ಸಪ್ತಪದಿಗೂ ಮುನ್ನ ಓಕುಳಿ
Team Udayavani, May 16, 2018, 12:28 PM IST
ಜೂಸ್ ಕೊಡಲು ಹೋದ ಅಕ್ಕ, ಅದನ್ನು ಹುಡುಗನ ಶರ್ಟ್ ಮೇಲೆ ಚೆಲ್ಲಿಬಿಟ್ಟಳು. ಅವನ ಬಿಳಿ ಶರ್ಟ್ ಪೂರ್ತಿ ಬಣ್ಣವಾಗಿ ಹೋಯಿತು.
ಭವಿಷ್ಯದ ಕನಸು ಕಣ್ಮುಂದೆ ಕುಳಿತಿದ್ದರೂ ನೆಲವನ್ನೇ ನೋಡುತ್ತಾ ಕುಳಿತಿದ್ದಳು. ಅವಳ ಆತಂಕಕ್ಕೆ ಕೈಯಲ್ಲಿ ಮುದುಡಿದ ಕರವಸ್ತ್ರವೇ ಆಸರೆಯಾಗಿತ್ತು. ಕಿರುಗಣ್ಣಲ್ಲಿ ಒಮ್ಮೆ ನೋಡಿದಾಗ ಆ ಎರಡು ಕಣ್ಣುಗಳು ತನ್ನನ್ನೇ ನೋಡುತ್ತಿವೆ ಎಂಬುದನ್ನು ಗಮನಿಸಿ ಮತ್ತೆ ನಾಚಿಕೆಯಿಂದ ಕೆಂಪೇರಿದ ಮುಖ ಬಾಗಿತು.
ಅವಳನ್ನೇ ನೋಡುತ್ತಿದ್ದ ನನಗೂ ಏನೋ ಆತಂಕ. ಅವಳ ಕೈಯಲ್ಲಿ ತಣ್ಣನೇ ಜ್ಯೂಸ್ ಹಿಡಿಸಿ ಎಲ್ಲರಿಗೂ ಕೊಡು ಎಂದು ಕೊಟ್ಟಾಗ ನನ್ನ ಹೆದರಿಕೆ ಮತ್ತೂ ಹೆಚ್ಚಿತ್ತು. ನಿನ್ನೆ ತಾನೆ ಅಜ್ಜಿ ಅವಳ ವಧುಪರೀಕ್ಷೆಯ ಕಥೆಯನ್ನು ನನಗೆ ಹಾಗೂ ಅಕ್ಕನಿಗೆ ಹೇಳಿದ್ದಳು.
ಅಜ್ಜಿಗೆ ಸುಮಾರು ಹದಿನೈದು ಗಂಡುಗಳು ಬಂದು ವಧುಪರೀಕ್ಷೆ ಮಾಡಿದ್ದರಂತೆ. ಜಾತಕದ ಜೊತೆಗೆ ಹುಡುಗಿಯ ಸ್ವರ ಹೇಗೆ ಎಂದು ತಿಳಿಯಲು ಹಾಡಿಸುವುದು. ಕಿವಿ, ಕೈ-ಕಾಲುಗಳ ಒಟ್ಟು ಪರೀಕ್ಷೆಗಳಾಗುತ್ತಿತ್ತು. ಅಜ್ಜಿ ಉಪಚರಿಸುವಾಗ ಪಾನಕವನ್ನು ಹುಡುಗನ ಅಪ್ಪನ ಮೇಲೆಯೇ ಚೆಲ್ಲಿ ಬಿಟ್ಟಿದ್ದಳಂತೆ. ಅದಕ್ಕಾಗಿಯೇ ಒಂದು ಹುಡುಗ ಅಜ್ಜಿಯನ್ನು ರಿಜೆಕr… ಮಾಡಿದ್ದನಂತೆ.
ಅಕ್ಕನ ಕೈ ಜ್ಯೂಸ್ ಬಟ್ಟಲು ಹಿಡಿದಾಗ, ಅವಳಿಗಿಂತ ಜಾಸ್ತಿ ನನಗೆ ಹೆದರಿಕೆ ಆಗುತ್ತಿತ್ತು. ಈಗ ಅಕ್ಕ ಜ್ಯೂಸ್ ಚೆಲ್ಲಿ ಹುಡುಗ ಒಪ್ಪಿಗೆಯಾಗದಿದ್ದರೆ ಎಂದೆಲ್ಲಾ ನೆಗೆಟಿವ್ ಆಲೋಚನೆಗಳು ನನ್ನ ತಲೆಯಲ್ಲಿ ತುಂಬಿದ್ದವು. ಅಂತೂ ನಾನು ಏನು ಆಲೋಚಿಸಿದ್ದೆನೋ ಅದನ್ನು ಅಕ್ಕ ಮಾಡಿಯೇ ಬಿಟ್ಟಳು. ಹುಡುಗನ ಮೇಲೆ ಜ್ಯೂಸ್ ಚೆಲ್ಲಿಯೇ ಬಿಟ್ಟಳು. ಅವನ ವೈಟ್ ಶರ್ಟ್ ಪೂರ್ತಿ ಬಣ್ಣವಾಗಿ ಹೋಯಿತು.
ಅಲ್ಲಿಗೆ ಕತೆ ಮುಗಿಯಿತು ಎಂದುಕೊಂಡೆ. ಆದರೆ ಹುಡುಗನ ಅಪ್ಪ-ಅಮ್ಮ, “ನಮ್ಮ ಹುಡುಗನ ಬಾಳಲ್ಲಿ ಈಗಲೇ ಬಣ್ಣ ತುಂಬಿ ಬಿಟ್ಟೆ’ ಎಂದು ಶರ್ಟ್ ತೋರಿಸಿ ನಗುತ್ತಾ ವಾತಾವರಣ ತಿಳಿಗೊಳಿಸಿದರು. ಹುಡುಗ, ಅಕ್ಕನ ಜೊತೆ ಸ್ವಲ್ಪ ಏಕಾಂತದಲ್ಲಿ ಮಾತನಾಡಬೇಕು ಎಂದು ಕರೆದು, “ಹೆದರಬೇಡಿ. ನಿಮ್ಮನ್ನು ನಿಮ್ಮ ಮನೆಯವರು ನೋಡಿಕೊಂಡಂತೆ ನೋಡಿಕೊಳ್ಳುತ್ತೇನೆ.’ ಎಂದು ಸಾಂತ್ವನ ಹೇಳಿದ್ದನ್ನು ನನ್ನ ಕಳ್ಳ ಕಿವಿಗಳು ಕೇಳಿಸಿಕೊಂಡವು.
ಎಲ್ಲಾ ಒಪ್ಪಿಕೊಂಡು ಮದುವೆಯಾಗಿ ಈಗ ಐದಾರು ವರ್ಷ ಕಳೆದುಹೋಗಿದೆ. ಅಕ್ಕ ಆ ಮನೆಯಲ್ಲಿ ಸೊಸೆಯಾಗಿರದೇ ಮಗಳೇ ಆಗಿದ್ದಾಳೆ. ಈಗ ನಾಡಿದ್ದು ನನ್ನ ವಧುಪರೀಕ್ಷೆ. ಮತ್ತೆ ಅಜ್ಜಿ ಅವಳ ವಧು ಪರೀಕ್ಷೆಯ ಕಥೆಯ ಜೊತೆ ಅಕ್ಕನ ಕಥೆಯನ್ನು ಸೇರಿಸಿ ನನಗೆ ಹೇಳುತ್ತಿದ್ದಾಳೆ.
* ಪ್ರಭಾ ಹೆಗಡೆ ಭರಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.