ಕಾಟೂìನ್ ಪಾತ್ರಗಳಾದ ಪೋಕಿಮಾನ್, ಮಿಕ್ಕಿ ಮೌಸ್, ಮಿನ್ನಿ ಮೌಸ್, ಬಗÕ… ಬನ್ನಿ, ಹಲೋ ಕಿಟ್ಟಿ, ಟೆಡ್ಡಿ ಬೇರ್ ಮುಂತಾದವುಗಳ ಕಿವಿಗಳನ್ನೂ ಹುಡಿ ಮೇಲೆ ಮೂಡಿಸಲಾಗಿವೆ.
ಕಿವಿಯ ಜೊತೆಗೆ ಕೊಂಬು
ಇನ್ನು ಹುಡಿ ಮೇಲೆ ಜಿಂಕೆಯ ಕೊಂಬುಗಳನ್ನೂ ಕಾಣಬಹುದು. ಇದೂ ಸಾಲದು ಅಂತ ಮಾಟಗಾತಿಯ ಕಿವಿ, ಬಾವಲಿಯ ಕಿವಿ, ಕಪ್ಪು ಬೆಕ್ಕಿನ ಕಿವಿಗಳನ್ನು ಹೋಲುವ ಕಿವಿಗಳುಳ್ಳ ಹುಡಿಗಳೂ ಲಭ್ಯ! ಇವು ಗಾತ್ ಶೈಲಿಯ ವಿನ್ಯಾಸಗಳಾಗಿದ್ದು, ವಿದೇಶಗಳಲ್ಲಿ ಹ್ಯಾಲೋವೀನ್ ಸಮಯದಲ್ಲಿ ಇವುಗಳಿಗೆ ತುಂಬ ಬೇಡಿಕೆ ಇರುತ್ತದೆ. ಇದೀಗ ಇದರ ಅಲೆ ನಮ್ಮ ದೇಶದಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂಥ ಹುಡಿಗಳು ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿವೆ. ನಮಗೆ ಬೇಕಾದಂತೆ ಹೊಲಿದು ಕೊಡುವ ಕಸ್ಟಾಮೈಸ್ಡ್ ಆಯ್ಕೆಗಳು ಭಾರತದಲ್ಲಿ ಈಗಿನ್ನೂ ಲಭ್ಯವಿಲ್ಲ. ಆದರೆ, ಇವು ಮುಂದಿನ ದಿನಗಳಲ್ಲಿ ಸುಲಭದಲ್ಲಿ ಸಿಗಲಿವೆ.
“ಫ್ಯಾನ್ಸಿ’ ಅಲ್ಲ, ಕ್ಯಾಶುಯಲ್
ಕಿವಿಗಳಿರುವ ಹುಡಿಗಳು ಮಹಿಳೆಯರು, ಪುರುಷರು ಮತ್ತು ಮಕ್ಕಳ ಉಡುಗೆಯ ಸೆಕ್ಷನ್‌ನಲ್ಲಿ ಸಿಗುತ್ತವೆ. ಫ್ಯಾನ್ಸಿ ಡ್ರೆಸ್‌ನಲ್ಲಿ (ಛದ್ಮವೇಷ) ಮಕ್ಕಳು ಸಾಮಾನ್ಯವಾಗಿ ಉಡುತ್ತಿದ್ದ ಇಂಥ ಬಟ್ಟೆಗಳನ್ನು ಇದೀಗ ಕ್ಯಾಶುಯಲ್ ಆಗಿಯೂ ತೊಡಬಹುದು. ಇವನ್ನು ಜೀ®Õ… ಪ್ಯಾಂಟ್, ಸ್ಕರ್ಟ್ (ಲಂಗ), ಶಾರ್ಟ್ಸ್, ಪೆಡಲ್ ಪುಷರ್ಸ್ (ಮುಕ್ಕಾಲು ಪ್ಯಾಂಟ್), ಡಂಗ್ರೀಸ್ ಮುಂತಾದ ವೆಸ್ಟರ್ನ್ (ಪಾಶ್ಚಾತ್ಯ) ಉಡುಪುಗಳ ಜೊತೆ ಧರಿಸಬಹುದು. ಇಂಥ ಹುಡಿಗಳನ್ನು ಹೆಚ್ಚಾಗಿ ಕ್ಯಾಶುಯಲ್ ಪ್ಯಾಂಟ್, ಶರ್ಟ್ ಜೊತೆ ಉಡುತ್ತಾರೆ. ಹಾಗೆಂದು ಕುರ್ತಾ, ಚೂಡಿದಾರ ಅಥವಾ ಇತರ ಉಡುಪುಗಳ ಜೊತೆ ಇಯರ್ ಹುಡಿ ತೊಡಬಾರದೆಂದು ಏನೂ ಇಲ್ಲ.
ಕಾಲೇಜಿಗೂ “ಹುಡಿ’
ಸ್ವೆಟರ್ ಅನ್ನು ಕೇವಲ ಚಳಿಗಾಲದಲ್ಲಿ ಮಾತ್ರ ತೊಡಬೇಕಾಗುತ್ತದೆ. ಆದರೆ, ಸ್ವೆಟ್ ಶರ್ಟ್ ಅನ್ನು ಬೇಸಿಗೆ ಸೇರಿದಂತೆ ಯಾವುದೇ ಕಾಲದಲ್ಲೂ ತೊಡಬಹುದು. ದಿನ ನಿತ್ಯ ತೊಡುವ ಕಾಲೇಜು ದಿರಿಸಿನ ಜೊತೆ ಇಂಥ ಹುಡಿಗಳು ಅಂದವಾಗಿ ಕಾಣುತ್ತವೆ. ಲೆಗಿಂಗÕ… ಮೇಲೂ ಇಯರ್ ಹುಡಿ ತೊಡಬಹುದು. ಹುಡಿಯ ಮೇಲಿರುವ ಕಿವಿಗಳ ಬಣ್ಣವನ್ನೇ ಹೋಲುವ ಬಣ್ಣದ ಲೆಗಿಂಗ್ಸ್ ಧರಿಸಿದರೆ, ನೀವು ಖಂಡಿತವಾಗಿ ಕ್ಯೂಟ್ ಆಗಿ ಕಾಣಿಸ್ತೀರಿ. ಪ್ರತಿ ಉಡುಗೆಗೆ ಮ್ಯಾಚಿಂಗ್ ಸ್ವೆಟರ್ ಖರೀದಿಸುವುದು ಒಳ್ಳೆಯ ಐಡಿಯಾ ಅಲ್ಲ. ಅದು ಸಾಧ್ಯವೂ ಇಲ್ಲ. ಹಾಗಾಗಿ, ಇಂಥ ಕ್ಯೂಟ್ ಹುಡಿಗಳನ್ನು ಧರಿಸಿ ಈ ಚಳಿಗಾಲದಲ್ಲಿ ಆರಾಮಾಗಿ ಓಡಾಡಿ.
ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.