ಆಡೂ ಆಟ ಆಡೂ…


Team Udayavani, Nov 22, 2017, 11:01 AM IST

22-25.jpg

ಹಿಂದೆ ಸಂಜೆ ವೇಳೆ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಪಗಡೆ, ಚನ್ನೆಮಣೆ, ಚದುರಂಗ, ಕೇರಂ ಬೋರ್ಡ್‌, ಹಾವು- ಏಣಿಯಂಥ ಆಟಗಳನ್ನು ಆಡುತ್ತಿದ್ದರು. ಈಗ ಆಟದ ಮಾತು ಬಿಡಿ. ಮನೆಯ ಜನರೆಲ್ಲ ಒಂದೆಡೆ ಸೇರುವುದೇ ವಿರಳವಾಗಿದೆ. ಮಕ್ಕಳಿಗೋ ಮೊಬೈಲ್‌ ಗೇಂಗಳನ್ನು ಬಿಟ್ಟರೆ ಬೇರೆ ಆಟವೇ ಗೊತ್ತಿಲ್ಲ. ಯಾಕಂದ್ರೆ, ನಾವು ಅವರಿಗೆ ಬೇರೆ ಆಟಗಳನ್ನು ಹೇಳಿಯೇ ಕೊಟ್ಟಿಲ್ಲ. ಚದುರಂಗ, ಪಗಡೆ, ಲೂಡೋನಂಥ ಆಟಗಳು ಕೇವಲ ಮನರಂಜನೆಯನ್ನಷ್ಟೇ ಅಲ್ಲದೇ, ಮಕ್ಕಳ ಮಾನಸಿಕ ಬೆಳವಣಿಗೆಗೂ ಸಹಾಯ ಮಾಡುತ್ತವೆ. ಮಕ್ಕಳೊಂದಿಗೆ ಕುಳಿತು ಆಟವಾಡುವುದರಿಂದ ಅವರಲ್ಲಿ ಎಂಥ ಬೆಳವಣಿಗೆಗಳಾಗುತ್ತವೆ ಗೊತ್ತೇ?

1. ಬುದ್ಧಿಶಕ್ತಿ ಹೆಚ್ಚಿಸಲು
ಲೂಡೋ, ಹಾವು-ಏಣಿ, ಚದುರಂಗದಂಥ ಬೋರ್ಡ್‌ ಗೇಂಗಳನ್ನು ಆಡುವುದರಿಂದ ಮಕ್ಕಳ ಬುದ್ಧಿ ತೀಕ್ಷ್ಣವಾಗುತ್ತದೆ. ದೊಡ್ಡವರ ಆಟವನ್ನು ಗಮನಿಸುತ್ತಾ ಮಕ್ಕಳು ಹಲವಾರು ಅಂಶಗಳನ್ನು ಕಲಿಯುತ್ತಾರೆ. ತಾರ್ಕಿಕ ಯೋಚನೆ, ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂಥ ಆಟಗಳು ಸಹಾಯಕ.

2. ಸಂಬಂಧವನ್ನು ಗಟ್ಟಿಯಾಗಿಸಲು
ಹೆತ್ತವರು ಉದ್ಯೋಗದ ನೆಪದಲ್ಲಿ, ಮಕ್ಕಳು ಹೋಂವರ್ಕ್‌ ಕಾರಣದಿಂದ ಬ್ಯುಸಿಯಾಗಿರುತ್ತಾರೆ. ಮುಖಕ್ಕೆ ಮುಖ ಕೊಟ್ಟು ಮಾತಾಡಲೂ ಸಮಯವಿರುವುದಿಲ್ಲ. ಆಟದ ನೆಪದಲ್ಲಾದರೂ ದಿನದಲ್ಲಿ ಸ್ವಲ್ಪ ಸಮಯ ಎಲ್ಲರೂ ಒಟ್ಟಿಗೆ ಸೇರಿದರೆ ಬಾಂಧವ್ಯ ಗಟ್ಟಿಯಾಗುತ್ತದೆ. ಮಕ್ಕಳಿಗೂ ಹೆತ್ತವರೊಂದಿಗೆ ಸಮಯ ಕಳೆದಂತಾಗುತ್ತದೆ. 

3. ಸ್ಪರ್ಧಾ ಮನೋಭಾವ ಬೆಳೆಸಲು
ಇತ್ತೀಚಿನ ಮಕ್ಕಳು ಅತಿ ಸಣ್ಣ ಸೋಲನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಮಕ್ಕಳೊಂದಿಗೆ ಆಟ ಆಡುವುದರಿಂದ ಅವರಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಆಟದ ಮೂಲಕ ಅವರಿಗೆ ಹೇಳಿ ಕೊಡಬಹುದು. 

4. ಮೊಬೈಲ್‌ನಿಂದ ದೂರವಿಡಲು
ಮೊಬೈಲ್‌, ಕಂಪ್ಯೂಟರ್‌, ಐಪಾಡ್‌, ಐಪ್ಯಾಡ್‌ನ‌ಲ್ಲಿ ಮುಳುಗುವ ಮಕ್ಕಳು ವಾಸ್ತವ ಜಗತ್ತಿನಿಂದ ವಿಮುಖರಾಗುತ್ತಿದ್ದಾರೆ. ಮಕ್ಕಳನ್ನು ಮೊಬೈಲಿನಾಚೆಗೆ ಎಳೆಯಲು ಒಳಾಂಗಣ ಆಟಗಳು ಸಹಕಾರಿ. ಮೊಬೈಲ್‌ನಲ್ಲಿ ಒಬ್ಬನೇ ಆಡುವ ಬದಲು, ನಮ್ಮೊಂದಿಗೆ ಆಟಕ್ಕೆ ಬಾ ಎಂದು ಕರೆದರೆ ಮಗುವಿಗೂ ಖುಷಿಯಾಗುತ್ತದೆ.  

5. ಜೀವನ ಮೌಲ್ಯಗಳ ಬೋಧನೆ
ಎಲ್ಲರೂ ಒಟ್ಟಿಗೆ ಕುಳಿತು ಆಟ ಆಡುವಾಗ ತಾಳ್ಮೆ, ಸಹನೆ, ಸ್ನೇಹ ಮನೋಭಾವ, ಟೀಂ ಸ್ಪಿರಿಟ್‌,ಹೊಂದಾಣಿಕೆ ಮುಂತಾದ ಗುಣಗಳನ್ನು ಮಗು ಕಲಿಯುತ್ತದೆ. 

ಟಾಪ್ ನ್ಯೂಸ್

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.