YUMMY ಗೌತಮಿ! ಮೊಣಕಾಲ್ಮೂರು ಸುಂದರಿಯ ಕಪ್ಪಂಚು ಮನಸೂರೆ
Team Udayavani, Jan 25, 2017, 2:36 PM IST
ಯಾಮಿ ಗೌತಮಿ ಸರಳತೆ, ಸಹಜತೆಯನ್ನು ಹೆಚ್ಚು ಮೆಚ್ಚುವವರು, ಅವರ ಉಡುಪು, ಮೇಕಪ್‌ನಲ್ಲೂ ಆ ಸಹಜತೆ ಎದ್ದುಕಾಣುತ್ತದೆ. ಇತ್ತೀಚೆಗೆ ಕಾಬಿಲ್ ಚಿತ್ರದ ಪ್ರಮೋಶನ್‌ಗೆ ದುಬೈಗೆ ಹೋದವರು ಛಾಯಾಗ್ರಾಹಕರ ಕಣ್ಣಿಗೆ ಬಿದ್ದದ್ದು ಚಕ್ಕರ್ಡ್ ಮಿನಿ ಡ್ರೆಸ್‌ನಲ್ಲಿ. ರೆಟ್ರೋ ಸ್ಟೈಲ್‌ನ ಈ ಡ್ರೆಸ್‌ನಲ್ಲಿ ಪುಟ್ಟ ಹುಡುಗಿಯಂತೆ ಪಿಳಿ ಪಿಳಿ ಕಣಿºಡುತ್ತಿದ್ದ ಯಾಮಿಗೆ ತನ್ನ ಈ ಡ್ರೆಸ್ ಬಗ್ಗೆ ಖುಷಿ ಇದೆ.
*
ಯಾಮಿ ಗೌತಮ್ ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಗ, “ಅವಳು’ ಜೊತೆ ಮಾತನಾಡುತ್ತಾ, “ಹಿಮಾಚಲ ಪ್ರದೇಶದ ಹಿಮದಷ್ಟೇ ತಣ್ಣನೆಯ ಹುಡುಗಿ ತಾನು’ ಅಂತ ಹೇಳಿಕೊಂಡಿದ್ದರು. ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಹುಟ್ಟಿ ಚಂಡೀಘಡದಲ್ಲಿ ಬೆಳೆದವರು ಯಾಮಿ. “ಅಚ್ಚ ಬಿಳುಪಿನ ಹಿಮಬೆಟ್ಟಗಳನ್ನ ನೋಡುತ್ತ ಬೆಳೆದ ನನಗೆ ನಿಸರ್ಗ ಸಹಜತೆಯ ಪಾಠ ಹೇಳಿಕೊಟ್ಟಿದೆ’ ಎನ್ನುವ ಯಾಮಿ ಗೌತಮ್, ಉಡುಪು, ನಡತೆ, ವ್ಯಕ್ತಿತ್ವದಲ್ಲಿ ಸರಳತೆಯನ್ನೇ ಮೆರೆದವರು.
ಕಾಬಿಲ್‌ನ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದ ಯಾಮಿ, ದುಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಪುಟಾಣಿ ಫ್ರಾಕ್‌ನಲ್ಲಿ. ಕಪ್ಪು ಬಿಳಿ ಬಣ್ಣದ ಚೆಕ್ಸ್ ಚೆಕ್ಸ್ ಫ್ರಾಕ್. ಅಲ್ಲೊಂದು ಇಲ್ಲೊಂದು ಕೆಂಪು ಗುಲಾಬಿ ಹೂವು. ಅಂಚಿಗೆ ಕಪ್ಪು ಬಣ್ಣದ ಫ್ರಿಲ್. ಸಡನ್ನಾಗಿ ನೋಡಿದ್ರೆ ಪಕ್ಕದ್ಮನೆ ಪಾಪುವಿನ ಫ್ರಾಕ್‌ನ ಎತ್ಕೊಂಡು ಬಂದು ಹಾಕ್ಕೊಂಡ ಹಾಗೆ!
ಯಾಮಿಯ ಈ ಕೂಲ್ ಟ್ರಾವೆಲ್ ಅವತಾರ್‌ಗೆ ಡಿಸೈನರ್ ಜೈ ಅಂದಿದ್ದಾರೆ. ಈ ಡ್ರೆಸ್‌ನ° ಡಿಸೈನ್ ಮಾಡಿರೋದು ಸಂಚಿತಾ. ಆಕೆ ಹೇಳ್ಳೋ ಪ್ರಕಾರ , “ಚಕ್ಕರ್x ಡ್ರೆಸ್‌ಗಳಿಗೆ ಸಾಂಪ್ರದಾಯಿಕ ಹಿನ್ನೆಲೆ ಇದೆ. ಅದರಲ್ಲೂ ಬ್ಲ್ಯಾಕ್ ಆ್ಯಂಡ್ ವೈಟ್ ಚಕ್ಕರ್x ಡ್ರೆಸ್‌ಗಳು 80ರ ದಶಕದಲ್ಲಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಡ್ರೆಸ್‌ಗಳು ಎಂದೇ ಫೇಮಸ್ ಆಗಿದ್ದವು. ಚಕ್ಕರ್x ಮಿನಿ ಡ್ರೆಸ್‌ಗಳನ್ನು ತೊಡುವುದು ಅತ್ಯಂತ ಸ್ಟೈಲಿಸ್ಟ್ ಎಂದೇ ನಂಬಲಾಗಿತ್ತು. ಬಾಲಿವುಡ್‌ಗೆ ಈ ಸ್ಟೈಲ್ ಬಂದದ್ದು ಐರೋಪ್ಯ ಮೂಲದ ಸಿನಿಮಾಗಳಿಂದ. ಆ ವೈಭವವನ್ನು ಮತ್ತೆ ಈ ಡ್ರೆಸ್‌ಗಳ ಮೂಲಕ ಹಿಡಿದಿಡುವ ಪ್ರಯತ್ನ ಮಾಡುತ್ತೇನೆ’ ಅಂತಾರೆ.
ಸ್ವತಃ ಉಡುಪು ತೊಟ್ಟ ಯಾಮಿಗೆ ತಮ್ಮ ಡ್ರೆಸ್ ಬಗ್ಗೆ ಅಭಿಮಾನವಿದೆ. ” ಮೊದಲಿಂದಲೂ ಕಪ್ಪು, ಬಿಳಿ ಬಣ್ಣಗಳಿಷ್ಟ. ಅದರಲ್ಲೂ ರೆಟ್ರೋ ಸ್ಟೈಲ್‌ನ° ಹೆಚ್ಚು ಇಷ್ಟಪಡ್ತೀನಿ. ಸಂಚಿತಾ ಡಿಸೈನ್ ಮಾಡಿರೋ ಈ ಚಕ್ಕರ್ಡ್ ಮಿನಿ ಡ್ರೆಸ್ ಟ್ರಾವೆಲಿಂಗ್‌ಗೆ ಹೇಳಿ ಮಾಡಿಸಿದ ಹಾಗಿದೆ’ ಅಂತಾರೆ ಯಾಮಿ.
ಇದು ಟ್ರಾವೆಲಿಂಗ್‌ಗೆ ಹೇಳಿ ಮಾಡಿಸಿದ ಡ್ರೆಸ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಜನಪ್ರಿಯ ಏರ್‌ಪೋರ್ಟ್ ಸ್ಟೈಲ್‌ಗೆ ಲೇಟೆಸ್ಟ್ ಎಂಟ್ರೀ ಈ ಚಕ್ಕರ್ಡ್ ಮಿನಿ ಡ್ರೆಸ್. ಪ್ರಯಾಣಕ್ಕೆ ಆಯ್ಕೆ ಮಾಡುವ ಡ್ರೆಸ್‌ಗಳಲ್ಲಿ ಕೆಲವು ಅಂಶಗಳನ್ನು ಹುಡುಗಿಯರು ನಿರೀಕ್ಷಿಸುತ್ತಾರೆ. ಮೊತ್ತ ಮೊದಲನೆಯದು ಕಂಫರ್ಟ್ ಫೀಲ್. ಡ್ರೆಸ್ ಬಹಳ ಬಿಗಿಯಾಗಿದ್ದರೆ ಅಥವಾ ಲೂಸ್ ಲೂಸ್ ಆಗಿದ್ದರೆ ಕಿರಿಕಿರಿಯೇ ಹೆಚ್ಚಿರುತ್ತದೆ. ಪ್ರಯಾಣವನ್ನು ಆಸ್ವಾದಿಸಲಾಗುವುದಿಲ್ಲ. ಜರ್ನಿ ಡ್ರೆಸ್‌ಗಳು ಬ್ರೈಟ್ ಕಲರ್‌ನಲ್ಲಿದ್ದರೆ ನಮ್ಮ ಮೂಡೂ ಚೆನ್ನಾಗಿರುತ್ತದೆ, ಮಂಕಾಗಿ ಇರೋದಿಲ್ಲ. ಮತ್ತೂಂದು ಅಂಶ ಅಂದರೆ ಏರ್‌ಪೋರ್ಟ್ ಸ್ಟೈಲ್ ಅಥವಾ ಟ್ರಾವೆಲಿಂಗ್ ಡ್ರೆಸ್‌ಗಳು ಕ್ಯೂಟಾಗಿರಬೇಕು, ನೋಡುವವರಿಗೆ ಅರೆ, ಏನ್ ಚೆನ್ನಾಗಿದೆ ಅನ್ನೋ ಫೀಲ್ ಬರ್ಬೇಕು. ಈ ಮೂರೂ ಅಂಶಗಳನ್ನು ಒಳಗೊಂಡಿರೋ ಈ ಚಕ್ಕರ್ಡ್ ಡ್ರೆಸ್ ಯಾಮಿಗೂ, ಆಕೆಯ ಅಭಿಮಾನಿಗಳಿಗೂ ಇಷ್ಟವಾಗಿದ್ರಲ್ಲಿ ಆಶ್ಚರ್ಯವೇನೂ ಇಲ್ಲ.
– ನಿಶಾಂತ್ ಕಮ್ಮರಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.